KKR vs SRH Highlights IPL 2023: ಬ್ರೂಕ್ ಶತಕ; 23 ರನ್​ಗಳಿಂದ ಕೆಕೆಆರ್ ಮಣಿಸಿದ ಹೈದರಾಬಾದ್

|

Updated on: Apr 14, 2023 | 11:29 PM

Kolkata Knight Riders vs Sunrisers Hyderabad Highlights Live Score in Kannada: ಇಂದು ನಡೆದ ಐಪಿಎಲ್​ನ 19 ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 23 ರನ್‌ಗಳಿಂದ ಸೋಲಿಸಿತು.

KKR vs SRH Highlights IPL 2023: ಬ್ರೂಕ್ ಶತಕ; 23 ರನ್​ಗಳಿಂದ ಕೆಕೆಆರ್ ಮಣಿಸಿದ ಹೈದರಾಬಾದ್
ಕೆಕೆಆರ್- ಹೈದರಾಬಾದ್ ಮುಖಾಮುಖಿ

ಇಂದು ನಡೆದ ಐಪಿಎಲ್​ನ 19 ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 23 ರನ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ 4 ವಿಕೆಟ್ ನಷ್ಟಕ್ಕೆ 228 ರನ್ ಗಳಿಸಿತು. ತಂಡದ ಪರ ಹ್ಯಾರಿ ಬ್ರೂಕ್ 100 ರನ್ ಗಳಿಸಿ ಅಜೇಯರಾಗಿ ಉಳಿದರೆ, ನಾಯಕ ಏಡೆನ್ ಮಾರ್ಕ್ರಾಮ್ 50 ರನ್ ಬಾರಿಸಿದರು. 229 ರನ್‌ಗಳ ಗುರಿ ಬೆನ್ನತ್ತಿದ ಕೋಲ್ಕತ್ತಾ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 205 ರನ್ ಗಳಿಸಲಷ್ಟೇ ಶಕ್ತವಾಯಿತು. ಕೋಲ್ಕತ್ತಾ ತಂಡದ ನಾಯಕ ನಿತೀಶ್ ರಾಣಾ 75 ರನ್ ಗಳಿಸಿದರೆ, ರಿಂಕು ಸಿಂಗ್ 58 ರನ್ ಗಳಿಸಿ ಅಜೇಯರಾಗಿ ಉಳಿದರು.

LIVE NEWS & UPDATES

The liveblog has ended.
  • 14 Apr 2023 11:27 PM (IST)

    ಹೈದರಾಬಾದ್​ಗೆ ಗೆಲುವು

    ಸನ್ ರೈಸರ್ಸ್ ಹೈದರಾಬಾದ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 23 ರನ್ ಗಳಿಂದ ಸೋಲಿಸಿತು. 229 ರನ್‌ಗಳ ಗುರಿಗೆ ಉತ್ತರವಾಗಿ ಕೋಲ್ಕತ್ತಾ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 205 ರನ್ ಗಳಿಸಲಷ್ಟೇ ಶಕ್ತವಾಯಿತು. ರಿಂಕು ಸಿಂಗ್ 58 ರನ್ ಗಳಿಸಿ ಅಜೇಯರಾಗಿ ಉಳಿದರು.

  • 14 Apr 2023 11:20 PM (IST)

    ಶಾರ್ದೂಲ್ ಠಾಕೂರ್ ಔಟ್

    20ನೇ ಓವರ್​ನ ಮೊದಲ ಎಸೆತದಲ್ಲಿ ಉಮ್ರಾನ್ ಮಲಿಕ್ ಶಾರ್ದೂಲ್ ಠಾಕೂರ್ ಅವರನ್ನು ಔಟ್ ಮಾಡಿದರು. ಕೆಕೆಆರ್‌ನ 7 ವಿಕೆಟ್‌ಗಳು ಪತನಗೊಂಡವು. ತಂಡ ಗೆಲುವಿನಿಂದ ದೂರ ಉಳಿದಂತೆ ಕಾಣುತ್ತಿದೆ


  • 14 Apr 2023 11:19 PM (IST)

    ರಿಂಕು ಅರ್ಧಶತಕ

    ನಟರಾಜನ್ ಅವರ 19ನೇ ಓವರ್​ನ ಕೊನೆಯ ಎಸೆತದಲ್ಲಿ ರಿಂಕು ಸಿಂಗ್ ಬೌಂಡರಿ ಬಾರಿಸಿ 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ರಿಂಕು 4 ಬೌಂಡರಿ ಹಾಗೂ 3 ಸಿಕ್ಸರ್ ಬಾರಿಸಿದರು

  • 14 Apr 2023 11:18 PM (IST)

    18 ಓವರ್‌ ಅಂತ್ಯ

    ಈ ಓವರ್‌ನಲ್ಲಿ ಕ್ಯಾಚ್ ಕೈಚೆಲ್ಲಿದ ಹೈದರಾಬಾದ್ ಒಟ್ಟು ಈ ಪಂದ್ಯದಲ್ಲಿ 6 ಕ್ಯಾಚ್ ಚೆಲ್ಲಿದೆ. ಕೋಲ್ಕತ್ತಾ ಪರ ಶಾರ್ದೂಲ್ ಠಾಕೂರ್ 12 ರನ್ ಹಾಗೂ ರಿಂಕು ಸಿಂಗ್ 35 ರನ್ ಗಳಿಸಿ ಆಡುತ್ತಿದ್ದಾರೆ. ಕೋಲ್ಕತ್ತಾ ಗೆಲುವಿಗೆ 12 ಎಸೆತಗಳಲ್ಲಿ 48 ರನ್ ಅಗತ್ಯವಿದೆ.

  • 14 Apr 2023 11:09 PM (IST)

    17 ಓವರ್‌ಗಳ ನಂತರ ಕೋಲ್ಕತ್ತಾ ಸ್ಕೋರ್ 171/6

    ಕೋಲ್ಕತ್ತಾ ಗೆಲುವಿಗೆ 18 ಎಸೆತಗಳಲ್ಲಿ 58 ರನ್ ಅಗತ್ಯವಿದೆ. ಕೋಲ್ಕತ್ತಾ ಪರ ಶಾರ್ದೂಲ್ ಠಾಕೂರ್ 5 ರನ್ ಹಾಗೂ ರಿಂಕು ಸಿಂಗ್ 33 ರನ್ ವಿರುದ್ಧ ಆಡುತ್ತಿದ್ದಾರೆ. 17 ಓವರ್‌ಗಳ ನಂತರ ಕೋಲ್ಕತ್ತಾ ಸ್ಕೋರ್ 171/6

  • 14 Apr 2023 11:03 PM (IST)

    ರಾಣಾ ಔಟ್

    ನಟರಾಜನ್ ಅವರ ಓವರ್‌ನಲ್ಲಿ ನಾಯಕ ರಾಣಾ 75 ರನ್ ಗಳಿಸಿ ಔಟಾದರು. ಕೋಲ್ಕತ್ತಾ ಸ್ಕೋರ್ 16.3 ಓವರ್‌ಗಳಲ್ಲಿ 165/6

  • 14 Apr 2023 11:03 PM (IST)

    ರಿಂಕು ಸಿಕ್ಸ್

    16ನೇ ಓವರ್​ನ ಕೊನೆಯ 2 ಎಸೆತಗಳಲ್ಲಿ ರಿಂಕು ಸತತ 2 ಸಿಕ್ಸರ್‌ ಬಾರಿಸಿದರು. ಕೋಲ್ಕತ್ತಾ ಪರ ನಿತೀಶ್ ರಾಣಾ ವಿರುದ್ಧ 69 ರನ್ ಹಾಗೂ ರಿಂಕು ಸಿಂಗ್ 32 ರನ್ ವಿರುದ್ಧ ಆಡುತ್ತಿದ್ದಾರೆ. ಕೋಲ್ಕತ್ತಾ ಗೆಲುವಿಗೆ 24 ಎಸೆತಗಳಲ್ಲಿ 70 ರನ್ ಅಗತ್ಯವಿದೆ.

  • 14 Apr 2023 10:49 PM (IST)

    15ನೇ ಓವರ್​ ಅಂತ್ಯ

    ಭುವಿ ಎಸೆದ 15ನೇ ಓವರ್​ನಲ್ಲಿ ರಿಂಕು ಬೌಂಡರಿ ಬಾರಿಸಿದರು. ಕೋಲ್ಕತ್ತಾ ಪರ ನಿತೀಶ್ ರಾಣಾ 68 ರನ್ ಹಾಗೂ ರಿಂಕು ಸಿಂಗ್ 19 ರನ್ ಗಳಿಸಿ ಆಡುತ್ತಿದ್ದಾರೆ. ಕೋಲ್ಕತ್ತಾ ಗೆಲುವಿಗೆ 30 ಎಸೆತಗಳಲ್ಲಿ 87 ರನ್ ಅಗತ್ಯವಿದೆ.15 ಓವರ್‌ಗಳಲ್ಲಿ ಕೋಲ್ಕತ್ತಾ ಸ್ಕೋರ್ 142/5.

  • 14 Apr 2023 10:47 PM (IST)

    36 ಎಸೆತಗಳಲ್ಲಿ 94 ರನ್‌ಗಳ ಅಗತ್ಯ

    ಕೋಲ್ಕತ್ತಾ ಗೆಲುವಿಗೆ 36 ಎಸೆತಗಳಲ್ಲಿ 94 ರನ್‌ಗಳ ಅಗತ್ಯವಿದೆ. ನಿತೀಶ್ ರಾಣಾ 67 ರನ್ ಹಾಗೂ ರಿಂಕು ಸಿಂಗ್ 13 ರನ್ ಗಳಿಸಿ ಆಡುತ್ತಿದ್ದಾರೆ. ಈ ಓವರ್‌ನಲ್ಲಿ ಒಂದು ಸಿಕ್ಸರ್ ಮತ್ತು ಬೌಂಡರಿ ಬಂತು. 14 ಓವರ್‌ಗಳ ನಂತರ ಕೋಲ್ಕತ್ತಾ ಸ್ಕೋರ್ 135/5

  • 14 Apr 2023 10:46 PM (IST)

    ರಾಣಾ ಅರ್ಧಶತಕ

    12ನೇ ಓವರ್​ನಲ್ಲಿ ಸಿಕ್ಸರ್ ಬಾರಿಸಿದ ಕೋಲ್ಕತ್ತಾ ನಾಯಕ ನಿತೀಶ್ ರಾಣಾ ಅರ್ಧಶತಕ ಪೂರೈಸಿದರು. ಅಲ್ಲದೆ 13ನೇ ಓವರ್​ನಲ್ಲಿ ರಾಣಾ ಮತ್ತೊಂದು ಸಿಕ್ಸರ್ ಕೂಡ ಬಾರಿಸಿದರು.

  • 14 Apr 2023 10:29 PM (IST)

    ರಸೆಲ್ ಔಟ್

    ಸತತ ವೈಫಲ್ಯಗಳಿಂದ ಬಳಲುತ್ತಿರುವ ರಸೆಲ್ ಇಂದಿನ ಪಂದ್ಯದಲ್ಲೂ 3 ರನ್ ಗಳಿಸಿ ಔಟಾದರು.

  • 14 Apr 2023 10:29 PM (IST)

    10 ಓವರ್‌ ಅಂತ್ಯ

    ಕೋಲ್ಕತ್ತಾ ಪರ ನಿತೀಶ್ ರಾಣಾ 42 ರನ್ ಹಾಗೂ ರಸೆಲ್ 3 ರನ್ ವಿರುದ್ಧ ಆಡುತ್ತಿದ್ದಾರೆ. ಈ ಓವರ್​ನ ಅಂತಿಮ ಎಸೆತದಲ್ಲಿ ಸಿಕ್ಸರ್ ಬಂತು. 10 ಓವರ್‌ಗಳ ನಂತರ ಕೋಲ್ಕತ್ತಾ ಸ್ಕೋರ್ 96/4

  • 14 Apr 2023 10:17 PM (IST)

    ನಾಲ್ಕನೇ ವಿಕೆಟ್ ಪತನ

    ಕೋಲ್ಕತ್ತಾದ ನಾಲ್ಕನೇ ವಿಕೆಟ್ ಪತನವಾಗಿದೆ. ಮಾರ್ಕಂಡೆ ಅವರ ಓವರ್‌ನಲ್ಲಿ ಜಗದೀಶನ್ 36 ರನ್ ಗಳಿಸಿ ಕ್ಯಾಚಿತ್ತು ಔಟಾದರು. 8.2 ಓವರ್‌ಗಳಲ್ಲಿ ಕೋಲ್ಕತ್ತಾ ಸ್ಕೋರ್ 82/4

  • 14 Apr 2023 10:17 PM (IST)

    8 ಓವರ್‌ಗಳ ನಂತರ ಕೋಲ್ಕತ್ತಾ ಸ್ಕೋರ್ 82/3

    ನಿತೀಶ್ ರಾಣಾ 34 ರನ್ ಮತ್ತು ಜಗದೀಶನ್ 36 ರನ್ ವಿರುದ್ಧ ಆಡುತ್ತಿದ್ದಾರೆ. 8 ಓವರ್‌ಗಳ ನಂತರ ಕೋಲ್ಕತ್ತಾ ಸ್ಕೋರ್ 82/3

  • 14 Apr 2023 10:10 PM (IST)

    ಮಲಿಕ್ ದುಬಾರಿ

    ಉಮ್ರಾನ್ ಮಲಿಕ್ ಎಸೆದ 6ನೇ ಓವರ್​ನಲ್ಲಿ ರಾಣಾ ಸ್ಫೋಟಕ ಬ್ಯಾಟಿಂಗ್ ಮಾಡಿದರು. ಈ ಓವರ್​ನಲ್ಲಿ ರಾಣಾ 4 ಬೌಂಡರಿ ಮತ್ತು 2 ಸಿಕ್ಸರ್‌ ಬಾರಿಸಿದರು. ನಿತೀಶ್ ರಾಣಾ 30 ರನ್ ಮತ್ತು ಜಗದೀಶನ್ 20 ರನ್ ವಿರುದ್ಧ ಆಡುತ್ತಿದ್ದಾರೆ.

  • 14 Apr 2023 09:52 PM (IST)

    ಒಂದೇ ಓವರ್​ನಲ್ಲಿ 2 ವಿಕೆಟ್

    ಕೋಲ್ಕತ್ತಾ ನೈಟ್ ರೈಡರ್ಸ್‌ನ ಎರಡನೇ ಹಾಗೂ 3ನೇ ವಿಕೆಟ್ ಪತನಗೊಂಡಿತು, ಯಾನ್ಸನ್ ಅವರ ಓವರ್‌ನಲ್ಲಿ ವೆಂಕಟೇಶ್ ಅಯ್ಯರ್ 10 ರನ್ ಗಳಿಸಿ ಔಟಾದರು. ಅದೇ ಓವರ್‌ನಲ್ಲಿ ಸುನಿಲ್ ನರೈನ್ ಕೂಡ 0 ರನ್ ಗಳಿಸಿ ಔಟಾದರು. 3.3 ಓವರ್‌ಗಳ ನಂತರ ಕೋಲ್ಕತ್ತಾ ಸ್ಕೋರ್ 20/3

  • 14 Apr 2023 09:51 PM (IST)

    ಜಗದೀಸನ್ ಬೌಂಡರಿ

    3ನೇ ಓವರ್​ನಲ್ಲಿ ಜಗದೀಸನ್ 1 ಬೌಂಡರಿ ಬಾರಿಸಿದರೆ, ವೆಂಕಟೇಶ್ ಕೂಡ 1 ಬೌಂಡರಿ ಹೊಡೆದರು. ಹೈದರಾಬಾದ್ ಪರ ವೆಂಕಟೇಶ್ ಅಯ್ಯರ್ 6 ರನ್ ಹಾಗೂ ಜಗದೀಸನ್ 8 ರನ್ ಗಳಿಸಿ ಆಡುತ್ತಿದ್ದಾರೆ. 3 ಓವರ್‌ಗಳ ನಂತರ ಕೋಲ್ಕತ್ತಾ ಸ್ಕೋರ್ 16/1

  • 14 Apr 2023 09:46 PM (IST)

    ಕೋಲ್ಕತ್ತಾದ ಮೊದಲ ವಿಕೆಟ್ ಪತನ

    ಕೋಲ್ಕತ್ತಾದ ಮೊದಲ ವಿಕೆಟ್ ಪತನವಾಗಿದ್ದು, ಭುವನೇಶ್ವರ್ ಕುಮಾರ್ ಅವರ ಓವರ್‌ನಲ್ಲಿ ರಹಮಾನುಲ್ಲಾ ಗುರ್ಬಾಜ್ 0 ರನ್‌ಗೆ ಕ್ಯಾಚ್ ನೀಡಿ ಔಟಾದರು.

  • 14 Apr 2023 09:26 PM (IST)

    ಕೆಕೆಆರ್​ಗೆ 229 ರನ್‌ಗಳ ಗುರಿ

    ಮೊದಲ ಇನ್ನಿಂಗ್ಸ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಹ್ಯಾರಿ ಬ್ರೂಕ್ 55 ಎಸೆತಗಳಲ್ಲಿ 100 ರನ್ ಗಳಿಸಿದರು. ಮಯಾಂಕ್ ಅಗರ್ವಾಲ್ 9 ರನ್, ರಾಹುಲ್ ತ್ರಿಪಾಠಿ 9 ರನ್, ನಾಯಕ ಅಡೆನ್ ಮಾರ್ಕ್ರಾಮ್ 50 ರನ್, ಅಭಿಷೇಕ್ ಶರ್ಮಾ 32 ರನ್ ಮತ್ತು ಹೆನ್ರಿಚ್ 16 ರನ್ ಗಳಿಸಿದರು. ಇವರ ಆಟದಿಂದಾಗಿ ಹೈದರಾಬಾದ್ ನಿಗದಿತ 20 ಓವರ್​ಗಳಲ್ಲಿ 228 ರನ್ ಕಲೆಹಾಕಿದೆ.

  • 14 Apr 2023 09:15 PM (IST)

    ಹ್ಯಾರಿ ಬ್ರೂಕ್ ಶತಕ

    ಐಪಿಎಲ್ 2023 ರಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಹ್ಯಾರಿ ಬ್ರೂಕ್ ಕೇವಲ 55 ಎಸೆತಗಳಲ್ಲಿ ತಮ್ಮ ಮೊದಲ ಹಾಗೂ ಈ ಐಪಿಎಲ್​ನ ಮೊದಲ ಶತಕವನ್ನು ಬಾರಿಸಿದರು.

  • 14 Apr 2023 09:07 PM (IST)

    ನಾಲ್ಕನೇ ವಿಕೆಟ್ ಪತನ

    ಹೈದರಾಬಾದ್ ತಂಡದ ನಾಲ್ಕನೇ ವಿಕೆಟ್ ಪತನಗೊಂಡಿದ್ದು, ಆಂಡ್ರೆ ರಸೆಲ್ ಓವರ್‌ನ ಮೊದಲ ಎಸೆತದಲ್ಲಿ ಅಭಿಷೇಕ್ ಶರ್ಮಾ 32 ರನ್ ಗಳಿಸಿ ಕ್ಯಾಚಿತ್ತು ನಿರ್ಗಮಿಸಿದರು. ಹೈದರಾಬಾದ್ ಸ್ಕೋರ್ 18.1 ಓವರ್‌ಗಳಲ್ಲಿ 201/4

  • 14 Apr 2023 09:07 PM (IST)

    ದ್ವಿಶತಕ ಪೂರ್ಣ

    ಹೈದರಾಬಾದ್ ಪರ ಹ್ಯಾರಿ ಬ್ರೂಕ್ 90 ರನ್ ಹಾಗೂ ನಾಯಕ ಅಭಿಷೇಕ್ ಶರ್ಮಾ 32 ರನ್ ಗಳಿಸಿ ಆಡುತ್ತಿದ್ದಾರೆ. ಈ ಓವರ್‌ನಲ್ಲಿ ಒಂದು ಬೌಂಡರಿ ಮತ್ತು ಒಂದು ಸಿಕ್ಸರ್ ಕೂಡ ಬಂತು. 18 ಓವರ್‌ಗಳಲ್ಲಿ ಹೈದರಾಬಾದ್ ಸ್ಕೋರ್ 200/3

  • 14 Apr 2023 08:54 PM (IST)

    ಒಂದು ಸಿಕ್ಸರ್ ಮತ್ತು 4 ಬೌಂಡರಿ

    ಲಾಕಿ ಫರ್ಗುಸನ್ ಅವರ 16ನೇ ಓವರ್​ನಲ್ಲಿ ಇಬ್ಬರು ಬ್ಯಾಟರ್​ಗಳು ಸೇರಿ ಒಂದು ಸಿಕ್ಸರ್ ಮತ್ತು 4 ಬೌಂಡರಿಗಳನ್ನು ಬಾರಿಸಿದರು. ಹೈದರಾಬಾದ್ ಪರ ಹ್ಯಾರಿ ಬ್ರೂಕ್ 77 ರನ್ ಹಾಗೂ ನಾಯಕ ಅಭಿಷೇಕ್ ಶರ್ಮಾ 3 ರನ್ ಗಳಿಸಿ ಆಡುತ್ತಿದ್ದಾರೆ.

  • 14 Apr 2023 08:40 PM (IST)

    14 ಓವರ್‌ಗಳ ನಂತರ 134/3

    ಹೈದರಾಬಾದ್ ಪರ ಹ್ಯಾರಿ ಬ್ರೂಕ್ 55 ರನ್ ಹಾಗೂ ನಾಯಕ ಅಭಿಷೇಕ್ ಶರ್ಮಾ 3 ರನ್ ಗಳಿಸಿ ಆಡುತ್ತಿದ್ದಾರೆ. ಹೈದರಾಬಾದ್ ಆಟಗಾರರು ಇಲ್ಲಿಂದ ದೊಡ್ಡ ಗುರಿಯನ್ನು ಸೆಟ್ ಮಾಡುವ ತವಕದಲ್ಲಿದ್ದಾರೆ. 14 ಓವರ್‌ಗಳಲ್ಲಿ ಹೈದರಾಬಾದ್ ಸ್ಕೋರ್ 134/3

  • 14 Apr 2023 08:40 PM (IST)

    ಮೂರನೇ ವಿಕೆಟ್ ಪತನ

    ಸನ್‌ರೈಸರ್ಸ್ ಹೈದರಾಬಾದ್‌ನ ಮೂರನೇ ವಿಕೆಟ್ ಪತನಗೊಂಡಿತು, ವರುಣ್ ಚಕ್ರವರ್ತಿ ಓವರ್​ನಲ್ಲಿ 25 ಎಸೆತಗಳ ಅರ್ಧಶತಕ ಬಾರಿಸಿದ್ದ ಹೈದರಾಬಾದ್ ನಾಯಕ ಅಡೆನ್ ಮರ್ಕ್ರಾಮ್ ಔಟಾದರು. 13 ಓವರ್‌ಗಳ ನಂತರ ಹೈದರಾಬಾದ್ ಸ್ಕೋರ್ 130/3

  • 14 Apr 2023 08:34 PM (IST)

    ಮಾರ್ಕ್ರಾಮ್ ಅರ್ಧಶತಕ

    12ನೇ ಓವರ್​ನಲ್ಲಿ ಮಾರ್ಕ್ರಾಮ್ 2 ಅದ್ಭುತ ಸಿಕ್ಸರ್ ಮತ್ತು 1 ಬೌಂಡರಿ ಸಿಡಿಸಿದರು. ಹೈದರಾಬಾದ್ ಪರ ಹ್ಯಾರಿ ಬ್ರೂಕ್ 50 ರನ್ ಹಾಗೂ ನಾಯಕ ಮಾರ್ಕ್ರಾಮ್ 40 ರನ್ ಗಳಿಸಿ ಆಡುತ್ತಿದ್ದಾರೆ. 12 ಓವರ್‌ಗಳ ನಂತರ ಹೈದರಾಬಾದ್ ಸ್ಕೋರ್ 116/2

  • 14 Apr 2023 08:27 PM (IST)

    ಬ್ರೂಕ್ ಅರ್ಧಶತಕ

    11ನೇ ಓವರ್ ಕೇವಲ ಸಿಂಗಲ್​ಗಳಿಗೆ ಮೀಸಲಾಗಿತ್ತು. ಈ ಓವರ್​ನಲ್ಲಿ ಸಿಂಗಲ್ ಕದ್ದ ಬ್ರೂಕ್ ತಮ್ಮ ಅರ್ಧಶತಕ ಪೂರೈಸಿದರು. ಅಲ್ಲದೆ ಇದೇ ಓವರ್​ನಲ್ಲಿ ಹೈದರಾಬಾದ್ ಶತಕ ಕೂಡ ಪೂರ್ಣಗೊಳಿಸಿತು. 11 ಓವರ್‌ಗಳ ನಂತರ ಹೈದರಾಬಾದ್ ಸ್ಕೋರ್ 100/2

  • 14 Apr 2023 08:26 PM (IST)

    10 ಓವರ್‌ ಮುಕ್ತಾಯ

    10ನೇ ಓವರ್​ನ ಕೊನೆಯ ಎಸೆತದಲ್ಲಿ ನಾಯಕ ಮಾರ್ಕ್ರಾಮ್ ಸಿಕ್ಸರ್ ಬಾರಿಸಿದರು. 10 ಓವರ್‌ಗಳ ನಂತರ ಹೈದರಾಬಾದ್ ಸ್ಕೋರ್ 94/2

  • 14 Apr 2023 08:24 PM (IST)

    ಕೇವಲ 5 ರನ್

    ವರುಣ್ ಚಕ್ರವರ್ತಿ ಎಸೆದ 8ನೇ ಓವರ್​ನಲ್ಲಿ ಕೇವಲ 5 ರನ್ ಬಂದವು. ಹೈದರಾಬಾದ್ ಪರ ಹ್ಯಾರಿ ಬ್ರೂಕ್ 43 ರನ್ ಹಾಗೂ ನಾಯಕ ಆಡೆನ್ ಮಾರ್ಕ್ರಾಮ್ 12 ರನ್ ಗಳಿಸಿ ಆಡುತ್ತಿದ್ದಾರೆ.8 ಓವರ್‌ಗಳ ನಂತರ ಹೈದರಾಬಾದ್ ಸ್ಕೋರ್ 80/2

  • 14 Apr 2023 08:09 PM (IST)

    ಪವರ್​ ಪ್ಲೇ ಅಂತ್ಯ

    6ನೇ ಓವರ್​ನಲ್ಲಿ ಬ್ರೂಕ್ ಅದ್ಭುತ ಬೌಂಡರಿ ಬಾರಿಸಿದರು. ಹೈದರಾಬಾದ್ ಪರ ಹ್ಯಾರಿ ಬ್ರೂಕ್ 39 ರನ್ ಹಾಗೂ ನಾಯಕ ಅಡೆನ್ ಮಾರ್ಕ್ರಾಮ್ 1 ರನ್ ಗಳಿಸಿ ಆಡುತ್ತಿದ್ದಾರೆ.ಹೈದರಾಬಾದ್ ಸ್ಕೋರ್ 6 ಓವರ್​ಗಳಲ್ಲಿ 65/2. ಹೈದರಾಬಾದ್ ತಂಡ ಪವರ್ ಪ್ಲೇನಲ್ಲಿ 2 ವಿಕೆಟ್ ಕಳೆದುಕೊಂಡು 65 ರನ್ ಗಳಿಸಿದೆ.

  • 14 Apr 2023 08:02 PM (IST)

    ರಸೆಲ್​ಗೆ 2ನೇ ವಿಕೆಟ್

    ಆಂಡ್ರೆ ರಸೆಲ್ ತಮ್ಮ ಓವರ್‌ನ ಮೊದಲ ಎಸೆತದಲ್ಲಿ ಮಯಾಂಕ್ ಅಗರ್ವಾಲ್ ಅವರನ್ನು ಔಟ್ ಮಾಡಿದರೆ, ರಾಹುಲ್ ತ್ರಿಪಾಠಿ ಅವರನ್ನು ಕೊನೆಯ ಎಸೆತದಲ್ಲಿ ಔಟ್ ಮಾಡಿದರು. ಮಯಾಂಕ್ ಅಗರ್ವಾಲ್ ಮತ್ತು ರಾಹುಲ್ ತ್ರಿಪಾಠಿ 9 ರನ್ ಗಳಿಸಿ ಔಟಾದರು.

  • 14 Apr 2023 07:57 PM (IST)

    ಹೈದರಾಬಾದ್‌ನ ಮೊದಲ ವಿಕೆಟ್ ಪತನ

    ಹೈದರಾಬಾದ್‌ನ ಮೊದಲ ವಿಕೆಟ್ ಪತನ, ಕೋಲ್ಕತ್ತಾ ಆಲ್‌ರೌಂಡರ್ ಆಂಡ್ರೆ ರಸೆಲ್ ಅವರ ಮೊದಲ ಓವರ್‌ನಲ್ಲಿ ಮಯಾಂಕ್ ಅಗರ್ವಾಲ್ ಔಟಾದರು. ಸನ್‌ರೈಸರ್ಸ್ ಹೈದರಾಬಾದ್ ಸ್ಕೋರ್ 4.1 ಓವರ್‌ಗಳಲ್ಲಿ 46/1

  • 14 Apr 2023 07:52 PM (IST)

    ಉಮೇಶ್​ಗೆ ಸಿಕ್ಸರ್

    ಉಮೇಶ್ ಎಸೆದ 3ನೇ ಓವರ್​ನಲ್ಲಿ ಬ್ರೂಕ್ 2 ಸಿಕ್ಸರ್ ಬಾರಿಸಿದರು. ಹೈದರಾಬಾದ್ ಪರ ಹ್ಯಾರಿ ಬ್ರೂಕ್ 31 ರನ್ ಹಾಗೂ ಮಯಾಂಕ್ ಅಗರ್ವಾಲ್ 7 ರನ್ ಗಳಿಸಿ ಆಡುತ್ತಿದ್ದಾರೆ. 3 ಓವರ್‌ಗಳ ನಂತರ ಹೈದರಾಬಾದ್ ಸ್ಕೋರ್ 43/0

  • 14 Apr 2023 07:51 PM (IST)

    ಬ್ರೂಕ್ ಬೌಂಡರಿ

    ಹೈದರಾಬಾದ್ ಪರ ಹ್ಯಾರಿ ಬ್ರೂಕ್ 18 ರನ್ ಹಾಗೂ ಮಯಾಂಕ್ ಅಗರ್ವಾಲ್ 5 ರನ್ ಗಳಿಸಿ ಆಡುತ್ತಿದ್ದಾರೆ. ಈ ಓವರ್‌ನಲ್ಲಿ 3 ರನ್ ಮತ್ತು ಒಂದು ಬೌಂಡರಿ ಕೂಡ ಬಂತು. 2 ಓವರ್‌ಗಳ ನಂತರ ಹೈದರಾಬಾದ್ ಸ್ಕೋರ್ 28/0

  • 14 Apr 2023 07:34 PM (IST)

    ಹೈದರಾಬಾದ್ ಬ್ಯಾಟಿಂಗ್ ಆರಂಭ

    ಹೈದರಾಬಾದ್ ಬ್ಯಾಟಿಂಗ್ ಆರಂಭಿಸಿದ್ದು, ಆರಂಭಿಕರಾಗಿ ಬ್ರೂಕ್ ಹಾಗೂ ಮಯಾಂಕ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಉಮೇಶ್ ಎಸೆದ ಮೊದಲ ಓವರ್​ನಲ್ಲಿ ಬ್ರೂಕ್ 3 ಬೌಂಡರಿ ಬಾರಿಸಿದರು.

  • 14 Apr 2023 07:24 PM (IST)

    ಸನ್‌ರೈಸರ್ಸ್ ಹೈದರಾಬಾದ್

    ಮಯಾಂಕ್ ಅಗರ್ವಾಲ್, ಹ್ಯಾರಿ ಬ್ರೂಕ್, ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಚ್ ಕ್ಲಾಸೆನ್, ಅಭಿಷೇಕ್ ಶರ್ಮಾ, ಮಾರ್ಕೊ ಯಾನ್ಸೆನ್, ಮಯಾಂಕ್ ಮಾರ್ಕಂಡೇ, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಉಮ್ರಾನ್ ಮಲಿಕ್.

  • 14 Apr 2023 07:09 PM (IST)

    ಕೋಲ್ಕತ್ತಾ ನೈಟ್ ರೈಡರ್ಸ್

    ರಹಮಾನುಲ್ಲಾ ಗುರ್ಬಾಜ್, ನಿತೀಶ್ ರಾಣಾ (ನಾಯಕ), ಆಂಡ್ರೆ ರಸೆಲ್, ಶಾರ್ದೂಲ್ ಠಾಕೂರ್, ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಲಾಕಿ ಫರ್ಗುಸನ್, ಸುಯೇಶ್ ಶರ್ಮಾ, ಉಮೇಶ್ ಯಾದವ್, ವರುಣ್ ಚಕ್ರವರ್ತಿ, ಎನ್. ಜಗದೀಶನ್

  • 14 Apr 2023 07:02 PM (IST)

    ಟಾಸ್ ಗೆದ್ದ ಕೆಕೆಆರ್

    ಟಾಸ್ ಗೆದ್ದ ಕೆಕೆಆರ್ ನಾಯಕ ನಿತೀಶ್ ರಾಣಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಕೆಕೆಆರ್ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ ಹೈದರಾಬಾದ್ ತಂಡದಲ್ಲಿ 1 ಬದಲಾವಣೆ ಮಾಡಲಾಗಿದೆ.

Published On - 7:01 pm, Fri, 14 April 23

Follow us on