IPL: ‘2016 ರ ಸೋಲಿಗೆ ನಾನೇ ಕಾರಣ’; ಆರ್​ಸಿಬಿ ಅಭಿಮಾನಿಗಳ ಬಳಿ ಕ್ಷಮೆಯಾಚಿಸಿದ ವಾಟ್ಸನ್..!

IPL: 2016ರ ಐಪಿಎಲ್ ಫೈನಲ್​ನಲ್ಲಿ ಆರ್​ಸಿಬಿ ಗೆಲುವಿನ ಸನಿಹ ಬಂದು ಸೋತಿತ್ತು. ಆರ್​ಸಿಬಿ ಕೇವಲ 8 ರನ್​ಗಳಿಂದ ಟ್ರೋಫಿ ಎತ್ತಿಹಿಡಿಯುವ ಅವಕಾಶವನ್ನು ಕೈಚೆಲ್ಲಿತ್ತು. ಅಂದಿನ ಸೋಲು ಈವರೆಗೂ ಅಭಿಮಾನಿಗಳ ಮನಸಿನಿಂದ ಮಾಸಿಲ್ಲ. ಈ ನಡುವೆ ಆರ್‌ಸಿಬಿಯ ಮಾಜಿ ಆಟಗಾರ ಹಾಗೂ ಆಲ್‌ರೌಂಡರ್ ಶೇನ್ ವ್ಯಾಟ್ಸನ್ ಆ ಸೋಲಿಗೆ ತಾನೇ ಕಾರಣನೆಂದು, ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ.

IPL: ‘2016 ರ ಸೋಲಿಗೆ ನಾನೇ ಕಾರಣ’; ಆರ್​ಸಿಬಿ ಅಭಿಮಾನಿಗಳ ಬಳಿ ಕ್ಷಮೆಯಾಚಿಸಿದ ವಾಟ್ಸನ್..!
ಆರ್​ಸಿಬಿ ತಂಡ
Follow us
ಪೃಥ್ವಿಶಂಕರ
|

Updated on:May 21, 2024 | 10:12 PM

ಐಪಿಎಲ್‌ನಲ್ಲಿ (IPL) ಅತ್ಯಂತ ನತದೃಷ್ಟ ತಂಡವೆಂದರೆ ಅದು ಆರ್​ಸಿಬಿ (RCB). ಕಳೆದಿರುವ 16 ಆವೃತ್ತಿಗಳಲ್ಲಿ ತಂಡದಲ್ಲಿ ಘಟಾನುಘಟಿ ಆಟಗಾರರೇ ಇದ್ದರೂ ತಂಡವನ್ನು ಚಾಂಪಿಯನ್ ಮಾಡಲು ಸಾಧ್ಯವಾಗಲಿಲ್ಲ. ಎಷ್ಟೋ ಸ್ಟಾರ್ ಆಟಗಾರರು ಬದಲಾದರೂ.. ನಾಯಕರು ಬದಲಾದರು.. ಕೊನೆಗೆ ತಂಡದ ಕೋಚ್ ಕೂಡ ಬದಲಾದರು.. ಆದರೆ ಫಲಿತಾಂಶ ಮಾತ್ರ ಬದಲಾಗಲಿಲ್ಲ. ತಂಡ ಮೂರು ಬಾರಿ ಫೈನಲ್ ತಲುಪಿದರೂ ಟ್ರೋಫಿ ಗೆಲ್ಲಲಾಗಲಿಲ್ಲ. ಅದರಲ್ಲೂ 2016ರ ಐಪಿಎಲ್ ಫೈನಲ್​ನಲ್ಲಿ ಆರ್​ಸಿಬಿ ಗೆಲುವಿನ ಸನಿಹ ಬಂದು ಸೋತಿತ್ತು. ಆರ್​ಸಿಬಿ ಕೇವಲ 8 ರನ್​ಗಳಿಂದ ಟ್ರೋಫಿ ಎತ್ತಿಹಿಡಿಯುವ ಅವಕಾಶವನ್ನು ಕೈಚೆಲ್ಲಿತ್ತು. ಅಂದಿನ ಸೋಲು ಈವರೆಗೂ ಅಭಿಮಾನಿಗಳ ಮನಸಿನಿಂದ ಮಾಸಿಲ್ಲ. ಈ ನಡುವೆ ಆರ್‌ಸಿಬಿಯ ಮಾಜಿ ಆಟಗಾರ ಹಾಗೂ ಆಲ್‌ರೌಂಡರ್ ಶೇನ್ ವಾಟ್ಸನ್ (Shane Watson) ಆ ಸೋಲಿಗೆ ತಾನೇ ಕಾರಣನೆಂದು, ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ.

ಶೇನ್ ವಾಟ್ಸನ್ ಹೇಳಿದ್ದೇನು?

ಶೇನ್ ವಾಟ್ಸನ್ ಇತ್ತೀಚೆಗೆ ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಅವರು ವೇದಿಕೆಗೆ ಬಂದ ತಕ್ಷಣ ಪ್ರೇಕ್ಷಕರು ಆರ್‌ಸಿಬಿ, ಆರ್​ಸಿಬಿ ಎಂದು ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು. ಇದಾದ ನಂತರ ವ್ಯಾಟ್ಸನ್ ಆರ್​ಸಿಬಿ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದರು. ವೇದಿಕೆಯಲ್ಲಿ ಮಾತನಾಡಿದ ಅವರು, ‘ಇಲ್ಲಿನ ಎಲ್ಲಾ ಆರ್​ಸಿಬಿ ಅಭಿಮಾನಿಗಳಲ್ಲಿ ನಾನು ಕ್ಷಮೆಯಾಚಿಸಬೇಕಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 2016 ರ ಐಪಿಎಲ್ ಫೈನಲ್‌ ಪಂದ್ಯದಲ್ಲಿ ನಾನು ಕಳಪೆ ಪ್ರದರ್ಶನ ನೀಡಿದೆ. ನಾನು ಫೈನಲ್‌ಗೆ ಮುಂಚಿತವಾಗಿ ಉತ್ತಮ ತಯಾರಿ ನಡೆಸಿದ್ದೆ. ಅಲ್ಲದೆ ತಂಡಕ್ಕಾಗಿ ಉತ್ತಮ ಪ್ರದರ್ಶನವನ್ನು ನೀಡುತ್ತೇನೆ ಎಂದು ಭಾವಿಸಿದ್ದೆ. ಆದರೆ ಅದು ಆಗಲಿಲ್ಲ. ಕೆಟ್ಟ ಬೌಲಿಂಗ್‌ನಿಂದ ಆರ್​ಸಿಬಿ ಫೈನಲ್‌ನಲ್ಲಿ ಸೋಲುವಂತೆ ಮಾಡಿದೆ ಎಂದು ಅಭಿಮಾನಿಗಳಲ್ಲಿ ಕ್ಷಮೆ ಯಾಚಿಸಿದ್ದಾರೆ.

ಫೈನಲ್‌ನಲ್ಲಿ ವಾಟ್ಸನ್ ಕಳಪೆ ಪ್ರದರ್ಶನ

ಶೇನ್ ವಾಟ್ಸನ್ 2016 ರ ಐಪಿಎಲ್​ನಲ್ಲಿ ಬೌಲಿಂಗ್​ನಲ್ಲಿ ಉತ್ತಮ ಪ್ರದರ್ಶನ ನೀಡಿ 20 ವಿಕೆಟ್ ಪಡೆದಿದ್ದರು. ಆದರೆ ಫೈನಲ್ ಪಂದ್ಯದಲ್ಲಿ ಸಾಕಷ್ಟು ರನ್ ಬಿಟ್ಟುಕೊಟ್ಟಿದ್ದರು. ಈ ಪಂದ್ಯದಲ್ಲಿ ವ್ಯಾಟ್ಸನ್ 4 ಓವರ್‌ ಬೌಲ್ ಮಾಡಿ ಯಾವುದೇ ವಿಕೆಟ್ ಪಡೆಯದೆ ಬರೋಬ್ಬರಿ 61 ರನ್ ನೀಡಿದ್ದರು. ಅಲ್ಲದೆ ಬ್ಯಾಟಿಂಗ್​ನಲ್ಲಿ 9 ಎಸೆತಗಳನ್ನು ಎದುರಿಸಿ ಕೇವಲ 11 ರನ್ ಗಳಿಸಿ ಔಟಾದರು. 209 ರನ್‌ಗಳ ಗುರಿ ಬೆನ್ನತ್ತಿದ ಬೆಂಗಳೂರು ವಿರಾಟ್ ಕೊಹ್ಲಿ ಮತ್ತು ಕ್ರಿಸ್ ಗೇಲ್ ಅವರ ಅಬ್ಬರದ ಬ್ಯಾಟಿಂಗ್​ನಿಂದಾಗಿ ಯಾವುದೇ ವಿಕೆಟ್ ನಷ್ಟವಿಲ್ಲದೆ ಕೇವಲ 10.3 ಓವರ್‌ಗಳಲ್ಲಿ 114 ರನ್ ಗಳಿಸಿತ್ತು. ಆದರೆ ಆರಂಭಿಕರಿಬ್ಬರೂ ಔಟಾದ ಕೂಡಲೇ ವಿಕೆಟ್‌ಗಳ ಸುರಿಮಳೆಯಾಯಿತು. ಡೇವಿಡ್ ವಾರ್ನರ್ ನಾಯಕತ್ವದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಬೆಂಗಳೂರನ್ನು 8 ರನ್​ಗಳಿಂದ ಸೋಲಿಸಿ ಟ್ರೋಫಿ ಎತ್ತಿ ಹಿಡಿದಿತ್ತು. ಇದರೊಂದಿಗೆ ಬೆಂಗಳೂರು ತಂಡ ಮೂರನೇ ಬಾರಿ ಫೈನಲ್‌ನಲ್ಲಿ ಸೋತಿದ್ದು, ವಿರಾಟ್ ಕೊಹ್ಲಿ ಜತೆಗೆ ಆರ್‌ಸಿಬಿ ಅಭಿಮಾನಿಗಳ ಕನಸು ಕೂಡ ಭಗ್ನಗೊಂಡಿತ್ತು.

9.5 ಕೋಟಿಗೆ ವ್ಯಾಟ್ಸನ್ ಖರೀದಿ

ಶೇನ್ ವಾಟ್ಸನ್ ಐಪಿಎಲ್‌ನ ಅತ್ಯಂತ ಯಶಸ್ವಿ ಆಟಗಾರರಲ್ಲಿ ಒಬ್ಬರು. ಅವರು 2008 ರಿಂದ 2015 ರವರೆಗೆ ರಾಜಸ್ಥಾನ್ ರಾಯಲ್ಸ್ ಪರ ಆಡಿದ ನಂತರ 2016 ರಲ್ಲಿ ಆರ್​ಸಿಬಿ ಸೇರಿದರು. ಫ್ರಾಂಚೈಸಿ 9.5 ಕೋಟಿ ಕೊಟ್ಟು ಅವರನ್ನು ಖರೀದಿಸಿತ್ತು. ಆದರೆ ಎರಡು ವರ್ಷಗಳ ಕಾಲ ಆರ್​ಸಿಬಿ ಪರ ಆಡಿದ್ದ ಅವರನ್ನು 2018 ರಲ್ಲಿ ತಂಡದಿಂದ ಬಿಡುಗಡೆಯಾಯಿತು. ಐಪಿಎಲ್‌ನ 145 ಪಂದ್ಯಗಳನ್ನಾಡಿರುವ ವಾಟ್ಸನ್ 3874 ರನ್ ಬಾರಿಸಿದ್ದು, 92 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:08 pm, Tue, 21 May 24

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು