AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀಮ್ ಇಂಡಿಯಾದ ಹೆಲ್ಮೆಟ್ ಧರಿಸಿ ಕಣಕ್ಕಿಳಿದ ಕುಮಾರ್ ಸಂಗಕ್ಕಾರ

Kumar Sangakkara: ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಕುಮಾರ್ ಸಂಗಕ್ಕಾರ ಮತ್ತೆ ಮೈದಾನಕ್ಕಿಳಿದಿದ್ದಾರೆ. ಈ ಬಾರಿ ಕೋಚ್ ಆಗಿ ಅಲ್ಲ. ಬದಲಾಗಿ ಆಟಗಾರನಾಗಿ. ಹೀಗೆ ಇಂಗ್ಲೆಂಡ್​ನ ಕ್ಲಬ್ ಕ್ರಿಕೆಟ್ ಪಂದ್ಯವೊಂದರಲ್ಲಿ ಕಣಕ್ಕಿಳಿದಿರುವ ಕುಮಾರ್ ಸಂಗಕ್ಕಾರ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ.

ಟೀಮ್ ಇಂಡಿಯಾದ ಹೆಲ್ಮೆಟ್ ಧರಿಸಿ ಕಣಕ್ಕಿಳಿದ ಕುಮಾರ್ ಸಂಗಕ್ಕಾರ
Kumara SangakkaraImage Credit source: wisden
ಝಾಹಿರ್ ಯೂಸುಫ್
|

Updated on: Jun 20, 2026 | 10:00 AM

Share

ಕ್ರಿಕೆಟ್​ನಲ್ಲಿ ‘ಕ್ಲಾಸ್ ಈಸ್ ಪರ್ಮನೆಂಟ್’ ಎಂಬ ಮಾತಿದೆ. ಇದನ್ನು ಶ್ರೀಲಂಕಾ ಕ್ರಿಕೆಟ್‌ನ ಲೆಜೆಂಡ್ ಕುಮಾರ್ ಸಂಗಕ್ಕಾರ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಇತ್ತೀಚೆಗೆ ಇಂಗ್ಲೆಂಡ್‌ನ ಸ್ಥಳೀಯ ಕ್ಲಬ್ ಕ್ರಿಕೆಟ್ ಪಂದ್ಯವೊಂದರಲ್ಲಿ ಕಣಕ್ಕಿಳಿದಿದ್ದ 48 ವರ್ಷದ ಸಂಗಕ್ಕಾರ, ಭರ್ಜರಿ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಆದರೆ ಈ ಶತಕಕ್ಕಿಂತ ಹೆಚ್ಚು ಸದ್ದು ಟೀಮ್ ಇಂಡಿಯಾದ ಹೆಲ್ಮೆಟ್.

ಅಂದರೆ ಈ ಪಂದ್ಯದಲ್ಲಿ ಬ್ಯಾಟಿಂಗ್​ಗೆ ಆಗಮಿಸಿದ್ದ ಕುಮಾರ್ ಸಂಗಕ್ಕಾರ ಬಿಸಿಸಿಐ ಲೋಗೋ ಮತ್ತು ಭಾರತದ ತ್ರಿವರ್ಣ ಧ್ವಜವಿರುವ ಹೆಲ್ಮೆಟ್ ಧರಿಸಿದ್ದರು. ಇದೀಗ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಜೈಸ್ವಾಲ್ ನೀಡಿದ ಉಡುಗೊರೆ:

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಕುಮಾರ್ ಸಂಗಕ್ಕಾರ ಅವರಿಗೆ ಆರ್​ಆರ್​ ತಂಡದ ಬ್ಯಾಟರ್ ಯಶಸ್ವಿ ಜೈಸ್ವಾಲ್ ತಮ್ಮ ಟೀಮ್ ಇಂಡಿಯಾ ಹೆಲ್ಮೆಟ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಇದೇ ಹೆಲ್ಮೆಟ್ ಧರಿಸಿ ಕುಮಾರ್ ಸಂಗಕ್ಕಾರ ಇಂಗ್ಲೆಂಡ್​ನಲ್ಲಿ ನಡೆದ ಕ್ಲಬ್ ಕ್ರಿಕೆಟ್​ನಲ್ಲಿ ಕಾಣಿಸಿಕೊಂಡಿದ್ದರು.

ಭರ್ಜರಿ ಸೆಂಚುರಿ:

ಯುಕೆ ಮೂಲದ ಡೋರ್ಸೆಟ್ ಕೌಂಟಿ ಲೀಗ್‌ನಲ್ಲಿ ಕುಮಾರ್ ಸಂಗಕ್ಕಾರ ಶಿಲ್ಲಿಂಗ್‌ಸ್ಟೋನ್ ಕ್ರಿಕೆಟ್ ಕ್ಲಬ್ ಪರ ಕಣಕ್ಕಿಳಿದಿದ್ದರು. ಬ್ರಾಡ್‌ಸ್ಟೋನ್ ಸಿಸಿ ವಿರುದ್ಧ ನಡೆದ ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಸಂಗಕ್ಕಾರ ಮೈದಾನದ ಮೂಲೆ ಮೂಲೆಗೂ ಸಿಕ್ಸ್​-ಫೋರ್​ಗಳನ್ನಟ್ಟಿದ್ದಾರೆ.

ಈ ಮೂಲಕ ಕೇವಲ 117 ಎಸೆತಗಳಲ್ಲಿ 16 ಫೋರ್ ಹಾಗೂ 11 ಭರ್ಜರಿ ಸಿಕ್ಸರ್​ಗಳೊಂದಿಗೆ ಕುಮಾರ್ ಸಂಗಕ್ಕಾರ ಅಜೇಯ 168 ರನ್ ಬಾರಿಸಿದ್ದಾರೆ. ಅಂದರೆ ಸಂಗಕ್ಕಾರ ಸಿಕ್ಸ್​-ಫೋರ್​ಗಳ ಮೂಲಕವೇ ಬರೋಬ್ಬರಿ 130 ರನ್ ಚಚ್ಚಿದ್ದರು.

ಬ್ಯಾಟಿಂಗ್ ಮಾತ್ರವಲ್ಲದೆ ಬೌಲಿಂಗ್‌ನಲ್ಲೂ ಕೈಚಳಕ ತೋರಿದ ಸಂಗಕ್ಕಾರ, ತಮ್ಮ ರೈಟ್-ಆರ್ಮ್ ಆಫ್-ಸ್ಪಿನ್ ಮೂಲಕ 2 ಪ್ರಮುಖ ವಿಕೆಟ್‌ಗಳನ್ನು ಸಹ ಕಬಳಿಸಿದ್ದಾರೆ.

ಗೆದ್ದು ಬೀಗಿದ ಶಿಲ್ಲಿಂಗ್‌ಸ್ಟೋನ್:

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶಿಲ್ಲಿಂಗ್‌ಸ್ಟೋನ್ ಕ್ರಿಕೆಟ್ ಕ್ಲಬ್ ಕುಮಾರ್ ಸಂಗಕ್ಕಾರ (168) ಅವರ ಭರ್ಜರಿ ಶತಕದ ನೆರವಿನೊಂದಿಗೆ ನಿಗದಿತ 45 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 289 ರನ್ ಕಲೆಹಾಕಿತು.

ಇದನ್ನೂ ಓದಿ: 12 ಕೋಟಿ ರೂ. ಮೈನಸ್… ಡೆಲ್ಲಿ ಕ್ಯಾಪಿಟಲ್ಸ್​ಗೆ ರಿಷಭ್ ರಿಎಂಟ್ರಿ!

290 ರನ್​ಗಳ ಕಠಿಣ ಗುರಿ ಬೆನ್ನತ್ತಿದ ಬ್ರಾಡ್‌ಸ್ಟೋನ್ ಕ್ರಿಕೆಟ್ ಕ್ಲಬ್ ಪರ ಸೈಮನ್ ಲೀಡ್​ಬೀಟರ್ (53) ಅರ್ಧಶತಕ ಬಾರಿಸಿದರೂ, ಉಳಿದ ಬ್ಯಾಟರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ ಬ್ರಾಡ್‌ಸ್ಟೋನ್ ಕ್ರಿಕೆಟ್ ಕ್ಲಬ್ 45 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 196 ರನ್​ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಶಿಲ್ಲಿಂಗ್‌ಸ್ಟೋನ್ ಕ್ರಿಕೆಟ್ ಕ್ಲಬ್ ತಂಡವು 93 ರನ್​ಗಳ ಭರ್ಜರಿ ಜಯ ಸಾಧಿಸಿದೆ.

Follow Us
ಮೈಸೂರಿನಲ್ಲಿ ರಾಜೇಂದ್ರ ಕಲಾ ಮಂದಿರದಲ್ಲಿ TV9 ಎಕ್ಸ್ ಪೋ
ಮೈಸೂರಿನಲ್ಲಿ ರಾಜೇಂದ್ರ ಕಲಾ ಮಂದಿರದಲ್ಲಿ TV9 ಎಕ್ಸ್ ಪೋ
ಮಹಿಳಾ PSI ವರ್ಗಾವಣೆ ಆಗಿದ್ದಕ್ಕೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು!
ಮಹಿಳಾ PSI ವರ್ಗಾವಣೆ ಆಗಿದ್ದಕ್ಕೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು!
ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ
ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ
‘ಹಳ್ಳಿ ಪವರ್ ರಿಯಾಲಿಟಿ ಶೋ’: ವಾಡೆ ಮನೆಗೆ ಗ್ರಹಪ್ರವೇಶ ಮಾಡಿದ ಸ್ಪರ್ಧಿಗಳು
‘ಹಳ್ಳಿ ಪವರ್ ರಿಯಾಲಿಟಿ ಶೋ’: ವಾಡೆ ಮನೆಗೆ ಗ್ರಹಪ್ರವೇಶ ಮಾಡಿದ ಸ್ಪರ್ಧಿಗಳು
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಶುಭ ದಿನ
ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಶುಭ ದಿನ
ಬಾಗಲಕೋಟೆಯಲ್ಲಿ ಅಜಾನ್ ವಿವಾದ: ಸಿಡಿದೆದ್ದ ಬಿಜೆಪಿ, ಹಿಂದೂ ಸಂಘಟನೆಗಳು
ಬಾಗಲಕೋಟೆಯಲ್ಲಿ ಅಜಾನ್ ವಿವಾದ: ಸಿಡಿದೆದ್ದ ಬಿಜೆಪಿ, ಹಿಂದೂ ಸಂಘಟನೆಗಳು
ಭಾರತ-ಬಾಂಗ್ಲಾ ಗಡಿ ಭದ್ರಪಡಿಸದೆ ಬಂಗಾಳ ಭದ್ರವಾಗಲು ಸಾಧ್ಯವಿಲ್ಲ; ಅಮಿತ್ ಶಾ
ಭಾರತ-ಬಾಂಗ್ಲಾ ಗಡಿ ಭದ್ರಪಡಿಸದೆ ಬಂಗಾಳ ಭದ್ರವಾಗಲು ಸಾಧ್ಯವಿಲ್ಲ; ಅಮಿತ್ ಶಾ
ಮಠದಲ್ಲೇ ಅಪ್ರಾಪ್ತೆ ಮೇಲೆರಗಿ ಅಟ್ಟಹಾಸ: ಸ್ವಾಮೀಜಿ ಅರೆಸ್ಟ್
ಮಠದಲ್ಲೇ ಅಪ್ರಾಪ್ತೆ ಮೇಲೆರಗಿ ಅಟ್ಟಹಾಸ: ಸ್ವಾಮೀಜಿ ಅರೆಸ್ಟ್