SRH vs LSG: ಸೋತ ಬಳಿಕ ಮೈದಾನದಲ್ಲೇ ಲಕ್ನೋ ಮಾಲೀಕ ಮತ್ತು ಕೆಎಲ್ ರಾಹುಲ್ ನಡುವೆ ಜಗಳ?: ವಿಡಿಯೋ ನೋಡಿ

|

Updated on: May 09, 2024 | 7:49 AM

KL Rahul - Sanjiv Goenka Video: ಬುಧವಾರ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಹೀನಾಯ ಸೋಲು ಕಂಡ ಬಳಿಕ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕ ಸಂಜೀವ್ ಗೊಯೆಂಕಾ ಕೋಪಗೊಂಡಿದ್ದಾರೆ. ಇವರು ನಾಯಕ ಕೆಎಲ್ ರಾಹುಲ್ ಜೊತೆ ಕೋಪದಲ್ಲಿ ಮಾತನಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.

SRH vs LSG: ಸೋತ ಬಳಿಕ ಮೈದಾನದಲ್ಲೇ ಲಕ್ನೋ ಮಾಲೀಕ ಮತ್ತು ಕೆಎಲ್ ರಾಹುಲ್ ನಡುವೆ ಜಗಳ?: ವಿಡಿಯೋ ನೋಡಿ
KL Rahul and Lucknow owner Sanjiv Goenka
Follow us on

ಲಕ್ನೋ ಸೂಪರ್ ಜೈಂಟ್ಸ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಹಿಂದೆಂದೂ ಕಾಣದ ರೀತಿಯಲ್ಲಿ ಸನ್​ರೈಸರ್ಸ್ ಹೈದರಾಬಾದ್ (SRH vs LSG) ವಿರುದ್ಧ ಹೀನಾಯ ಸೋಲು ಅನುಭವಿಸಿತು. ಬುಧವಾರ ಹೈದರಾಬಾದ್​ನ ರಾಜಿವ್ ಗಾಂಧಿ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಎಲ್​ಎಸ್​ಜಿ ಬೌಲರ್​ಗಳನ್ನು ಮನಬಂದಂತೆ ದಂಡಿಸಿದ ಎಸ್​ಆರ್​ಹೆಚ್ ಕೇವಲ 9.4 ಓವರ್​ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ 167 ರನ್ ಚಚ್ಚಿ ಗೆದ್ದು ಬೀಗಿತು. ಈ ಗೆಲುವು ಪ್ಯಾಟ್ ಕಮ್ಮಿನ್ಸ್ ಪಡೆಗೆ ದೊಡ್ಡ ಪ್ಲಸ್ ಪಾಯಿಂಟ್ ಆದರೆ, ಇತ್ತ ರಾಹುಲ್ ಪಡೆಯ ಪ್ಲೇ ಆಫ್ ಕನಸು ಮತ್ತಷ್ಟು ದೂರವಾಯಿತು. ಈ ಆಘಾತದ ನಡುವೆ ಪಂದ್ಯ ಮುಗಿದ ಬಳಿಕ ವಿಶೇಷ ಘಟನೆಯೊಂದು ನಡೆದಿದೆ.

ಹೀನಾಯ ಸೋಲಿನ ನಂತರ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕ ಸಂಜೀವ್ ಗೊಯೆಂಕಾ ಕೋಪಗೊಂಡಿದ್ದಾರೆ. ತಂಡ ನೀಡಿದ ಪ್ರದರ್ಶನದಿಂದ ಅಸಮಾಧಾನಗೊಂಡಂತೆ ಕಂಡುಬಂತು. ಸಂಜೀವ್ ಅವರು ನಾಯಕ ಕೆಎಲ್ ರಾಹುಲ್ ಅವರೊಂದಿಗೆ ಕೋಪದಲ್ಲಿ ಮಾತನಾಡುತ್ತಿರುವುದು ಕಂಡುಬಂದಿದೆ. ಇವರಿಬ್ಬರ ನಡುವಣ ಮಾತುಕತೆ ಏನು ಎಂಬುದು ಸ್ಪಷ್ಟವಾಗಿ ಕೇಳಿಸಿಲ್ಲವಾದರೂ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋವನ್ನು ಗಮನಿಸಿರುವ ನೆಟ್ಟಿಗರು ಇವರಿಬ್ಬರು ಜಗಳ ಆಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ.

ಮುಂಬೈ ಔಟ್! ಆರ್​ಸಿಬಿ ಕಥೆ ಏನು? ಇಲ್ಲಿದೆ ಸಂಪೂರ್ಣ ಪ್ಲೇಆಫ್‌ ಲೆಕ್ಕಾಚಾರ

ಸಂಜೀವ್ ಗೊಯೆಂಕಾ-ಕೆಎಲ್ ರಾಹುಲ್ ನಡುವಣ ಮಾತುಕತೆಯ ವಿಡಿಯೋ ಇಲ್ಲಿದೆ:

 

ಈ ಪಂದ್ಯದಲ್ಲಿ ಲಕ್ನೋ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ, ಗಳಿಸಿದ್ದು 164 ರನ್‌ಗಳನ್ನು ಮಾತ್ರ. ನಾಯಕ ರಾಹುಲ್ 33 ಎಸೆತಗಳಲ್ಲಿ 29 ರನ್ ಗಳಿಸಿದರು. ಆಯುಷ್ ಬದೋನಿ 30 ಎಸೆತಗಳಲ್ಲಿ 55 ಮತ್ತು ನಿಕೋಲಸ್ ಪೂರನ್ 26 ಎಸೆತಗಳಲ್ಲಿ 48 ರನ್‌ ಗಳಿಸಿದರು.

ಇದಕ್ಕೆ ಉತ್ತರವಾಗಿ ಟ್ರಾವಿಸ್ ಹೆಡ್ 30 ಎಸೆತಗಳಲ್ಲಿ 89 ರನ್ ಮತ್ತು ಅಭಿಷೇಕ್ ಶರ್ಮಾ 28 ಎಸೆತಗಳಲ್ಲಿ 75 ರನ್ ಸಿಡಿಸಿ ಸ್ಫೋಟಕ ಬ್ಯಾಟಿಂಗ್ ಮಾಡಿ 9.4 ಓವರ್‌ಗಳಲ್ಲಿ 62 ಎಸೆತಗಳು ಬಾಕಿ ಇರುವಂತೆಯೇ ಮೊತ್ತವನ್ನು ಬೆನ್ನಟ್ಟುವ ಮೂಲಕ ಹೈದರಾಬಾದ್ ಅಮೋಘ ಜಯ ಕಂಡಿತು. ಈ ಜಯದೊಂದಿಗೆ ಎಸ್​ಆರ್​ಹೆಚ್ ಆಡಿದ 12 ಪಂದ್ಯಗಲ್ಲಿ ಏಳು ಜಯ ಮತ್ತು ಐದರಲ್ಲಿ ಸೋಲು ಕಂಡು 14 ಅಂಕ ಸಂಪಾದಿಸಿ ಮೂರನೇ ಸ್ಥಾನಕ್ಕೆ ಜಿಗಿದಿದೆ.

ಅಬ್ಬಾ… ಕೇವಲ 58 ಎಸೆತಗಳಲ್ಲಿ 167 ರನ್ ಚಚ್ಚಿದ ಹೆಡ್- ಅಭಿಷೇಕ್..!

ಇತ್ತ ಲಕ್ನೋ ಸೂಪರ್ ಜೇಂಟ್ಸ್ ತಂಡ ಆಡಿರುವ 12 ಪಂದ್ಯಗಳಲ್ಲಿ ಕೇವಲ 12 ಅಂಕಗಳೊಂದಿಗೆ ಟೇಬಲ್‌ನಲ್ಲಿ ಆರನೇ ಸ್ಥಾನಕ್ಕೆ ಕುಸಿದಿದೆ. ಪ್ಲೇ ಆಫ್​ಗೆ ಅರ್ಹತೆ ಪಡೆಯಲು ಅವರ ಎರಡೂ ಪಂದ್ಯಗಳಲ್ಲಿ ಗೆಲ್ಲಲೇ ಬೇಕಾದ ಅಗತ್ಯವಿದೆ, ಅಲ್ಲದೆ ಇವರ ನಿವ್ವಳ ರನ್ ರೇಟ್ (NRR) ಮೈನಸ್​ನಲ್ಲಿದೆ. ಎಲ್​ಎಸ್​ಜಿ ಇದುವರೆಗೆ ಆಡಿದ ಎರಡೂ ಋತುಗಳಲ್ಲಿ ಪ್ಲೇಆಫ್‌ಗಳನ್ನು ತಲುಪಿದೆ, 2022 ಮತ್ತು 2023 ರಲ್ಲಿ ಎಲಿಮಿನೇಟರ್​ನಲ್ಲಿ ಸೋಲು ಕಂಡಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ