- Kannada News Photo gallery Cricket photos IPL 2023 Ravichandran Ashwin fined for breaching IPL code of conduct
IPL 2023: ಅಂಪೈರ್‌ಗೆ ನಿಯಮ ವಿವರಿಸಿದ್ದಕ್ಕಾಗಿ ಆರ್. ಅಶ್ವಿನ್ಗೆ ಬಿತ್ತು ಭಾರಿ ದಂಡ..!
IPL 2023: ಪಂದ್ಯದ ನಂತರ ಅಶ್ವಿನ್, ಅಂಪೈರ್‌ಗಳ ವಿರುದ್ಧ ಈ ರೀತಿಯ ಹೇಳಿಕೆ ನೀಡಿದ್ದು, ಐಪಿಎಲ್ ನಿಯಮಗಳ ಉಲ್ಲಂಘನೆಯಾಗಿದೆ ಹೀಗಾಗಿ ಅಶ್ವಿನ್ಗೆ ಐಪಿಎಲ್ ನಿಯಮ 2.7 ರ ಪ್ರಕಾರ ಲೆವೆಲ್ 1 ಅಪರಾಧಕ್ಕಾಗಿ ದಂಡವನ್ನು ವಿಧಿಸಲಾಗಿದೆ.
Updated on: Apr 14, 2023 | 3:06 PM

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಸಿಎಸ್ಕೆ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಣ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪ ಕೇಳಿಬಂದಿದ್ದು, ಇದೀಗ ನಿಯಮ ಉಲ್ಲಂಘಿಸಿದಕ್ಕಾಗಿ ಅವರಿಗೆ ದಂಡ ಕೂಡ ವಿಧಿಸಲಾಗಿದೆ.

ಸಿಎಸ್ಕೆ ತಂಡವನ್ನು 3 ರನ್ಗಳಿಂದ ರಾಜಸ್ಥಾನ ಸೋಲಿಸುವಲ್ಲಿ ಅಶ್ವಿನ್ ಪ್ರಮುಖ ಪಾತ್ರವಹಿಸಿದ್ದರು. ಅದರೊಂದಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಆದರೆ, ಪಂದ್ಯದ ಬಳಿಕ ಆರ್. ಅಶ್ವಿನ್ಗೆ ಮಂಡಳಿ ಶಾಕ್ ನೀಡಿದ್ದು, ಪಂದ್ಯದ ಶುಲ್ಕವನ್ನು ಕಡಿತಗೊಳಿಸಲಾಗಿದೆ.

ಅಶ್ವಿನ್ ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.7 ಅನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ ಅಶ್ವಿನ್ ಕೂಡ ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದು, ಪಂದ್ಯದ ಶುಲ್ಕದಲ್ಲಿ 25 ಪ್ರತಿಶತವನ್ನು ದಂಡವಾಗಿ ವಿಧಿಸಲಾಗಿದೆ ಎಂದು ಮಂಡಳಿ ತಿಳಿಸಿದೆ.

ಅಂಪೈರ್‌ಗಳ ವಿರುದ್ಧ ಅಶ್ವಿನ್ ನೀಡಿರುವ ಹೇಳಿಕೆಯೇ ದಂಡ ವಿಧಿಸಲು ಪ್ರಮುಖ ಕಾರಣ. ಚೆನ್ನೈ ವಿರುದ್ಧದ ಗೆಲುವಿನ ನಂತರ ಅಶ್ವಿನ್ ಅಂಪೈರ್‌ಗಳ ಮೇಲೆ ಪ್ರಶ್ನೆಗಳನ್ನು ಎತ್ತಿದ್ದರು. ವಾಸ್ತವವಾಗಿ ಪಂದ್ಯದ ವೇಳೆ ರಾಜಸ್ಥಾನ್ ರಾಯಲ್ಸ್ ತಂಡವನ್ನು ಕೇಳದೆ ಅಂಪೈರ್‌ಗಳು ಚೆಂಡನ್ನು ಬದಲಾಯಿಸಿದ್ದರು ಎಂದು ಅಶ್ವಿನ್ ಆರೋಪ ಮಾಡಿದ್ದರು.

ಅಂಪೈರ್ ತಮ್ಮ ಸಲಹೆ ಕೇಳದೆ ಚೆಂಡನ್ನು ಬದಲಾಯಿಸಿದ್ದಾರೆ. ಡ್ಯೂನ್‌ನಿಂದ ಒದ್ದೆಯಾದ ಬಾಲ್‌ನಿಂದ ನಮಗೆ ಯಾವುದೇ ತೊಂದರೆ ಇರಲಿಲ್ಲ ಎಂದು ಅಶ್ವಿನ್ ಅಂಪೈರ್‌ಗಳ ವಿರುದ್ಧ ಗರಂ ಆಗಿದ್ದರು. ಪಂದ್ಯದ ನಂತರ ಅಶ್ವಿನ್, ಅಂಪೈರ್‌ಗಳ ವಿರುದ್ಧ ಈ ರೀತಿಯ ಹೇಳಿಕೆ ನೀಡಿದ್ದು, ಐಪಿಎಲ್ ನಿಯಮಗಳ ಉಲ್ಲಂಘನೆಯಾಗಿದೆ ಹೀಗಾಗಿ ಅಶ್ವಿನ್ಗೆ ಐಪಿಎಲ್ ನಿಯಮ 2.7 ರ ಪ್ರಕಾರ ಲೆವೆಲ್ 1 ಅಪರಾಧಕ್ಕಾಗಿ ದಂಡವನ್ನು ವಿಧಿಸಲಾಗಿದೆ.



















