ವಿಶ್ವಕಪ್ ಪಂದ್ಯ ಎಂದರೆ ಅಲ್ಲಿ ಹೈ ವೋಲ್ಟೇಜ್ ಇದ್ದೇ ಇರುತ್ತದೆ. ಅದರಲ್ಲೂ ಭಾರತ vs ಪಾಕಿಸ್ತಾನ ಮ್ಯಾಚ್ ಇದೆ ಎಂದಂರಂತೂ ಮರುಮಾತೇ ಇಲ್ಲ. ಟಿ20 ವಿಶ್ವಕಪ್ನ ಭಾರತ ಮತ್ತು ಪಾಕಿಸ್ತಾನದ ನಡುವಣ ಮ್ಯಾಚ್ ಸಾಕಷ್ಟು ಹೈಪ್ ಪಡೆದುಕೊಂಡಿತ್ತು. ಆದರೆ, ಟೀಂ ಇಂಡಿಯಾ ಆರಂಭದಲ್ಲೇ ಆಘಾತ ಅನುಭವಿಸಿತ್ತು. ಇದಕ್ಕೆ ಅಂಪೈರ್ ಮಾಡಿದ ತಪ್ಪೇ ಕಾರಣ ಎಂಬುದು ಗೊತ್ತಾಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಮೊದಲ ಓವರ್ನಲ್ಲೇ ಸಿಡಿಲು ಬಂದು ಅಪ್ಪಿಳಿಸಿತು. ರೋಹಿತ್ ಶರ್ಮಾ ತಾನು ಎದುರಿಸಿದ ಮೊದಲ ಎಸೆತದಲ್ಲೇ ಶಾಹೀನ್ ಅಫ್ರಿದಿ ಬೌಲಿಂಗ್ನಲ್ಲಿ ಎಲ್ಬಿಗೆ ಬಲಿಯಾದರು. ಈ ವೇಳೆ ವಿರಾಟ್ ಕೊಹ್ಲಿ ಹಾಗೂ ಕನ್ನಡಿಗ ಕೆ. ಎಲ್ ರಾಹುಲ್ ಪಂದ್ಯಕಟ್ಟಲು ನಿಂತರು. ರಾಹುಲ್ ಇತ್ತೀಚೆಗೆ ಒಳ್ಳೆಯ ಫಾರ್ಮ್ನಲ್ಲಿದ್ದಾರೆ. ಐಪಿಎಲ್ ಈ ಬಾರಿಯ ಸೀಸನ್ನಲ್ಲಿ ಒಳ್ಳೆಯ ರನ್ ಪೇರಿಸಿದ್ದರು. ಪ್ರ್ಯಾಕ್ಟೀಸ್ ಮ್ಯಾಚ್ನಲ್ಲೂ ರಾಹುಲ್ ಅದ್ಭುತ ಆಟ ಪ್ರದರ್ಶಿಸಿದ್ದರು. ಆದರೆ, ಪಾಕ್ ವಿರುದ್ಧದ ಮ್ಯಾಚ್ನಲ್ಲಿ ಎಡವಿದ್ದರು.
3 ರನ್ ಗಳಿಸಿದ್ದ ರಾಹುಲ್ ಶಾಹೀನ್ ಅಫ್ರಿದಿ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರು. ಈ ಮೂಲಕ ಪೆವಿಲಿಯನ್ ಸೇರಿದರು. ಆದರೆ, ಇದು ನೋ ಬಾಲ್ ಆಗಿತ್ತು. ಇದನ್ನು ಅಂಪೈರ್ ಗಮನಿಸಿಯೇ ಇಲ್ಲ. ಸದ್ಯ, ಇದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಅಲ್ಲದೆ, ಅಂಪೈರ್ ನಿರ್ಧಾರದಿಂದ ಭಾರತಕ್ಕೆ ದೊಡ್ಡ ಮೋಸ ಉಂಟಾಗಿದೆ ಎಂದು ದೂರುತ್ತಿದ್ದಾರೆ.
Stupid umpiring in this crucial match is not accepted… Blind to see No Ball we lost Rahul ? #icc #ICCT20WorldCup #INDvPAK #KLRahul #ViratKohli #SanjayManjrekar. pic.twitter.com/pFASMXZtVM
— Shiv Sharma (@ShivShharma) October 24, 2021
It was clearly not out! #KLRahul
.
Matlab kya chal kya raha hai yaha! ? pic.twitter.com/YP7ChROai1— Payal KLR ? (@impayal918) October 24, 2021
THISH TYPE OF IMPIRE NOT ACCEPTABLE IN THISH TYPE OF CRUCIAL MATCH..THISH WAS THE BALL WHEN KL RAHUL GET OUT#KLRahul #indiaVsPakistan pic.twitter.com/Zobibl2wa3
— Topper Valley (@CentreSudhir) October 25, 2021
ಇದನ್ನೂ ಓದಿ: Virat Kohli: ಟೀಂ ಇಂಡಿಯಾ ಸೋತ ಬೆನ್ನಲ್ಲೇ ಕೊಹ್ಲಿಯನ್ನು ಹೀನಾಯವಾಗಿ ಹೀಯಾಳಿಸಿದ ಪಾಕಿಸ್ತಾನ