ಸಿಂಹಳೀಯರ ನಾಡಲ್ಲಿ ಟೀಮ್ ಇಂಡಿಯಾ ಸೇರಿದ ಕೆಎಲ್ ರಾಹುಲ್: ಮೊದಲ ದಿನವೇ ಜಿಮ್​ಗೆ ಎಂಟ್ರಿ

|

Updated on: Sep 07, 2023 | 10:15 AM

KL Rahul hits gym in Sri Lanka: ಕೆಎಲ್ ರಾಹುಲ್ ಸೆಪ್ಟೆಂಬರ್ 5 ರಂದು ಶ್ರೀಲಂಕಾಕ್ಕೆ ಪ್ರಯಾಣ ಬೆಳೆಸಿದ್ದರು. ಮರುದಿನವೇ ಜಿಮ್‌ಗೆ ಬಂದು ಬೆವರು ಹರಿಸಲು ಶುರುಮಾಡಿಕೊಂಡಿದ್ದಾರೆ. ಜಿಮ್‌ನಲ್ಲಿ ರಾಹುಲ್ ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನು ಭಾರತೀಯ ಕ್ರಿಕೆಟ್ ತಂಡ ತನ್ನ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದೆ.

ಸಿಂಹಳೀಯರ ನಾಡಲ್ಲಿ ಟೀಮ್ ಇಂಡಿಯಾ ಸೇರಿದ ಕೆಎಲ್ ರಾಹುಲ್: ಮೊದಲ ದಿನವೇ ಜಿಮ್​ಗೆ ಎಂಟ್ರಿ
KL Rahul
Follow us on

ದೀರ್ಘ ಕಾಲದ ಇಂಜುರಿಯಿಂದ ಹಿಂತಿರುಗಿದ ಭಾರತ ತಂಡದ ವಿಕೆಟ್‌ಕೀಪರ್ ಮತ್ತು ಬ್ಯಾಟರ್ ಕೆಎಲ್ ರಾಹುಲ್ (KL Rahul) ಏಷ್ಯಾಕಪ್ 2023 ರಲ್ಲಿ ಸೂಪರ್ 4 ಹಂತದ ಮೊದಲ ಪಂದ್ಯಕ್ಕೂ ಮುನ್ನ ಶ್ರೀಲಂಕಾದಲ್ಲಿ ಟೀಮ್ ಇಂಡಿಯಾವನ್ನು ಸೇರಿಕೊಂಡಿದ್ದಾರೆ. ಭಾರತವು ಸೆಪ್ಟೆಂಬರ್ 10 ರಂದು ಕೊಲಂಬೊದಲ್ಲಿ ಪಾಕಿಸ್ತಾನ ವಿರುದ್ಧ ಪಂದ್ಯವನ್ನಾಡಲಿದೆ. ಇದಕ್ಕೂ ಮುನ್ನ ಸೆಪ್ಟೆಂಬರ್ 6 ರಂದು ಸಿಂಹಳೀಯರ ನಾಡಿಗೆ ತಲುಪಿದ್ದಾರೆ. ವಿಶೇಷ ಎಂದರೆ ರಾಹುಲ್ ವಿಶ್ರಾಂತಿ ಕೂಡ ಪಡೆದುಕೊಳ್ಳದೆ ಅದಾಗಲೇ ಅಭ್ಯಾಸ ಶುರು ಮಾಡಿಕೊಂಡಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿನ ಪಂದ್ಯವೊಂದರಲ್ಲಿ ರಾಹುಲ್ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ನಾಲ್ಕು ತಿಂಗಳಿಗಿಂತ ಹೆಚ್ಚು ಕಾಲ ಕ್ರಿಕೆಟ್​ನಿಂದ ಹೊರಗುಳಿಯಬೇಕಾಯಿತು. ಲಂಡನ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ನಂತರ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತಮ್ಮ ಪುನರ್ವಸತಿಯನ್ನು ಪ್ರಾರಂಭಿಸಿ ಕಮ್​ಬ್ಯಾಕ್ ಮಾಡಿದ್ದಾರೆ. ರಾಹುಲ್ ಸೆಪ್ಟೆಂಬರ್ 5 ರಂದು ಶ್ರೀಲಂಕಾಕ್ಕೆ ಪ್ರಯಾಣ ಬೆಳೆಸಿದ್ದರು. ಮರುದಿನವೇ ಜಿಮ್‌ಗೆ ಬಂದು ಬೆವರು ಹರಿಸಲು ಶುರುಮಾಡಿಕೊಂಡಿದ್ದಾರೆ. ಜಿಮ್‌ನಲ್ಲಿ ರಾಹುಲ್ ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನು ಭಾರತೀಯ ಕ್ರಿಕೆಟ್ ತಂಡ ತನ್ನ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದೆ.

ಇದನ್ನೂ ಓದಿ
ಕಿಂಗ್ ಕೊಹ್ಲಿಯ ವಿಶ್ವದಾಖಲೆ ಮುರಿದ ಪಾಕ್ ನಾಯಕ ಬಾಬರ್..!
‘ನಿಮ್ಮಿಂದ ನಷ್ಟವಾಗಿದೆ ಪರಿಹಾರ ಕೊಡಿ’; ಹೊಸ ಕ್ಯಾತೆ ತೆಗೆದ ಪಿಸಿಬಿ
ಕೌಂಟಿ ಕ್ರಿಕೆಟ್​ನತ್ತ ಮುಖಾಮಾಡಿದ ಯುಜ್ವೇಂದ್ರ ಚಹಲ್
ಏಷ್ಯಾಕಪ್​ನಲ್ಲಿ ಭಾರತದ ಮುಂದಿನ ಪಂದ್ಯ ಯಾವಾಗ?, ಯಾರ ವಿರುದ್ಧ?

ಜಿಮ್​ನಲ್ಲಿ ರಾಹುಲ್ ವರ್ಕೌಟ್ ಮಾಡುತ್ತಿರುವು ವಿಡಿಯೋ:

 

ಕೆಎಲ್ ರಾಹುಲ್ ತಂಡ ಸೇರಿಕೊಂಡಿರುವ ಕಾರಣ ಟೀಮ್ ಇಂಡಿಯಾಕ್ಕೆ ಆಡುವ ಬಳಗದ್ದು ದೊಡ್ಡ ಚಿಂತೆಯಾಗಿದೆ. ಆರಂಭದ ಎರಡು ಪಂದ್ಯದಲ್ಲಿ ರಾಹುಲ್ ಸ್ಥಾನ ತುಂಬಿದ್ದ ಇಶಾನ್ ಕಿಶನ್ ಪಾಕ್ ವಿರುದ್ಧ ಬೊಂಬಾಟ್ ಪ್ರದರ್ಶನ ತೋರಿದ್ದರು. ಹೀಗಾಗಿ ಇನ್​ಫಾರ್ಮ್ ಬ್ಯಾಟರ್ ಅನ್ನು ಕೈಬಿಡುವುದು ಅಸಾಧ್ಯ. ಶುಭ್​ಮನ್ ಗಿಲ್ ಜಾಗದಲ್ಲಿ ಆಡಿಸುವ ಎಂದರೆ ಇವರು ಕೂಡ ನೇಪಳಾ ವಿರುದ್ಧ ಅರ್ಧಶತಕ ಸಿಡಿಸಿ ಅಬ್ಬರಿಸಿದ್ದರು. ಹೀಗಾಗಿ ರಾಹುಲ್​ಗೆ ಯಾರು ಜಾಗ ಮಾಡಿಕೊಡುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.

ಬೌಂಡರಿ ತಡೆಯುವ ಯತ್ನದಲ್ಲಿ ಗಾಯಕ್ಕೆ ತುತ್ತಾದ ಪಾಕ್ ವೇಗಿ; ವಿಡಿಯೋ ನೋಡಿ

ಸೆ. 12ಕ್ಕೆ ಇಂಡೋ-ಪಾಕ್ ಪಂದ್ಯ:

ಸೂಪರ್ -4 ನಲ್ಲಿ ಭಾರತ ತಂಡ ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಈ ಪಂದ್ಯ ಸೆಪ್ಟೆಂಬರ್ 10 ರಂದು ಆಯೋಜನೆ ಮಾಡಲಾಗಿದ್ದು, ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಮಧ್ಯಾಹ್ನ 3:30ಕ್ಕೆ ಆರಂಭವಾಗಲಿದೆ. ಭಾರತ-ಪಾಕ್ ಪಂದ್ಯ ನಡೆಯಲಿರುವ ಆರ್. ಪ್ರೇಮದಾಸ ಸ್ಟೇಡಿಯಂನ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚು ಅನುಕೂಲಕರವಾಗಿದೆ. ಪಂದ್ಯ ಸಾಗಿದಂತೆ ಟ್ರ್ಯಾಕ್ ನಿಧಾನವಾಗುತ್ತದೆ, ಆಗ ಬ್ಯಾಟರ್‌ಗಳಿಗೆ ರನ್ ಗಳಿಸಲು ಕಷ್ಟವಾಗುತ್ತದೆ. ಮತ್ತೊಂದೆಡೆ, ವೇಗದ ಬೌಲರ್‌ಗಳು ಕೂಡ ಈ ಮೈದಾನದಲ್ಲಿ ಯಶಸ್ಸು ಸಾಧಿಸುತ್ತಾರೆ. ಪಂದ್ಯದ ಮಧ್ಯದಲ್ಲಿ ಬ್ಯಾಟರ್‌ಗಳಿಗೆ ಈ ಪಿಚ್ ಸಹಾಯ ಮಾಡಲಿದೆಯಷ್ಟೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ