VIDEO: ವಾಟ್ ಎ ಬಾಲ್: ಮಿಚೆಲ್ ಸ್ಟಾರ್ಕ್ ಎಸೆತಕ್ಕೆ ಸ್ಟಂಪ್ ಚೆಲ್ಲಾಪಿಲ್ಲಿ..!
IPL 2024 KKR vs SRH: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡವು 19.3 ಓವರ್ಗಳಲ್ಲಿ 159 ರನ್ಗಳಿಸಿ ಆಲೌಟ್ ಆಯಿತು. 160 ರನ್ಗಳ ಸುಲಭ ಗುರಿಯನ್ನು ಬೆನ್ನತ್ತಿದ ಕೆಕೆಆರ್ ಪರ ವೆಂಕಟೇಶ್ ಅಯ್ಯರ್ (51) ಹಾಗೂ ಶ್ರೇಯಸ್ ಅಯ್ಯರ್ (58) ಅಜೇಯ ಅರ್ಧಶತಕ ಬಾರಿಸಿದರು. ಈ ಮೂಲಕ ಕೇವಲ 13.4 ಓವರ್ಗಳಲ್ಲಿ ಕೆಕೆಆರ್ ಜಯ ಸಾಧಿಸಿದೆ.

ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ (IPL 2024) ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಎಸ್ಆರ್ಹೆಚ್ ವಿರುದ್ಧ ಕೆಕೆಆರ್ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ (Mitchell Starc). ಏಕೆಂದರೆ ಈ ಪಂದ್ಯದಲ್ಲಿ ಟಾಸ್ ಗೆದ್ದು ಎಸ್ಆರ್ಹೆಚ್ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಾಗ ಬೃಹತ್ ಮೊತ್ತ ಪೇರಿಸುವ ನಿರೀಕ್ಷೆಯಿತ್ತು.
ಆದರೆ ಈ ನಿರೀಕ್ಷೆಗಳನ್ನು ಪವರ್ಪ್ಲೇನಲ್ಲೇ ಮಿಚೆಲ್ ಸ್ಟಾರ್ಕ್ ಹುಸಿಗೊಳಿಸಿದ್ದರು. ಮೊದಲ ಓವರ್ನ 2ನೇ ಎಸೆತದಲ್ಲಿ ಅಪಾಯಕಾರಿ ಬ್ಯಾಟರ್ ಟ್ರಾವಿಸ್ ಹೆಡ್ (0) ರನ್ನು ಸ್ಟಾರ್ಕ್ ಕ್ಲೀನ್ ಬೌಲ್ಡ್ ಮಾಡಿದ್ದರು.
ಇದಾದ ಬಳಿಕ 5ನೇ ಓವರ್ನ 5ನೇ ಎಸೆತದಲ್ಲಿ ನಿತೀಶ್ ರೆಡ್ಡಿ ವಿಕೆಟ್ ಕಬಳಿಸಿದರು. ಇನ್ನು 6ನೇ ಎಸೆತದಲ್ಲಿ ಶಹಬಾಝ್ ಅಹ್ಮದ್ (0) ರನ್ನು ಬೌಲ್ಡ್ ಮಾಡಿದರು. ಅಂದರೆ ಪವರ್ಪ್ಲೇನಲ್ಲಿ ಇಬ್ಬರನ್ನು ಶೂನ್ಯಕ್ಕೆ ಔಟ್ ಮಾಡಿದ್ದಲ್ಲದೇ ಮಿಚೆಲ್ ಸ್ಟಾರ್ ಮೂರು ವಿಕೆಟ್ ಕಬಳಿಸಿ ಎಸ್ಆರ್ಹೆಚ್ ತಂಡಕ್ಕೆ ಆರಂಭಿಕ ಆಘಾತ ನೀಡಿದರು.
ಅದರಲ್ಲೂ ಮೊದಲ ಓವರ್ನಲ್ಲಿ ಟ್ರಾವಿಸ್ ಹೆಡ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ್ದು ಅದ್ಭುತವಾಗಿತ್ತು. ಮಿಚೆಲ್ ಸ್ಟಾರ್ಕ್ ಕಡೆಯಿಂದ ಸ್ಟ್ರೈಟ್ ಬಾಲ್ ನಿರೀಕ್ಷಿಸಿದ್ದ ಹೆಡ್ ನೇರವಾಗಿ ಬಾರಿಸಲು ಅದಾಗಲೇ ಸಿದ್ಧತೆಯಲ್ಲಿದ್ದರು.
ಆದರೆ ಚೆಂಡನ್ನು ಸಣ್ಣ ಪ್ರಮಾಣದಲ್ಲಿ ಸ್ವಿಂಗ್ ಮಾಡಿ ಸ್ಟಾರ್ಕ್ ಟ್ರಾವಿಸ್ ಹೆಡ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವಲ್ಲಿ ಯಶಸ್ವಿಯಾದರು. ಇದೀಗ ಸ್ಟಾರ್ಕ್ ಅವರ ಮಾರ್ಕ್ ಎಸೆತದಲ್ಲಿ ಸ್ಟಂಪ್ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Starc sets the tone for Qualifier 1 with a ripper! 🔥#IPLonJioCinema #TATAIPL #KKRvSRH #TATAIPLPlayoffs #IPLinBengali pic.twitter.com/3AJG5BvZwT
— JioCinema (@JioCinema) May 21, 2024
ಗೆದ್ದು ಬೀಗಿದ ಕೆಕೆಆರ್:
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡವು 19.3 ಓವರ್ಗಳಲ್ಲಿ 159 ರನ್ಗಳಿಸಿ ಆಲೌಟ್ ಆಯಿತು. 160 ರನ್ಗಳ ಸುಲಭ ಗುರಿಯನ್ನು ಬೆನ್ನತ್ತಿದ ಕೆಕೆಆರ್ ಪರ ವೆಂಕಟೇಶ್ ಅಯ್ಯರ್ (51) ಹಾಗೂ ಶ್ರೇಯಸ್ ಅಯ್ಯರ್ (58) ಅಜೇಯ ಅರ್ಧಶತಕ ಬಾರಿಸಿದರು. ಈ ಮೂಲಕ ಕೇವಲ 13.4 ಓವರ್ಗಳಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಗೆಲುವಿನ ದಡ ಸೇರಿಸಿದರು.
ಇದನ್ನೂ ಓದಿ: IPL 2024: RCBಗೆ ಗುಡ್ ನ್ಯೂಸ್: RR ತಂಡದ ಸ್ಟಾರ್ ಆಟಗಾರ ಅಲಭ್ಯ.!
ಈ ಗೆಲುವಿನೊಂದಿಗೆ ಕೆಕೆಆರ್ ತಂಡ ಫೈನಲ್ಗೆ ಪ್ರವೇಶಿಸಿದೆ. ಇನ್ನು ಈ ಮ್ಯಾಚ್ನಲ್ಲಿ 4 ಓವರ್ಗಳಲ್ಲಿ 34 ರನ್ ನೀಡಿ 3 ವಿಕೆಟ್ ಕಬಳಿಸಿದ ಮಿಚೆಲ್ ಸ್ಟಾರ್ಕ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.
Published On - 8:24 am, Wed, 22 May 24
