ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಆತಿಥೇಯ ಕೆಕೆಆರ್ ತಂಡ 7 ವಿಕೆಟ್‌ಗಳ ಸುಲಭ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ತಂಡ, ಕೆಕೆಆರ್ ದಾಳಿಗೆ ತತ್ತರಿಸಿ ಕೇವಲ 153 ರನ್ಗಳಿಸಲಷ್ಟೇ ಶಕ್ತವಾಯಿತು. 154 ರನ್‌ಗಳ ಗುರಿಯನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು 16.3 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಸಾಧಿಸಿತು. ಕೆಕೆಆರ್ ಪರ ಈ ಪಂದ್ಯದಲ್ಲಿ ಫಿಲಿಪ್ ಸಾಲ್ಟ್ 33 ಎಸೆತಗಳಲ್ಲಿ 68 ರನ್ ಗಳಿಸಿ ಇನ್ನಿಂಗ್ಸ್ ಆಡಿದರೆ, ಶ್ರೇಯಸ್ ಅಯ್ಯರ್ ಅಜೇಯ 33 ರನ್ ಮತ್ತು ವೆಂಕಟೇಶ್ ಅಯ್ಯರ್ 26 ರನ್ ಗಳಿಸಿ ಅಜೇಯರಾಗಿ ಉಳಿದರು. ಸುನಿಲ್ ನರೈನ್ ಕೂಡ 15 ರನ್ ಮತ್ತು ರಿಂಕು ಸಿಂಗ್ 11 ರನ್ ಕೊಡುಗೆ ನೀಡಿದರು. ಈ ಸೀಸನ್ನಲ್ಲಿ ಕೆಕೆಆರ್‌ಗೆ ಇದು ಆರನೇ ಗೆಲುವು. ಈ ಗೆಲುವಿನೊಂದಿಗೆ ಕೆಕೆಆರ್ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.
154 ರನ್‌ಗಳ ಗುರಿಯನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು 16.3 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಸಾಧಿಸಿತು. ಕೆಕೆಆರ್ ಪರ ಈ ಪಂದ್ಯದಲ್ಲಿ ಫಿಲಿಪ್ ಸಾಲ್ಟ್ 33 ಎಸೆತಗಳಲ್ಲಿ 68 ರನ್ ಗಳಿಸಿ ಇನ್ನಿಂಗ್ಸ್ ಆಡಿದರೆ, ಶ್ರೇಯಸ್ ಅಯ್ಯರ್ ಅಜೇಯ 33 ರನ್ ಮತ್ತು ವೆಂಕಟೇಶ್ ಅಯ್ಯರ್ 26 ರನ್ ಗಳಿಸಿ ಅಜೇಯರಾಗಿ ಉಳಿದರು. ಸುನಿಲ್ ನರೈನ್ ಕೂಡ 15 ರನ್ ಮತ್ತು ರಿಂಕು ಸಿಂಗ್ 11 ರನ್ ಕೊಡುಗೆ ನೀಡಿದರು. ಈ ಸೀಸನ್ನಲ್ಲಿ ಕೆಕೆಆರ್‌ಗೆ ಇದು ಆರನೇ ಗೆಲುವು. ಈ ಗೆಲುವಿನೊಂದಿಗೆ ಕೆಕೆಆರ್ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ 16 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿದೆ. ಶ್ರೇಯಸ್ ಅಯ್ಯರ್ 33 ರನ್ ಹಾಗೂ ವೆಂಕಟೇಶ್ ಅಯ್ಯರ್ 20 ರನ್ ಗಳಿಸಿ ಆಡುತ್ತಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ 12 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 121 ರನ್ ಗಳಿಸಿದೆ. ಶ್ರೇಯಸ್ ಅಯ್ಯರ್ 15 ರನ್ ಹಾಗೂ ವೆಂಕಟೇಶ್ ಅಯ್ಯರ್ 8 ರನ್ ಗಳಿಸಿ ಆಡುತ್ತಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ 100 ರನ್ ಗಳಿಸುವಷ್ಟರಲ್ಲಿ ಮೂರನೇ ವಿಕೆಟ್ ಕಳೆದುಕೊಂಡಿತು. ರಿಂಕು ಸಿಂಗ್ 11 ಎಸೆತಗಳಲ್ಲಿ 11 ರನ್ ಗಳಿಸಿ ಔಟಾದರು.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 96 ರನ್ ಗಳಿಸುವಷ್ಟರಲ್ಲಿ ಎರಡನೇ ಹಿನ್ನಡೆ ಅನುಭವಿಸಿದೆ. ಫಿಲಿಪ್ ಸಾಲ್ಟ್ 33 ಎಸೆತಗಳಲ್ಲಿ 68 ರನ್ ಗಳಿಸಿ ಔಟಾದರು.
ಫಿಲಿಪ್ ಸಾಲ್ಟ್ 26 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್ ಸಹಿತ ಅರ್ಧಶತಕ ಪೂರೈಸಿದರು.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ವೇಗದ ಆರಂಭ ಸಿಕ್ಕಿದೆ. ಮೊದಲ ಎರಡು ಓವರ್‌ಗಳ ನಂತರ ಕೆಕೆಆರ್ ಯಾವುದೇ ವಿಕೆಟ್ ನಷ್ಟವಿಲ್ಲದೆ 27 ರನ್ ಗಳಿಸಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿತು. ಕುಲ್ದೀಪ್ ಯಾದವ್ ಡೆಲ್ಲಿ ಕ್ಯಾಪಿಟಲ್ಸ್ ಪರ ಅಜೇಯ 35 ರನ್ ಗಳಿಸಿದ್ದಾರೆ. ರಿಷಬ್ ಪಂತ್ 27 ರನ್ ಗಳಿಸಿ ಇನ್ನಿಂಗ್ಸ್ ಆಡಿದರು. ಮತ್ತೊಂದೆಡೆ ಕೆಕೆಆರ್ ಪರ ವರುಣ್ ಚಕ್ರವರ್ತಿ ಗರಿಷ್ಠ 3 ವಿಕೆಟ್ ಪಡೆದರೆ, ಹರ್ಷಿತ್ ರಾಣಾ ಮತ್ತು ವೈಭವ್ ಅರೋರಾ ತಲಾ 2 ವಿಕೆಟ್ ಪಡೆದರು.
ಹರ್ಷಿತ್ ರಾಣಾ ರಾಸಿಖ್ ಸಲಾಂ ಔಟ್ ಮಾಡುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್‌ಗೆ ಒಂಬತ್ತನೇ ಹೊಡೆತ ನೀಡಿದರು. ರಾಸಿಖ್ 10 ಎಸೆತಗಳಲ್ಲಿ ಎಂಟು ರನ್ ಗಳಿಸಿ ಔಟಾದರು.
ಕುಮಾರ್ ಕುಶಾಗ್ರಾ ಕೇವಲ ಮೂರು ಎಸೆತಗಳಲ್ಲಿ ಒಂದು ರನ್ ಗಳಿಸಿ ಔಟಾದರು. ಡೆಲ್ಲಿ ತಂಡ ಕೇವಲ 111 ರನ್‌ಗಳಿಗೆ ಎಂಟು ವಿಕೆಟ್ ಕಳೆದುಕೊಂಡಿದೆ.
ಅಕ್ಷರ್ ಪಟೇಲ್ 21 ಎಸೆತಗಳಲ್ಲಿ 15 ರನ್ ಗಳಿಸಿ ಔಟಾದರು. ಡೆಲ್ಲಿ ಕ್ಯಾಪಿಟಲ್ಸ್ 101 ರನ್‌ಗಳಾಗುವಷ್ಟರಲ್ಲಿ ಅಕ್ಷರ್ ಪಟೇಲ್ ರೂಪದಲ್ಲಿ 7ನೇ ವಿಕೆಟ್ ಕಳೆದುಕೊಂಡಿತು.
ರಿಷಬ್ ಪಂತ್ 20 ಎಸೆತಗಳಲ್ಲಿ 27 ರನ್ ಗಳಿಸಿ ಔಟಾದರು.
ಡೆಲ್ಲಿ ಕ್ಯಾಪಿಟಲ್ಸ್ ತಂಡ 10 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 93 ರನ್ ಗಳಿಸಿದೆ. ರಿಷಬ್ ಪಂತ್ 27 ರನ್ ಹಾಗೂ ಅಕ್ಷರ್ ಪಟೇಲ್ 12 ರನ್ ಗಳಿಸಿ ಆಡುತ್ತಿದ್ದಾರೆ.
ಪವರ್‌ಪ್ಲೇ ಅಂತ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡ 3 ವಿಕೆಟ್ ನಷ್ಟಕ್ಕೆ 67 ರನ್ ಗಳಿಸಿದೆ. ತಂಡದ ಪರ ಅಭಿಷೇಕ್ ಪೊರೆಲ್ 18 ರನ್ ಹಾಗೂ ರಿಷಬ್ ಪಂತ್ 13 ರನ್ ಗಳಿಸಿ ಆಡುತ್ತಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟ್ಸ್‌ಮನ್ ಶಾಯ್ ಹೋಪ್ 6 ರನ್ ಗಳಿಸಿ ಔಟಾದರು. ರಿಷಬ್ ಪಂತ್ ಕ್ರೀಸ್‌ಗೆ ಬಂದಿದ್ದಾರೆ. ತಂಡದ ಸ್ಕೋರ್ 3 ವಿಕೆಟ್ ನಷ್ಟಕ್ಕೆ 38 ರನ್ ಆಗಿದೆ.
ಡೆಲ್ಲಿಯ ಬಿಗ್ ವಿಕೆಟ್ ಪತನವಾಗಿದೆ. ಜೇಕ್ ಫ್ರೇಸರ್-ಮೆಕ್‌ಗುರ್ಕ್ 12 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಅಭಿಷೇಕ್ ಪೊರೆಲ್ ಅವರೊಂದಿಗೆ ಶಾಯ್ ಹೋಪ್ ಕ್ರೀಸ್‌ಗೆ ಬಂದಿದ್ದಾರೆ. ತಂಡದ ಸ್ಕೋರ್ 2 ವಿಕೆಟ್ ನಷ್ಟಕ್ಕೆ 30 ರನ್ ಆಗಿದೆ.
ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬ್ಯಾಟಿಂಗ್ ಮಾಡಲು ಸಿದ್ಧವಾಗಿದೆ. ಪೃಥ್ವಿ ಶಾ ಮತ್ತು ಜೇಕ್ ಫ್ರೇಸರ್-ಮೆಕ್‌ಗುರ್ಕ್ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಮಿಚೆಲ್ ಸ್ಟಾರ್ಕ್ ಇನ್ನಿಂಗ್ಸ್‌ನ ಮೊದಲ ಓವರ್ ಬೌಲಿಂಗ್ ಮಾಡುತ್ತಿದ್ದಾರೆ.
ಪೃಥ್ವಿ ಶಾ, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಅಭಿಷೇಕ್ ಪೊರೆಲ್, ಶಾಯ್ ಹೋಪ್, ರಿಷಭ್ ಪಂತ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ರಸಿಖ್ ದಾರ್ ಸಲಾಮ್, ಲಿಜಾದ್ ವಿಲಿಯಮ್ಸ್, ಖಲೀಲ್ ಅಹ್ಮದ್.
ಇಂಪ್ಯಾಕ್ಟ್ ಪ್ಲೇಯರ್: ಮುಖೇಶ್ ಕುಮಾರ್, ಪ್ರವೀಣ್ ದುಬೆ, ರಿಕಿ ಭುಯಿ, ಸುಮಿತ್ ಕುಮಾರ್, ಕುಮಾರ್ ಕುಶಾಗ್ರಾ.
ಫಿಲ್ ಸಾಲ್ಟ್, ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ಆಂಡ್ರೆ ರಸೆಲ್, ರಿಂಕು ಸಿಂಗ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ವೈಭವ್ ಅರೋರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.
ಇಂಪ್ಯಾಕ್ಟ್ ಪ್ಲೇಯರ್: ಆಂಗ್ಕ್ರಿಶ್ ರಘುವಂಶಿ, ಸುಯ್ಯಾಶ್ ಶರ್ಮಾ, ಅನುಕೂಲ್ ರಾಯ್, ಮನೀಶ್ ಪಾಂಡೆ, ರಹಮಾನುಲ್ಲಾ ಗುರ್ಬಾಜ್.
ಟಾಸ್ ಗೆದ್ದ ಡೆಲ್ಲಿ ನಾಯಕ ರಿಷಬ್ ಪಂತ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
Published On - 7:02 pm, Mon, 29 April 24