AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೌಂಡರಿ ತಡೆಯುವ ಯತ್ನದಲ್ಲಿ ಗಾಯಕ್ಕೆ ತುತ್ತಾದ ಪಾಕ್ ವೇಗಿ; ವಿಡಿಯೋ ನೋಡಿ

Asia Cup 2023: ಈ ಪಂದ್ಯದಲ್ಲಿ ಬಾಂಗ್ಲಾ ತಂಡವನ್ನು ಏಕಪಕ್ಷೀಯವಾಗಿ ಮಣಿಸುವಲ್ಲಿ ಪಾಕಿಸ್ತಾನ ಯಶಸ್ವಿಯಾಗಿದೆ. ಆದರೆ ಇದೇ ವೇಳೆ ತಂಡದ ಸ್ಟಾರ್ ಬೌಲರ್​ ಇಂಜುರಿಗೆ ತುತ್ತಾಗಿರುವುದು ಬಾಬರ್ ಪಡೆಯ ನಿದ್ದೆಗೆಡಿಸಿದೆ. ತಂಡದ ಪ್ರಮುಖ ಬೌಲರ್ ನಸೀಮ್ ಶಾ ಬೌಂಡರಿ ಲೈನ್‌ನಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಚೆಂಡನ್ನು ತಡೆಯುವ ಯತ್ನದಲ್ಲಿ ಇಂಜುರಿಗೆ ತುತ್ತಾದರು.

ಬೌಂಡರಿ ತಡೆಯುವ ಯತ್ನದಲ್ಲಿ ಗಾಯಕ್ಕೆ ತುತ್ತಾದ ಪಾಕ್ ವೇಗಿ; ವಿಡಿಯೋ ನೋಡಿ
ನಸೀಮ್ ಶಾ
ಪೃಥ್ವಿಶಂಕರ
|

Updated on:Sep 07, 2023 | 7:19 AM

Share

2023ರ ಏಷ್ಯಾಕಪ್‌ನಲ್ಲಿ (Asia Cup 2023) ಸೂಪರ್-4 ಹಂತ ಆರಂಭವಾಗಿದೆ. ಸೂಪರ್-4 ರ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನ (Bangladesh vs Pakistan) ತಂಡಗಳು ಲಾಹೋರ್‌ನಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಬಾಂಗ್ಲಾ ತಂಡವನ್ನು ಏಕಪಕ್ಷೀಯವಾಗಿ ಮಣಿಸುವಲ್ಲಿ ಪಾಕಿಸ್ತಾನ ಯಶಸ್ವಿಯಾಗಿದೆ. ಆದರೆ ಇದೇ ವೇಳೆ ತಂಡದ ಸ್ಟಾರ್ ಬೌಲರ್​ ಇಂಜುರಿಗೆ ತುತ್ತಾಗಿರುವುದು ಬಾಬರ್ ಪಡೆಯ ನಿದ್ದೆಗೆಡಿಸಿದೆ. ತಂಡದ ಪ್ರಮುಖ ಬೌಲರ್ ನಸೀಮ್ ಶಾ (Naseem Shah) ಬೌಂಡರಿ ಲೈನ್‌ನಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಚೆಂಡನ್ನು ತಡೆಯುವ ಯತ್ನದಲ್ಲಿ ಇಂಜುರಿಗೆ ತುತ್ತಾದರು. ಇದರ ಪರಿಣಾಮವಾಗಿ ನಸೀಮ್ ಶಾ ತಕ್ಷಣವೇ ಮೈದಾನದಿಂದ ಹೊರಹೋಗಬೇಕಾಯಿತು.

ಸಹಜವಾಗಿಯೇ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಉತ್ತಮ ಆಟ ಪ್ರದರ್ಶಿಸಿತು. ಹೀಗಾಗಿ ನಸೀಮ್ ಶಾ ಅಲಭ್ಯತೆ ತಂಡವನ್ನು ಹೆಚ್ಚು ಚಿಂತೆಗೀಡು ಮಾಡಲಿಲ್ಲ. ಆದರೆ ಒಂದು ವೇಳೆ ಅವರ ಗಾಯವು ಗಂಭೀರವಾದರೆ ಮಾತ್ರ ಪಾಕ್ ತಂಡಕ್ಕೆ ಸಮಸ್ಯೆ ಹೆಚ್ಚಾಗಲಿದೆ. ಏಕೆಂದರೆ ಏಷ್ಯಾಕಪ್‌ನಲ್ಲಿ ಫೈನಲ್‌ಗೆ ತಲುಪುವ ನಿಜವಾದ ಓಟ ಈಗಷ್ಟೇ ಆರಂಭವಾಗಿದೆ. ಎರಡನೆಯದಾಗಿ, ಪಾಕಿಸ್ತಾನವು ತನ್ನ ಮುಂದಿನ ಪಂದ್ಯವನ್ನು ಭಾರತದೊಂದಿಗೆ ಆಡಬೇಕಾಗಿದೆ. ಈ ಸಂದರ್ಭದಲ್ಲಿ, ನಸೀಮ್‌ ಇಂಜುರಿಗೆ ತುತ್ತಾಗಿರುವುದು ಮೆನ್ ಇನ್ ಗ್ರೀನ್‌ ತಂಡವನ್ನು ಸಂಕಷ್ಟಕ್ಕೀಡು ಮಾಡಲಿದೆ.

Virat Kohli: ವಿರಾಟ್ ಕೊಹ್ಲಿಯನ್ನು ಶೂನ್ಯಕ್ಕೆ ಔಟ್ ಮಾಡುವುದೇ ನನ್ನ ಗುರಿ: ನಸೀಮ್ ಶಾ

7ನೇ ಓವರ್‌ನಲ್ಲಿ ನಸೀಮ್​ಗೆ ಗಾಯ

ಬಾಂಗ್ಲಾದೇಶದ ಇನಿಂಗ್ಸ್‌ನ 7ನೇ ಓವರ್‌ನಲ್ಲಿ ನಸೀಮ್ ಶಾ ಗಾಯಗೊಂಡ ಘಟನೆ ನಡೆಯಿತು. ಈ ಓವರ್‌ನ ಎರಡನೇ ಎಸೆತದಲ್ಲಿ ಚೆಂಡನ್ನು ಬೌಂಡರಿಗೆ ಹೋಗದಂತೆ ತಡೆಯುವ ಯತ್ನದಲ್ಲಿ ನಸೀಮ್ ಇಂಜುರಿಗೊಂಡರು. ಇದರಿಂದ ಅವರ ಹೊಟ್ಟೆ ಹಾಗೂ ಭುಜಕ್ಕೆ ಪೆಟ್ಟು ಬಿದ್ದಿತ್ತು. ಆದರೆ ಅದೃಷ್ಟವಶಾತ್ ಅವರ ಗಾಯ ಅಷ್ಟಾಗಿ ಗಂಭೀರವಾಗಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿತ್ತು.

ನಸೀಮ್ ಶಾ ಬದಲಿಗೆ ಮೊಹಮ್ಮದ್ ಹ್ಯಾರಿಸ್ ಮೈದಾನಕ್ಕೆ

ಚೆಂಡನ್ನು ತಡೆಯುವ ಯತ್ನದಲ್ಲಿ ಇಂಜುರಿಗೊಂಡು ಮೈದಾನದಲ್ಲಿ ನರಳಾಡುತ್ತಿದ್ದ ನಸೀಮ್​ರನ್ನು ನೋಡಿದ ಫಿಸಿಯೊ ಕೂಡಲೇ ಮೈದಾನಕ್ಕೆ ಬಂದು ನಸೀಮ್ ಅವರನ್ನು ಮೈದಾನದಿಂದ ಹೊರಗೆ ಕರೆದೊಯ್ದರು. ಇದೇ ವೇಳೆ ಅವರ ಸ್ಥಾನದಲ್ಲಿ ಮೊಹಮ್ಮದ್ ಹ್ಯಾರಿಸ್ ಕಣಕ್ಕಿಳಿದರು. ಆದರೆ, ಸ್ವಲ್ಪ ಸಮಯದ ನಂತರ ನಸೀಮ್ ಶಾ ಮತ್ತೆ ಮೈದಾನಕ್ಕೆ ಮರಳಿದರು.

ಬಾಂಗ್ಲಾ ವಿರುದ್ಧ ಮೊದಲ ಎಸೆತದಲ್ಲೇ ವಿಕೆಟ್

ಗಾಯಗೊಳ್ಳುವ ಮುನ್ನ ನಸೀಮ್ ಶಾ ಅದ್ಭುತ ಬೌಲಿಂಗ್ ಮಾಡಿದರು. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಅವರು ತಮ್ಮ ಮೊದಲ ಎಸೆತದಲ್ಲಿ ವಿಕೆಟ್ ಪಡೆದರು. ಮೆಹದಿ ಹಸನ್ ಅವರನ್ನು ವಜಾಗೊಳಿಸಿದ ನಸೀಮ್ ಶಾ ಗಾಯಕ್ಕೂ ಮುನ್ನ 3 ಓವರ್ ಬೌಲ್ ಮಾಡಿ 22 ರನ್ ನೀಡಿ 1 ವಿಕೆಟ್ ಪಡೆದರು. ಅಂತಿಮವಾಗಿ ತಮ್ಮ ಖೋಟಾದ 6 ಓವರ್​ ಬೌಲ್ ಮಾಡಿದ ನಸೀಮ್ ಇದರಲ್ಲಿ 34 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:17 am, Thu, 7 September 23

Follow Us
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!