IND vs SA: ದಿನೇಶ್ ಕಾರ್ತಿಕ್​ಗೆ ಸಿಗಲಿಲ್ಲ ಸರಣಿಶ್ರೇಷ್ಠ ಪ್ರಶಸ್ತಿ: ಹಾಗಾದ್ರೆ ಯಾವ ಆಟಗಾರನಿಗೆ ಸಿಕ್ಕಿತು?

Dinesh Karthik: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಭಾರತ- ದಕ್ಷಿಣ ಆಫ್ರಿಕಾ ಡಿಸೈಡರ್ ಪಂದ್ಯ ರದ್ದಾದ ಬಳಿಕ ಸರಣಿಶ್ರೇಷ್ಠ ಪ್ರಶಸ್ತಿ ನೀಡಲಾಯಿತು. ಆದರೆ, ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ದಿನೇಶ್ ಕಾರ್ತಿಕ್​ಗೆ ಈ ಪ್ರಶಸ್ತಿ ಒಲಿದುಬರಲಿಲ್ಲ.

IND vs SA: ದಿನೇಶ್ ಕಾರ್ತಿಕ್​ಗೆ ಸಿಗಲಿಲ್ಲ ಸರಣಿಶ್ರೇಷ್ಠ ಪ್ರಶಸ್ತಿ: ಹಾಗಾದ್ರೆ ಯಾವ ಆಟಗಾರನಿಗೆ ಸಿಕ್ಕಿತು?
Dinesh Karthik IND vs SA T20
Follow us
TV9 Web
| Updated By: Vinay Bhat

Updated on:Jun 20, 2022 | 8:04 AM

ಭಾರತ ಹಾಗೂ ದಕ್ಷಿಣ ಆಫ್ರಿಕಾ (IND vs SA) ನಡುವಣ ಐದು ಪಂದ್ಯಗಳ ಟಿ20 ಸರಣಿ ಮುಕ್ತಾಯಗೊಂಡಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswami Stadium) ನಡೆಯಬೇಕಿದ್ದ ಅಂತಿಮ ಡಿಸೈಡರ್ ಪಂದ್ಯ ಮಳೆಗೆ ಕೊಚ್ಚಿ ಹೋದ ಪರಿಣಾಮ 2-2 ಅಂತರದಿಂದ ಸರಣಿ ಸಮಬಲಗೊಂಡಿತು. ಮೊದಲ ಎರಡೂ ಪಂದ್ಯಗಳಲ್ಲಿ ಹರಿಣಗಳ ಪಡೆ ಗೆದ್ದರೆ ನಂತರದ ಎರಡೂ ಪಂದ್ಯಗಳಲ್ಲಿ ಭರ್ಜರಿ ಕಮ್‌ಬ್ಯಾಕ್‌ ಮಾಡಿದ ರಿಷಭ್ ಪಂತ್‌ (Rishabh Pant) ಪಡೆ ಬ್ಯಾಕ್‌ ಟು ಬ್ಯಾಕ್‌ ಜಯ ದಾಖಲಿಸಿ ಸರಣಿಯಲ್ಲಿ 2-2ರ ಸಮಬಲ ತಂದುಕೊಂಡಿತು. ಹೀಗಾಗಿ ಬೆಂಗಳೂರಿನ ಪಂದ್ಯದತ್ತ ಎಲ್ಲರ ಚಿತ್ತ ನೆಟ್ಟಿತ್ತು. ಆದರೆ, ಕ್ರಿಕೆಟ್‌ಪ್ರೇಮಿಗಳಿಗೆ ನೋಡಲು ಸಿಕ್ಕಿದ್ದು 21 ಎಸೆತಗಳ ಆಟ ಮಾತ್ರ. ಪಂದ್ಯ ರದ್ದಾದಾಗ ಭಾರತ ಎರಡು ವಿಕೆಟ್‌ಗೆ 28 ರನ್‌ ಗಳಿಸಿತ್ತು. ಭಾರತದ ಆತಿಥ್ಯದಲ್ಲಿ ಕಳೆದ ಏಳು ವರ್ಷಗಳಲ್ಲಿ ನಡೆದ ಮೂರು ಸರಣಿಗಳಲ್ಲಿಯೂ ದಕ್ಷಿಣ ಆಫ್ರಿಕಾ ಸೋತಿಲ್ಲ. ಈ ಮೂಲಕ ತನ್ನ ದಾಖಲೆಯನ್ನು ಹಾಗೇ ಉಳಿಸಿಕೊಂಡಿದೆ.

ಪಂದ್ಯ ರದ್ದಾದ ಬಳಿಕ ಸರಣಿಶ್ರೇಷ್ಠ ಪ್ರಶಸ್ತಿ ನೀಡಲಾಯಿತು. ಆದರೆ, ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ದಿನೇಶ್ ಕಾರ್ತಿಕ್​ಗೆ ಈ ಪ್ರಶಸ್ತಿ ಒಲಿದುಬರಲಿಲ್ಲ. ಬದಲಾಗಿ ಟೀಮ್ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ಸರಣಿಶ್ರೇಷ್ಠ ಬಾಚಿಕೊಂಡರು. ಭುವಿ ಈ ಸರಣಿಯಲ್ಲಿ 6 ವಿಕೆಟ್ ಪಡೆದುಕೊಂಡಿದ್ದಾರೆ. ಬಳಿಕ ಮಾತನಾಡಿದ ಭುವನೇಶ್ವರ್, “ತುಂಬಾ ಹೆಮ್ಮೆಯಾಗುತ್ತಿದೆ. ನಾನು ಬೌಲಿಂಗ್​ನಲ್ಲಿ ಇನ್ನಷ್ಟು ಉತ್ತಮವಾಗಿ ಕಮ್​ಬ್ಯಾಕ್ ಮಾಡಲು ಎದುರು ನೋಡುತ್ತೇನೆ. ಹಿರಿಯ ಬೌಲರ್ ಆಗಿ ನಾನು ಯುವ ಆಟಗಾರರ ಬಗ್ಗೆಯೂ ಯೋಚಿಸಬೇಕು,” ಎಂದು ಹೇಳಿದ್ದಾರೆ.

Rishabh Pant: ನಾಯಕನಾಗಿ ಅತ್ಯಂತ ಕೆಟ್ಟ ದಾಖಲೆ ಬರೆದ ರಿಷಭ್ ಪಂತ್

ಇದನ್ನೂ ಓದಿ
Image
Rishabh Pant: ವಿರಾಟ್ ಕೊಹ್ಲಿಯನ್ನು ರಿಷಭ್ ಪಂತ್ ಹಿಂದಿಕ್ಕಲಿದ್ದಾರೆ ಎಂದ ನೆಟ್ಟಿಗರು
Image
Ashish Nehra: ಟಿ20 ವಿಶ್ವಕಪ್​ ತಂಡದಲ್ಲಿ ಟೀಮ್ ಇಂಡಿಯಾದ ಪ್ರಮುಖ ವೇಗಿಗಿಲ್ಲ ಸ್ಥಾನ..!
Image
P M Narendra Modi: ಚೆಸ್​ ಒಲಿಂಪಿಯಾಡ್​ ಜ್ಯೋತಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ
Image
India vs South Africa 5th T20 Highlights: ಭಾರತದ ಸರಣಿ ಗೆಲುವಿನ ಆಸೆಗೆ ವರುಣನ ಅಡ್ಡಿ; ಸರಣಿ ಸಮ

ಇನ್ನು ನಾಯಕ ರಿಷಭ್ ಪಂತ್ ಮಾತನಾಡಿ, “ತಂಡದಲ್ಲಿ ಅತ್ಯುತ್ತಮ ಭಾವನೆಯಿದೆ. 0-2 ರಿಂದ 2-2ಕ್ಕೆ ಕಮ್​ಬ್ಯಾಕ್ ಮಾಡಿದ್ದು ಅದ್ಭುತ. ನಾನು ನಾಯಕನಾಗಿ ಮತ್ತು ಆಟಗಾರನಾಗಿ ಶೇ. 100 ರಷ್ಟು ನೀಡಲು ಪ್ರಯತ್ನ ಪಡುತ್ತೇನೆ. ನಾನು ಫೀಲ್ಡಿಂಗ್​ನಲ್ಲಿ ಇನ್ನಷ್ಟು ಸುಧಾರಿಸಬೇಕಿದೆ. ಇಷ್ಟು ಬಾರಿ ನಾನು ಟಾಸ್ ಸೋತಿರುವುದು ಇದೇ ಮೊದಲು. ಆದರೆ, ಅದು ನನ್ನ ಕಂಟ್ರೋಲ್​​ನಲ್ಲಿ ಇಲ್ಲ. ಸದ್ಯ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಬಗ್ಗೆ ಯೋಚಿಸಬೇಕಿದೆ. ಬ್ಯಾಟ್ ಮೂಲಕ ತಂಡಕ್ಕೆ ಇನ್ನಷ್ಟು ಕೊಡುಗೆ ನೀಡಬೇಕು,” ಎಂದು ಹೇಳಿ ಮಾತು ಮುಗಿಸಿದರು.

ಮಳೆಯದ್ದೇ ಆಟ:

ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಇನ್ನೇನು ಭಾರತದ ಆರಂಭಿಕ ಜೋಡಿ ಕಣಕ್ಕಿಳಿಯುವ ಕೆಲವೇ ಕ್ಷಣಗಳ ಮುನ್ನ ಧಾರಾಕಾರ ಮಳೆ ಸುರಿಯಲಾರಂಭಿಸಿತು. ಹೀಗಾಗಿ 20 ನಿಮಿಷಗಳಲ್ಲಿ ಸ್ಥಗಿತವಾಯಿತು. ಇದರಿಂದಾಗಿ 7 ಗಂಟೆಗೆ ಶುರುವಾಗ ಬೇಕಿದ್ದ ಪಂದ್ಯವನ್ನು 7.50ಕ್ಕೆ ಆರಂಭಿಸಲಾಯಿತು. ಮೊದಲ ಓವರ್‌ನಲ್ಲಿಯೇ ಕೇಶವ್ ಮಹಾರಾಜ್ ಅವರ ಎರಡು ಎಸೆತಗಳನ್ನು ಇಶಾನ್ ಕಿಶನ್ ಸಿಕ್ಸರ್‌ಗೆ ಎತ್ತಿದರು. ಪ್ರೇಕ್ಷಕರ ಗ್ಯಾಲರಿಯಲ್ಲಿ ಸಂಚಲನ ಮೂಡಿತು. ಆದರೆ, ನಂತರದ ಓವರ್‌ನಲ್ಲಿ ಲುಂಗಿ ಗಿಡಿ ಎಸೆತದಲ್ಲಿ ಇಶಾನ್ ಬೌಲ್ಡ್ ಆದರು.

ನಾಲ್ಕನೇ ಓವರ್‌ನ ಎರಡನೇ ಎಸೆತದಲ್ಲಿ ರುತುರಾಜ್ ಗಾಯಕವಾಡ್‌ ವಿಕೆಟ್‌ ಅನ್ನೂ ಲುಂಗಿ ಗಿಡಿ ಕಬಳಿಸಿದರು. ಈ ಸಂದರ್ಭ ರಿಷಭ್ ಪಂತ್ ಹಾಗೂ ಶ್ರೇಯಸ್ ಅಯ್ಯರ್ ಇನ್ನಿಂಗ್ಸ್​ ಕಟ್ಟಲು ಹೊರಟಾಗ ಸಣ್ಣಗೆ ಮಳೆ ಶುರುವಾಯಿತು. 8.10 ರಿಂದ ಶುರುವಾದ ಮಳೆ 9.30 ಯವರೆಗೂ ಮುಂದುವರಿಯಿತು. ಅಂತಿಮವಾಗಿ 9.35ಕ್ಕೆ ಪಂದ್ಯ ಸ್ಥಗಿತಗೊಳಿಸಲಾಯಿತು.

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:04 am, Mon, 20 June 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ