AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಂಡ ಬದಲಿಸುವಂತೆ ಫಿನ್ ಅಲೆನ್​ಗೆ 3.37 ಕೋಟಿ ರೂ. ಆಫರ್!

Finn Allen: ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಸ್ಫೋಟಕ ದಾಂಡಿಗ ಫಿನ್ ಅಲೆನ್ ಇದೀಗ ಬಿಗ್ ಬ್ಯಾಷ್ ಲೀಗ್​ನಲ್ಲೂ (BBL) ಭರ್ಜರಿ ಆಫರ್ ಪಡೆದುಕೊಂಡಿದ್ದಾರೆ. ಐಪಿಎಲ್ ಅಖಾಡದಲ್ಲಿ ತಮ್ಮ ಬಿರುಸಿನ ಬ್ಯಾಟಿಂಗ್ ಮೂಲಕ ಅಬ್ಬರಿಸಿದ್ದ ಈ ನ್ಯೂಝಿಲೆಂಡ್​ ಹಾರ್ಡ್ ಹಿಟ್ಟರ್, ಬಿಬಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರನಾಗುವ ಹೊಸ್ತಿಲಲ್ಲಿದ್ದಾರೆ. 

ತಂಡ ಬದಲಿಸುವಂತೆ ಫಿನ್ ಅಲೆನ್​ಗೆ 3.37 ಕೋಟಿ ರೂ. ಆಫರ್!
Finn Allen Image Credit source: GettyImages
ಝಾಹಿರ್ ಯೂಸುಫ್
|

Updated on: Aug 04, 2026 | 2:19 PM

Share

ನ್ಯೂಝಿಲೆಂಡ್ ತಂಡದ ಸ್ಫೋಟಕ ದಾಂಡಿಗ ಫಿನ್ ಅಲೆನ್ ಬಿಗ್ ಬ್ಯಾಷ್ ಲೀಗ್ (BBL) ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರನಾಗಿ ಹೊರಹೊಮ್ಮುವ ಸಾಧ್ಯತೆಯಿದೆ. ಏಕೆಂದರೆ ಮುಂಬರುವ ಸೀಸನ್‌ಗಾಗಿ ವಿವಿಧ ಫ್ರಾಂಚೈಸಿಗಳು ಅಲೆನ್ ಅವರಿಗೆ ಬರೋಬ್ಬರಿ 6,00,000 ಆಸ್ಟ್ರೇಲಿಯನ್ ಡಾಲರ್ (ಸುಮಾರು 3.37 ಕೋಟಿ ರೂಪಾಯಿ) ಆಫರ್ ನೀಡಿದೆ.

ಕಳೆದ ಸೀಸನ್‌ನಲ್ಲಿ ಪರ್ತ್ ಸ್ಕಾರ್ಚರ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಲೆನ್ ಅವರನ್ನು ತನ್ನಲ್ಲೇ ಉಳಿಸಿಕೊಳ್ಳಲು ಪರ್ತ್ ಸ್ಕಾರ್ಚರ್ಸ್ ಫ್ರಾಂಚೈಸಿ ಹರಸಾಹಸ ಪಡುತ್ತಿದೆ. ಏಕೆಂದರೆ ಅಲೆನ್​ಗಾಗಿ ಪ್ರಮುಖ ಫ್ರಾಂಚೈಸಿಗಳು ತೆರೆಮರೆಯಲ್ಲೇ ಬಿಗ್ ಆಫರ್ ನೀಡುತ್ತಿದೆ.

ಮುಗಿಬಿದ್ದ ಫ್ರಾಂಚೈಸಿಗಳು:

ಬಿಬಿಎಲ್‌ನ ಹಳೆಯ ನಿಯಮಗಳ ಪ್ರಕಾರ ಫಿನ್ ಅಲೆನ್ ಕಳೆದ ಬಾರಿ 4,20,000 ಡಾಲರ್ ಒಪ್ಪಂದ ಹೊಂದಿದ್ದರು. ಆದರೆ, ಈ ಬಾರಿ ಕ್ರಿಕೆಟ್ ಆಸ್ಟ್ರೇಲಿಯಾ (CA) ತಂದಿರುವ ಹೊಸ ‘ಮಾರ್ಕ್ಯೂ ಪ್ಲೇಯರ್ ಪೂಲ್’ ನಿಯಮದಿಂದಾಗಿ ಆಟಗಾರರ ಮೌಲ್ಯ ಗಗನಕ್ಕೇರಿದೆ.

ಸ್ಟಾರ್ಸ್ ಮತ್ತು ಸ್ಟ್ರೈಕರ್ಸ್ ಪೈಪೋಟಿ:

ಮೆಲ್ಬೋರ್ನ್ ಸ್ಟಾರ್ಸ್ ಮತ್ತು ಅಡಿಲೇಡ್ ಸ್ಟ್ರೈಕರ್ಸ್ ಫ್ರಾಂಚೈಸಿಗಳು ಈಗಾಗಲೇ ಫಿಲ್ ಅಲೆನ್​ಗೆ 6 ಲಕ್ಷ ಡಾಲರ್​ನ ಆಫರ್ ನೀಡಿದೆ.

ಇತ್ತ ಮೆಲ್ಬೋರ್ನ್ ಸ್ಟಾರ್ಸ್ ತಂಡದ ನೂತನ ಮುಖ್ಯ ಕೋಚ್ ಕ್ಯಾಮರೋನ್ ವೈಟ್ ಅವರು ಈ ಹಿಂದೆ ಅಮೆರಿಕದ ಎಂಎಲ್‌ಸಿ ಲೀಗ್‌ನಲ್ಲಿ ಫಿನ್ ಅಲೆನ್ ಅವರಿಗೆ ತರಬೇತಿ ನೀಡಿದ್ದರು. ಹೀಗಾಗಿ ಅಲೆನ್ ಮೆಲ್ಬೋರ್ನ್ ಸ್ಟಾರ್ಸ್ ಸೇರುವ ಸಾಧ್ಯತೆ ಹೆಚ್ಚಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸ್ಟೋಕ್ಸ್ ಜೊತೆ ಪೈಪೋಟಿ:

ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್ ಅವರಿಗೂ ಸಿಡ್ನಿ ಸಿಕ್ಸರ್ಸ್ ಇಷ್ಟೇ ಮೊತ್ತದ ಆಫರ್ ನೀಡಿದೆ. ಆದರೆ ಸ್ಟೋಕ್ಸ್ ಪೂರ್ಣ ಸೀಸನ್‌ಗೆ ಲಭ್ಯವಿರದ ಕಾರಣ, ಇಡೀ ಟೂರ್ನಿಗೆ ಲಭ್ಯವಿರಲಿರುವ ಫಿನ್ ಅಲೆನ್ ಅವರೇ ಬಿಬಿಎಲ್ ಇತಿಹಾಸದ ಗರಿಷ್ಠ ಸಂಭಾವನೆ ಪಡೆಯುವ ಆಟಗಾರನಾಗಿ ಹೊರಹೊಮ್ಮುವ ಸಾಧ್ಯತೆಯಿದೆ.

ಅಲೆನ್ ಡಿಮ್ಯಾಂಡ್‌ಗೆ ಕಾರಣವೇನು?

ಕಳೆದ 2025–26ರ ಬಿಬಿಎಲ್ ಸೀಸನ್‌ನಲ್ಲಿ ಫಿನ್ ಅಲೆನ್ ಅಕ್ಷರಶಃ ಅಬ್ಬರಿಸಿದ್ದರು. ಅವರ ಅಬ್ಬರದ ಬ್ಯಾಟಿಂಗ್ ಅಂಕಿ-ಅಂಶಗಳು ಹೀಗಿವೆ…

BBL ಅಂಕಿ-ಅಂಶಗಳು ಸಾಧನೆ ಲೀಗ್‌ನಲ್ಲಿ ಸ್ಥಾನ
ಒಟ್ಟು ರನ್‌ಗಳು 466 ರನ್ ಮೊದಲ ಸ್ಥಾನ
ಸ್ಟ್ರೈಕ್ ರೇಟ್ 184.18 ಮೊದಲ ಸ್ಥಾನ
ಸಿಕ್ಸರ್‌ಗಳು 38 ಸಿಕ್ಸ್ ಮೊದಲ ಸ್ಥಾನ
ಫೋರ್​ಗಳು 65 ಬೌಂಡರಿ ಮೊದಲ ಸ್ಥಾನ

ಇದನ್ನೂ ಓದಿ: ಭಾರತ ಲಂಕಾದಲ್ಲಿ ಟೆಸ್ಟ್ ಸರಣಿ ಗೆಲ್ಲೋದು ಅಂದುಕೊಂಡಷ್ಟು ಸುಲಭವಲ್ಲ!

ಟಿ20 ಕ್ರಿಕೆಟ್‌ನಲ್ಲಿ ಸದ್ಯ ಅತ್ಯಂತ ಅಪಾಯಕಾರಿ ಬ್ಯಾಟರ್ ಎನಿಸಿಕೊಂಡಿರುವ ಫಿನ್ ಅಲೆನ್ ಅಂತಿಮವಾಗಿ ಬಿಬಿಎಲ್‌ನ ಯಾವ ಫ್ರಾಂಚೈಸಿಗೆ ಸಹಿ ಹಾಕಲಿದ್ದಾರೆ ಎಂಬುದೇ ಈಗ ಕುತೂಹಲ.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ