2022ರ ಐಸಿಸಿ ಟಿ20 ವಿಶ್ವಕಪ್‌ಗೆ (ICC T20 World Cup 2022) ತಂಡವನ್ನು ಪ್ರಕಟಿಸಿದ ಕೇವಲ 6 ಗಂಟೆಗಳಲ್ಲಿ ಇಂಗ್ಲೆಂಡ್ ಭಾರಿ ಹಿನ್ನಡೆ ಅನುಭವಿಸಿದೆ. ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಜಾನಿ ಬೈರ್‌ಸ್ಟೋವ್ (Jonny Bairstow) ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರಗುಳಿದಿದ್ದಾರೆ. ಶುಕ್ರವಾರ, ಸೆಪ್ಟೆಂಬರ್ 2 ರಂದು ಪಾಕಿಸ್ತಾನ ಪ್ರವಾಸ ಮತ್ತು T20 ವಿಶ್ವಕಪ್‌ಗಾಗಿ ಇಂಗ್ಲೆಂಡ್ ತಂಡವನ್ನು ಪ್ರಕಟಿಸಿತ್ತು. ಅದರಲ್ಲಿ ಬೈರ್‌ಸ್ಟೋವ್ ಎರಡೂ ತಂಡದ ಪ್ರಮುಖ ಭಾಗವಾಗಿದ್ದರು. ಆದರೀಗ ECB ಬೈರ್‌ಸ್ಟೋವ್ ಅವರ ಗಾಯದ ಬಗ್ಗೆ ಮಾಹಿತಿ ನೀಡಿದ್ದು, ಅವರು ಇಡೀ ಟಿ20 ವಿಶ್ವಕಪ್‌ಗೆ ಅಲಭ್ಯರಾಗಿದ್ದಾರೆ.
ಗಾಲ್ಫ್ ಆಡುವಾಗ ಬೈರ್‌ಸ್ಟೋ ಗಾಯಗೊಂಡಿದ್ದಾರೆ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇಂಗ್ಲೆಂಡ್ ಮತ್ತು ಯಾರ್ಕ್‌ಷೈರ್ ಬ್ಯಾಟ್ಸ್‌ಮನ್ ಜಾನಿ ಬೈರ್‌ಸ್ಟೋವ್ ಅವರನ್ನು ಐಸಿಸಿ ಟಿ 20 ವಿಶ್ವಕಪ್ ಮತ್ತು ಉಳಿದ ಇಂಗ್ಲೆಂಡ್‌ನ ಕ್ರಿಕೆಟ್ ಸೀಸನ್ನಿಂದ ಹೊರಗಿಡಲಾಗಿದೆ. ಶುಕ್ರವಾರ ಲೀಡ್ಸ್‌ನಲ್ಲಿ ಗಾಲ್ಫ್ ಆಡುತ್ತಿದ್ದಾಗ, ಬೈರ್‌ಸ್ಟೋವ್ ಇಂಜುರಿ ಮಾಡಿಕೊಂಡಿದ್ದಾರೆ. ಆದರೆ ಇಂಜುರಿಯ ತೀವ್ರತೆಯ ಬಗ್ಗೆ ತಿಳಿಯಲು ಮುಂದಿನ ವಾರ ತಜ್ಞರನ್ನು ಭೇಟಿಯಾಗಲಿದ್ದಾರೆ ಎಂದು ಹೇಳಿಕೊಂಡಿದೆ.
You’ve inspired and entertained us so much this summer. And you will again ?
Speedy recovery, @JBairstow21 ❤️
— England Cricket (@englandcricket) September 2, 2022
ಟಿ20 ವಿಶ್ವಕಪ್‌ಗೂ ಮುನ್ನ ಇಂಗ್ಲೆಂಡ್ ಮುಂದಿನ ವಾರ ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಟೆಸ್ಟ್ ಪಂದ್ಯವನ್ನು ಆಡಬೇಕಿದೆ. ಅದೇ ವೇಳೆ ಪಾಕಿಸ್ತಾನ ಪ್ರವಾಸದಲ್ಲಿ 7 ಪಂದ್ಯಗಳ ಟಿ20 ಸರಣಿಯೂ ನಡೆಯಲಿದೆ. ಬೈರ್‌ಸ್ಟೋವ್ ಈಗ ಈ ಎಲ್ಲಾ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಇಂಗ್ಲೆಂಡ್ ಸದ್ಯಕ್ಕೆ ವಿಶ್ವಕಪ್ ತಂಡದಲ್ಲಿ ಬೈರ್‌ಸ್ಟೋ ಅವರ ಸ್ಥಾನದಲ್ಲಿ ಬೇರೆ ಯಾವುದೇ ಆಟಗಾರರನ್ನು ಸೇರಿಸಿಕೊಂಡಿಲ್ಲ, ಆದರೆ ಮೂರನೇ ಟೆಸ್ಟ್‌ಗೆ ಬೈರ್‌ಸ್ಟೋ ಅವರ ಬದಲಿ ಆಟಗಾರನನ್ನು ಘೋಷಿಸಿದೆ. ಮುಂದಿನ ಗುರುವಾರ ಕಿಯಾ ಓವಲ್‌ನಲ್ಲಿ ಆರಂಭವಾಗಲಿರುವ ಮೂರನೇ ಟೆಸ್ಟ್‌ಗೆ ನಾಟಿಂಗ್‌ಹ್ಯಾಮ್‌ಶೈರ್ ಬ್ಯಾಟ್ಸ್‌ಮನ್ ಬೆನ್ ಡಕೆಟ್ ಅವರನ್ನು ತಂಡದಲ್ಲಿ ಸೇರಿಸಲಾಗಿದೆ ಎಂದು ಮಂಡಳಿ ತಿಳಿಸಿದೆ.
ಉತ್ತಮ ಫಾರ್ಮ್‌ನಲ್ಲಿದ್ದ ಬೈರ್‌ಸ್ಟೋ
ಕಳೆದ ಕೆಲವು ವಾರಗಳಿಂದ ಬೈರ್‌ಸ್ಟೋ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ನ್ಯೂಜಿಲೆಂಡ್ ಮತ್ತು ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬೈರ್‌ಸ್ಟೋವ್ ರನ್ ಮಳೆ ಸುರಿಸಿದ್ದರು. ಇಂತಹ ಪರಿಸ್ಥಿತಿಯಲ್ಲಿ ಆಂಗ್ಲರ ತಂಡ ವಿಶ್ವಕಪ್ನಲ್ಲಿ ಅವರ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿತ್ತು. ಇಷ್ಟೇ ಅಲ್ಲ, ಇಂಗ್ಲೆಂಡ್ ತನ್ನ ನಿಯಮಿತ ಆರಂಭಿಕ ಆಟಗಾರ ಜೇಸನ್ ರಾಯ್ ಅವರನ್ನು ಟಿ 20 ವಿಶ್ವಕಪ್‌ಗೆ ಕೈಬಿಟ್ಟಿರುವುದರಿಂದ ನಾಯಕ ಜೋಸ್ ಬಟ್ಲರ್ ಜೊತೆಗೆ ಬೈರ್‌ಸ್ಟೋವ್ ಇನ್ನಿಂಗ್ಸ್ ಆರಂಭಿಸುತ್ತಾರೆ ಎನ್ನಲಾಗುತ್ತಿತ್ತು. ಈಗ ಇಂಗ್ಲೆಂಡ್ ತನ್ನ ತಂತ್ರವನ್ನು ಬದಲಾಯಿಸಬೇಕಾಗಿದೆ.
Published On - 9:06 pm, Fri, 2 September 22