- Kannada News Photo gallery Cricket photos IPL 2023 Hardik Pandya fined for Gujarat Titans slow over rate
IPL 2023: ಗುಜರಾತ್ ನಾಯಕ ಹಾರ್ದಿಕ್ ಪಾಂಡ್ಯ ಖಾತೆಯಿಂದ 12 ಲಕ್ಷ ರೂ. ಕಟ್..!
Hardik Pandya: ಇದು ಈ ಸೀಸನ್ನಲ್ಲಿ ಪಾಂಡ್ಯಗೆ ವಿಧಿಸಲಾದ ಮೊದಲ ದಂಡ ಇದಾಗಿದೆ. ಹಾಗೆಯೇ ಈ ಸೀಸನ್ನಲ್ಲಿ ನಿಧಾನಗತಿಯ ಓವರ್ ರೇಟ್‌ನಿಂದ ದಂಡಕ್ಕೆ ಒಳಗಾದ ಮೂರನೇ ನಾಯಕ ಪಾಂಡ್ಯ ಆಗಿದ್ದಾರೆ.
Updated on: Apr 14, 2023 | 5:09 PM

ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದು ಬೀಗಿದ ಸಂತಸದಲ್ಲಿದ್ದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರಿಗೆ ಶಾಕ್ ಎದುರಾಗಿದೆ. ಐಪಿಎಲ್ ನಿಯಮ ಉಲ್ಲಂಘನೆಯ ಆರೋಪದಡಿ ಪಾಂಡ್ಯ ಜೇಬಿಗೆ ಲಕ್ಷಾಂತರ ರೂಪಾಯಿ ಕತ್ತರಿ ಬಿದ್ದಿದೆ.

ಐಪಿಎಲ್ ನೀತಿ ಸಂಹಿತೆಯ ಅಡಿಯಲ್ಲಿ ನಿಧಾನಗತಿಯ ಓವರ್ ರೇಟ್ ಆರೋಪದಡಿ ಗುಜರಾತ್ ನಾಯಕ ಹಾರ್ದಿಕ್ ಪಾಂಡ್ಯಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ.

ಇದು ಈ ಸೀಸನ್ನಲ್ಲಿ ಪಾಂಡ್ಯಗೆ ವಿಧಿಸಲಾದ ಮೊದಲ ದಂಡ ಇದಾಗಿದೆ. ಹಾಗೆಯೇ ಈ ಸೀಸನ್ನಲ್ಲಿ ನಿಧಾನಗತಿಯ ಓವರ್ ರೇಟ್‌ನಿಂದ ದಂಡಕ್ಕೆ ಒಳಗಾದ ಮೂರನೇ ನಾಯಕ ಪಾಂಡ್ಯ ಆಗಿದ್ದಾರೆ.

ಇವರಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಫಾಫ್ ಡು ಪ್ಲೆಸಿಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡದ ಸಂಜು ಸ್ಯಾಮ್ಸನ್ ಅವರಿಗೂ ದಂಡ ವಿಧಿಸಲಾಗಿದೆ.

ಇನ್ನು ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ 1 ಎಸೆತ ಬಾಕಿ ಇರುವಂತೆಯೇ 6 ವಿಕೆಟ್ ಗಳ ಜಯ ಸಾಧಿಸಿತು. ಈ ಪಂದ್ಯದಲ್ಲಿ ಮೊದಲು ಆಡಿದ ಪಂಜಾಬ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 153 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಗುಜರಾತ್ 19.5 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 154 ರನ್‌ಗಳ ಗುರಿ ತಲುಪಿತು.



















