IPL 2025 Retention Live: ಧಾರಣ ಪಟ್ಟಿ ಬಿಡುಗಡೆ

|

Updated on: Oct 31, 2024 | 6:17 PM

IPL Retention 2025 Live Updates in Kannada: 18ನೇ ಆವೃತ್ತಿಯ ಐಪಿಎಲ್ ಮೆಗಾ ಹರಾಜು ನವೆಂಬರ್‌ನಲ್ಲಿ ನಡೆಯಬಹುದು. ಆದರೆ ಇದಕ್ಕೂ ಮೊದಲು, ಆಟಗಾರರ ಧಾರಣ ಪಟ್ಟಿಯ ಬಗ್ಗೆ ಚರ್ಚೆಗಳು ಶುರುವಾಗಿದ್ದು, ಫ್ರಾಂಚೈಸಿಗಳಿಗೆ ನೀಡಿದ್ದ ಗಡುವು ಇಂದು ಕೊನೆಗೊಳ್ಳುತ್ತಿದೆ. ಹೀಗಾಗಿ ಎಲ್ಲಾ 10 ತಂಡಗಳ ಉಳಿಸಿಕೊಂಡಿರುವ ಆಟಗಾರರ ಹೆಸರನ್ನು ಸಂಜೆಯೊಳಗೆ ಅಧಿಕೃತವಾಗಿ ಪ್ರಕಟಿಸಲಿವೆ.

IPL 2025 Retention Live: ಧಾರಣ ಪಟ್ಟಿ ಬಿಡುಗಡೆ
ಐಪಿಎಲ್ ರಿಟೆನ್ಷನ್

LIVE NEWS & UPDATES

  • 31 Oct 2024 06:17 PM (IST)

    IPL Retention 2025 Live: ಲಕ್ನೋ ತಂಡದಿಂದ ರಾಹುಲ್​ ಔಟ್

    ಲಕ್ನೋ ಸೂಪರ್ ಜೈಂಟ್ಸ್ ನಿಕೋಲಸ್ ಪುರನ್‌ಗೆ ಗರಿಷ್ಠ 21 ಕೋಟಿ ರೂ. ನೀಡಿದೆ. ರವಿ ಬಿಷ್ಣೋಯ್ ಮತ್ತು ಮಯಾಂಕ್ ಯಾದವ್ ಅವರನ್ನು ತಲಾ 11 ಕೋಟಿ ರೂ.ಗೆ ಉಳಿಸಿಕೊಳ್ಳಲಾಗಿದೆ. ಮೊಹ್ಸಿನ್ ಖಾನ್ ಮತ್ತು ಆಯುಷ್ ಬದೋನಿ ತಲಾ 4 ಕೋಟಿ ರೂ.ಗಳೊಂದಿಗೆ ತಂಡದಲ್ಲಿ ಉಳಿಯಲಿದ್ದಾರೆ.

  • 31 Oct 2024 06:16 PM (IST)

    IPL Retention 2025 Live: ಡೆಲ್ಲಿಯಿಂದ ಪಂತ್ ಔಟ್

    ಡೆಲ್ಲಿ ಕ್ಯಾಪಿಟಲ್ಸ್ ರಿಷಬ್ ಪಂತ್ ಅವರನ್ನು ಉಳಿಸಿಕೊಂಡಿಲ್ಲ. ಅದೇ ಸಮಯದಲ್ಲಿ ಅಕ್ಷರ್ ಪಟೇಲ್ 16.5 ಕೋಟಿ ರೂ.ಗಳೊಂದಿಗೆ ತಂಡದ ಅತ್ಯಂತ ದುಬಾರಿ ಆಟಗಾರರಾಗಿದ್ದಾರೆ. ಕುಲ್ದೀಪ್ ಯಾದವ್ 13.25 ಕೋಟಿ, ಟ್ರಿಸ್ಟಾನ್ ಸ್ಟಬ್ಸ್ 10 ಕೋಟಿ ಹಾಗೂ ಅಭಿಷೇಕ್ ಪೊರೆಲ್ 4 ಕೋಟಿ ರೂ.ಗೆ ಉಳಿಸಿಕೊಂಡಿದ್ದಾರೆ.


  • 31 Oct 2024 06:08 PM (IST)

    IPL Retention 2025 Live: ಅಧಿಕ ಮೊತ್ತ ವ್ಯಯಿಸಿದ ಹೈದರಾಬಾದ್

    ಸನ್‌ರೈಸರ್ಸ್ ಹೈದರಾಬಾದ್ ಆಟಗಾರರನ್ನು ಉಳಿಸಿಕೊಳ್ಳಲು ಹೆಚ್ಚು ಖರ್ಚು ಮಾಡಿದೆ. ಹೆನ್ರಿಕ್ ಕ್ಲಾಸೆನ್ ಅವರನ್ನು 23 ಕೋಟಿ ರೂ.ಗೆ ಉಳಿಸಿಕೊಂಡಿದ್ದಾರೆ. ಪ್ಯಾಟ್ ಕಮಿನ್ಸ್ 18 ಕೋಟಿ ರೂ. ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ ತಲಾ 14 ಕೋಟಿ ರೂ.ಗೆ ತಂಡದಲ್ಲಿ ಉಳಿಯಲಿದ್ದಾರೆ. ನಿತೀಶ್ ಕುಮಾರ್ ರೆಡ್ಡಿ ಅವರನ್ನೂ 6 ಕೋಟಿಗೆ ಉಳಿಸಿಕೊಂಡಿದ್ದಾರೆ.

  • 31 Oct 2024 06:02 PM (IST)

    IPL Retention 2025 Live: ಇಬ್ಬರನ್ನು ಉಳಿಸಿಕೊಂಡ ಪಂಜಾಬ್

    ಪಂಜಾಬ್ ಕಿಂಗ್ಸ್ ಶಶಾಂಕ್ ಸಿಂಗ್ ಮತ್ತು ಪ್ರಭಾಸಿಮ್ರಾನ್ ಸಿಂಗ್ ಅವರನ್ನು ಮಾತ್ರ ಉಳಿಸಿಕೊಂಡಿದೆ. ಶಶಾಂಕ್ ಸಿಂಗ್ 5.5 ಕೋಟಿ ಹಾಗೂ ಪ್ರಭಾಸಿಮ್ರಾನ್ ಸಿಂಗ್ 4 ಕೋಟಿ ಪಡೆಯಲಿದ್ದಾರೆ.

  • 31 Oct 2024 06:01 PM (IST)

    IPL Retention 2025 Live: kkr ಪಟ್ಟಿ ಹೀಗಿದೆ

    ಕೋಲ್ಕತ್ತಾ ನೈಟ್ ರೈಡರ್ಸ್ ಕೂಡ ಒಟ್ಟು 6 ಆಟಗಾರರನ್ನು ಉಳಿಸಿಕೊಂಡಿದೆ. ರಿಂಕು ಸಿಂಗ್ ಅವರಿಗೆ ಗರಿಷ್ಠ 13 ಕೋಟಿ ರೂ. ಅದೇ ಸಮಯದಲ್ಲಿ, ವರುಣ್ ಚಕ್ರವರ್ತಿ, ಸುನಿಲ್ ನರೈನ್ ಮತ್ತು ಆಂಡ್ರೆ ರಸೆಲ್ ತಲಾ 12 ಕೋಟಿ ರೂ. ಇದಲ್ಲದೇ ಹರ್ಷಿತ್ ರಾಣಾ ಮತ್ತು ರಮಣದೀಪ್ ಸಿಂಗ್ ತಲಾ 4 ಕೋಟಿ ರೂ.ಗೆ ಅನ್‌ಕ್ಯಾಪ್ಡ್ ಆಟಗಾರರಾಗಿ ತಂಡದಲ್ಲಿ ಉಳಿದಿದ್ದಾರೆ.


  • 31 Oct 2024 05:58 PM (IST)

    IPL Retention 2025 Live: ರಾಜಸ್ಥಾನ್ ರಾಯಲ್ಸ್ ಪಟ್ಟಿಯಲ್ಲಿ 6 ಆಟಗಾರರು

    ರಾಜಸ್ಥಾನ್ ರಾಯಲ್ಸ್ ಎಲ್ಲಾ 6 ಆಟಗಾರರನ್ನು ಉಳಿಸಿಕೊಂಡಿದೆ. ಸಂಜು ಸ್ಯಾಮ್ಸನ್ ಮತ್ತು ಯಶಸ್ವಿ ಜೈಸ್ವಾಲ್ ತಲಾ 18 ಕೋಟಿ ರೂ. ರಿಯಾನ್ ಪರಾಗ್ ಮತ್ತು ಧ್ರುವ್ ಜುರೆಲ್ ತಲಾ 14 ಕೋಟಿ ರೂ.ಗೆ ಈ ತಂಡದ ಭಾಗವಾಗಿ ಉಳಿಯಲಿದ್ದಾರೆ. ಅದೇ ಸಮಯದಲ್ಲಿ ಹೆಟ್ಮೆಯರ್ 11 ಕೋಟಿ ರೂ. ಪಡೆಯಲಿದ್ದಾರೆ.

  • 31 Oct 2024 05:50 PM (IST)

    IPL Retention 2025 Live: 5 ಆಟಗಾರರನ್ನು ಉಳಿಸಿಕೊಂಡ ಸಿಎಸ್​ಕೆ

    ಚೆನ್ನೈ ಸೂಪರ್ ಕಿಂಗ್ಸ್ ಎಂಎಸ್ ಧೋನಿ, ರುತುರಾಜ್ ಗಾಯಕ್ವಾಡ್, ರವೀಂದ್ರ ಜಡೇಜಾ, ಶಿವಂ ದುಬೆ ಮತ್ತು ಮತಿಶಾ ಪತಿರಾನ ಅವರನ್ನು ಉಳಿಸಿಕೊಂಡಿದೆ.

  • 31 Oct 2024 05:50 PM (IST)

    IPL Retention 2025 Live: ಆರ್‌ಸಿಬಿ ಮೂವರು ಆಟಗಾರರನ್ನು ಉಳಿಸಿಕೊಂಡಿದೆ

    ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರಾಟ್ ಕೊಹ್ಲಿಯನ್ನು 21 ಕೋಟಿ ರೂ.ಗೆ ಉಳಿಸಿಕೊಂಡಿದೆ. ಅದೇ ಸಮಯದಲ್ಲಿ, ರಜತ್ ಪಾಟಿದಾರ್ ಅವರನ್ನು 11 ಕೋಟಿ ರೂ.ಗೆ ಮತ್ತು ಯಶ್ ದಯಾಳ್ ಅವರನ್ನು 5 ಕೋಟಿ ರೂ.ಗೆ ತಮ್ಮ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ.

  • 31 Oct 2024 05:50 PM (IST)

    IPL Retention 2025 Live: ಮುಂಬೈ ಇಂಡಿಯನ್ಸ್ 5 ಆಟಗಾರರನ್ನು ಉಳಿಸಿಕೊಂಡಿದೆ

    ಮುಂಬೈ ಇಂಡಿಯನ್ಸ್ ಮೆಗಾ ಹರಾಜಿಗೂ ಮುನ್ನ ಒಟ್ಟು 5 ಆಟಗಾರರನ್ನು ಉಳಿಸಿಕೊಂಡಿದೆ. ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಮತ್ತು ತಿಲಕ್ ವರ್ಮಾ ಧಾರಣ ಪಟ್ಟಿಯಲ್ಲಿ ಸೇರಿದ್ದಾರೆ.

  • 31 Oct 2024 04:46 PM (IST)

    IPL Retention 2025 Live: 5 ಗಂಟೆಗೆ ಗಡುವು ಅಂತ್ಯ

    ಐಪಿಎಲ್ 2025 ರ ಧಾರಣ ಪಟ್ಟಿಯನ್ನು ಸಲ್ಲಿಸಲು ಗಡುವು ಅಕ್ಟೋಬರ್ 31 ಸಂಜೆ 5 ಗಂಟೆಗೆ ನಿಗದಿ ಮಾಡಲಾಗಿದೆ. ಇದರ ನಂತರ ಉಳಿಸಿಕೊಂಡಿರುವ ಆಟಗಾರರ ಹೆಸರುಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.

  • 31 Oct 2024 02:55 PM (IST)

    IPL Retention 2025 Live: ಲೈವ್ ವೀಕ್ಷಿಸುವುದು ಹೇಗೆ?

    ನೀವು ಮೊಬೈಲ್‌ನಲ್ಲಿ ಐಪಿಎಲ್ ಧಾರಣವನ್ನು ಲೈವ್ ಆಗಿ ಜಿಯೋ ಸಿನಿಮಾ ಅಪ್ಲಿಕೇಶನ್​ನಲ್ಲಿ ನೋಡಬಹುದು. ಇದರ ಲೈವ್ ಸ್ಟ್ರೀಮಿಂಗ್ ಜಿಯೋ ಸಿನಿಮಾದಲ್ಲಿ ಸಂಜೆ 4:30 ರಿಂದ ಪ್ರಾರಂಭವಾಗುತ್ತದೆ. ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರವಾಗಲಿದೆ.

  • 31 Oct 2024 02:51 PM (IST)

    IPL Retention 2025 Live: ಸಂಜೆ 4.30ಕ್ಕೆ ಪ್ರಕಟ

    ಐಪಿಎಲ್ 2025 ರ ಧಾರಣ ಪಟ್ಟಿಯನ್ನು ಯಾವುದೇ ತಂಡ ಇನ್ನೂ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಇಂದು ಸಂಜೆ 4.30ರಿಂದ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಲಿವೆ.

18ನೇ ಆವೃತ್ತಿಯ ಐಪಿಎಲ್ ಮೆಗಾ ಹರಾಜು ನವೆಂಬರ್‌ನಲ್ಲಿ ನಡೆಯಬಹುದು. ಆದರೆ ಇದಕ್ಕೂ ಮೊದಲು, ಆಟಗಾರರ ಧಾರಣ ಪಟ್ಟಿಯ ಬಗ್ಗೆ ಚರ್ಚೆಗಳು ಶುರುವಾಗಿದ್ದು, ಫ್ರಾಂಚೈಸಿಗಳಿಗೆ ನೀಡಿದ್ದ ಗಡುವು ಇಂದು ಕೊನೆಗೊಳ್ಳುತ್ತಿದೆ. ಹೀಗಾಗಿ ಎಲ್ಲಾ 10 ತಂಡಗಳ ಉಳಿಸಿಕೊಂಡಿರುವ ಆಟಗಾರರ ಹೆಸರನ್ನು ಸಂಜೆಯೊಳಗೆ ಅಧಿಕೃತವಾಗಿ ಪ್ರಕಟಿಸಲಿವೆ. ಇದಾದ ನಂತರ ಚಿತ್ರಣ ಸ್ಪಷ್ಟವಾಗಲಿದ್ದು, ಯಾವ ಆಟಗಾರ ಈ ಬಾರಿ ಮೆಗಾ ಹರಾಜಿಗೆ ಬರಲಿದ್ದಾರೆ ಎಂಬುದು ತಿಳಿಯಲಿದೆ. ವರದಿಯ ಪ್ರಕಾರ, ಕೆಎಲ್ ರಾಹುಲ್, ರಿಷಬ್ ಪಂತ್, ಶ್ರೇಯಸ್ ಅಯ್ಯರ್ ಅವರಂತಹ ಅನೇಕ ದೊಡ್ಡ ಆಟಗಾರರು ತಂಡದಿಂದ ಬಿಡುಗಡೆಯಾಗಿ ಮೆಗಾ ಹರಾಜಿಗೆ ಪ್ರವೇಶಿಸಲಿದ್ದಾರೆ.

Published On - 2:49 pm, Thu, 31 October 24

Follow us on