Jason Roy: ಮೈದಾನದಲ್ಲೇ ಕಣ್ಣೀರಿಟ್ಟ ಇಂಗ್ಲೆಂಡ್ ಬ್ಯಾಟರ್ ಜೇಸನ್ ರಾಯ್: ಕಾರಣವೇನು ಗೊತ್ತಾ?

| Updated By: Vinay Bhat

Updated on: Nov 07, 2021 | 11:53 AM

Jason Roy Injury: ದಕ್ಷಿಣ ಆಫ್ರಿಕಾ ನೀಡಿದ್ದ ಸವಾಲಿನ ಮೊತ್ತ ಬೆನ್ನತ್ತಿದ ಇಂಗ್ಲೆಂಡ್‌ಗೆ ಜೇಸನ್ ರಾಯ್ ಹಾಗೂ ಜೋಸ್ ಬಟ್ಲರ್ ಸ್ಫೋಟಕ ಆರಂಭವನ್ನೇ ಒದಗಿಸುತ್ತಿದ್ದರು. ಆದರೆ, ತಂಡದ ಮೊತ್ತ 38 ಆಗುವಾಗ ಜೇಸನ್ ರಾಯ್ ಇಂಜುರಿಗೆ ತುತ್ತಾದರು.

Jason Roy: ಮೈದಾನದಲ್ಲೇ ಕಣ್ಣೀರಿಟ್ಟ ಇಂಗ್ಲೆಂಡ್ ಬ್ಯಾಟರ್ ಜೇಸನ್ ರಾಯ್: ಕಾರಣವೇನು ಗೊತ್ತಾ?
Jason Roy Injury
Follow us on

ಟಿ20 ವಿಶ್ವಕಪ್​ನಲ್ಲಿ (T20 World Cup) ಶನಿವಾರ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್ (England vs South Africa) ಸೋಲುವ ಮೂಲಕ ಟೂರ್ನಿಯಲ್ಲಿ ಮೊದಲ ಬಾರಿಗೆ ಮಂಡಿಯೂರಿತು. ಇದರಿಂದ ಆಂಗ್ಲರಿಗೆ ಯಾವುದೇ ಹಿನ್ನಡೆಯಾಗಲಿಲ್ಲ. ದಕ್ಷಿಣ ಆಫ್ರಿಕಾ ಗೆದ್ದು ಟೂರ್ನಿಯಿಂದ ಹೊರಬಿದ್ದರೆ, ಸೋತ ಇಂಗ್ಲೆಂಡ್ ಸೆಮಿ ಫೈನಲ್​ಗೆ (Semi Final) ಅಧಿಕೃತವಾಗಿ ಪ್ರವೇಶ ಪಡೆಯಿತು. ಆದರೆ, ಈ ಪಂದ್ಯದ ಮಧ್ಯೆ ಇಂಗ್ಲೆಂಡ್ ತಂಡದ ಸ್ಟಾರ್ ಬ್ಯಾಟರ್ ಜೇಸನ್ ರಾಯ್ (Jason Roy) ಇಂಜುರಿಗೆ ತುತ್ತಾಗಿ ನೋವು ತಾಳಲಾರದೆ ಮೈದಾನದಲ್ಲೇ ಕಣ್ಣೀರಿಟ್ಟ ಘಟನೆ ನಡೆಯಿತು.

ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ ತಂಡ ರಾಸ್ಸಿ ವ್ಯಾನ್ ಡೆರ್‌ ಡುಸೆನ್‌ (94*) ಹಾಗೂ ಏಡೆನ್ ಮಾರ್ಕರಮ್ (52*) ಬಿರುಸಿನ ಅರ್ಧಶತಕಗಳ ನೆರವಿನಿಂದ ಎರಡು ವಿಕೆಟ್ ನಷ್ಟಕ್ಕೆ 20 ಓವರ್​ನಲ್ಲಿ 189 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಅಲ್ಲದೆ ಸೆಮಿಫೈನಲ್ ಪ್ರವೇಶಿಸಲು ಎದುರಾಳಿ ಇಂಗ್ಲೆಂಡ್ ತಂಡವನ್ನು ಗರಿಷ್ಠ 132 ರನ್‌ಗಳಿಗೆ ನಿಯಂತ್ರಿಸಬೇಕಾದ ಒತ್ತಡಕ್ಕೆ ಸಿಲುಕಿತ್ತು. ಆದರೆ, ಬಲಿಷ್ಠ ಬ್ಯಾಟ್ಸ್‌ಮನ್‌ಗಳನ್ನು ಹೊಂದಿರುವ ಇಂಗ್ಲೆಂಡ್‌ ತಂಡ ಕೊನೆಯ ಓವರ್‌ವರೆಗೂ ಕಠಿಣ ಹೋರಾಟ ನಡೆಸಿ 10 ರನ್‌ಗಳಿಂದ ಸೋಲು ಒಪ್ಪಿಕೊಂಡಿತು.

ಆಫ್ರಿಕಾ ನೀಡಿದ್ದ ಸವಾಲಿನ ಮೊತ್ತ ಬೆನ್ನತ್ತಿದ ಇಂಗ್ಲೆಂಡ್‌ಗೆ ಜೇಸನ್ ರಾಯ್ ಹಾಗೂ ಜೋಸ್ ಬಟ್ಲರ್ ಸ್ಫೋಟಕ ಆರಂಭವನ್ನೇ ಒದಗಿಸುತ್ತಿದ್ದರು. ಆದರೆ, ತಂಡದ ಮೊತ್ತ 38 ಆಗುವಾಗ ಜೇಸನ್ ರಾಯ್ ಇಂಜುರಿಗೆ ತುತ್ತಾದರು. ಸಿಂಗಲ್ ರನ್ ಓಡುವಾಗ ಕಾಲಿಗೆ ಪೆಟ್ಟುಮಾಡಿಕೊಂಡು ಹೇಗಾದರು ವಿಕೆಟ್ ತುದಿಗೆ ತಲುಪಿದರು. ನಂತರ ಒಂದು ಹೆಜ್ಜೆ ಮುಂದಿಡಲು ಸಾಧ್ಯವಾಗದ ರಾಯ್ ಅಲ್ಲೆ ಮಲಗಿ ಬಿಟ್ಟರು. ತಕ್ಷಣ ಇಂಗ್ಲೆಂಡ್ ಫಿಸಿಯೋ ಮೈದಾನಕ್ಕೆ ಆಗಮಿಸಿ ಪರೀಕ್ಷಿಸಿದರು. ಇದರ ನಡುವೆ ಜೇಸನ್ ರಾಯ್ ಕಣ್ಣಲ್ಲಿ ನೀರು ತುಂಬಿತ್ತು. ನಂತರ ಬ್ಯಾಟ್ ಮಾಡಲು ಸಾಧ್ಯವಾಗದ ಇವರು 20 ರನ್ ಗಳಿಸಿ ನಿವೃತ್ತಿ ಹೊಂದಿದರು.

 

ಬಳಿಕ ಮಧ್ಯಮ ಕ್ರಮಾಂಕದಲ್ಲಿ ಮೊಯಿನ್ ಅಲಿ (37) ಹಾಗೂ ಡೇವಿಡ್ ಮಲಾನ್ (33) ರನ್ ಗತಿ ಕುಸಿಯದಂತೆ ನೋಡಿಕೊಂಡರು. ಕೊನೆಯ ಹಂತದಲ್ಲಿ ಲಯಮ್ ಲಿವಿಂಗ್‌ಸ್ಟೋನ್ (28) ಹಾಗೂ ನಾಯಕ ಇಯಾನ್ ಮಾರ್ಗನ್ (17) ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು.

ಆದರೆ ಇನ್ನಿಂಗ್ಸ್‌ನ ಅಂತಿಮ ಓವರ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ ಕಗಿಸೊ ರಬಾಡ ದಕ್ಷಿಣ ಆಫ್ರಿಕಾಗೆ ರೋಚಕ ಗೆಲುವು ಒದಗಿಸಿಕೊಡುವಲ್ಲಿ ನೆರವಾದರು. ಇನ್ನುಳಿದಂತೆ ಡ್ವೇಯ್ನ್ ಪ್ರೆಟೋರಿಯಸ್ ಹಾಗೂ ತಬ್ರೈಜ್ ಶಮ್ಸಿ ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದರು.

India vs New Zealand: ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡ: ಕೇಳಿಬರುತ್ತದೆ ಈ ಹೊಸ ಪ್ಲೇಯರ್ ಹೆಸರು

Team India Captain: ಮಂಗಳವಾರ ಬಿಸಿಸಿಐಯಿಂದ ಮಹತ್ವದ ಸಭೆ: ನಾಯಕತ್ವದ ಕುರಿತು ದೊಡ್ಡ ಘೋಷಣೆ ಸಾಧ್ಯತೆ

(Jason Roy breaks down in tears during the clash between England vs South Africa at the T20 World Cup)