Irani Trophy 2023: 79 ರನ್‌ಗಳಿಗೆ ಸೌರಾಷ್ಟ್ರ ಆಲೌಟ್; ಇರಾನಿ ಕಪ್ ಎತ್ತಿ ಹಿಡಿದ ಶೇಷ ಭಾರತ..!
Irani Trophy 2023: ಸೌರಭ್ ಕುಮಾರ್ ಅವರ ಸ್ಪಿನ್ ಮ್ಯಾಜಿಕ್ನಿಂದಾಗಿ ರೆಸ್ಟ್ ಆಫ್ ಇಂಡಿಯಾ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ ಸೌರಾಷ್ಟ್ರವನ್ನು 79 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ 175 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ರೆಸ್ಟ್ ಆಫ್ ಇಂಡಿಯಾ ತಂಡ ಇರಾನಿ ಕಪ್ ಎತ್ತಿ ಹಿಡಿದಿದೆ.
ಸೌರಭ್ ಕುಮಾರ್ ಅವರ ಸ್ಪಿನ್ ಮ್ಯಾಜಿಕ್ನಿಂದಾಗಿ ರೆಸ್ಟ್ ಆಫ್ ಇಂಡಿಯಾ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ ಸೌರಾಷ್ಟ್ರವನ್ನು (Rest of India vs Saurashtra) 79 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ 175 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ರೆಸ್ಟ್ ಆಫ್ ಇಂಡಿಯಾ ತಂಡ ಇರಾನಿ ಕಪ್ (Irani Trophy 2023) ಎತ್ತಿ ಹಿಡಿದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರೆಸ್ಟ್ ಆಫ್ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 308 ರನ್ ಕೆಲಹಾಕಿತು. ಇದಕ್ಕುತ್ತರವಾಗಿ ಸೌರಾಷ್ಟ್ರ ತಂಡ 214 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ 94 ರನ್‌ಗಳ ಮುನ್ನಡೆ ಸಾಧಿಸಿದ ಶೇಷ ಭಾರತ ತಂಡ ನಂತರ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 160 ರನ್ ಗಳಿಸಿತ್ತು. ಹೀಗಾಗಿ ಇರಾನಿ ಕಪ್ ಗೆಲ್ಲಲು ಸೌರಾಷ್ಟ್ರ ತಂಡಕ್ಕೆ 255 ರನ್‌ಗಳ ಸವಾಲು ಸಿಕ್ಕಿತು. ಆದರೆ ಚೇತೇಶ್ವರ ಪೂಜಾರ (Cheteshwar Pujara), ಶೆಲ್ಡನ್ ಜಾಕ್ಸನ್ ಸೇರಿದಂತೆ ಸೌರಾಷ್ಟ್ರ ತಂಡದ ಎಲ್ಲ ಬ್ಯಾಟ್ಸ್ಮನ್ಗಳು ವಿಫಲರಾದರು. ಅಂತಿಮವಾಗಿ ಸೌರಾಷ್ಟ್ರ ತಂಡ 34.3 ಓವರ್‌ಗಳಲ್ಲಿ ಕೇವಲ 79 ರನ್‌ಗಳಿಗೆ ತನ್ನೇಲ್ಲ ವಿಕೆಟ್ ಕಳೆದುಕೊಂಡು 175 ರನ್‌ಗಳ ಹೀನಾಯ ಸೋಲು ಅನುಭವಿಸಿತು.
ಎರಡನೇ ಇನಿಂಗ್ಸ್‌ನಲ್ಲಿ ಕುಸಿದ ಸೌರಾಷ್ಟ್ರ
ಎರಡನೇ ಇನ್ನಿಂಗ್ಸ್‌ನಲ್ಲಿ ಸೌರಾಷ್ಟ್ರದ ನಾಲ್ವರು ಆಟಗಾರರಿಗೆ ಮಾತ್ರ ಎರಡಂಕಿ ತಲುಪಲು ಸಾಧ್ಯವಾಯಿತು. ತಂಡದ ಇಬ್ಬರೂ ಸೊನ್ನೆಗೆ ಪೆವಿಲಿಯನ್ ಸೇರಿಕೊಂಡರೆ, ನಾಲ್ವರು ಎರಡಂಕಿಯನ್ನೂ ತಲುಪಲು ಸಾಧ್ಯವಾಗಲಿಲ್ಲ. ಧರ್ಮೆಂದಸಿಂಗ್ ಜಡೇಜಾ 21 ರನ್ ಗಳಿಸಿದರೆ, ಅನುಭವಿ ಚೇತೇಶ್ವರ ಪೂಜಾರ 7 ರನ್ ಗಳಿಸಿ ಔಟಾದರು. ಶೇಷ ಭಾರತ ತಂಡದ ಪರ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಸೌರಭ್ ಕುಮಾರ್ 43 ರನ್ ನೀಡಿ 6 ವಿಕೆಟ್ ಕಬಳಿಸಿದರೆ, ಶಮ್ಸ್ ಮುಲಾನಿ 3 ವಿಕೆಟ್ ಹಾಗೂ ಪುಲ್ಕಿತ್ ನಾರಂಗ್ 1 ವಿಕೆಟ್ ಉರುಳಿಸಿದರು.
𝗖.𝗛.𝗔.𝗠.𝗣.𝗜.𝗢.𝗡.𝗦! 🏆
Congratulations Rest of India on winning the #IraniCup 👏👏@IDFCFIRSTBank pic.twitter.com/5ktJzouwG8
— BCCI Domestic (@BCCIdomestic) October 3, 2023
ಇರಾನಿ ಕಪ್; 308 ರನ್‌ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿದ ಶೇಷ ಭಾರತ; ಸೌರಾಷ್ಟ್ರ ತಂಡಕ್ಕೆ ಆರಂಭಿಕ ಆಘಾತ
43 ರನ್‌ಗಳಿಗೆ 9 ವಿಕೆಟ್
ರೆಸ್ಟ್ ಆಫ್ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ನೀಡಿದ 308 ರನ್‌ಗಳ ಗುರಿ ಬೆನ್ನತ್ತಿದ ಸೌರಾಷ್ಟ್ರ 214 ರನ್‌ಗಳಿಗೆ ಆಲೌಟ್ ಆಯಿತು. ಈ ಮುನ್ನಡೆಯ ಬಲದಿಂದ ರೆಸ್ಟ್ ಆಫ್ ಇಂಡಿಯಾ 160 ರನ್ ಗಳಿಸಿತು. ರೆಸ್ಟ್ ಆಫ್ ಇಂಡಿಯಾ ತನ್ನ ಕೊನೆಯ 9 ವಿಕೆಟ್‌ಗಳನ್ನು ಕೇವಲ 43 ರನ್‌ಗಳಿಗೆ ಕಳೆದುಕೊಂಡಿತು. ಹೀಗಾಗಿ ರೆಸ್ಟ್ ಆಫ್ ಇಂಡಿಯಾ ಪರ ಎರಡನೇ ಇನ್ನಿಂಗ್ಸ್‌ನಲ್ಲಿ ಮಯಾಂಕ್ ಅಗರ್ವಾಲ್ 49 ರನ್ ಗಳಿಸಿದರೆ, ಸಾಯಿ ಸುದರ್ಶನ್ 43 ರನ್ ಗಳಿಸಿದರು. ಪಾರ್ಥ ಭೂತ್ 7 ವಿಕೆಟ್ ಉರುಳಿಸುವ ಮೂಲಕ ಸೌರಾಷ್ಟ್ರ ಪರಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಇವರನ್ನು ಹೊರತುಪಡಿಸಿ ಧರ್ಮೇಂದ್ರ ಜಡೇಜಾ 3 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
It was a day of fightbacks as 21 wickets fell on Day 3 of the @IDFCFIRSTBank #IraniCup
Saurashtra's Parth Bhut scalped a 7-wicket haul while Saurabh Kumar bagged 6/43 to win the match for Rest of India.
Re-live all the action from Day 3 🔽https://t.co/elhDYxDw0l pic.twitter.com/CLhHrtCumq
— BCCI Domestic (@BCCIdomestic) October 3, 2023
ರೆಸ್ಟ್ ಆಫ್ ಇಂಡಿಯಾ ತಂಡ: ಹನುಮ ವಿಹಾರಿ (ನಾಯಕ), ಮಯಾಂಕ್ ಅಗರ್ವಾಲ್, ಯಶ್ ಧುಲ್, ಸಾಯಿ ಸುದರ್ಶನ್, ಸರ್ಫರಾಜ್ ಖಾನ್, ಶ್ರೀಕರ್ ಭರತ್ (ವಿಕೆಟ್ ಕೀಪರ್), ಶಮ್ಸ್ ಮುಲಾನಿ, ಸೌರಭ್ ಕುಮಾರ್, ಪುಲ್ಕಿತ್ ನಾರಂಗ್, ನವದೀಪ್ ಸೈನಿ ಮತ್ತು ವಿದ್ವತ್ ಕಾವೇರಪ್ಪ.
ಸೌರಾಷ್ಟ್ರ ತಂಡ: ಜಯದೇವ್ ಉನದ್ಕಟ್ (ನಾಯಕ), ಹಾರ್ವಿಕ್ ದೇಸಾಯಿ (ವಿಕೆಟ್ ಕೀಪರ್), ಚೇತೇಶ್ವರ ಪೂಜಾರ, ಚಿರಾಗ್ ಜಾನಿ, ಅರ್ಪಿತ್ ವಾಸವಾಡ, ಶೆಲ್ಡನ್ ಜಾಕ್ಸನ್, ಪ್ರೇರಕ್ ಮಂಕಡ್, ಸಮರ್ಥ ವ್ಯಾಸ್, ಧರ್ಮೇಂದ್ರ ಸಿಂಗ್ ಜಡೇಜಾ, ಪಾರ್ಥ್ ಭಟ್ ಮತ್ತು ಯುವರಾಜ್ ಸಿಂಗ್ ದೋಡಿಯಾ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:17 am, Wed, 4 October 23