US Masters T10 League: 47ನೇ ವಯಸ್ಸಿನಲ್ಲೂ ಅಬ್ಬರಿಸಿದ ಕಾಲಿಸ್; ರೈನಾ ತಂಡಕ್ಕೆ 48 ರನ್ ಜಯ

|

Updated on: Aug 20, 2023 | 10:56 AM

US Masters T10 League: 9 ವರ್ಷಗಳ ಹಿಂದೆ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಜಾಕ್ವೆಸ್ ಕಾಲಿಸ್, ಅಮೆರಿಕದಲ್ಲಿ ನಡೆಯುತ್ತಿರುವ ಟಿ10 ಲೀಗ್‌ನಲ್ಲಿ 200ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿ ಅಬ್ಬರಿಸಿದ್ದಾರೆ. ಕ್ಯಾಲಿಫೋರ್ನಿಯಾ ನೈಟ್ಸ್‌ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ್ದ 47 ವರ್ಷದ ಜಾಕ್ವೆಸ್ ಕಾಲಿಸ್ ತಮ್ಮ ಇನ್ನಿಂಗ್ಸ್​ನಲ್ಲಿ ಕೇವಲ 31 ಎಸೆತಗಳನ್ನು ಎದುರಿಸಿ 8 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಾಯದಿಂದ ಅಜೇಯ 64 ರನ್ ಸಿಡಿಸಿದರು.

US Masters T10 League: 47ನೇ ವಯಸ್ಸಿನಲ್ಲೂ ಅಬ್ಬರಿಸಿದ ಕಾಲಿಸ್; ರೈನಾ ತಂಡಕ್ಕೆ 48 ರನ್ ಜಯ
ಕ್ಯಾಲಿಫೋರ್ನಿಯಾ ನೈಟ್ಸ್‌ ತಂಡ
Follow us on

ಯಾವುದೇ ಆಟದಲ್ಲಾಗಲಿ ಫಿಟ್ನೆಸ್ ಒಂದಿದ್ದರೆ ಸಾಕು ವಯಸ್ಸು ಮುಖ್ಯವಾಗುವುದಿಲ್ಲ. ಇದಕ್ಕೆ ಹಲವು ನಿದರ್ಶನಗಳನ್ನು ಈ ಹಿಂದೆಯೇ ನೋಡಿದ್ದೇವೆ. ಇದೀಗ ಮತ್ತೊಮ್ಮೆ ಆ ಮಾತು ಸಾಭೀತಾಗಿದ್ದು, 9 ವರ್ಷಗಳ ಹಿಂದೆ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಜಾಕ್ವೆಸ್ ಕಾಲಿಸ್ (Jacques Kallis), ಅಮೆರಿಕದಲ್ಲಿ ನಡೆಯುತ್ತಿರುವ ಟಿ10 ಲೀಗ್‌ನಲ್ಲಿ (US Masters T10 League) 200ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿ ಅಬ್ಬರಿಸಿದ್ದಾರೆ. ಈ ಲೀಗ್​ನಲ್ಲಿ ಕ್ಯಾಲಿಫೋರ್ನಿಯಾ ನೈಟ್ಸ್‌ (California Knights) ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ್ದ 47 ವರ್ಷದ ಜಾಕ್ವೆಸ್ ಕಾಲಿಸ್ ತಮ್ಮ ಇನ್ನಿಂಗ್ಸ್​ನಲ್ಲಿ ಕೇವಲ 31 ಎಸೆತಗಳನ್ನು ಎದುರಿಸಿ 8 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಾಯದಿಂದ ಅಜೇಯ 64 ರನ್ ಸಿಡಿಸಿದರು. ಅಲ್ಲದೆ ಭಾರತ ಮೂಲದ ಮಿಲಿಂದ್ ಕುಮಾರ್ ಅವರೊಂದಿಗೆ ದಾಖಲೆಯ ಜೊತೆಯಾಟವನ್ನು ಹಂಚಿಕೊಂಡರು.

ಅಮೆರಿಕದ ಟಿ10 ಲೀಗ್​ನಲ್ಲಿ ಕ್ಯಾಲಿಫೋರ್ನಿಯಾ ನೈಟ್ಸ್ ಮತ್ತು ಟೆಕ್ಸಾಸ್ ಚಾರ್ಜರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಸುರೇಶ್ ರೈನಾ ನಾಯಕತ್ವದ ಕ್ಯಾಲಿಫೋರ್ನಿಯಾ ನೈಟ್ಸ್ ತಂಡ ಮೊದಲು ಬ್ಯಾಟ್ ಮಾಡಿತು. ತಂಡದ ಪರ ಆರನ್ ಫಿಂಚ್ ಮತ್ತು ಜಾಕ್ವೆಸ್ ಕಾಲಿಸ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಆದರೆ ತಂಡಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಆರಂಭಿಕ ಫಿಂಚ್ ಇನ್ನಿಂಗ್ಸ್​ನ ಎರಡನೇ ಎಸೆತದಲ್ಲಿ ತಂಡದ ಸ್ಕೋರ್ ಬೋರ್ಡ್​ಗೆ ಯಾವುದೇ ರನ್ ಸೇರಿಸದೇ ಔಟ್ ಆದರು.

Suresh Raina: ಐಷಾರಾಮಿ ರೆಸ್ಟೋರೆಂಟ್ ಆರಂಭಿಸಿದ ಮಿ. ಐಪಿಎಲ್ ಸುರೇಶ್ ರೈನಾ; ಫೋಟೋ ನೋಡಿ

ಮೋಡಿ ಮಾಡಿದ ಮಿಲಿಂದ್-ಕಾಲಿಸ್ ಜೋಡಿ

ಫಿಂಚ್‌ ವಿಕೆಟ್ ಬಳಿಕ ಬ್ಯಾಟಿಂಗ್‌ಗೆ ಇಳಿದ 32ರ ಹರೆಯದ ಮಿಲಿಂದ್ ಕುಮಾರ್ ಮೊದಲ ಎಸೆತದಲ್ಲೇ ತಮ್ಮ ಇಂಗಿತ ವ್ಯಕ್ತಪಡಿಸಿದರು. ಬಳಿಕ ಟೆಕ್ಸಾಸ್ ಬೌಲರ್‌ಗಳ ಮೇಲೆ ಸಿಡಿದೆದ್ದ ಮಿಲಿಂದ್ ಮತ್ತು ಕಾಲಿಸ್ ಅಬ್ಬರದ ಬ್ಯಾಟಿಂಗ್ ನಡೆಸಿದರು. ಇವರಿಬ್ಬರು ಸೇರಿ 10 ಓವರ್‌ಗಳಲ್ಲಿ ಕ್ಯಾಲಿಫೋರ್ನಿಯಾ ನೈಟ್ಸ್ ತಂಡವನ್ನು 158 ರನ್ ಗಡಿ ದಾಟುವಂತೆ ಮಾಡಿದರು. ಇದರಲ್ಲಿ ಮಿಲಿಂದ್ ಕುಮಾರ್ 28 ಎಸೆತಗಳಲ್ಲಿ 271.43 ಸ್ಟ್ರೈಕ್ ರೇಟ್‌ನಲ್ಲಿ 6 ಸಿಕ್ಸರ್ ಮತ್ತು 7 ಬೌಂಡರಿ ಒಳಗೊಂಡ 76 ರನ್ ಸಿಡಿಸಿ ಅಜೇಯರಾಗಿ ಉಳಿದರು. ಅದೇ ಸಮಯದಲ್ಲಿ, ಜಾಕ್ವೆಸ್ ಕಾಲಿಸ್ 31 ಎಸೆತಗಳಲ್ಲಿ 8 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಾಯದಿಂದ ಅಜೇಯ 64 ರನ್ ಬಾರಿಸಿದರು.

48 ರನ್‌ಗಳ ಗೆಲುವು

ಇನ್ನು ಕ್ಯಾಲಿಫೋರ್ನಿಯಾ ನೈಟ್ಸ್ ತಂಡ ನೀಡಿದ 159 ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ಬೆನ್ ಡಂಕ್ ನೇತೃತ್ವದ ಟೆಕ್ಸಾಸ್ ಚಾರ್ಜರ್ಸ್ ತಂಡ ನಿಗದಿತ 10 ಓವರ್‌ಗಳಲ್ಲಿ ಕೇವಲ 110 ರನ್ ಗಳಿಸಲಷ್ಟೇ ಶಕ್ತವಾಗಿ 48 ರನ್‌ಗಳಿಂದ ಸೋಲು ಕಂಡಿತು. ಇದರೊಂದಿಗೆ ಸುರೇಶ್ ರೈನಾ ನಾಯಕತ್ವದ ಟೂರ್ನಿಯಲ್ಲಿ ಕ್ಯಾಲಿಫೋರ್ನಿಯಾ ನೈಟ್ಸ್ ತಂಡ ಲೀಗ್​ನಲ್ಲಿ ಮೊದಲ ಜಯ ದಾಖಲಿಸಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:54 am, Sun, 20 August 23