- Kannada News Photo gallery Cricket photos Suresh Raina opens Indian restaurant in Amsterdam Netherlands
Suresh Raina: ಐಷಾರಾಮಿ ರೆಸ್ಟೋರೆಂಟ್ ಆರಂಭಿಸಿದ ಮಿ. ಐಪಿಎಲ್ ಸುರೇಶ್ ರೈನಾ; ಫೋಟೋ ನೋಡಿ
Suresh Raina: ಮಿ. ಐಪಿಎಲ್ ಖ್ಯಾತಿಯ ಸುರೇಶ್ ರೈನಾ ನೆದರ್ಲೆಂಡ್ಸ್‌ನ ಆಮ್‌ಸ್ಟರ್‌ಡ್ಯಾಮ್‌ನಲ್ಲಿ ಭಾರತೀಯ ಶೈಲಿಯ ರೆಸ್ಟೊರೆಂಟ್ ತೆರೆದಿದ್ದಾರೆ.
Updated on: Jun 23, 2023 | 8:47 PM

ಟೀಂ ಇಂಡಿಯಾದ ಮಾಜಿ ಆಟಗಾರ ಸುರೇಶ್ ರೈನಾ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿ ಹಲವು ವರ್ಷಗಳೇ ಕಳೆದಿವೆ. ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ ಬಳಿಕ ಐಪಿಎಲ್ನಲ್ಲಿ ಕಾಣಿಸಿಕೊಳ್ಳುತ್ತಿದ್ದ ರೈನಾ, ಈ ಹಿಂದೆ ಐಪಿಎಲ್ಗೂ ವಿದಾಯ ಹೇಳಿದ್ದರು. ಸದ್ಯ ಕ್ರಿಕೆಟ್‌ನಿಂದ ದೂರ ಉಳಿದಿರುವ ರೈನಾ ಇದೀಗ ಹೊಸ ಉದ್ಯಮಕ್ಕೆ ಕೈಹಾಕಿದ್ದಾರೆ.

ಮಿ. ಐಪಿಎಲ್ ಖ್ಯಾತಿಯ ಸುರೇಶ್ ರೈನಾ ನೆದರ್ಲೆಂಡ್ಸ್‌ನ ಆಮ್‌ಸ್ಟರ್‌ಡ್ಯಾಮ್‌ನಲ್ಲಿ ಭಾರತೀಯ ಶೈಲಿಯ ರೆಸ್ಟೊರೆಂಟ್ ತೆರೆದಿದ್ದಾರೆ. ಸ್ವತಃ ಈ ವಿಚಾರನ್ನು ರೈನಾ ಅವರೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಖಚಿತಪಡಿಸಿದ್ದಾರೆ.

ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ರೈನಾ, ಆ್ಯಮ್‌ಸ್ಟರ್‌ಡಾಂನಲ್ಲಿ ರೈನಾ ಇಂಡಿಯನ್ ರೆಸ್ಟೊರೆಂಟ್ ಅನ್ನು ನಿಮಗೆ ಪರಿಚಯಿಸಲು ನನಗೆ ಸಂತೋಷವಾಗಿದೆ. ನಾನು ಎಂತಹ ಭೋಜನ ಪ್ರಿಯ ಎಂಬುದು ನಿಮಗೆ ಈಗಾಗಲೇ ತಿಳಿದಿದೆ. ಇದೀಗ ಭಾರತದ ವಿಧವಿಧದ ಖಾದ್ಯಗಳನ್ನು ಇಲ್ಲಿನ ಭಾರತೀಯರಿಗೆ ಹಾಗೂ ಈ ದೇಶೀಯರಿಗೆ ಪರಿಚಯಿಸಲಿದ್ದೇನೆ ಎಂದಿದ್ದಾರೆ.

ವಾಸ್ತವವಾಗಿ ಸುರೇಶ್ ರೈನಾ ಅವರ ಪತ್ನಿ ಪ್ರಿಯಾಂಕಾ ಈ ಹಿಂದೆ ಆಮ್‌ಸ್ಟರ್‌ಡ್ಯಾಮ್‌ನಲ್ಲಿ ಕೆಲಸ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರೈನಾ ಇಲ್ಲಿ ರೆಸ್ಟೊರೆಂಟ್ ಉದ್ಯಮ ಆರಂಭಿಸಿದ್ದಾರೆ ಎಂಬ ಮಾತು ಸಹ ಕೇಳಿಬರುತ್ತಿದೆ.

ಈ ಉದ್ಯಮಕ್ಕೂ ಮೊದಲು ರೈನಾ ಮಗುವಿನ ಉತ್ಪನ್ನಗಳನ್ನು ಮಾರಾಟ ಮಾಡುವ 'ಮಾಟೆ' ಕಂಪನಿಯನ್ನು ಸಹ ಆರಂಭಿಸಿದ್ದರು. ಇದರೊಂದಿಗೆ 'ಸಾಹಿಕಾಯಿನ್' ಎಂಬ ಸ್ಟಾರ್ಟ್ ಅಪ್ ಸ್ಟಾರ್ಟ್‌ಅಪ್‌ನಲ್ಲಿ ಹೂಡಿಕೆ ಮಾಡಿದ್ದಾರೆ.

ಇನ್ನು ಕ್ರಿಕೆಟ್ ವಿಚಾರಕ್ಕೆ ಬಂದರೆ ಟೀಂ ಇಂಡಿಯಾದ ಮಾಜಿ ನಾಯಕ ಧೋನಿ ಅವರ ಆಪ್ತ ಗೆಳೆಯನಾಗಿರುವ ರೈನಾ, 2020 ರ ಆಗಸ್ಟ್ 15 ರಂದು ಧೋನಿ ಕ್ರಿಕೆಟ್ಗೆ ವಿದಾಯ ಘೋಷಿಸಿದ ಕೆಲವೇ ಗಂಟೆಗಳ ನಂತರ ತಾವು ಕೂಡ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು.

ಆ ಬಳಿಕ ಐಪಿಎಲ್ನಲ್ಲಿ ಆಡುತ್ತಿದ್ದ ರೈನಾ 2022 ರ ಸೆಪ್ಟೆಂಬರ್ನಲ್ಲಿ ಈ ಮಿಲಿಯನ್ ಡಾಲರ್ ಟೂರ್ನಿಗೆ ವಿದಾಯ ಹೇಳಿದ್ದರು. ಇತ್ತೀಚಿಗೆ ರೈನಾ ಲಂಕಾ ಪ್ರಿಮಿಯರ್ ಆಡಲು ತಮ್ಮ ಹೆಸರನ್ನು ನೋಂದಾಯಿಸಿದ್ದರು. ಆದರೆ ಆಟಗಾರರ ಹರಾಜಿನಲ್ಲಿ ರೈನಾ ಅವರ ಹೆಸರನ್ನೇ ಪ್ರಸ್ತಾಪಿಸಲಿಲ್ಲ.




