IPL 2024: ಔಟಾದ ಬಳಿಕ ಕಣ್ಣೀರು ಹಾಕುತ್ತಾ ಕೂತ ರಾಹುಲ್ ತ್ರಿಪಾಠಿ
IPL 2024 KKR vs SRH: ಐಪಿಎಲ್ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಎಸ್ಆರ್ಹೆಚ್ ವಿರುದ್ಧ ಜಯ ಸಾಧಿಸಿ ಕೆಕೆಆರ್ ಫೈನಲ್ಗೆ ಪ್ರವೇಶಿಸಿದೆ. ಇನ್ನು ಸೋತಿರುವ ಸನ್ರೈಸರ್ಸ್ ಹೈದರಾಬಾದ್ ತಂಡವು 2ನೇ ಕ್ವಾಲಿಫೈಯರ್ ಪಂದ್ಯವಾಡಲಿದೆ. ಅಂದರೆ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಣ ಎಲಿಮಿನೇಟರ್ ಪಂದ್ಯದಲ್ಲಿ ಗೆಲ್ಲುವ ತಂಡವನ್ನು ಎಸ್ಆರ್ಹೆಚ್ ಎದುರಿಸಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17ರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಭರ್ಜರಿ ಜಯ ಸಾಧಿಸಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 8 ವಿಕೆಟ್ಗಳ ಜಯ ಸಾಧಿಸಿ KKR ಫೈನಲ್ಗೆ ಲಗ್ಗೆಯಿಟ್ಟಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ SRH ತಂಡದ ನಾಯಕ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಭರ್ಜರಿ ಬ್ಯಾಟಿಂಗ್ನ ನಿರೀಕ್ಷೆಯಲ್ಲಿದ್ದ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಮಿಚೆಲ್ ಸ್ಟಾರ್ಕ್ ಯಶಸ್ವಿಯಾದರು.
ಮೊದಲ ಓವರ್ನ 2ನೇ ಎಸೆತದಲ್ಲೇ ಡೇಂಜರಸ್ ಟ್ರಾವಿಸ್ ಹೆಡ್ (0) ರನ್ನು ಸ್ಟಾರ್ಕ್ ಬೌಲ್ಡ್ ಮಾಡಿದರು. ಇನ್ನು ವೈಭವ್ ಅರೋರ ಅಭಿಷೇಕ್ ಶರ್ಮಾ (3) ವಿಕೆಟ್ ಕಬಳಿಸಿದರು. ಈ ಹಂತದಲ್ಲಿ ಕಣಕ್ಕಿಳಿದ ರಾಹುಲ್ ತ್ರಿಪಾಠಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.
ಒಂದೆಡೆ ವಿಕೆಟ್ ಕಳೆದುಕೊಳ್ಳುತ್ತಿದ್ದರೆ ಮತ್ತೊಂದೆಡೆ ಸೆಟೆದು ನಿಂತ ರಾಹುಲ್ ತ್ರಿಪಾಠಿ 35 ಎಸೆತಗಳಲ್ಲಿ 1 ಭರ್ಜರಿ ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 55 ರನ್ ಬಾರಿಸಿದರು.
ಈ ಹಂತದಲ್ಲಿ ಅಬ್ದುಲ್ ಸಮದ್ ನೀಡಿದ ರನ್ ಕರೆಯಿಂದ ರಾಹುಲ್ ತ್ರಿಪಾಠಿ ರನೌಟ್ ಆಗಬೇಕಾಯಿತು. ಮಹತ್ವದ ಪಂದ್ಯದಲ್ಲಿ ರನೌಟ್ ಆಗಿ ಹೊರ ನಡೆದಿದ್ದರಿಂದ ಹತಾಶರಾದ ತ್ರಿಪಾಠಿ ಪೆವಿಲಿಯನ್ಗೆ ತೆರಳಿದ ಬಳಿಕ ಡ್ರೆಸ್ಸಿಂಗ್ ರೂಮ್ ಮೆಟ್ಟಿಲುಗಳ ಮೇಲೆ ಕೂತು ಕಣ್ಣೀರು ಹಾಕುತ್ತಿರುವುದು ಕಂಡು ಬಂತು.
Yes…No…and eventually run-out at the strikers end!
Momentum back with @KKRiders 😎#SRH 123/7 after 14 overs
Watch the match LIVE on @JioCinema and @StarSportsIndia 💻📱#TATAIPL | #KKRvSRH | #Qualifier1 | #TheFinalCall pic.twitter.com/I6SJLghAqc
— IndianPremierLeague (@IPL) May 21, 2024
ಅಂದರೆ ಇಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದ ರಾಹುಲ್ ತ್ರಿಪಾಠಿ ವಿಕೆಟ್ ಕೆಕೆಆರ್ ಪಾಲಿಗೆ ನಿರ್ಣಾಯಕವಾಗಿತ್ತು. ಅತ್ತ ತನ್ನ ಜವಾಬ್ದಾರಿಯನ್ನು ಪೂರ್ಣವಾಗಿ ನಿಭಾಯಿಸಲು ವಿಫಲರಾಗಿದ್ದರಿಂದ ರಾಹುಲ್ ತ್ರಿಪಾಠಿ ಕೂಡ ಭಾವುಕರಾದರು. ಹೀಗೆ ಔಟಾಗಿ ತೆರಳಿ ಕಣ್ಣೀರು ಹಾಕಿರುವ ಎಸ್ಆರ್ಹೆಚ್ ಬ್ಯಾಟರ್ನ ಫೋಟೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Well Played Rahul Tripathi. Bad luck💔
#KKRvsSRH pic.twitter.com/9g5C2b6fjL
— Siva Harsha (@SivaHarsha_23) May 21, 2024
ಇನ್ನು ಈ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವು 19.3 ಓವರ್ಗಳಲ್ಲಿ 159 ರನ್ ಬಾರಿಸಿ ಆಲೌಟ್ ಆಯಿತು. 160 ರನ್ಗಳ ಸುಲಭ ಗುರಿ ಪಡೆದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ರಹಮಾನುಲ್ಲಾ ಗುರ್ಬಾಝ್ ಹಾಗೂ ಸುನಿಲ್ ನರೈನ್ ಉತ್ತಮ ಆರಂಭ ಒದಗಿಸಿದ್ದರು.
ಆ ಬಳಿಕ ಕಣಕ್ಕಿಳಿದ ವೆಂಟಕೇಶ್ ಅಯ್ಯರ್ (51) ಹಾಗೂ ಶ್ರೇಯಸ್ ಅಯ್ಯರ್ (58) ಅಜೇಯ ಅರ್ಧಶತಕ ಬಾರಿಸುವ ಮೂಲಕ 13.4 ಓವರ್ಗಳಲ್ಲಿ ತಂಡವನ್ನು ಗುರಿ ಮುಟ್ಟಿಸಿದರು. ಈ ಮೂಲಕ ಕೆಕೆಆರ್ ತಂಡ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಫೈನಲ್ಗೆ ಪ್ರವೇಶಿಸಿದೆ.
ಇದನ್ನೂ ಓದಿ: IPL 2024: ಶೇಕ್ ಹ್ಯಾಂಡ್ ಮಾಡದ ಧೋನಿ: ಡ್ರೆಸ್ಸಿಂಗ್ ರೂಮ್ಗೆ ತೆರಳಿ ಹಸ್ತಲಾಘವ ನೀಡಿದ ಕೊಹ್ಲಿ
ಇನ್ನು ಕೆಕೆಆರ್ ವಿರುದ್ದ ಸೋತಿರುವ ಸನ್ರೈಸರ್ಸ್ ಹೈದರಾಬಾದ್ ತಂಡವು ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಣ ಎಲಿಮಿನೇಟರ್ ಪಂದ್ಯದಲ್ಲಿ ಗೆಲ್ಲುವ ತಂಡದೊಡನೆ 2ನೇ ಕ್ವಾಲಿಫೈಯರ್ ಪಂದ್ಯವಾಡಲಿದೆ. ಈ ಮ್ಯಾಚ್ನಲ್ಲಿ ಗೆಲ್ಲುವ ತಂಡ ಕೆಕೆಆರ್ ವಿರುದ್ಧ ಫೈನಲ್ ಆಡಲಿದೆ.