T20 World Cup 2021: ಟಿ20 ವಿಶ್ವಕಪ್​ನ​ ಬಿಗ್ಗೆಸ್ಟ್ ಸಿಕ್ಸ್​ ಸಿಡಿಸಿದ ಲಿವಿಂಗ್​ಸ್ಟೋನ್

| Updated By: ಝಾಹಿರ್ ಯೂಸುಫ್

Updated on: Nov 07, 2021 | 4:55 PM

ಟಿ20 ವಿಶ್ವಕಪ್‌ನಲ್ಲಿ (T20 World Cup 2021) ಇಂಗ್ಲೆಂಡ್‌ನ ‘ಸಿಕ್ಸರ್ ಕಿಂಗ್’ ಲಿಯಾಮ್ ಲಿವಿಂಗ್‌ಸ್ಟೋನ್ ಭರ್ಜರಿ ಸಿಕ್ಸ್​ ಸಿಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಶನಿವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ (ENG vs SA T20 ವಿಶ್ವಕಪ್) ಲಿವಿಂಗ್‌ಸ್ಟೋನ್ 112 ಮೀಟರ್ ಉದ್ದದ ಸಿಕ್ಸರ್ ಸಿಡಿಸಿದರು. ಅದು ಕೂಡ ವೇಗಿ ಕಗಿಸೊ ರಬಾಡ ಎಸೆತದಲ್ಲಿ ಎಂಬುದು ವಿಶೇಷ. ರಬಾಡ ಎಸೆದ 16ನೇ ಓವರ್​ನ ಮೊದಲ ಎಸೆತವನ್ನು ಡೀಪ್ ಮಿಡ್‌ವಿಕೆಟ್​ನತ್ತ ಭರ್ಜರಿಯಾಗಿ ಹೊಡೆದರು. ಚೆಂಡು ನೇರವಾಗಿ ಸ್ಟೇಡಿಯಂ […]

T20 World Cup 2021: ಟಿ20 ವಿಶ್ವಕಪ್​ನ​ ಬಿಗ್ಗೆಸ್ಟ್ ಸಿಕ್ಸ್​ ಸಿಡಿಸಿದ ಲಿವಿಂಗ್​ಸ್ಟೋನ್
Liam Livingstone
Follow us on

ಟಿ20 ವಿಶ್ವಕಪ್‌ನಲ್ಲಿ (T20 World Cup 2021) ಇಂಗ್ಲೆಂಡ್‌ನ ‘ಸಿಕ್ಸರ್ ಕಿಂಗ್’ ಲಿಯಾಮ್ ಲಿವಿಂಗ್‌ಸ್ಟೋನ್ ಭರ್ಜರಿ ಸಿಕ್ಸ್​ ಸಿಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಶನಿವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ (ENG vs SA T20 ವಿಶ್ವಕಪ್) ಲಿವಿಂಗ್‌ಸ್ಟೋನ್ 112 ಮೀಟರ್ ಉದ್ದದ ಸಿಕ್ಸರ್ ಸಿಡಿಸಿದರು. ಅದು ಕೂಡ ವೇಗಿ ಕಗಿಸೊ ರಬಾಡ ಎಸೆತದಲ್ಲಿ ಎಂಬುದು ವಿಶೇಷ.

ರಬಾಡ ಎಸೆದ 16ನೇ ಓವರ್​ನ ಮೊದಲ ಎಸೆತವನ್ನು ಡೀಪ್ ಮಿಡ್‌ವಿಕೆಟ್​ನತ್ತ ಭರ್ಜರಿಯಾಗಿ ಹೊಡೆದರು. ಚೆಂಡು ನೇರವಾಗಿ ಸ್ಟೇಡಿಯಂ ರೂಫ್ ಮೇಲೆ ಹೋಗಿ ಬಿತ್ತು. ಇದರೊಂದಿಗೆ ಟಿ20 ವಿಶ್ವಕಪ್​ 2021 ರಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಬ್ಯಾಟರುಗಳ ಪಟ್ಟಿಯಲ್ಲಿ ಲಿವಿಂಗ್​ಸ್ಟೋನ್ ಅಗ್ರಸ್ಥಾನಕ್ಕೇರಿದರು.

ಇದಕ್ಕೂ ಮುನ್ನ ಆಸ್ಟ್ರೇಲಿಯಾ ವಿರುದ್ದ 111 ಮೀಟರ್ ಉದ್ದದ ಸಿಕ್ಸರ್​ ಸಿಡಿಸಿದ ವೆಸ್ಟ್ ಇಂಡೀಸ್ ಆಂಡ್ರೆ ರಸೆಲ್ ಈ ಬಾರಿ ಭರ್ಜರಿ ಸಿಕ್ಸ್ ಬಾರಿಸಿದ ಬ್ಯಾಟರುಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರು. ಇದೀಗ 112 ಮೀಟರ್ ಉದ್ದರ ಸಿಕ್ಸ್ ಬಾರಿಸುವ ಮೂಲಕ ಲಿಯಾಮ್ ಲಿವಿಂಗ್​ಸ್ಟೋನ್ ಈ ಬಾರಿಯ ಅತೀ ದೂರದ ಸಿಕ್ಸ್​ ಸಿಡಿಸಿದ ಆಟಗಾರ ಎನಿಸಿಕೊಂಡರು.

ಲಿಯಾಮ್ ಲಿವಿಂಗ್‌ಸ್ಟೋನ್ ಸಿಡಿಸಿದ ಈ ಭರ್ಜರಿ ಸಿಕ್ಸ್​ನ ವಿಡಿಯೋವನ್ನು ಐಸಿಸಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ವಿಡಿಯೋ ಭಾರೀ ವೈರಲ್ ಆಗಿದೆ. ಅಷ್ಟೇ ಅಲ್ಲದೆ ಪವರ್​ಫುಲ್​ ಹಿಟ್​ ನೋಡಿ ಕ್ರಿಕೆಟ್ ಪ್ರೇಮಿಗಳು ಹುಬ್ಬೇರಿಸುತ್ತಿದ್ದಾರೆ.

ಇದನ್ನೂ ಓದಿ: ICC T20 Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಎಲ್ಲರನ್ನು ಹಿಂದಿಕ್ಕಿದ ಬಾಬರ್

ಇದನ್ನೂ ಓದಿ: IPL 2022: RCB ಈ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಬಹುದು..!

ಇದನ್ನೂ ಓದಿ: T20 World Cup 2021: ಸೆಹ್ವಾಗ್-ಗಂಭೀರ್ ದಾಖಲೆ ಮುರಿದ ಕೆಎಲ್ ರಾಹುಲ್-ರೋಹಿತ್ ಶರ್ಮಾ

(Liam Livingstone smashes biggest six of T20 World Cup 2021)