IVPL 2024: ಚೊಚ್ಚಲ ಆವೃತ್ತಿಯಲ್ಲೇ ಫೈನಲ್ಗೇರಿದ ಮುಂಬೈ ಚಾಂಪಿಯನ್ಸ್..!
IVPL 2024: ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ಮಾಜಿ ಕ್ರಿಕೆಟಿಗರ ಇಂಡಿಯನ್ ವೆಟರನ್ ಪ್ರೀಮಿಯರ್ ಲೀಗ್ನ ಮೊದಲ ಆವೃತ್ತಿಯ ಮೊದಲ ಫೈನಲ್ ತಂಡವಾಗಿ ಮುಂಬೈ ಚಾಂಪಿಯನ್ಸ್ ಅರ್ಹತೆ ಗಿಟ್ಟಿಸಿಕೊಂಡಿದೆ. ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮುಂಬೈ ತಂಡ ರೆಡ್ ಕಾರ್ಪೆಟ್ ಡೆಲ್ಲಿ ತಂಡವನ್ನು 60 ರನ್‌ಗಳಿಂದ ಸೋಲಿಸಿತು.
ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ಮಾಜಿ ಕ್ರಿಕೆಟಿಗರ ಇಂಡಿಯನ್ ವೆಟರನ್ ಪ್ರೀಮಿಯರ್ ಲೀಗ್ (IVPL) ನ ಮೊದಲ ಆವೃತ್ತಿಯ ಮೊದಲ ಫೈನಲ್ ತಂಡವಾಗಿ ಮುಂಬೈ ಚಾಂಪಿಯನ್ಸ್ (Mumbai Champions) ಅರ್ಹತೆ ಗಿಟ್ಟಿಸಿಕೊಂಡಿದೆ. ಇಲ್ಲಿನ ಶಹೀದ್ ವಿಜಯ್ ಸಿಂಗ್ ಪಥಿಕ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಶನಿವಾರ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಫಿಲ್ ಮಸ್ಟರ್ಡ್ ನಾಯಕತ್ವದ ಮುಂಬೈ ತಂಡ, ತಿಸಾರ ಪೆರೇರಾ ನೇತೃತ್ವದ ರೆಡ್ ಕಾರ್ಪೆಟ್ ಡೆಲ್ಲಿ (Red Carpet Delhi) ತಂಡವನ್ನು 60 ರನ್‌ಗಳಿಂದ ಸೋಲಿಸಿತು. ಇನ್ನೊಂದೆಡೆ ಉತ್ತರ ಪ್ರದೇಶ ಮತ್ತು ಛತ್ತೀಸ್‌ಗಢ ವಾರಿಯರ್ಸ್ ನಡುವೆ ನಡೆಯುತ್ತಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಗೆದ್ದ ತಂಡ ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಮುಂಬೈ ಚಾಂಪಿಯನ್ಸ್ ತಂಡವನ್ನು ಎದುರಿಸಲಿದೆ.
ಮೂವರ ಅರ್ಧಶತಕ
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಚಾಂಪಿಯನ್ಸ್ ಪರ ಫಿಲ್ ಮಸ್ಟರ್ಡ್, ನಿರ್ವಾನ್ ಅಟ್ರಿ ಮತ್ತು ಅಭಿಷೇಕ್ ಜುಂಜುನ್ವಾಲಾ ಅದ್ಭುತ ಅರ್ಧಶತಕಗಳ ಇನ್ನಿಂಗ್ಸ್ ಆಡಿದರು. ಮಸ್ಟರ್ಡ್ 34 ಎಸೆತಗಳಲ್ಲಿ 73 ರನ್, ಅಟ್ರಿ 27 ಎಸೆತಗಳಲ್ಲಿ 56 ರನ್ ಮತ್ತು ಅಭಿಷೇಕ್ 29 ಎಸೆತಗಳಲ್ಲಿ 51 ರನ್ ಗಳಿಸಿದರು. ಈ ಮೂವರ ಇನ್ನಿಂಗ್ಸ್‌ನಿಂದಾಗಿ ಮುಂಬೈ 3 ವಿಕೆಟ್ ಕಳೆದುಕೊಂಡು 253 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಡೆಲ್ಲಿ ತಂಡ ಕೇವಲ 193 ರನ್ ಗಳಿಸಲಷ್ಟೇ ಶಕ್ತವಾಗಿ 60 ರನ್‌ಗಳಿಂದ ಸೋಲು ಕಂಡಿತು.
Mumbai Champions storm into the IVPL final, chasing glory with unwavering determination! 🏆🔥 #bvci #ivpl #t20 #cricket #goat #100sports pic.twitter.com/j9poqT8cpw
— Indian Veteran Premier League (@ivplt20) March 2, 2024
ಪಂದ್ಯದಲ್ಲಿ ಮುಂಬೈ ಚಾಂಪಿಯನ್ಸ್ ಉತ್ತಮ ಆರಂಭ ಪಡೆಯಿತು. 10 ಓವರ್‌ಗಳಲ್ಲಿ ತಂಡದ ಸ್ಕೋರ್ 105 ರನ್‌ಗಳಿಗೆ ತಲುಪಿತ್ತು. ಆ ನಂತರ ತಂಡ 105 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಆರಂಭಿಕ ಅಭಿಷೇಕ್ ಜುಂಜುನ್ ವಾಲಾ 51 ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು. ಕೊನೆಯಲ್ಲಿ ಪೀಟರ್ ಟ್ರೆಗೊ ಮತ್ತು ರಜತ್ ಸಿಂಗ್ ಕೂಡ ಅದ್ಭುತ ಇನ್ನಿಂಗ್ಸ್ ಆಡಿ, ತಂಡದ ಸ್ಕೋರ್ ಅನ್ನು 250 ರನ್ಗಳ ಗಡಿ ದಾಟಿಸಿದರು.
ನಿರಾಸೆ ಮೂಡಿಸಿದ ಡೆಲ್ಲಿ ಬ್ಯಾಟ್ಸ್‌ಮನ್‌ಗಳು
ಪ್ರತ್ಯುತ್ತರವಾಗಿ, ರೆಡ್ ಕಾರ್ಪೆಟ್ ಡೆಲ್ಲಿ ಮೊದಲ ಓವರ್‌ನಲ್ಲಿಯೇ ದೊಡ್ಡ ಹೊಡೆತವನ್ನು ಅನುಭವಿಸಿತು. ತಂಡದ ಇನ್ ಫಾರ್ಮ್ ಆಟಗಾರ ರಿಚರ್ಡ್ ಲೆವಿ ರನೌಟ್ ಆದರು. ಈ ವಿಕೆಟ್‌ನಿಂದ ತಂಡವು ದೊಡ್ಡ ನಷ್ಟವನ್ನು ಅನುಭವಿಸಿತು. ಫರ್ಮಾನ್ ಅಹ್ಮದ್ ಮತ್ತು ಅಸೆಲಾ ಗುಣರತ್ನೆ ಕೂಡ ನಿರಾಸೆ ಮೂಡಿಸಿದರು. ತಿಸಾರ ಪೆರೇರಾ ಕೂಡ ಹೆಚ್ಚಿನ ಕೊಡುಗೆ ನೀಡಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಆಶ್ಲೇ ನರ್ಸ್ 16 ಎಸೆತಗಳಲ್ಲಿ 30 ರನ್ ಗಳಿಸಿದಾರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಡೆಲ್ಲಿ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 193 ರನ್ ಗಳಿಸಲಷ್ಟೇ ಶಕ್ತವಾಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:40 pm, Sat, 2 March 24