AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಣ್ಣನ ನಾಯಕತ್ವದಲ್ಲಿ ಆಡಲಿದ್ದಾರೆ ದುಬಾರಿ ಬೆಲೆ ಪಡೆದ ಸಂಜು ಸ್ಯಾಮ್ಸನ್

Sanju Samson's KCL 2025 Debut: ಕೇರಳ ಕ್ರಿಕೆಟ್ ಲೀಗ್ 2025ರಲ್ಲಿ ಸಂಜು ಸ್ಯಾಮ್ಸನ್ ಕೊಚ್ಚಿ ಬ್ಲೂ ಟೈಗರ್ಸ್ ತಂಡ ಸೇರಿದ್ದಾರೆ. ಅವರನ್ನು 26.80 ಲಕ್ಷ ರೂಪಾಯಿಗೆ ಖರೀದಿಸಲಾಗಿದೆ, ಆದರೆ ಆಶ್ಚರ್ಯಕರವಾಗಿ ತಂಡದ ನಾಯಕತ್ವವನ್ನು ಅವರ ಅಣ್ಣ ಸ್ಯಾಲಿ ಸ್ಯಾಮ್ಸನ್‌ಗೆ ನೀಡಲಾಗಿದೆ. ಸಂಜು ಮೊದಲ ಬಾರಿಗೆ ಕೆಸಿಎಲ್‌ನಲ್ಲಿ ಆಡುತ್ತಿದ್ದಾರೆ

ಅಣ್ಣನ ನಾಯಕತ್ವದಲ್ಲಿ ಆಡಲಿದ್ದಾರೆ ದುಬಾರಿ ಬೆಲೆ ಪಡೆದ ಸಂಜು ಸ್ಯಾಮ್ಸನ್
Sanju Samson
ಪೃಥ್ವಿಶಂಕರ
|

Updated on:Jul 16, 2025 | 8:49 PM

Share

ಭಾರತೀಯ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್‌ (Sanju Samson) ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಚರ್ಚೆಯಲ್ಲಿದ್ದಾರೆ. ಇದಕ್ಕೆ ಕಾರಣ, ಮುಂದಿನ ಐಪಿಎಲ್ ಸೀಸನ್‌ಗೂ ಮೊದಲು ಅವರು ತಮ್ಮ ತಂಡವನ್ನು ಬದಲಾಯಿಸಬಹುದು ಎಂಬ ಸುದ್ದಿ ಹರಿದಾಡುತ್ತಿರುವುದು. ಅದು ನಿರ್ಧಾರವಾಗುವುದಕ್ಕೂ ಮೊದಲು ಸಂಜು ಸ್ಯಾಮ್ಸನ್‌ ಕೇರಳ ಕ್ರಿಕೆಟ್ ಲೀಗ್ (KCL) ನ ಎರಡನೇ ಸೀಸನ್​ನಲ್ಲಿ ಪಾಲ್ಗೊಳ್ಳುತ್ತಿದ್ದು, ಕೊಚ್ಚಿ ಬ್ಲೂ ಟೈಗರ್ಸ್ ತಂಡದ ಪರ ಬ್ಯಾಟ್ ಬೀಸಲಿದ್ದಾರೆ. ಈ ಫ್ರಾಂಚೈಸಿ, ಸಂಜು ಖರೀದಿಗಾಗಿ ತನ್ನ ಪರ್ಸ್​ನ ಅರ್ಧದಷ್ಟು ಹಣವನ್ನು ಖರ್ಚು ಮಾಡಿದೆಯಾದರೂ ನಾಯಕತ್ವವವನ್ನು ಮಾತ್ರ ಸಂಜು ಸ್ಯಾಮ್ಸನ್‌ ಅವರ ಅಣ್ಣ ಸ್ಯಾಲಿ ಸ್ಯಾಮ್ಸನ್‌ ಅವರಿಗೆ ನೀಡಿ ಶಾಕ್ ನೀಡಿದೆ.

ಅಣ್ಣನ ನಾಯಕತ್ವದಲ್ಲಿ ಆಡಲಿರುವ ಸಂಜು

ಕೇರಳ ಕ್ರಿಕೆಟ್ ಲೀಗ್ 2025 ರ ಹರಾಜಿನಲ್ಲಿ ಸಂಜು ಸ್ಯಾಮ್ಸನ್ ಅವರಿಗೆ ಹೆಚ್ಚಿನ ಬೇಡಿಕೆಯಿತ್ತು. ಆದಾಗ್ಯೂ ಕೊಚ್ಚಿ ಬ್ಲೂ ಟೈಗರ್ಸ್ ತಂಡವು ಸಂಜು ಅವರನ್ನು 26.80 ಲಕ್ಷ ರೂ.ಗೆ ಖರೀದಿಸಿತು. ಈ ಹರಾಜಿನಲ್ಲಿ, ಎಲ್ಲಾ ತಂಡಗಳು ಆಟಗಾರರಿಗಾಗಿ ಖರ್ಚು ಮಾಡಲು ತಲಾ 50 ಲಕ್ಷ ರೂ.ಗಳನ್ನು ಹೊಂದಿದ್ದವು. ಆದರೆ ಕೊಚ್ಚಿ ಬ್ಲೂ ಟೈಗರ್ಸ್ ತಂಡವು ಸಂಜು ಅವರನ್ನು ತಮ್ಮ ತಂಡದಲ್ಲಿ ಸೇರಿಸಿಕೊಳ್ಳಲು ತಮ್ಮ ಒಟ್ಟು ಹಣದ 50% ಕ್ಕಿಂತ ಹೆಚ್ಚು ಖರ್ಚು ಮಾಡಿತು. ಇದರೊಂದಿಗೆ, ಅವರು ಈ ಲೀಗ್‌ನಲ್ಲಿ ಅತ್ಯಂತ ದುಬಾರಿ ಆಟಗಾರರಾದರು. ಆದಾಗ್ಯೂ, ಅವರಿಗೆ ನಾಯಕತ್ವದ ಜವಾಬ್ದಾರಿ ಸಿಗದಿರುವುದು ಆಶ್ಚರ್ಯಕರವಾಗಿದೆ.

ಹರಾಜಿನಲ್ಲಿ ಕೊಚ್ಚಿ ಬ್ಲೂ ಟೈಗರ್ಸ್ ತಂಡವು ಸಂಜು ಸ್ಯಾಮ್ಸನ್​ರನ್ನು ಖರೀದಿಸಿದ್ದು ಮಾತ್ರವಲ್ಲದೆ ಅವರ ಅಣ್ಣ ಸ್ಯಾಲಿ ಸ್ಯಾಮ್ಸನ್ ಅವರನ್ನು ಸಹ 75,000 ರೂ.ಗಳಿಗೆ ಖರೀದಿಸಿತು. ಇದುವರೆಗೆ ಕೇರಳ ಪರ ಒಂದೇ ಒಂದು ಪಂದ್ಯವನ್ನು ಆಡಿರದ ಸ್ಯಾಲಿ ಸ್ಯಾಮ್ಸನ್ ಬೌಲಿಂಗ್ ಆಲ್​ರೌಂಡರ್ ಆಗಿದ್ದಾರೆ. ಸ್ಯಾಲಿ ಸ್ಯಾಮ್ಸನ್ ಇಲ್ಲಿಯವರೆಗೆ 6 ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಅವರು 38 ರನ್ ಗಳಿಸಿದ್ದಾರೆ.

Sanju Samson: ಹರಾಜು ದಾಖಲೆ ಉಡೀಸ್: ಸಂಜು ಸ್ಯಾಮ್ಸನ್ ಮೇಲೆ ಹಣದ ಸುರಿಮಳೆ: ಅತ್ಯಂತ ದುಬಾರಿ ಆಟಗಾರ

ಮೊದಲ ಬಾರಿಗೆ ಲೀಗ್‌ನಲ್ಲಿ ಭಾಗಿ

ಸಂಜು ಸ್ಯಾಮ್ಸನ್ ಮೊದಲ ಬಾರಿಗೆ ಕೇರಳ ಕ್ರಿಕೆಟ್ ಲೀಗ್‌ನಲ್ಲಿ ಆಡಲಿದ್ದಾರೆ. ಈ ಮೊದಲು ಕೇರಳ ಕ್ರಿಕೆಟ್ ಲೀಗ್‌ನ ಮೊದಲ ಸೀಸನ್‌ನಲ್ಲಿ ಲೀಗ್ ರಾಯಭಾರಿಯಾಗಿದ್ದ ಸಂಜು, ಟೀಂ ಇಂಡಿಯಾ ಪರವಾಗಿ ಆಡುತ್ತಿದ್ದ ಕಾರಣ ಈ ಸೀಸನ್‌ನಲ್ಲಿ ಆಡಲು ಸಾಧ್ಯವಾಗಲಿಲ್ಲ. ಆದಾಗ್ಯೂ, ಈ ಬಾರಿ ಅವರು ಆಡಲಿದ್ದಾರೆ. ಈ ಟೂರ್ನಮೆಂಟ್‌ನ ಎರಡನೇ ಸೀಸನ್ ಆಗಸ್ಟ್ 21 ರಿಂದ ಸೆಪ್ಟೆಂಬರ್ 6 ರವರೆಗೆ ನಡೆಯಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:49 pm, Wed, 16 July 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ