ಕೊಲಂಬೋದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ (Sri Lanka vs Australia) ತಂಡ 6 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಪಥುಮ್ ನಿಸ್ಸಂಕಾ (Pathum Nissanka) ಅವರ ಆಕರ್ಷಕ ಶತಕ ಹಾಗೂ ಕುಸಲ್ ಮೆಂಡಿಸ್ ಅರ್ಧಶತಕದ ನೆರವಿನಿಂದ ಸವಾಲಿನ ಟಾರ್ಗೆಟ್ ಅನ್ನು ಸಿಂಹಳೀಯರು ಬೆನ್ನಟ್ಟಿ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 2-1 ಮುನ್ನಡೆ ಪಡೆದುಕೊಂಡಿತು. ಟಿ20 ಸರಣಿಯಲ್ಲಿ 1-2 ಅಂತರದಿಂದ ಸೋತ ಶ್ರೀಲಂಕಾಕ್ಕೆ ಈ ಏಕದಿನ ಸರಣಿ ಪ್ರತಿಷ್ಠೆಯ ಕದನವಾಗಿದೆ. ಹೀಗಾಗಿ ತವರಿನಲ್ಲಿ ಗೆಲ್ಲಲೇ ಬೇಕಾದ ಒತ್ತಡದಲ್ಲಿದ್ದಾರೆ. ಅದರಂತೆ ತೃತೀಯ ಏಕದಿನದಲ್ಲಿ ಲಂಕಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ಗೆಲುವು ಕಂಡಿದೆ. ಈ ಪಂದ್ಯದಲ್ಲಿ ವಿಶೇಷ ಪ್ರಸಂಗವೊಂದು ನಡೆಯಿತು. ಆಸ್ಟ್ರೇಲಿಯಾ ತಂಡ ಬ್ಯಾಟಿಂಗ್ ಮಾಡುತ್ತಿರುವಾಗ ಅಂಪೈರ್ (Umpire) ಕ್ಯಾಚ್ ಹಿಡಿಲು ಮುಂದಾದ ಘಟನೆ ಜರುಗಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆಸೀಸ್ ವಿಕೆಟ್ ಕೀಪರ್ ಬ್ಯಾಟರ್ ಅಲೆಕ್ಸ್ ಕ್ಯಾರಿ ಸ್ಕ್ವೇರ್ಲೆಗ್ನಲ್ಲಿ ಚೆಂಡನ್ನು ಅಟ್ಟಲು ಯತ್ನಿಸಿದರು. ಆದರೆ, ಸರಿಯಾಗಿ ಟೈಮ್ ಆಗದ ಕಾರಣ ಚೆಂಡು ಮೇಲಕ್ಕೋಯಿತು. ಈ ಸಂದರ್ಭ ಸ್ಕ್ವೇರ್ಲೆಗ್ನಲ್ಲಿ ನಿಂತಿದ್ದ ಅಂಪೈರ್ ಕುಮಾರ್ ಧರ್ಮಸೇನ ಚೆಂಡನ್ನು ಹಿಡಿಯಲೆಂದು ಕೈ ಮುಂದೆ ತಂದರು. ಇನ್ನೇನು ಕ್ಯಾಚ್ ಹಿಡಿಯಬೇಕು ಎನ್ನುವಷ್ಟರಲ್ಲಿ ಧರ್ಮಸೇನ ಕೈ ಹಿಂದೆ ಸರಿಸಿ ಬಿಟ್ಟರು. ಧರ್ಮಸೇನ 90ರ ದಶಕದಲ್ಲಿ ಶ್ರೀಲಂಕಾ ತಂಡದ ಪರ ಆಡದ್ದರು. ಕ್ರಿಕೆಟ್ ಆಸ್ಟ್ರೇಲಿಯಾ ಇವರು ಕ್ಯಾಚ್ ಹಿಡಿಯಲು ಪ್ರಯತ್ನಿಸುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದು ಸಖತ್ ವೈರಲ್ ಆಗುತ್ತಿದೆ.
IND vs SA: ದಿನೇಶ್ ಕಾರ್ತಿಕ್ಗೆ ಸಿಗಲಿಲ್ಲ ಸರಣಿಶ್ರೇಷ್ಠ ಪ್ರಶಸ್ತಿ: ಹಾಗಾದ್ರೆ ಯಾವ ಆಟಗಾರನಿಗೆ ಸಿಕ್ಕಿತು?
Catch! Umpire Kumar Dharmasena looks like he wants to get into the action…
Thankfully he didn’t #SLvAUS pic.twitter.com/M4mA1GuDW8
— cricket.com.au (@cricketcomau) June 19, 2022
Just for a fleeting moment… Kumar Dharmasena had forgotten he’s not a player anymore ? #SLvAUSpic.twitter.com/dkv1IbQBs0
— ?Flashscore Cricket Commentators (@FlashCric) June 19, 2022
ಆಸ್ಟ್ರೇಲಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ಡೇವಿಡ್ ವಾರ್ನರ್(9), ನಂತರ ಬಂದ ಮಿಚೆಲ್ ಮಾರ್ಷ್(10) ಬೇಗನೆ ಪೆವಿಲಿಯನ್ ಸೇರಿಕೊಂಡರು. ಮಾರ್ನಸ್ ಲಾಬುಶೇನ್ (20) ಕೂಡ ಬೇಗನೆ ನಿರ್ಗಮಿಸಿದರು. ಒಂದೆಡೆ ವಿಕೆಟ್ ಬೀಳುತ್ತಿದ್ದರು ಜವಾಬ್ದಾರಿಯ ಆಟವಾಡಿದ ನಾಯಕ ಆರನ್ ಫಿಂಚ್ 62 ರನ್ (85 ಬಾಲ್, 4 ಬೌಂಡರಿ, 1 ಸಿಕ್ಸ್) ಸಿಡಿಸಿ ಮಿಂಚಿದರು. ನಂತರ ಮಧ್ಯಮ ಕ್ರಮಾಂಕದಲ್ಲಿ ಜೊತೆಯಾದ ಅಲೆಕ್ಸ್ ಕ್ಯಾರಿ (49) ಹಾಗೂ ಟ್ರಾವಿಸ್ ಹೆಡ್ 70* ರನ್(65 ಬಾಲ್, 3 ಬೌಂಡರಿ, 3 ಸಿಕ್ಸ್) ಉತ್ತಮ ಆಟವಾಡಿ 5ನೇ ವಿಕೆಟ್‌ಗೆ 72 ರನ್‌ಗಳ ಕಾಣಿಕೆ ನೀಡಿದರು. ಕೆಳ ಕ್ರಮಾಂಕದಲ್ಲಿ ಬಂದ ಗ್ಲೆನ್ ಮ್ಯಾಕ್ಸ್‌ವೆಲ್(33) ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಆಸ್ಟ್ರೇಲಿಯಾ 291 ರನ್ ಗಳಿಸಿತು.
ಸವಾಲು ಟಾರ್ಗೆಟ್ ಬೆನ್ನತ್ತಿದ ಶ್ರೀಲಂಕಾ ಸಾಧಾರಣ ಆರಂಭ ಕಂಡಿತು. ಡಿಕ್ವೆಲ್ಲಾ 25 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಜೊತೆಯಾದ ಪತುಮ್ ನಿಸ್ಸಂಕಾ 137 ರನ್ (147 ಬಾಲ್, 11 ಬೌಂಡರಿ, 2 ಸಿಕ್ಸ್) ಹಾಗೂ ಕುಸಲ್ ಮೆಂಡಿಸ್ 87 ರನ್ (85 ಬಾಲ್, 8 ಬೌಂಡರಿ) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಆಸೀಸ್ ಬೌಲಿಂಗ್ ದಾಳಿಯನ್ನ ಸಮರ್ಥವಾಗಿ ಎದುರಿಸಿದ ಈ ಜೋಡಿ 2ನೇ ವಿಕೆಟ್‌ಗೆ 170 ರನ್ ಜೊತೆಯಾಟದಿಂದ ತಂಡದ ಗೆಲುವಿನ ಹಾದಿ ಸುಗಮಗೊಳಿಸಿದರು. ಮೆಂಡಿಸ್ 85 ರನ್ ಗಳಿಸಿದ್ದ ವೇಳೆ ಗಾಯಗೊಂಡು ಹೊರನಡೆದರು. ಧನಂಜಯ 25 ರನ್ ಕಲೆಹಾಕಿದರೆ, ಅಸಲಂಕ (13*) 48.3 ಓವರ್ನಲ್ಲೇ ತಂಡವನ್ನ ಗೆಲುವಿನ ದಡಸೇರಿಸಿದರು.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.