IPL 2024: ಅಬ್ಬಾ… ಕೇವಲ 58 ಎಸೆತಗಳಲ್ಲಿ 167 ರನ್ ಚಚ್ಚಿದ ಹೆಡ್- ಅಭಿಷೇಕ್..!

IPL 2024: ಗೆಲುವಿಗೆ ಲಕ್ನೋ ನೀಡಿದ 165 ರನ್​ಗಳ ಗುರಿಯನ್ನು ಹೈದರಾಬಾದ್‌ ತಂಡ ಕೇವಲ 9.4 ಓವರ್​ಗಳಲ್ಲಿ ಬೆನ್ನಟ್ಟಿತು. ಹೈದರಾಬಾದ್‌ ತಂಡದ ಆರಂಭಿಕರಿಬ್ಬರು ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ಕೇವಲ 58 ಎಸೆತಗಳಲ್ಲಿ ಲಕ್ನೋ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾದರು.

ಪೃಥ್ವಿಶಂಕರ
|

Updated on: May 08, 2024 | 10:51 PM

ಹೈದರಾಬಾದ್‌ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 57ನೇ ಪಂದ್ಯದಲ್ಲಿ ಲಕ್ನೋ ಸೂಪರ್‌ಜೈಂಟ್ಸ್ ತಂಡವನ್ನು ಆತಿಥೇಯ ಸನ್‌ರೈಸರ್ಸ್ ಹೈದರಾಬಾದ್‌ ತಂಡ ಬರೋಬ್ಬರಿ 10 ವಿಕೆಟ್​ಗಳಿಂದ ಮಣಿಸಿದೆ.

1 / 6
ಗೆಲುವಿಗೆ ಲಕ್ನೋ ನೀಡಿದ 165 ರನ್​ಗಳ ಗುರಿಯನ್ನು ಹೈದರಾಬಾದ್‌ ತಂಡ ಕೇವಲ 9.4 ಓವರ್​ಗಳಲ್ಲಿ ಬೆನ್ನಟ್ಟಿತು. ಹೈದರಾಬಾದ್‌ ತಂಡದ ಆರಂಭಿಕರಿಬ್ಬರು ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ಕೇವಲ 58 ಎಸೆತಗಳಲ್ಲಿ ಲಕ್ನೋ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾದರು.

2 / 6
ಆರಂಭಿಕರಾಗಿ ಕಣಕ್ಕಿಳಿದಿದ್ದ ಟ್ರಾವಿಸ್ ಹೆಡ್ ಎಂದಿನಂತೆ ತಮ್ಮ ಸಿಡಿಲಬ್ಬರದ ಬ್ಯಾಟಿಂಗ್ ಮುಂದುವರೆಸಿದರು. ತಮ್ಮ ಇನ್ನಿಂಗ್ಸ್​ನಲ್ಲಿ ಕೇವಲ 30 ಎಸೆತಗಳನ್ನು ಎದುರಿಸಿದ ಹೆಡ್ 8 ಬೌಂಡರಿ ಹಾಗೂ 8 ಸಿಕ್ಸರ್ ಸಹಿತ ಅಜೇಯ 89 ರನ್ ಕಲೆಹಾಕಿದರು.

3 / 6
ಟ್ರಾವಿಸ್ ಹೆಡ್ ಜೊತೆ ಇನ್ನಿಂಗ್ಸ್ ಆರಂಭಿಸಿದ ಅಭಿಷೇಕ್ ಶರ್ಮಾ ಕೂಡ ಸ್ಫೋಟಕ ಬ್ಯಾಟಿಂಗ್ ಮಾಡಿದರು. ತಮ್ಮ ಇನ್ನಿಂಗ್ಸ್​ನಲ್ಲಿ 28 ಎಸೆತಗಳನ್ನು ಎದುರಿಸಿದ ಅಭಿಷೇಕ್ 8 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ ಅಜೇಯ 75 ರನ್ ಚಚ್ಚಿದರು.

4 / 6
ಈ ಇಬ್ಬರು ತಮ್ಮ ಜೊತೆಯಾಟದ ಮೂಲಕ ಕೇವಲ 9.4 ಓವರ್​ಗಳಲ್ಲಿ 167 ರನ್ ಕಲೆಹಾಕುವುದರೊಂದಿಗೆ ಐಪಿಎಲ್ ಇತಿಹಾಸದಲ್ಲಿ 150 ಕ್ಕೂ ಅಧಿಕ ರನ್​ಗಳನ್ನು ಇಷ್ಟು ಕಡಿಮೆ ಎಸೆತಗಳಲ್ಲಿ ಪೂರೈಸಿದ ದಾಖಲೆ ನಿರ್ಮಿಸಿದರು. ಹಿಂದಿನ ದಾಖಲೆ ಡೆಕ್ಕನ್ ಚಾರ್ಜರ್ಸ್ ಹೆಸರಿನಲ್ಲಿತ್ತು. 2008 ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಚಾರ್ಜರ್ಸ್ 12 ಓವರ್‌ಗಳಲ್ಲಿ 155 ರನ್‌ಗಳ ಗುರಿಯನ್ನು ಬೆನ್ನಟ್ಟಿತು.

5 / 6
ಇದಲ್ಲದೆ ಈ ಜೋಡಿ ಪವರ್ ಪ್ಲೇನಲ್ಲಿ 107 ರನ್ ಕಲೆಹಾಕುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಮೊದಲ 6 ಓವರ್​ಗಳಲ್ಲಿ ಎರಡನೇ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ಬರೆಯಿತು. ಮೊದಲ ಅತ್ಯಧಿಕ ರನ್ ದಾಖಲೆಯೂ ಈ ಜೋಡಿಯ ಹೆಸರಿನಲ್ಲೇ ಇದ್ದು, ಈ ಜೋಡಿ ಡೆಲ್ಲಿ ವಿರುದ್ಧ 125 ರನ್ ಕಲೆಹಾಕಿತ್ತು.

6 / 6
Follow us