KL Rahul: ಟೀಮ್ ಇಂಡಿಯಾ ಸೋಲಿಗೆ ನಾಯಕ ಕೆಎಲ್ ರಾಹುಲ್ ನೀಡಿದ ಕಾರಣವೇನು ನೋಡಿ

| Updated By: Vinay Bhat

Updated on: Jan 07, 2022 | 7:36 AM

South Africa vs India: ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್​ನಲ್ಲಿ ಭಾರತ ತಂಡದ ನಾಯಕನ ಜವಾಬ್ದಾರಿ ಹೊತ್ತ ಕೆಎಲ್ ರಾಹುಲ್ ಮೊದಲ ಪಂದ್ಯದಲ್ಲೇ ಸೋಲು ಕಂಡರು. ಪಂದ್ಯ ಮುಗಿದ ಬಳಿಕ ಅವರು ಮಾತನಾಡಿದ್ದು, ಏನು ಹೇಳಿದ್ದಾರೆ ನೋಡಿ.

KL Rahul: ಟೀಮ್ ಇಂಡಿಯಾ ಸೋಲಿಗೆ ನಾಯಕ ಕೆಎಲ್ ರಾಹುಲ್ ನೀಡಿದ ಕಾರಣವೇನು ನೋಡಿ
KL Rahul South Africa vs India
Follow us on

ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸುವ ಒಂದೊಳ್ಳೆ ಅವಕಾಶವನ್ನು ಭಾರತ (India cs South Africa) ಕೈಚೆಲ್ಲಿದೆ. ಇದೀಗ ಮೂರನೇ ಟೆಸ್ಟ್ ಪಂದ್ಯಕ್ಕಾಗಿ ಕಾಯಬೇಕಿದೆ. ಜೋಹಾನ್ಸ್​ಬರ್ಗ್​​ನಲ್ಲಿ (Johannesburg) ನಡೆದ ಎರಡನೇ ಟೆಸ್ಟ್​ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಸೋಲು ಕಂಡಿದ್ದು ದಕ್ಷಿಣ ಆಫ್ರಿಕಾ 7 ವಿಕೆಟ್​ಗಳಿಂದ ಜಯಿಸಿ ಐತಿಹಾಸಿಕ ಸಾಧನೆ ಮಾಡಿತು. ನಾಲ್ಕನೇ ದಿನ ಅರ್ಧ ದಿನ ಮಳೆ ಆಟ ನಡೆದರೂ ಆತಿಥೇಯರ ಗೆಲುವನ್ನು ತಡೆಯಲು ಆಗಲಿಲ್ಲ. ಆಫ್ರಿಕಾ ಕ್ಯಾಪ್ಟನ್ ಡೀನ್ ಎಲ್ಗರ್ (Dean Elgar) ಭರ್ಜರಿ ಆಟವಾಡಿ ಸೌತ್ ಆಫ್ರಿಕಾಗೆ ನಿರೀಕ್ಷೆಮೀರಿದ ಸುಲಭ ಗೆಲುವು ತಂದುಕೊಟ್ಟರು. ಈ ಮೂಲಕ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಉಭಯ ತಂಡಗಳು ಸದ್ಯ 1-1ರಿಂದ ಸಮಬಲ ಸಾಧಿಸಿದೆ. ವಿರಾಟ್ ಕೊಹ್ಲಿ (Virat Kohli) ಅನುಪಸ್ಥಿತಿಯಲ್ಲಿ ನಾಯಕನ ಜವಾಬ್ದಾರಿ ಹೊತ್ತ ಕೆಎಲ್ ರಾಹುಲ್ (KL Rahul) ಮೊದಲ ಪಂದ್ಯದಲ್ಲಿ ಸೋಲು ಕಂಡರು. ಪಂದ್ಯ ಮುಗಿದ ಬಳಿಕ ಅವರು ಮಾತನಾಡಿದ್ದು, ಏನು ಹೇಳಿದ್ದಾರೆ ನೋಡಿ.

“ಪ್ರತಿ ಟೆಸ್ಟ್ ಪಂದ್ಯವನ್ನು ನಾವು ಆಡಿದಾಗ ಗೆಲ್ಲಬೇಕೆಂದು ಭಯಸುತ್ತೇವೆ, ಅದಕ್ಕಾಗಿ ಕಠಿಣ ಪೈಪೋಟಿ ಕೂಡ ನಡೆಸುತ್ತೇವೆ. ಆದರೆ, ಈ ಬಾರಿ ದಕ್ಷಿಣ ಆಫ್ರಿಕಾ ತಂಡ ಅತ್ಯುತ್ತಮ ಆಟ ಪ್ರದರ್ಶಿಸಿತು, ಅವರು ಈ ಗೆಲುವಿಗೆ ಅರ್ಹರಾಗಿದ್ದರು. ನಾವು ನಾಲ್ಕನೇ ದಿನ ಫೀಲ್ಡ್ ಮಾಡಲು ಕಾತುರದಲ್ಲಿದ್ದೆವು, ಏನಾದರು ಹೊಸ ಪ್ರಯೋಗ ನಡೆಸಬೇಕು ಎಂಬುದು ನಮ್ಮ ಆಯ್ಕೆಯಾಗಿತ್ತು. 122 ರನ್ ಗಳಿಸುವುದು ಸುಲಭದ್ದಾಗಿರಲಿಲ್ಲ. ಪಿಚ್ ಅಪ್ ಮತ್ತು ಡೌನ್ ಇದ್ದ ಕಾರಣ ಬ್ಯಾಟಿಂಗ್ ಮಾಡಲು ಕಷ್ಟವಿತ್ತು. ಆದರೆ, ಸೌತ್ ಆಫ್ರಿಕಾ ಬ್ಯಾಟರ್​ಗಳು ಎಚ್ಚರಿಕೆಯಿಂದ ಉತ್ತಮ ಆಟವಾಡಿದರು” ಎಂದು ರಾಹುಲ್ ಹೇಳಿದ್ದಾರೆ.

ಮಾತು ಮುಂದುವರೆಸಿದ ಅವರು, “ನಾವು ಎದುರಾಳಿಗೆ ಇನ್ನಷ್ಟು ಕಠಿಣ ಪೈಪೋಟಿ ನೀಡಬೇಕಿತ್ತು. ಆದರೆ, ಮೊದಲ ಇನ್ನಿಂಗ್ಸ್​ನಲ್ಲಿ ನಾವು ಗಳಿಸಿದ ರನ್ ಸಾಕಾಗಲಿಲ್ಲ. 50-60 ರನ್​​ ಕಡಿಮೆ ಹೊಡೆದೆವು. ಶಾರ್ದೂಲ್ ಠಾಕೂರ್ ಅದ್ಭುತ ಆಟವಾಡಿದ್ದಾರೆ. ಮೊದಲ ಇನ್ನಿಂಗ್ಸ್​ನಲ್ಲಿ ಮತ್ತು ಎರಡನೇ ಇನ್ನಿಂಗ್ಸ್​ನಲ್ಲಿ ತಂಡಕ್ಕೆ ಅವರು ನೆರವಾಗಿದ್ದಾರೆ. ಪೂಜಾರ ಮತ್ತು ರಹಾನೆ ನಮಗೆ ಸಿಕ್ಕ ಅತ್ಯುತ್ತಮ ಪ್ಲೇಯರ್ಸ್. ಕಳೆದ ಅನೇಕ ವರ್ಷಗಳಿಂದ ನಮಗಾಗಿ ಅವರು ಅನೇಕ ಕೊಡುಗೆಗಳನ್ನು ಸಲ್ಲಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರು ಪ್ರೆಶರ್​ನಲ್ಲಿದ್ದರೂ ನಮ್ಮ ಮಧ್ಯಮ ಕ್ರಮಾಂಕದ ಬೆಸ್ಟ್ ಬ್ಯಾಟರ್​ಗಳು ಅವರು,” ಎಂದರು

ಇದೇವೇಳೆ ವಿರಾಟ್ ಕೊಹ್ಲಿ ಇಂಜುರಿಗೆ ಬಗ್ಗೆ ಮಾಹಿತಿ ನೀಡಿರುವ ರಾಹುಲ್, “ಕೊಹ್ಲಿ ಈಗಾಗಲೇ ರಿಕವರಿ ಆಗುತ್ತಿದ್ದಾರೆ. ಅಭ್ಯಾಸ ಶುರು ಮಾಡುತ್ತಿದ್ದು ಮುಂದಿನ ಟೆಸ್ಟ್ ವೇಳೆಗೆ ಫಿಟ್ ಆಗಲಿದ್ದಾರೆ. ಸಿರಾಜ್ ಅವರ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲ. ಮಂಡಿರಜ್ಜು ನೋವಿನಿಂದ ತಕ್ಷಣವೇ ಹೊರಬರಲು ಸಾಧ್ಯವಿಲ್ಲ. ನೆಟ್​ನಲ್ಲಿ ಅವರನ್ನು ಗಮನಿಸುತ್ತಿದ್ದೇವೆ. ಆದರೆ, ನಮ್ಮಲ್ಲಿ ಉತ್ತಮ ಬೆಂಚ್ ಸ್ಟ್ರೆಂತ್ ಇದೆ. ಉಮೇಶ್ ಯಾದವ್ ಮತ್ತು ಇಶಾಂತ್ ಶರ್ಮಾ ಫಾರ್ಮ್​ನಲ್ಲಿದ್ದಾರೆ.”

“ನಾವು ಆಫ್ರಿಕಾಕ್ಕೆ ಕಾಲಿಟ್ಟಾಗ ಇದನ್ನು ನಿರೀಕ್ಷಿಸಿದ್ದೇವೆ, ಪ್ರತಿ ಟೆಸ್ಟ್ ಸ್ಪರ್ಧಾತ್ಮಕ ಮತ್ತು ಸವಾಲಿನದಾಗಿರುತ್ತದೆ. ಈ ನಿರಾಶಾದಾಯಕ ಸೋಲಿನ ನಂತರ ನಾವು ಗೆಲುವನ್ನ ಎದುರು ನೋಡುತ್ತಿದ್ದೇವೆ. ಮುಂದಿನ ಟೆಸ್ಟ್​ನಲ್ಲಿ ಗೆಲ್ಲಲು ತಯಾರಿ ಮಾಡಿಕೊಳ್ಳುತ್ತೇವೆ,” ಎಂದು ರಾಹುಲ್ ಹೇಳಿದ್ದಾರೆ.

Pro Kabaddi League (PKL) 2021: ಬುಲ್ಸ್​ ಗುದ್ದಿಗೆ ಪಲ್ಟಿ ಹೊಡೆದ ಪ್ಯಾಂಥರ್ಸ್​