AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: ಲಕ್ನೋ ತಂಡದ ನಾಯಕತ್ವಕ್ಕೆ ಕೆಎಲ್ ರಾಹುಲ್ ಗುಡ್​ಬೈ..?

IPL 2024: ಲಕ್ನೋ ಇದುವರೆಗೆ ಐಪಿಎಲ್​ನಲ್ಲಿ ಮೂರು ಆವೃತ್ತಿಗಳನ್ನು ಆಡಿದೆ. ಇದರಲ್ಲಿ ತಂಡ ಸತತವಾಗಿ 2 ಬಾರಿ ಪ್ಲೇಆಫ್‌ ಆಡಿದೆ. ಆದರೆ ಆರ್​ಸಿಬಿ, ಪಂಜಾಬ್, ಡೆಲ್ಲಿಯಂತಹ ತಂಡಗಳು 17 ವರ್ಷಗಳಿಂದ ಐಪಿಎಲ್ ಆಡುತ್ತಿವೆ. ಈ ತಂಡಗಳು ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. ಆದರೆ ಈ ತಂಡದ ಮಾಲೀಕರು ಒಮ್ಮೆಯೂ ನಾಯಕನ ಬಳಿ ಬಹಿರಂಗವಾಗಿ ಹೀಗೆ ನಡೆದುಕೊಂಡಿಲ್ಲ.

ಪೃಥ್ವಿಶಂಕರ
|

Updated on: May 09, 2024 | 6:32 PM

Share
ಮೇ 8 ರಂದು ನಡೆದ ಐಪಿಎಲ್ 57ನೇ ಪಂದ್ಯದಲ್ಲಿ ಆತಿಥೇಯ ಸನ್‌ರೈಸರ್ಸ್ ಹೈದರಾಬಾದ್ ತಂಡ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಬರೋಬ್ಬರಿ 10 ವಿಕೆಟ್‌ಗಳಿಂದ ಏಕಪಕ್ಷೀಯವಾಗಿ ಸೋಲಿಸಿತು.  ಗೆಲುವಿಗೆ ಲಕ್ನೋ ನೀಡಿದ 163 ರನ್​ಗಳನ್ನು ಹೈದರಾಬಾದ್‌ ತಂಡ ಕೇವಲ 9.4 ಓವರ್​ಗಳಲ್ಲಿ ಬೆನ್ನಟ್ಟಿತು.

1 / 8
ಹೈದರಾಬಾದ್‌ ಆರಂಭಿಕರ ಸಿಡಿಲಬ್ಬರದ ಬ್ಯಾಟಿಂಗ್​ಗೆ ಲಕ್ನೋ ಬೌಲರ್​ಗಳಿಗೆ ದಿಕ್ಕೇ ತೋಚದಂತ್ತಾಯಿತು. ಲಕ್ನೋ ನಾಯಕ ಕೆಎಲ್ ರಾಹುಲ್ ಪಂದ್ಯವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಯೋಚಿಸುವ ಹೊತ್ತಿಗಾಗಲೇ ಪಂದ್ಯ ಮುಗಿದು ಹೋಗಿತ್ತು. ಈ ಪಂದ್ಯದ ಸೋಲು ಲಕ್ನೋ ಮಾಲೀಕ ಸಂಜೀವ್ ಗೋಯೆಂಕಾ, ರಾಹುಲ್ ಬಳಿ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು.

2 / 8
ಅದರ ವಿಡಿಯೋಗಳು ಈಗ ಎಲ್ಲೆಡೆ ಸಾಕಷ್ಟು ವೈರಲ್ ಆಗುತ್ತಿವೆ. ಮಾಲೀಕರ ಈ ರೀತಿಯ ವರ್ತನೆಗೆ ಎಲ್ಲೆಡೆ ಖಂಡನೆ ವ್ಯಕ್ತವಾಗುತ್ತಿದೆ. ಅಲ್ಲದೆ ಕನ್ನಡಿಗ ಕೆಎಲ್ ರಾಹುಲ್ ಲಕ್ನೋ ತಂಡವನ್ನು ತೊರೆಯಬೇಕು ಎಂಬುದು ಅಭಿಮಾನಿಗಳ ಒತ್ತಾಯವಾಗಿದೆ.

3 / 8
ಅಭಿಮಾನಿಗಳ ಆಕ್ರೋಶಕ್ಕೆ ಕಾರಣವೂ ಇದ್ದು, ಲಕ್ನೋ ಇದುವರೆಗೆ ಐಪಿಎಲ್​ನಲ್ಲಿ ಮೂರು ಆವೃತ್ತಿಗಳನ್ನು ಆಡಿದೆ. ಇದರಲ್ಲಿ ತಂಡ ಸತತವಾಗಿ 2 ಬಾರಿ ಪ್ಲೇಆಫ್‌ ಆಡಿದೆ. ಆದರೆ ಆರ್​ಸಿಬಿ, ಪಂಜಾಬ್, ಡೆಲ್ಲಿಯಂತಹ ತಂಡಗಳು 17  ವರ್ಷಗಳಿಂದ ಐಪಿಎಲ್ ಆಡುತ್ತಿವೆ. ಈ ತಂಡಗಳು ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. ಆದರೆ ಈ ತಂಡದ ಮಾಲೀಕರು ಒಮ್ಮೆಯೂ ನಾಯಕನ ಬಳಿ ಬಹಿರಂಗವಾಗಿ ಹೀಗೆ ನಡೆದುಕೊಂಡಿಲ್ಲ.

4 / 8
ಆದರೆ ಸತತ ಮೂರನೇ ಬಾರಿಗೂ ಲಕ್ನೋ ಪ್ಲೇಆಫ್‌ ಆಡುವ ಹೊಸ್ತಿಲಿನಲ್ಲಿದೆ. ಹೀಗಿದ್ದರೂ ತಂಡದ ಮಾಲೀಕ ಸಂಜೀವ್ ಗೋಯೆಂಕಾ, ನಾಯಕನ ಬಳಿ ಹೀಗೆ ನಡೆದುಕೊಂಡಿದ್ದು, ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

5 / 8
ವಾಸ್ತವವಾಗಿ ಸಂಜೀವ್ ಗೋಯೆಂಕಾ ತಮ್ಮ ಆತುರದ ನಿರ್ಧಾರದಿಂದ ಐಪಿಎಲ್ ವಲಯದಲ್ಲಿ ಚರ್ಚೆಗೆ ಒಳಗಾಗಿರುವುದು ಇದೇ ಮೊದಲೆನಲ್ಲ. ಇದಕ್ಕೂ ಮೊದಲು ಸಂಜೀವ್ ಪುಣೆ ರೈಸಿಂಗ್ ಸೂಪರ್ ಜೈಂಟ್ಸ್‌ ತಂಡದ ಮಾಲೀಕರೂ ಆಗಿದ್ದರು. ಈ ತಂಡ ಎರಡು ಆವೃತ್ತಿಗಳನ್ನು ಆಡಿತ್ತು.

6 / 8
ಮೊದಲ ಆವೃತ್ತಿಯಲ್ಲಿ ಐಪಿಎಲ್‌ನ ಅತ್ಯಂತ ಯಶಸ್ವಿ ನಾಯಕ ಎಂಎಸ್ ಧೋನಿಯನ್ನು ನಾಯಕರನ್ನಾಗಿ ಮಾಡಿತ್ತು. ಆದರೆ ಧೋನಿ ನಾಯಕತ್ವದಲ್ಲಿ ತಂಡ ಉತ್ತಮ ಪ್ರದರ್ಶನ ನೀಡಲಿಲ್ಲ. ಹೀಗಾಗಿ ಧೋನಿಯನ್ನು ಏಕಾಏಕಿ ನಾಯಕತ್ವದಿಂದ ಕೆಳಗಿಳಿಸಿ ಸ್ಟೀವ್ ಸ್ಮಿತ್​ರನ್ನು ನಾಯಕರನ್ನಾಗಿ ನೇಮಿಸಿದ್ದರು. ಆದರೆ ಇದಾದ ನಂತರವೂ ತಂಡ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ.

7 / 8
ಇದೀಗ ಲಕ್ನೋ ಒಂದೇ ಒಂದು ಹೀನಾಯ ಸೋಲು ಕಂಡದನ್ನು ಅರಗಿಸಿಕೊಳ್ಳದ ಸಂಜೀವ್, ನಾಯಕನನ್ನು ಎಲ್ಲರೆದರು ಜರಿದಿದ್ದಾರೆ. ಹೀಗಾಗಿ ಲೀಗ್ ಹಂತದಲ್ಲಿ ಉಳಿದಿರುವ ಎರಡು ಪಂದ್ಯಗಳ ನಾಯಕತ್ವದಿಂದ ರಾಹುಲ್ ಕೆಳಗಿಳಿಯುವ ಸಾಧ್ಯತೆಗಳಿವೆ. ಆ ನಂತರ ತಂಡದಿಂದಲೂ ಹೊರನಡೆಯುವುದನ್ನು ತೆಗೆದುಹಾಕುವಂತಿಲ್ಲ. ಸದ್ಯಕ್ಕೆ ಈ ಘಟನೆ ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

8 / 8
ಚಿತ್ರದುರ್ಗ ಬಸ್ ಅಪಘಾತದಲ್ಲಿ ಗಾಯಗೊಂಡಿದ್ದ ಚಾಲಕ ಸಾವು

ಮೃತರ ಕುಟುಂಬಗಳಿಗೆ ಶಾಸಕ ಪ್ರದೀಪ್ ಈಶ್ವರ್ ನೆರವಿನ ಭರವಸೆ

2026 ಗುರು ಗ್ರಹದ ಸಂಚಾರದಿಂದ ಮಕರ ರಾಶಿಯವರಿಗೆ ಗುರುಬಲ ಮತ್ತು ಅದೃಷ್ಟ

ಗಿಲ್ಲಿ ಬಿಟ್ಟುಕೊಡಬೇಡ; ಕಾವ್ಯಾಗೆ ತಾಯಿಯ ಕಿವಿಮಾತು

ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್

ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!

ಮಕ್ಕಳಿಗೂ ಮಾಳು ಸ್ಟೈಲ್​​ನಲ್ಲೇ ಹೇರ್​ಸ್ಟೈಲ್; ಇಲ್ಲಿದೆ ಫನ್ ವಿಡಿಯೋ

ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್

ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ

ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ