ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) ಸೀಸನ್ 17ರಲ್ಲಿ 11 ಪಂದ್ಯಗಳನ್ನಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಕೇವಲ 4 ಮ್ಯಾಚ್ಗಳಲ್ಲಿ ಮಾತ್ರ ಜಯ ಸಾಧಿಸಿದೆ. ಈ ಗೆಲುವುಗಳೊಂದಿಗೆ ಒಟ್ಟು 8 ಅಂಕಗಳನ್ನು ಹೊಂದಿರುವ ಆರ್ಸಿಬಿ ಇದೀಗ ಅಂಕ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.
ಇದಾಗ್ಯೂ ಆರ್ಸಿಬಿ ತಂಡ ಪ್ಲೇಆಫ್ ರೇಸ್ನಿಂದ ಹೊರಬಿದ್ದಿಲ್ಲ ಎಂಬುದು ವಿಶೇಷ. ಅಂದರೆ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಅಲಂಕರಿಸುವ ತಂಡ 14 ಪಾಯಿಂಟ್ಸ್ ಕಲೆಹಾಕಿದರೆ, ಉಳಿದ ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಉತ್ತಮ ನೆಟ್ ರನ್ ರೇಟ್ನೊಂದಿಗೆ ಆರ್ಸಿಬಿ ಪ್ಲೇಆಫ್ ಹಂತಕ್ಕೇರಬಹುದು.
ಆದರೆ ಪ್ರಸ್ತುತ ಅಂಕ ಪಟ್ಟಿಯಲ್ಲಿನ ಪಾಯಿಂಟ್ಸ್ ಹಾಗೂ ನೆಟ್ ರನ್ ರೇಟ್ಗಳನ್ನು ಗಣನೆಗೆ ತೆಗೆದುಕೊಂಡರೆ ಆರ್ಸಿಬಿಗೆ ಪ್ಲೇಆಫ್ ಪ್ರವೇಶಿಸಲು ಕೇವಲ 3% ಮಾತ್ರ ಚಾನ್ಸ್ ಇದೆ. ಏಕೆಂದರೆ 16 ಅಂಕಗಳನ್ನು ಹೊಂದಿರುವ ಕೊಲ್ಕತ್ತಾ ನೈಟ್ ರೈಡರ್ಸ್ (99%) ಮತ್ತು ರಾಜಸ್ಥಾನ್ ರಾಯಲ್ಸ್ (97%) ತಂಡಗಳು ಮುಂದಿನ ಪಂದ್ಯಗಳಲ್ಲಿ ಗೆದ್ದರೆ ಪ್ಲೇಆಫ್ ಆಡುವುದು ಬಹುತೇಕ ಖಚಿತವಾಗಲಿದೆ.
ಇನ್ನು ಅಂಕ ಪಟ್ಟಿಯಲ್ಲಿ 12 ಅಂಕಗಳೊಂದಿಗೆ ಉತ್ತಮ ನೆಟ್ ರನ್ ರೇಟ್ ಹೊಂದಿರುವ ಚೆನ್ನೈ ಸೂಪರ್ ಕಿಂಗ್ಸ್ (59%) ಹಾಗೂ ಸನ್ರೈಸರ್ಸ್ ಹೈದರಾಬಾದ್ (56%) ತಂಡಗಳು ಮುಂದಿನ ಮೂರು ಪಂದ್ಯಗಳ ಮೂಲಕ ನೇರವಾಗಿ ಪ್ಲೇಆಫ್ಗೆ ಪ್ರವೇಶಿಸುವ ಅವಕಾಶವನ್ನು ಹೊಂದಿದೆ.
ಹಾಗೆಯೇ 5 ಮತ್ತು 6ನೇ ಸ್ಥಾನಗಳಲ್ಲಿರುವ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳಿಗೆ ಪ್ಲೇಆಫ್ ಪ್ರವೇಶಿಸಲು ಕ್ರಮವಾಗಿ ಶೇ. 49 ಮತ್ತು ಶೇ. 32 ರಷ್ಟು ಅವಕಾಶಗಳಿವೆ. ಅಂದರೆ ಇಲ್ಲಿ ಉತ್ತಮ ನೆಟ್ ರನ್ ರೇಟ್ ಹೊಂದಿರುವ ಅಗ್ರ ಆರು ತಂಡಗಳಿಗೆ ಪ್ಲೇಆಫ್ ಹಂತಕ್ಕೇರಲು ಅತ್ಯುತ್ತಮ ಅವಕಾಶವಿದೆ.
ಇತ್ತ ನೆಟ್ ರನ್ ರೇಟ್ ಮತ್ತು ಪಾಯಿಂಟ್ಸ್ನಲ್ಲಿ ಹಿಂದೆ ಉಳಿದಿರುವ ಆರ್ಸಿಬಿ ತಂಡಕ್ಕೆ 3%, ಪಂಜಾಬ್ ಕಿಂಗ್ಸ್ ತಂಡಕ್ಕೆ 3% ಮತ್ತು ಗುಜರಾತ್ ಟೈಟಾನ್ಸ್ ತಂಡಕ್ಕೆ 2% ಮಾತ್ರ ಚಾನ್ಸ್ ಇದೆ. ಹಾಗೆಯೇ ಮುಂಬೈ ಇಂಡಿಯನ್ಸ್ ತಂಡವು ಕೇವಲ 0.6% ಚಾನ್ಸ್ ಹೊಂದಿದ್ದು, ಹೀಗಾಗಿ ಹಾರ್ದಿಕ್ ಪಾಂಡ್ಯ ಪಡೆಯ ಪ್ಲೇಆಫ್ ಕನಸು ಅಂತ್ಯವಾಗಿದೆ ಎಂದೇ ಹೇಳಬಹುದು.
ಒಂದು ವೇಳೆ ಆರ್ಸಿಬಿ ತಂಡವು ಮುಂದಿನ ಮೂರು ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿದರೆ ನೆಟ್ ರನ್ ರೇಟ್ ಪ್ಲಸ್ ಆಗಲಿದೆ. ಅಷ್ಟೇ ಅಲ್ಲದೆ 14 ಅಂಕಗಳನ್ನು ಪಡೆದುಕೊಳ್ಳಬಹುದು. ಈ ವೇಳೆ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ತಂಡವು 14 ಕ್ಕಿಂತ ಹೆಚ್ಚಿನ ಪಾಯಿಂಟ್ಸ್ ಹೊಂದಿರದಿದ್ದರೆ ಮಾತ್ರ ಆರ್ಸಿಬಿಗೆ ಪ್ಲೇಆಫ್ ಹಂತಕ್ಕೇರಲು ಅವಕಾಶ ಇರಲಿದೆ.
Published On - 2:29 pm, Wed, 8 May 24