KKR vs SRH Highlights, IPL 2024: ಸೋತ ಹೈದರಾಬಾದ್; ಫೈನಲ್​ಗೇರಿದ ಕೆಕೆಆರ್​

|

Updated on: May 21, 2024 | 10:53 PM

Kolkata Knight Riders Vs Sunrisers Highlights Qualifier 1 in Kannada: ಇಂದು ಕ್ವಾಲಿಫೈಯರ್-1ರಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಕೋಲ್ಕತ್ತಾ ನೈಟ್ ರೈಡರ್ಸ್, ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸುತ್ತಿದೆ.

KKR vs SRH Highlights, IPL 2024: ಸೋತ ಹೈದರಾಬಾದ್; ಫೈನಲ್​ಗೇರಿದ ಕೆಕೆಆರ್​

ಬೌಲರ್‌ಗಳ ಅದ್ಭುತ ಪ್ರದರ್ಶನದ ನಂತರ ವೆಂಕಟೇಶ್ ಅಯ್ಯರ್ ಮತ್ತು ನಾಯಕ ಶ್ರೇಯಸ್ ಅಯ್ಯರ್ ಅವರ ಅದ್ಭುತ ಅರ್ಧಶತಕದ ಆಧಾರದ ಮೇಲೆ ಕ್ವಾಲಿಫೈಯರ್-1 ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎಂಟು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್ ಫೈನಲ್ ಪ್ರವೇಶಿಸಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹೈದರಾಬಾದ್, ರಾಹುಲ್ ತ್ರಿಪಾಠಿ ಅವರ 55 ರನ್‌ಗಳ ನೆರವಿನಿಂದ 19.3 ಓವರ್‌ಗಳಲ್ಲಿ 159 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಕೆಕೆಆರ್ ಪರ ನಾಯಕ ಶ್ರೇಯಸ್ ಅಯ್ಯರ್ 24 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಹಾಯದಿಂದ ಅಜೇಯ 58 ರನ್ ಗಳಿಸಿದರೆ, ವೆಂಕಟೇಶ್ ಅಯ್ಯರ್ 28 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳ ನೆರವಿನಿಂದ 51 ರನ್‌ಗಳ ಅಜೇಯ ಇನ್ನಿಂಗ್ಸ್‌ ಆಡಿ ತಂಡವನ್ನು 13.4 ಓವರ್‌ಗಳಲ್ಲಿ ಗೆಲುವಿನ ದಡ ಮುಟ್ಟಿಸಿದರು.

LIVE NEWS & UPDATES

The liveblog has ended.
  • 21 May 2024 10:53 PM (IST)

    ಫೈನಲ್​ಗೇರಿದ ಕೆಕೆಆರ್​

    ಕೆಕೆಆರ್ ತಂಡ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು 8 ವಿಕೆಟ್​ಗಳಿಂದ ಸೋಲಿಸಿದೆ. ಕೆಕೆಆರ್ ಪರ ವೆಂಕಟೇಶ್ ಅಯ್ಯರ್ 51 ರನ್ ಹಾಗೂ ಶ್ರೇಯಸ್ ಅಯ್ಯರ್ 58 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

  • 21 May 2024 10:50 PM (IST)

    ವೆಂಕಟೇಶ್ ಅಯ್ಯರ್ ಅರ್ಧಶತಕ

    ಕೆಕೆಆರ್ ಬ್ಯಾಟ್ಸ್ಮನ್ ವೆಂಕಟೇಶ್ ಅಯ್ಯರ್ ಅಮೋಘ ಬ್ಯಾಟಿಂಗ್ ನಡೆಸಿ ಅರ್ಧಶತಕ ಗಳಿಸಿದರು. ಕೆಕೆಆರ್ ತಂಡ ಈಗ ಗೆಲುವಿನ ಸನಿಹದಲ್ಲಿದೆ ಮತ್ತು 42 ಎಸೆತಗಳಲ್ಲಿ 18 ರನ್ ಅಗತ್ಯವಿದೆ. ವೆಂಕಟೇಶ್ ಜೊತೆಗೆ ಶ್ರೇಯಸ್ ಅಯ್ಯರ್ ಕೂಡ ಕ್ರೀಸ್‌ನಲ್ಲಿದ್ದಾರೆ.


  • 21 May 2024 10:44 PM (IST)

    ಶತಕ ಪೂರ್ಣ

    10 ಓವರ್‌ಗಳಲ್ಲಿ ಕೆಕೆಆರ್ ತಂಡ 2 ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿದೆ. ವೆಂಕಟೇಶ್ ಅಯ್ಯರ್ ಮತ್ತು ಶ್ರೇಯಸ್ ಅಯ್ಯರ್ ಕ್ರೀಸ್‌ನಲ್ಲಿದ್ದಾರೆ.

  • 21 May 2024 10:37 PM (IST)

    7 ಓವರ್‌ ಮುಕ್ತಾಯ

    7 ಓವರ್‌ಗಳಲ್ಲಿ ಕೆಕೆಆರ್ ತಂಡ 2 ವಿಕೆಟ್ ನಷ್ಟಕ್ಕೆ 74 ರನ್ ಗಳಿಸಿದೆ. ವೆಂಕಟೇಶ್ ಅಯ್ಯರ್ ಮತ್ತು ಶ್ರೇಯಸ್ ಅಯ್ಯರ್ ಕ್ರೀಸ್‌ನಲ್ಲಿದ್ದಾರೆ.

  • 21 May 2024 10:02 PM (IST)

    ನಾಲ್ಕು ಓವರ್‌ ಮುಕ್ತಾಯ

    ನಾಲ್ಕು ಓವರ್‌ಗಳಲ್ಲಿ ಕೆಕೆಆರ್ ತಂಡ 1 ವಿಕೆಟ್ ನಷ್ಟಕ್ಕೆ 49 ರನ್ ಗಳಿಸಿದೆ. ಸುನಿಲ್ ನರೈನ್ 12 ರನ್ ಮತ್ತು ವೆಂಕಟೇಶ್ ಅಯ್ಯರ್ 4 ರನ್‌ಗಳೊಂದಿಗೆ ಕ್ರೀಸ್‌ನಲ್ಲಿದ್ದಾರೆ.

  • 21 May 2024 10:02 PM (IST)

    ಮೊದಲ ವಿಕೆಟ್ ಪತನ

    14 ಎಸೆತಗಳಲ್ಲಿ 23 ರನ್ ಗಳಿಸಿ ರಹಮಾನುಲ್ಲಾ ಗುರ್ಬಾಜ್ ಔಟಾದರು.

  • 21 May 2024 10:01 PM (IST)

    2 ಓವರ್‌ ಪೂರ್ಣ

    2 ಓವರ್‌ಗಳ ನಂತರ ಕೆಕೆಆರ್ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ 26 ರನ್ ಗಳಿಸಿದೆ. ರಹಮಾನುಲ್ಲಾ ಗುರ್ಬಾಜ್ ಮತ್ತು ಸುನಿಲ್ ನರೈನ್ ಕ್ರೀಸ್‌ನಲ್ಲಿದ್ದಾರೆ.

  • 21 May 2024 09:43 PM (IST)

    ಕೋಲ್ಕತ್ತಾದ ಇನ್ನಿಂಗ್ಸ್ ಆರಂಭ

    ಕೋಲ್ಕತ್ತಾದ ಇನ್ನಿಂಗ್ಸ್ ಆರಂಭವಾಗಿದೆ. ಒಂದು ಓವರ್‌ನ ನಂತರ ತಂಡದ ಸ್ಕೋರ್ ಯಾವುದೇ ವಿಕೆಟ್ ಇಲ್ಲದೆ ಆರು ರನ್ ಆಗಿದೆ. ರಹಮಾನುಲ್ಲಾ ಗುರ್ಬಾಜ್ ಮತ್ತು ಸುನಿಲ್ ನರೈನ್ ಕ್ರೀಸ್‌ನಲ್ಲಿದ್ದಾರೆ.

  • 21 May 2024 09:23 PM (IST)

    159 ರನ್​​ಗಳಿಗೆ ಹೈದರಾಬಾದ್ ಆಲೌಟ್

    ಸನ್ ರೈಸರ್ಸ್ ಹೈದರಾಬಾದ್ ತಂಡ ಕೆಕೆಆರ್​ಗೆ ಗೆಲುವಿಗೆ 160 ರನ್​ಗಳ ಟಾರ್ಗೆಟ್ ನೀಡಿದೆ. ರಾಹುಲ್ ತ್ರಿಪಾಠಿ ತಂಡದ ಪರ ಗರಿಷ್ಠ 55 ರನ್ ಗಳಿಸಿದರು. ಹೆನ್ರಿಕ್ ಕ್ಲಾಸೆನ್ 32 ರನ್ ಕೊಡುಗೆ ನೀಡಿದರು. ನಾಯಕ ಪ್ಯಾಟ್ ಕಮಿನ್ಸ್ 30 ರನ್​ಗಳ ಹೋರಾಟದ ಇನಿಂಗ್ಸ್ ಆಡಿದರು. ಈ ಆಟಗಾರರಿಂದಲೇ ಹೈದರಾಬಾದ್ ತಂಡ ಗೌರವಾನ್ವಿತ ಸ್ಕೋರ್ ತಲುಪಲು ಸಾಧ್ಯವಾಯಿತು.

  • 21 May 2024 09:16 PM (IST)

    9 ವಿಕೆಟ್‌ ಪತನ

    ಭುವನೇಶ್ವರ್ ಕುಮಾರ್ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದರು. ಹೈದರಾಬಾದ್ ತಂಡ 16 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 126 ರನ್ ಗಳಿಸಿದೆ. ಪ್ಯಾಟ್ ಕಮಿನ್ಸ್ ಮತ್ತು ವಿಜಯಕಾಂತ್ ವ್ಯಾಸಕಾಂತ್ ಕ್ರೀಸ್‌ನಲ್ಲಿದ್ದಾರೆ.

  • 21 May 2024 08:55 PM (IST)

    ಸನ್ವೀರ್ ಸಿಂಗ್ ಔಟ್

    ಸನ್ವೀರ್ ಸಿಂಗ್ ಅವರನ್ನು ಔಟ್ ಮಾಡುವ ಮೂಲಕ ಸ್ಪಿನ್ನರ್ ಸುನಿಲ್ ನರೈನ್ ಹೈದರಾಬಾದ್​ಗೆ ಏಳನೇ ಹೊಡೆತ ನೀಡಿದರು. ಸನ್ವೀರ್ ಖಾತೆ ತೆರೆಯದೆ ಔಟಾದರು. ಇದೀಗ ನಾಯಕ ಪ್ಯಾಟ್ ಕಮಿನ್ಸ್ ಕ್ರೀಸ್‌ಗೆ ಬಂದಿದ್ದು, ಅಬ್ದುಲ್ ಸಮದ್ ಅವರ ಜೊತೆಯಲ್ಲಿದ್ದಾರೆ.

  • 21 May 2024 08:50 PM (IST)

    ತ್ರಿಪಾಠಿ 55 ರನ್ ಗಳಿಸಿ ರನೌಟ್

    ಸನ್ ರೈಸರ್ಸ್ ಹೈದರಾಬಾದ್ ತಂಡದ ಸ್ಟಾರ್ ಬ್ಯಾಟ್ಸ್ ಮನ್ ರಾಹುಲ್ ತ್ರಿಪಾಠಿ 55 ರನ್ ಗಳಿಸಿ ರನೌಟ್ ಆಗಿದ್ದಾರೆ. ಇದರೊಂದಿಗೆ ಹೈದರಾಬಾದ್ ಆರನೇ ವಿಕೆಟ್ ಕಳೆದುಕೊಂಡಿತು. ಇದೀಗ ಸನ್ವೀರ್ ಸಿಂಗ್ ಬ್ಯಾಟಿಂಗ್​ಗೆ ಬಂದಿದ್ದಾರೆ.

  • 21 May 2024 08:37 PM (IST)

    ಹೆನ್ರಿಕ್ ಕ್ಲಾಸೆನ್ ಔಟ್

    ಹೈದರಾಬಾದ್​ನ ಸ್ಟಾರ್ ಬ್ಯಾಟರ್ ಹೆನ್ರಿಚ್ ಕ್ಲಾಸೆನ್ 21 ಎಸೆತಗಳಲ್ಲಿ 32 ರನ್ ಗಳಿಸಿ ಔಟಾದರು.

  • 21 May 2024 08:34 PM (IST)

    10 ಓವರ್‌ ಪೂರ್ಣ

    10 ಓವರ್‌ಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ 4 ವಿಕೆಟ್ ನಷ್ಟಕ್ಕೆ 92 ರನ್ ಗಳಿಸಿದೆ. ಹೆನ್ರಿಚ್ ಕ್ಲಾಸೆನ್ ಮತ್ತು ರಾಹುಲ್ ತ್ರಿಪಾಠಿ ಕ್ರೀಸ್‌ನಲ್ಲಿದ್ದಾರೆ.

  • 21 May 2024 08:19 PM (IST)

    ಪವರ್‌ಪ್ಲೇ ಅಂತ್ಯ

    6 ಓವರ್‌ಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ 4 ವಿಕೆಟ್ ನಷ್ಟಕ್ಕೆ 45 ರನ್ ಗಳಿಸಿದೆ. ಹೆನ್ರಿಚ್ ಕ್ಲಾಸೆನ್ 5 ಮತ್ತು ರಾಹುಲ್ ತ್ರಿಪಾಠಿ 24 ರನ್‌ಗಳೊಂದಿಗೆ ಕ್ರೀಸ್‌ನಲ್ಲಿದ್ದಾರೆ.

  • 21 May 2024 08:02 PM (IST)

    ನಿತೀಶ್ ರೆಡ್ಡಿ ಔಟ್

    ಮಿಚೆಲ್ ಸ್ಟಾರ್ಕ್ ತಮ್ಮ ಅದ್ಭುತ ಬೌಲಿಂಗ್ ಮೂಲಕ ಪವರ್‌ಪ್ಲೇನಲ್ಲಿ ಹೈದರಾಬಾದ್‌ಗೆ ಮತ್ತೊಂದು ಹೊಡೆತ ನೀಡಿದರು. ನಿತೀಶ್ ರೆಡ್ಡಿ, ಸ್ಟಾರ್ಕ್​ಗೆ 2ನೇ ಬಲಿಯಾಗಿದ್ದಾರೆ.

  • 21 May 2024 07:48 PM (IST)

    ಅಭಿಷೇಕ್ ಶರ್ಮಾ ಕೂಡ ಔಟ್

    ವೈಭವ್ ಅರೋರಾ ಹೈದರಾಬಾದ್‌ನ ಅಭಿಷೇಕ್ ಶರ್ಮಾ ಅವರನ್ನು ಔಟ್ ಮಾಡುವ ಮೂಲಕ ಕೆಕೆಆರ್‌ಗೆ ಎರಡನೇ ಯಶಸ್ಸನ್ನು ನೀಡಿದರು. ನಾಲ್ಕು ಎಸೆತಗಳಲ್ಲಿ ಮೂರು ರನ್ ಗಳಿಸಿ ಅಭಿಷೇಕ್ ಔಟಾದರು. ಸದ್ಯ ರಾಹುಲ್ ತ್ರಿಪಾಠಿ ಜೊತೆಗೆ ನಿತೀಶ್ ರೆಡ್ಡಿ ಕ್ರೀಸ್‌ನಲ್ಲಿದ್ದಾರೆ.

  • 21 May 2024 07:39 PM (IST)

    ಹೆಡ್ ಔಟ್

    ಆರಂಭಿಕ ಆಟಗಾರ ಟ್ರಾವಿಸ್ ಹೆಡ್, ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಎಸೆದ ಮೊದಲ ಓವರ್​ನಲ್ಲೇ ವಿಕೆಟ್ ಒಪ್ಪಿಸಿದರು. ಹೆಡ್ ಖಾತೆ ತೆರೆಯದೆ ಪೆವಿಲಿಯನ್​ಗೆ ಮರಳಿದರು. ಇದೀಗ ರಾಹುಲ್ ತ್ರಿಪಾಠಿ ಕ್ರೀಸ್‌ಗೆ ಬಂದಿದ್ದು, ಅವರೊಂದಿಗೆ ಅಭಿಷೇಕ್ ಶರ್ಮಾ ಇದ್ದಾರೆ.

  • 21 May 2024 07:11 PM (IST)

    ಸನ್‌ರೈಸರ್ಸ್ ಹೈದರಾಬಾದ್

    ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ನಿತೀಶ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್, ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ವಿಜಯಕಾಂತ್ ವ್ಯಾಸಕಾಂತ್, ಟಿ.ನಟರಾಜನ್.

  • 21 May 2024 07:11 PM (IST)

    ಕೋಲ್ಕತ್ತಾ ನೈಟ್ ರೈಡರ್ಸ್

    ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ವೈಭವ್ ಅರೋರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.

  • 21 May 2024 07:02 PM (IST)

    ಟಾಸ್ ಗೆದ್ದ ಹೈದರಾಬಾದ್

    ಟಾಸ್ ಗೆದ್ದ ಹೈದರಾಬಾದ್ ನಾಯಕ ಪ್ಯಾಟ್ ಕಮ್ಮಿನ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

  • 21 May 2024 06:46 PM (IST)

    ಎರಡೂ ತಂಡಗಳು ಪ್ರಶಸ್ತಿ ಗೆದ್ದಿವೆ

    ಗೌತಮ್ ಗಂಭೀರ್ ನಾಯಕತ್ವದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 2012 ಮತ್ತು 2014ರಲ್ಲಿ ಪ್ರಶಸ್ತಿ ಜಯಿಸಿದ್ದರೆ, ಸನ್ ರೈಸರ್ಸ್ ಹೈದರಾಬಾದ್ ತಂಡ ಡೇವಿಡ್ ವಾರ್ನರ್ ನಾಯಕತ್ವದಲ್ಲಿ 2016ರಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.

Published On - 6:45 pm, Tue, 21 May 24

Follow us on