AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಹ್ಲಿಯನ್ನು ಹೀಯಾಳಿಸಿದ ಆಸ್ಟ್ರೇಲಿಯಾ ಮೀಡಿಯಾ: ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ನೀಡಿದ ವಾಸಿಂ ಜಾಫರ್

Virat Kohli: ಬೆನ್ನು ನೋವಿನ ಕಾರಣ ದಕ್ಷಿಣ ಆಫ್ರಿಕಾ ವಿರುದ್ದದ 2ನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿರುವ ವಿರಾಟ್ ಕೊಹ್ಲಿ ಕೇಪ್​ಟೌನ್​ನಲ್ಲಿ ನಡೆಯಲಿರುವ ಮೂರನೇ ಪಂದ್ಯದಲ್ಲಿ ಆಡುವ ವಿಶ್ವಾಸದಲ್ಲಿದ್ದಾರೆ.

ಕೊಹ್ಲಿಯನ್ನು ಹೀಯಾಳಿಸಿದ ಆಸ್ಟ್ರೇಲಿಯಾ ಮೀಡಿಯಾ: ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ನೀಡಿದ ವಾಸಿಂ ಜಾಫರ್
virat kohli - wasim jaffer
TV9 Web
| Edited By: |

Updated on:Jan 06, 2022 | 9:44 PM

Share

ಟೀಮ್ ಇಂಡಿಯಾ (Team India) ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ (virat kohli) ಕಳೆದ 2 ವರ್ಷಗಳಿಂದ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಶತಕ ಬಾರಿಸಿಲ್ಲ. ಅಷ್ಟೇ ಅಲ್ಲದೆ ಈ ವರ್ಷ ಅವರ ಟೆಸ್ಟ್ ಸರಾಸರಿ ಕೂಡ ಕುಸಿದಿದೆ. ಏತನ್ಮಧ್ಯೆ, ಗುರುವಾರ ನಡೆದ ಆಶಸ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ಬೌಲರ್ ಮಿಚೆಲ್ ಸ್ಟಾರ್ಕ್ ಅಜೇಯ 34 ರನ್ ಗಳಿಸಿದ್ದರು. ಈ ಇನ್ನಿಂಗ್ಸ್‌ನ ನಂತರ, ಆಸ್ಟ್ರೇಲಿಯಾದ ಸ್ಪೋರ್ಟ್ಸ್​ ಮೀಡಿಯಾ 7 ಕ್ರಿಕೆಟ್​ ಕೊಹ್ಲಿ ಮತ್ತು ಸ್ಟಾರ್ಕ್ ಅವರ ಬ್ಯಾಟಿಂಗ್ ಸರಾಸರಿಯನ್ನು ಹೋಲಿಸಿ ಪೋಸ್ಟ್​ವೊಂದನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದರು. ಇಲ್ಲಿ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಸರಾಸರಿ 37.17 ಇದ್ದರೆ, ಮಿಚೆಲ್ ಸ್ಟಾರ್ಕ್​ ಬ್ಯಾಟಿಂಗ್ ಸರಾಸರಿ 38.63 ಇದೆ. ಇದನ್ನು ಪ್ರಸ್ತಾಪಿಸಿ 7 ಕ್ರಿಕೆಟ್ ವಿರಾಟ್ ಕೊಹ್ಲಿಯನ್ನು ಹೀಯಾಳಿಸಿದ್ದರು.

ಈ ಟ್ವಿಟರ್​ ಪೋಸ್ಟ್​ಗೆ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಪ್ರತ್ಯುತ್ತರ ನೀಡುವ ಮೂಲಕ ಗಮನ ಸೆಳೆದಿದ್ದಾರೆ. 7 ಕ್ರಿಕೆಟ್​ ಪೋಸ್ಟ್​ನ್ನು ರಿಟ್ವೀಟ್ ಮಾಡಿರುವ ಜಾಫರ್ ಟೀಮ್ ಇಂಡಿಯಾ ವೇಗಿ ನವದೀಪ್ ಸೈನಿ ಅವರ ODI ಸರಾಸರಿ ಹಾಗೂ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಅವರ ಏಕದಿನ ಸರಾಸರಿಯನ್ನು ಪ್ರಸ್ತಾಪಿಸಿದ್ದಾರೆ.

ವಿಶೇಷ ಎಂದರೆ ಇಲ್ಲಿ ನವದೀಪ್ ಸೈನಿ ಅವರ ಏಕದಿನ ಸರಾಸರಿ 53.50 ಆಗಿದ್ದರೆ, ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್​ ಸ್ಟೀವ್ ಸ್ಮಿತ್ ಅವರ ಸರಾಸರಿ 43.34 ಇದೆ. ಅಂದರೆ ನದೀಪ್ ಸೈನಿಗಿಂತ ಸ್ಮಿತ್ ಬ್ಯಾಟಿಂಗ್ ಸರಾಸರಿ ಕಡಿಮೆ ಇದೆ ಎಂದು ವಾಸಿಂ ಜಾಫರ್ 7 ಕ್ರಿಕೆಟ್​ ಮೀಡಿಯಾ ತಮ್ಮದೇ ರೀತಿಯಲ್ಲಿ ಖಡಕ್ ಉತ್ತರ ನೀಡಿದ್ದಾರೆ. ಇದೀಗ ವಾಸಿಂ ಜಾಫರ್ ಅವರ ಈ ಟ್ವೀಟ್ ಭಾರೀ ವೈರಲ್ ಆಗಿದ್ದು, ವಿರಾಟ್ ಕೊಹ್ಲಿ ಅಭಿಮಾನಿಗಳು ಜಾಫರ್​ ಅವರ ಬೆಂಬಲಕ್ಕೆ ಬಹುಪರಾಕ್ ಅನ್ನುತ್ತಿದ್ದಾರೆ.

ಸದ್ಯ ಬೆನ್ನು ನೋವಿನ ಕಾರಣ ದಕ್ಷಿಣ ಆಫ್ರಿಕಾ ವಿರುದ್ದದ 2ನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿರುವ ವಿರಾಟ್ ಕೊಹ್ಲಿ ಕೇಪ್​ಟೌನ್​ನಲ್ಲಿ ನಡೆಯಲಿರುವ ಮೂರನೇ ಪಂದ್ಯದಲ್ಲಿ ಆಡುವ ವಿಶ್ವಾಸದಲ್ಲಿದ್ದಾರೆ. 3 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಟೀಮ್ ಇಂಡಿಯಾ ಮೊದಲ ಪಂದ್ಯ ಗೆದ್ದರೆ, 2ನೇ ಪಂದ್ಯವನ್ನು ದಕ್ಷಿಣ ಆಫ್ರಿಕಾ ಗೆದ್ದುಕೊಂಡಿತು. ಇದೀಗ ಕೇಪ್​ಟೌನ್​ನಲ್ಲಿ ನಡೆಯಲಿರುವ ಮೂರನೇ ಪಂದ್ಯವು ಸರಣಿ ಫಲಿತಾಂಶವನ್ನು ನಿರ್ಧರಿಸಲಿದೆ.

ಇದನ್ನೂ ಓದಿ:  Virat Kohli: ವಿರಾಟ್ ಕೊಹ್ಲಿಯ ಗಾಯ, ರಾಹುಲ್ ದ್ರಾವಿಡ್ ಹೇಳಿಕೆ ಮತ್ತು 100ನೇ ಟೆಸ್ಟ್​..!

ಇದನ್ನೂ ಓದಿ:  Sachin Tendulkar: ಆಲ್‌ ಟೈಮ್ ಬೆಸ್ಟ್‌ 11 ಹೆಸರಿಸಿದ ಸಚಿನ್: ಪ್ರಮುಖ ಆಟಗಾರರಿಗಿಲ್ಲ ಸ್ಥಾನ

ಇದನ್ನೂ ಓದಿ: Rohit Sharma: ಫಿಟ್​ನೆಸ್​ ಅಥವಾ ಇನ್ನೇನಾದರೂ? ರೋಹಿತ್ ಶರ್ಮಾ ಕೈ ಬಿಡಲು ಕಾರಣವೇನು?

ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!

(australian media mocked virat kohli: wasim jaffer gave strong reply team india)

Published On - 9:41 pm, Thu, 6 January 22