Sign In

By signing in or creating an account, you agree with Associated Broadcasting Company's Terms & Conditions and Privacy Policy.

Suresh Raina: ಐಷಾರಾಮಿ ರೆಸ್ಟೋರೆಂಟ್ ಆರಂಭಿಸಿದ ಮಿ. ಐಪಿಎಲ್ ಸುರೇಶ್ ರೈನಾ; ಫೋಟೋ ನೋಡಿ

Suresh Raina: ಮಿ. ಐಪಿಎಲ್ ಖ್ಯಾತಿಯ ಸುರೇಶ್ ರೈನಾ ನೆದರ್ಲೆಂಡ್ಸ್‌ನ ಆಮ್‌ಸ್ಟರ್‌ಡ್ಯಾಮ್‌ನಲ್ಲಿ ಭಾರತೀಯ ಶೈಲಿಯ ರೆಸ್ಟೊರೆಂಟ್ ತೆರೆದಿದ್ದಾರೆ.

ಪೃಥ್ವಿಶಂಕರ
|

Updated on: Jun 23, 2023 | 8:47 PM

ಟೀಂ ಇಂಡಿಯಾದ ಮಾಜಿ ಆಟಗಾರ ಸುರೇಶ್ ರೈನಾ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿ ಹಲವು ವರ್ಷಗಳೇ ಕಳೆದಿವೆ. ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ಬಳಿಕ ಐಪಿಎಲ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದ ರೈನಾ, ಈ ಹಿಂದೆ ಐಪಿಎಲ್​ಗೂ ವಿದಾಯ ಹೇಳಿದ್ದರು. ಸದ್ಯ ಕ್ರಿಕೆಟ್​ನಿಂದ ದೂರ ಉಳಿದಿರುವ ರೈನಾ ಇದೀಗ ಹೊಸ ಉದ್ಯಮಕ್ಕೆ ಕೈಹಾಕಿದ್ದಾರೆ.

1 / 7
ಮಿ. ಐಪಿಎಲ್ ಖ್ಯಾತಿಯ ಸುರೇಶ್ ರೈನಾ ನೆದರ್ಲೆಂಡ್ಸ್‌ನ ಆಮ್‌ಸ್ಟರ್‌ಡ್ಯಾಮ್‌ನಲ್ಲಿ ಭಾರತೀಯ ಶೈಲಿಯ ರೆಸ್ಟೊರೆಂಟ್ ತೆರೆದಿದ್ದಾರೆ. ಸ್ವತಃ ಈ ವಿಚಾರನ್ನು ರೈನಾ ಅವರೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಖಚಿತಪಡಿಸಿದ್ದಾರೆ.

2 / 7
ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ರೈನಾ, ಆ್ಯಮ್‌ಸ್ಟರ್‌ಡಾಂನಲ್ಲಿ ರೈನಾ ಇಂಡಿಯನ್ ರೆಸ್ಟೊರೆಂಟ್ ಅನ್ನು ನಿಮಗೆ ಪರಿಚಯಿಸಲು ನನಗೆ ಸಂತೋಷವಾಗಿದೆ. ನಾನು ಎಂತಹ ಭೋಜನ ಪ್ರಿಯ ಎಂಬುದು ನಿಮಗೆ ಈಗಾಗಲೇ ತಿಳಿದಿದೆ. ಇದೀಗ ಭಾರತದ ವಿಧವಿಧದ ಖಾದ್ಯಗಳನ್ನು ಇಲ್ಲಿನ ಭಾರತೀಯರಿಗೆ ಹಾಗೂ ಈ ದೇಶೀಯರಿಗೆ ಪರಿಚಯಿಸಲಿದ್ದೇನೆ ಎಂದಿದ್ದಾರೆ.

3 / 7
ವಾಸ್ತವವಾಗಿ ಸುರೇಶ್ ರೈನಾ ಅವರ ಪತ್ನಿ ಪ್ರಿಯಾಂಕಾ ಈ ಹಿಂದೆ ಆಮ್‌ಸ್ಟರ್‌ಡ್ಯಾಮ್‌ನಲ್ಲಿ ಕೆಲಸ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರೈನಾ ಇಲ್ಲಿ ರೆಸ್ಟೊರೆಂಟ್ ಉದ್ಯಮ ಆರಂಭಿಸಿದ್ದಾರೆ ಎಂಬ ಮಾತು ಸಹ ಕೇಳಿಬರುತ್ತಿದೆ.

4 / 7
ಈ ಉದ್ಯಮಕ್ಕೂ ಮೊದಲು ರೈನಾ ಮಗುವಿನ ಉತ್ಪನ್ನಗಳನ್ನು ಮಾರಾಟ ಮಾಡುವ 'ಮಾಟೆ' ಕಂಪನಿಯನ್ನು ಸಹ ಆರಂಭಿಸಿದ್ದರು. ಇದರೊಂದಿಗೆ 'ಸಾಹಿಕಾಯಿನ್' ಎಂಬ ಸ್ಟಾರ್ಟ್ ಅಪ್ ಸ್ಟಾರ್ಟ್‌ಅಪ್‌ನಲ್ಲಿ ಹೂಡಿಕೆ ಮಾಡಿದ್ದಾರೆ.

5 / 7
ಇನ್ನು ಕ್ರಿಕೆಟ್ ವಿಚಾರಕ್ಕೆ ಬಂದರೆ ಟೀಂ ಇಂಡಿಯಾದ ಮಾಜಿ ನಾಯಕ ಧೋನಿ ಅವರ ಆಪ್ತ ಗೆಳೆಯನಾಗಿರುವ ರೈನಾ, 2020 ರ ಆಗಸ್ಟ್ 15 ರಂದು ಧೋನಿ ಕ್ರಿಕೆಟ್​ಗೆ ವಿದಾಯ ಘೋಷಿಸಿದ ಕೆಲವೇ ಗಂಟೆಗಳ ನಂತರ ತಾವು ಕೂಡ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು.

6 / 7
ಆ ಬಳಿಕ ಐಪಿಎಲ್​ನಲ್ಲಿ ಆಡುತ್ತಿದ್ದ ರೈನಾ 2022 ರ ಸೆಪ್ಟೆಂಬರ್​ನಲ್ಲಿ ಈ ಮಿಲಿಯನ್ ಡಾಲರ್​ ಟೂರ್ನಿಗೆ ವಿದಾಯ ಹೇಳಿದ್ದರು. ಇತ್ತೀಚಿಗೆ ರೈನಾ ಲಂಕಾ ಪ್ರಿಮಿಯರ್ ಆಡಲು ತಮ್ಮ ಹೆಸರನ್ನು ನೋಂದಾಯಿಸಿದ್ದರು. ಆದರೆ ಆಟಗಾರರ ಹರಾಜಿನಲ್ಲಿ ರೈನಾ ಅವರ ಹೆಸರನ್ನೇ ಪ್ರಸ್ತಾಪಿಸಲಿಲ್ಲ.

7 / 7
Follow us