LLC 2024: ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯ ವೇಳಾಪಟ್ಟಿ

|

Updated on: Sep 19, 2024 | 10:57 AM

Legends League Cricket 2024: ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯ ಆರು ತಂಡಗಳನ್ನು ಸುರೇಶ್ ರೈನಾ, ಹರ್ಭಜನ್ ಸಿಂಗ್, ಇಯಾನ್ ಬೆಲ್, ಇರ್ಫಾನ್ ಪಠಾಣ್, ಶಿಖರ್ ಧವನ್ ಹಾಗೂ ದಿನೇಶ್ ಕಾರ್ತಿಕ್ ಮುನ್ನಡೆಸಲಿದ್ದಾರೆ. ಅಲ್ಲದೆ ಈ ಟೂರ್ನಿಯಲ್ಲಿ ಭಾಗವಹಿಸಲಿರುವ ಆಟಗಾರರ ಪಟ್ಟಿ ಈ ಕೆಳಗಿನಂತಿದೆ...

LLC 2024: ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯ ವೇಳಾಪಟ್ಟಿ
Legends League Cricket
Follow us on

ಬಹುನಿರೀಕ್ಷಿತ ಲೆಜೆಂಡ್ಸ್ ಲೀಗ್ ಕ್ರಿಕೆಟ್​ ಟೂರ್ನಿಯ ಮೂರನೇ ಆವೃತ್ತಿಗೆ ವೇದಿಕೆ ಸಿದ್ಧವಾಗಿದೆ. ನಾಳೆಯಿಂದ (ಸೆ.20) ಶುರುವಾಗಲಿರುವ ಈ ಟೂರ್ನಿಯಲ್ಲಿ ಒಟ್ಟು 6 ತಂಡಗಳು ಕಣಕ್ಕಿಳಿಯಲಿವೆ. ಈ ಆರು ತಂಡಗಳಲ್ಲಿ ಮಾಜಿ ಆಟಗಾರರು ಕಾಣಿಸಿಕೊಳ್ಳಲಿರುವುದು ವಿಶೇಷ. ಅಂದರೆ ಲೆಜೆಂಡ್ಸ್ ಲೀಗ್ ಎಂಬುದು ಮಾಜಿ ಆಟಗಾರರ ನಡುವಣ ಕ್ರಿಕೆಟ್​ ಟೂರ್ನಿ. ಈ ಬಾರಿ ಈ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರರಾದ ಶಿಖರ್ ಧವನ್ ಹಾಗೂ ದಿನೇಶ್ ಕಾರ್ತಿಕ್ ಕೂಡ ಕಣಕ್ಕಿಳಿಯಲಿದ್ದಾರೆ. ಈ ಇಬ್ಬರು ಆಟಗಾರರು ಕಳೆದ ಐಪಿಎಲ್​ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಐಪಿಎಲ್​ಗೆ ಗುಡ್ ಬೈ ಹೇಳುವ ಮೂಲಕ ಲೆಜೆಂಡ್ಸ್ ಲೀಗ್​ನತ್ತ ಮುಖ ಮಾಡಿದ್ದಾರೆ.

ಅಕ್ಟೋಬರ್ 16 ರವರೆಗೆ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು 25 ಪಂದ್ಯಗಳನ್ನಾಡಲಾಗುತ್ತದೆ.  ಈ ಪಂದ್ಯಗಳು ಜಮ್ಮು, ಶ್ರೀನಗರ, ಜೋಧಪುರ ಮತ್ತು ಸೂರತ್​ನಲ್ಲಿ ಜರುಗಲಿದೆ. ಈ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ…

ದಿನ ಮತ್ತು ದಿನಾಂಕ ತಂಡಗಳು ಸ್ಥಳ ಸಮಯ (IST)
ಶುಕ್ರವಾರ, ಸೆಪ್ಟೆಂಬರ್ 20 ಕೋನಾರ್ಕ್ ಸೂರ್ಯ ಒಡಿಶಾ vs ಮಣಿಪಾಲ್ ಟೈಗರ್ಸ್ ಬರ್ಕತುಲ್ಲಾ ಖಾನ್ ಕ್ರೀಡಾಂಗಣ, ಜೋಧಪುರ 7:00 PM
ಶನಿವಾರ, ಸೆಪ್ಟೆಂಬರ್ 21 ಇಂಡಿಯಾ ಕ್ಯಾಪಿಟಲ್ಸ್ vs ಟೊಯಮ್ ಹೈದರಾಬಾದ್ ಬರ್ಕತುಲ್ಲಾ ಖಾನ್ ಕ್ರೀಡಾಂಗಣ, ಜೋಧಪುರ 3:00 PM
ಭಾನುವಾರ, ಸೆಪ್ಟೆಂಬರ್ 22 ಟೊಯಮ್ ಹೈದರಾಬಾದ್ vs ಗುಜರಾತ್ ಗ್ರೇಟ್ಸ್ ಬರ್ಕತುಲ್ಲಾ ಖಾನ್ ಕ್ರೀಡಾಂಗಣ, ಜೋಧಪುರ 3:00 PM
ಸೋಮವಾರ, ಸೆಪ್ಟೆಂಬರ್ 23 ಸದರ್ನ್ ಸೂಪರ್ ಸ್ಟಾರ್ಸ್ vs ಗುಜರಾತ್ ಗ್ರೇಟ್ಸ್ ಬರ್ಕತುಲ್ಲಾ ಖಾನ್ ಕ್ರೀಡಾಂಗಣ, ಜೋಧಪುರ 7:00 PM
ಬುಧವಾರ, ಸೆಪ್ಟೆಂಬರ್ 25 ಇಂಡಿಯಾ ಕ್ಯಾಪಿಟಲ್ಸ್ vs ಸದರ್ನ್ ಸೂಪರ್ ಸ್ಟಾರ್ಸ್ ಬರ್ಕತುಲ್ಲಾ ಖಾನ್ ಕ್ರೀಡಾಂಗಣ, ಜೋಧಪುರ 7:00 PM
ಗುರುವಾರ, ಸೆಪ್ಟೆಂಬರ್ 26 ಸದರ್ನ್ ಸೂಪರ್ ಸ್ಟಾರ್ಸ್ vs ಗುಜರಾತ್ ಗ್ರೇಟ್ಸ್ ಬರ್ಕತುಲ್ಲಾ ಖಾನ್ ಕ್ರೀಡಾಂಗಣ, ಜೋಧಪುರ 7:00 PM
ಶುಕ್ರವಾರ, ಸೆಪ್ಟೆಂಬರ್ 27 ಕೋನಾರ್ಕ್ ಸೂರ್ಯ ಒಡಿಶಾ vs ಮಣಿಪಾಲ್ ಟೈಗರ್ಸ್ ಲಾಲಾಭಾಯಿ ಕಾಂಟ್ರಾಕ್ಟರ್ ಕ್ರೀಡಾಂಗಣ, ಸೂರತ್ 7:00 PM
ಶನಿವಾರ, ಸೆಪ್ಟೆಂಬರ್ 28 ಟೊಯಮ್ ಹೈದರಾಬಾದ್ vs ಗುಜರಾತ್ ಗ್ರೇಟ್ಸ್ ಲಾಲಾಭಾಯಿ ಕಾಂಟ್ರಾಕ್ಟರ್ ಕ್ರೀಡಾಂಗಣ, ಸೂರತ್ 3:00 PM
ಭಾನುವಾರ, ಸೆಪ್ಟೆಂಬರ್ 29 ಇಂಡಿಯಾ ಕ್ಯಾಪಿಟಲ್ಸ್ vs ಕೊನಾರ್ಕ್ ಸೂರ್ಯ ಒಡಿಶಾ ಲಾಲಾಭಾಯಿ ಕಾಂಟ್ರಾಕ್ಟರ್ ಕ್ರೀಡಾಂಗಣ, ಸೂರತ್ 7:00 PM
ಸೋಮವಾರ, ಸೆಪ್ಟೆಂಬರ್ 30 ಇಂಡಿಯಾ ಕ್ಯಾಪಿಟಲ್ಸ್ vs ಮಣಿಪಾಲ್ ಟೈಗರ್ಸ್ ಲಾಲಾಭಾಯಿ ಕಾಂಟ್ರಾಕ್ಟರ್ ಕ್ರೀಡಾಂಗಣ, ಸೂರತ್ 7:00 PM
ಮಂಗಳವಾರ, ಅಕ್ಟೋಬರ್ 1 ಮಣಿಪಾಲ್ ಟೈಗರ್ಸ್ vs ಸದರ್ನ್ ಸೂಪರ್ ಸ್ಟಾರ್ಸ್ ಲಾಲಾಭಾಯಿ ಕಾಂಟ್ರಾಕ್ಟರ್ ಕ್ರೀಡಾಂಗಣ, ಸೂರತ್ 7:00 PM
ಬುಧವಾರ, ಅಕ್ಟೋಬರ್ 2 ಕೋನಾರ್ಕ್ ಸೂರ್ಯಸ್ ಒಡಿಶಾ vs ಸದರ್ನ್ ಸೂಪರ್ ಸ್ಟಾರ್ಸ್ ಲಾಲಾಭಾಯಿ ಕಾಂಟ್ರಾಕ್ಟರ್ ಕ್ರೀಡಾಂಗಣ, ಸೂರತ್ 7:00 PM
ಗುರುವಾರ, ಅಕ್ಟೋಬರ್ 3 ಮಣಿಪಾಲ್ ಟೈಗರ್ಸ್ vs ಟೊಯಮ್ ಹೈದರಾಬಾದ್ ಮೌಲನಾ ಆಜಾದ್ ಸ್ಟೇಡಿಯಂ, ಜಮ್ಮು 7:00 PM
ಶುಕ್ರವಾರ, ಅಕ್ಟೋಬರ್ 4 ಇಂಡಿಯಾ ಕ್ಯಾಪಿಟಲ್ಸ್ vs ಕೊನಾರ್ಕ್ ಸೂರ್ಯ ಒಡಿಶಾ ಮೌಲನಾ ಆಜಾದ್ ಸ್ಟೇಡಿಯಂ, ಜಮ್ಮು 3:00 PM
ಶನಿವಾರ, ಅಕ್ಟೋಬರ್ 5 ಮಣಿಪಾಲ್ ಟೈಗರ್ಸ್ vs ಗುಜರಾತ್ ಗ್ರೇಟ್ಸ್ ಮೌಲನಾ ಆಜಾದ್ ಸ್ಟೇಡಿಯಂ, ಜಮ್ಮು 3:00 PM
ಶನಿವಾರ, ಅಕ್ಟೋಬರ್ 5 ಟೊಯಮ್ ಹೈದರಾಬಾದ್ vs ಸದರ್ನ್ ಸೂಪರ್ ಸ್ಟಾರ್ಸ್ ಮೌಲನಾ ಆಜಾದ್ ಸ್ಟೇಡಿಯಂ, ಜಮ್ಮು 7:00 PM
ಭಾನುವಾರ, ಅಕ್ಟೋಬರ್ 6 ಕೊನಾರ್ಕ್ ಸೂರ್ಯಸ್ ಒಡಿಶಾ vs ಟೊಯಮ್ ಹೈದರಾಬಾದ್ ಮೌಲನಾ ಆಜಾದ್ ಸ್ಟೇಡಿಯಂ, ಜಮ್ಮು 7:00 PM
ಸೋಮವಾರ, ಅಕ್ಟೋಬರ್ 7 ಇಂಡಿಯಾ ಕ್ಯಾಪಿಟಲ್ಸ್ vs ಗುಜರಾತ್ ಗ್ರೇಟ್ಸ್ ಮೌಲನಾ ಆಜಾದ್ ಸ್ಟೇಡಿಯಂ, ಜಮ್ಮು 7:00 PM
ಬುಧವಾರ, ಅಕ್ಟೋಬರ್ 9 ಟೊಯಮ್ ಹೈದರಾಬಾದ್ vs ಸದರ್ನ್ ಸೂಪರ್ ಸ್ಟಾರ್ಸ್ ಬಕ್ಷಿ ಕ್ರೀಡಾಂಗಣ, ಶ್ರೀನಗರ 3:00 PM
ಗುರುವಾರ, ಅಕ್ಟೋಬರ್ 10 ಇಂಡಿಯಾ ಕ್ಯಾಪಿಟಲ್ಸ್ vs ಮಣಿಪಾಲ್ ಟೈಗರ್ಸ್ ಬಕ್ಷಿ ಕ್ರೀಡಾಂಗಣ, ಶ್ರೀನಗರ 7:00 PM
ಶುಕ್ರವಾರ, ಅಕ್ಟೋಬರ್ 11 ಕೊನಾರ್ಕ್ ಸೂರ್ಯಸ್ ಒಡಿಶಾ vs ಗುಜರಾತ್ ಗ್ರೇಟ್ಸ್ ಬಕ್ಷಿ ಕ್ರೀಡಾಂಗಣ, ಶ್ರೀನಗರ 7:00 PM
ಶನಿವಾರ, ಅಕ್ಟೋಬರ್ 12 ಕ್ವಾಲಿಫೈಯರ್ ಬಕ್ಷಿ ಕ್ರೀಡಾಂಗಣ, ಶ್ರೀನಗರ 3:00 PM
ಭಾನುವಾರ, ಅಕ್ಟೋಬರ್ 13 ಎಲಿಮಿನೇಟರ್ ಬಕ್ಷಿ ಕ್ರೀಡಾಂಗಣ, ಶ್ರೀನಗರ 3:00 PM
ಸೋಮವಾರ, ಅಕ್ಟೋಬರ್ 14 ಸೆಮಿಫೈನಲ್ ಬಕ್ಷಿ ಕ್ರೀಡಾಂಗಣ, ಶ್ರೀನಗರ 7:00 PM
ಬುಧವಾರ, ಅಕ್ಟೋಬರ್ 16 ಲೆಜೆಂಡ್ಸ್ ಲೀಗ್ ಕ್ರಿಕೆಟ್ 2024 ಫೈನಲ್ ಬಕ್ಷಿ ಕ್ರೀಡಾಂಗಣ, ಶ್ರೀನಗರ 7:00 PM

ಲೆಜೆಂಡ್ಸ್ ಲೀಗ್​ನ 6 ತಂಡಗಳು:

ಮಣಿಪಾಲ್ ಟೈಗರ್ಸ್ ತಂಡ: ಹರ್ಭಜನ್ ಸಿಂಗ್ (ನಾಯಕ), ರಾಬಿನ್ ಉತ್ತಪ್ಪ, ತಿಸಾರ ಪೆರೆರಾ, ಶೆಲ್ಡನ್ ಕಾಟ್ರೆಲ್, ಡೇನಿಯಲ್ ಕ್ರಿಶ್ಚಿಯನ್, ಏಂಜೆಲೊ ಪೆರೆರಾ, ಮನೋಜ್ ತಿವಾರಿ, ಅಸೆಲಾ ಗುಣರತ್ನೆ, ಸೊಲೊಮನ್ ಮಿರೆ, ಅನುರೀತ್ ಸಿಂಗ್, ಅಬು ನೆಚಿಮ್, ಅಮಿತ್ ವರ್ಮಾ, ಇಮ್ರಾನ್ ಖಾನ್, ರಾಹುಲ್ ಶುಕ್ಲಾ, ಅಮಿತೋಜ್ ಸಿಂಗ್, ಪ್ರವೀಣ್ ಗುಪ್ತಾ, ಸೌರಭ್ ಗುಪ್ತಾ.

ಇಂಡಿಯಾ ಕ್ಯಾಪಿಟಲ್ಸ್ ತಂಡ: ಇಯಾನ್ ಬೆಲ್ (ನಾಯಕ), ಮುರಳಿ ವಿಜಯ್, ಧವಲ್ ಕುಲಕರ್ಣಿ, ಆಶ್ಲೇ ನರ್ಸ್, ಬೆನ್ ಡಂಕ್, ಡ್ವೇನ್ ಸ್ಮಿತ್, ಕಾಲಿನ್ ಡಿ ಒರಂಡ್​ಹೋಮ್, ನಮನ್ ಓಜಾ, ಕ್ರಿಸ್ ಎಂಪೋಫು, ಫೈಜ್ ಫಜಲ್, ಇಕ್ಬಾಲ್ ಅಬ್ದುಲ್ಲಾ, ಕಿರ್ಕ್ ಎಡ್ವರ್ಡ್ಸ್, ರಾಹುಲ್ ಶರ್ಮಾ, ಪಂಕಜ್ ಸಿಂಗ್, ಜ್ಞಾನೇಶ್ವರ ರಾವ್, ಭರತ್ ಚಿಪ್ಲಿ, ಪರ್ವಿಂದರ್ ಅವಾನಾ, ಪವನ್ ಸುಯಲ್, ಮುರಳಿ ಸುಯಲ್.

ಟೊಯಮ್ ಹೈದರಾಬಾದ್ ತಂಡ: ಸುರೇಶ್ ರೈನಾ (ನಾಯಕ), ಗುರುಕೀರತ್ ಸಿಂಗ್, ಮತ್ತು ಪೀಟರ್ ಟ್ರೆಗೊ, ಸಮೀವುಲ್ಲಾ ಶಿನ್ವಾರಿ, ಜಾರ್ಜ್ ವರ್ಕರ್, ಇಸುರು ಉದಾನ, ರಿಕ್ಕಿ ಕ್ಲಾರ್ಕ್, ಸ್ಟುವರ್ಟ್ ಬಿನ್ನಿ, ಜಸ್ಕರನ್ ಮಲ್ಹೋತ್ರಾ, ಚಾಡ್ವಿಕ್ ವಾಲ್ಟನ್, ಬಿಪುಲ್ ಶರ್ಮಾ, ನುವಾನ್ ಪ್ರದೀಪ್, ಯೋಗೇಶ್ ನಗಾರ.

ಸದರ್ನ್ ಸೂಪರ್‌ಸ್ಟಾರ್ಸ್ ತಂಡ: ದಿನೇಶ್ ಕಾರ್ತಿಕ್ (ನಾಯಕ), ಎಲ್ಟನ್ ಚಿಗುಂಬುರಾ, ಹ್ಯಾಮಿಲ್ಟನ್ ಮಸಕಡ್ಜಾ, ಪವನ್ ನೇಗಿ, ಜೀವನ್ ಮೆಂಡಿಸ್, ಸುರಂಗ ಲಕ್ಮಲ್, ಶ್ರೀವತ್ಸ್ ಗೋಸ್ವಾಮಿ, ಹಮೀದ್ ಹಾಸನ್, ನಾಥನ್ ಕೌಲ್ಟರ್ ನೈಲ್, ಚಿರಾಗ್ ಗಾಂಧಿ, ಸುಬೋತ್ ಭಾಟಿ, ರಾಬಿನ್ ಬಿಸ್ಟ್, ಜೆಸಲ್ ಕರಿ, ಚತುರಂಗ ಡಿ ಸಿಲ್ವಾ, ಮೋನು ಕುಮಾರ್.

ಗುಜರಾತ್ ಗ್ರೇಟ್ಸ್ ತಂಡ: ಶಿಖರ್ ಧವನ್ (ನಾಯಕ), ಮೊಹಮ್ಮದ್ ಕೈಫ್, ಕ್ರಿಸ್ ಗೇಲ್, ಲಿಯಾಮ್ ಪ್ಲಂಕೆಟ್, ಮೊರ್ನೆ ವ್ಯಾನ್ ವೈಕ್, ಲೆಂಡ್ಲ್ ಸಿಮನ್ಸ್, ಅಸೋಹರ್ ಅಫೊಹಾನ್, ಜೆರೋಮ್ ಟೇಲರ್, ಪರಾಸ್ ಖಡಾ, ಸೀಕ್ಕುಗೆ ಪ್ರಸನ್ನ, ಕಮೌ ಲೆವರ್‌ರಾಕ್, ಸೈಬ್ರಾಂಡ್ ಎನೊಯೆಲ್‌ಬ್ರೆಕ್ಟ್, ಶಾನನ್ ಗೇಬ್ರಿಯಲ್, ಸಮರ್ ಕ್ವಾದ್ರಿ, ಶ್ರೀಶಾಂತ್.

ಇದನ್ನೂ ಓದಿ:  ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದ ಮೊಹಮ್ಮದ್ ನಬಿ

ಕೊನಾರ್ಕ್ ಸೂರ್ಯಸ್ ಒಡಿಶಾ ತಂಡ: ಇರ್ಫಾನ್ ಪಠಾಣ್ (ನಾಯಕ), ಯೂಸುಫ್ ಪಠಾಣ್, ಕೆವಿನ್ ಓ ಬ್ರಿಯಾನ್, ರಾಸ್ ಟೇಲರ್, ವಿನಯ್ ಕುಮಾರ್, ರಿಚರ್ಡ್ ಲೆವಿ, ದಿಲ್ಶನ್ ಮುನವೀರ, ಶಹಬಾಜ್ ನದೀಮ್, ಫಿಡೆಲ್ ಎಡ್ವರ್ಡ್ಸ್, ಬೆನ್ ಲಾಫ್ಲಿನ್, ರಾಜೇಶ್ ಬಿಷ್ಣೋಯ್, ಪ್ರವೀಣ್ ತಾಂಬೆ, ದಿವೇಶ್ ಪಠಾನಿಯಾ, ಕೆಪಿ ಅಪ್ಪಣ್ಣ, ಅಂಬಾಟಿ ರಾಯುಡು.