ಅಭಿಮಾನಿಗಳ ಆಕ್ರೋಶಕ್ಕೆ ಕಾರಣವೂ ಇದ್ದು, ಲಕ್ನೋ ಇದುವರೆಗೆ ಐಪಿಎಲ್ನಲ್ಲಿ ಮೂರು ಆವೃತ್ತಿಗಳನ್ನು ಆಡಿದೆ. ಇದರಲ್ಲಿ ತಂಡ ಸತತವಾಗಿ 2 ಬಾರಿ ಪ್ಲೇಆಫ್ ಆಡಿದೆ. ಆದರೆ ಆರ್ಸಿಬಿ, ಪಂಜಾಬ್, ಡೆಲ್ಲಿಯಂತಹ ತಂಡಗಳು 17 ವರ್ಷಗಳಿಂದ ಐಪಿಎಲ್ ಆಡುತ್ತಿವೆ. ಈ ತಂಡಗಳು ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. ಆದರೆ ಈ ತಂಡದ ಮಾಲೀಕರು ಒಮ್ಮೆಯೂ ನಾಯಕನ ಬಳಿ ಬಹಿರಂಗವಾಗಿ ಹೀಗೆ ನಡೆದುಕೊಂಡಿಲ್ಲ.