AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹ್ಯಾಟ್ರಿಕ್ ಸಿಕ್ಸ್! ಕನ್ನಡಿಗನ ಆರ್ಭಟಕ್ಕೆ ಥಂಡಾ ಹೊಡೆದ ಪಾಕ್ ಬೌಲರ್ಸ್​; ವಿಡಿಯೋ ನೋಡಿ

LLC 2023: ಉತ್ತಪ್ಪ, ಹಫೀಜ್ ವಿರುದ್ಧ 3 ಸಿಕ್ಸರ್ ಸಿಡಿಸಿದ್ದಲ್ಲದೆ, 3 ಬೌಂಡರಿಗಳನ್ನೂ ಬಾರಿಸಿದ್ದರು. ಈ ಮೂಲಕ ಇಂಡಿಯಾ ಮಹಾರಾಜಸ್ ತಂಡ ಕೇವಲ 6 ಎಸೆತಗಳಲ್ಲಿ 30 ರನ್ ಗಳಿಸಿತು.

ಹ್ಯಾಟ್ರಿಕ್ ಸಿಕ್ಸ್! ಕನ್ನಡಿಗನ ಆರ್ಭಟಕ್ಕೆ ಥಂಡಾ ಹೊಡೆದ ಪಾಕ್ ಬೌಲರ್ಸ್​; ವಿಡಿಯೋ ನೋಡಿ
ರಾಬಿನ್ ಉತ್ತಪ್ಪ
ಪೃಥ್ವಿಶಂಕರ
|

Updated on: Mar 15, 2023 | 12:09 PM

Share

ಐಪಿಎಲ್​ಗೆ (IPL) ವಿದಾಯ ಹೇಳಿದ ಬಳಿಕ ಇದೀಗ ಲೆಜೆಂಡ್ಸ್ ಲೀಗ್ ((Legends League Cricket)) ಆಡುತ್ತಿರುವ ಕನ್ನಡಿಗ ರಾಬಿನ್ ಉತ್ತಪ್ಪ ( Robin Uthappa) ತನ್ನ ಬಿರುಸಿನ ಬ್ಯಾಟಿಂಗ್ ಮೂಲಕ ಲೀಗ್​ನಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಮೊದಲೆರಡು ಪಂದ್ಯಗಳಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡದ ಉತ್ತಪ್ಪ, ಇದೀಗ ಮೂರನೇ ಪಂದ್ಯದಲ್ಲಿ ಅಬ್ಬರಿಸಿ ಬೊಬ್ಬಿರಿದ್ದಿದ್ದಾರೆ. ದೋಹಾದಲ್ಲಿ ನಡೆಯುತ್ತಿರುವ ಈ ಕ್ರಿಕೆಟ್ ಲೀಗ್‌ನಲ್ಲಿ ಮಾರ್ಚ್ 14 ರಂದು ಇಂಡಿಯಾ ಮಹಾರಾಜಸ್ ತಂಡ, ಏಷ್ಯಾ ಲಯನ್ಸ್ (Asia Lions vs India Maharaja ) ತಂಡವನ್ನು ಎದುರಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಏಷ್ಯಾ ಲಯನ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 157 ರನ್ ಗಳಿಸಿತು. ಪ್ರತ್ಯುತ್ತರವಾಗಿ 158 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಇಂಡಿಯಾ ಮಹಾರಾಜಸ್ ತಂಡ ಕೇವಲ 75 ಎಸೆತಗಳಲ್ಲಿ ಅಂದರೆ 12.3 ಓವರ್‌ಗಳಲ್ಲಿ ಜಯದ ನಗೆ ಬೀರಿತು. ತಂಡದ ಪರ ಅಬ್ಬರದ ಬ್ಯಾಟಿಂಗ್ ಮಾಡಿದ ಕನ್ನಡಿಗ ಉತ್ತಪ್ಪ ಎದುರಾಳಿ ಬೌಲರ್​ಗಳನ್ನು ಸರಿಯಾಗಿ ಬೆಂಡೆತ್ತಿದರು.

ಉತ್ತಪ್ಪ ಬ್ಯಾಕ್ ಟು ಬ್ಯಾಕ್ 3 ಸಿಕ್ಸರ್

ಆರಂಭದಿಂದಲೂ ಬಿರುಸಿನ ಬ್ಯಾಟಿಂಗ್​ಗೆ ಮುಂದಾದ ಉತ್ತಪ್ಪ ಎದುರಾಳಿ ಬೌಲರ್​ಗಳ ಮೇಲೆ ಸವಾರಿ ಮಾಡಿದರು. ಅದರಲ್ಲೂ ಪಾಕಿಸ್ತಾನ ತಂಡದ ಮಾಜಿ ಸ್ಪಿನ್ನರ್ ಮುಹಮ್ಮದ್ ಹಫೀಜ್ ಅವರ ಒಂದೇ ಓವರ್​ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಬಾರಿಸುವ ಮೂಲಕ ಅಭಿಮಾನಿಗಳು ಹುಚ್ಚೆದು ಕುಣಿಯುವಂತೆ ಮಾಡಿದರು. ರಾಬಿನ್ ಅಬ್ಬರಕ್ಕೆ ಸುಸ್ತಾದ ಹಫೀಜ್ ತಮ್ಮ 4 ಓವರ್​ಗಳ ಕೋಟಾದಲ್ಲಿ ಕೇವಲ 2 ಓವರ್‌ ಮಾತ್ರ ಬೌಲ್ ಮಾಡಿದರು. ಇದರಲ್ಲಿ 16.50 ರ ಎಕನಾಮಿಯಲ್ಲಿ 3 ಸಿಕ್ಸರ್ ಹಾಗೂ 3 ಬೌಂಡರಿ ಸೇರಿದಂತೆ 33 ರನ್‌ ನೀಡಿದರು. ಇದರಲ್ಲಿ ಕನ್ನಡಿಗ ರಾಬಿನ್ ಉತ್ತಪ್ಪ ಸಿಡಿಸಿದ ಬ್ಯಾಕ್ ಟು ಬ್ಯಾಕ್ 3 ಸಿಕ್ಸರ್​ಗಳ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

6 ಎಸೆತಗಳಲ್ಲಿ 3 ಸಿಕ್ಸರ್, 3 ಬೌಂಡರಿ, 30 ರನ್!

ಉತ್ತಪ್ಪ, ಹಫೀಜ್ ವಿರುದ್ಧ 3 ಸಿಕ್ಸರ್ ಸಿಡಿಸಿದ್ದಲ್ಲದೆ, 3 ಬೌಂಡರಿಗಳನ್ನೂ ಬಾರಿಸಿದ್ದರು. ಈ ಮೂಲಕ ಇಂಡಿಯಾ ಮಹಾರಾಜಸ್ ತಂಡ ಕೇವಲ 6 ಎಸೆತಗಳಲ್ಲಿ 30 ರನ್ ಗಳಿಸಿತು. ಈ ಪಂದ್ಯದಲ್ಲಿ ಉತ್ತಪ್ಪ ಒಟ್ಟು 5 ಸಿಕ್ಸರ್‌ಗಳನ್ನು ಸಿಡಿಸಿ 39 ಎಸೆತಗಳಲ್ಲಿ ಅಜೇಯ 88 ರನ್ ಗಳಿಸಿದರು.

20 ಓವರ್‌ಗಳ ಪಂದ್ಯ 75 ಎಸೆತಗಳಲ್ಲಿ ಮುಕ್ತಾಯ! ಗಂಭೀರ್- ಉತ್ತಪ್ಪ ಅಬ್ಬರಕ್ಕೆ ಸುಸ್ತಾದ ಏಷ್ಯಾ ಲಯನ್ಸ್

ಗಂಭೀರ್-ಉತ್ತಪ್ಪ ಅಬ್ಬರ

ಇಂಡಿಯಾ ಮಹಾರಾಜಸ್ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ಗೌತಮ್ ಗಂಭೀರ್ ಹಾಗೂ ಕನ್ನಡಿಗ ರಾಬಿನ್ ಉತ್ತಪ್ಪ ಆರಂಭದಿಂದಲೇ ಏಷ್ಯನ್ ಬೌಲರ್​ಗಳನ್ನು ದಂಡಿಸಲಾರಂಭಿಸಿದರು. ಈ ಇಬ್ಬರನ್ನು ಕಟ್ಟಿ ಹಾಕಲು 5 ಪಾಕಿಸ್ತಾನಿ ಬೌಲರ್​ಗಳು ಮತ್ತು ಇಬ್ಬರು ಶ್ರೀಲಂಕಾ ಬೌಲರ್​ಗಳು ಶತಪ್ರಯತ್ನ ಪಟ್ಟರೂ ಅದರಲ್ಲಿ ಯಶಸ್ವಿಯಾಗಲಿಲ್ಲ. ಹೀಗಾಗಿ ಇಂಡಿಯಾ ಮಹಾರಾಜಸ್ ತಂಡ 12.3 ಓವರ್‌ಗಳಲ್ಲಿ 158 ರನ್‌ಗಳ ಗುರಿಯನ್ನು ಸುಲಭವಾಗಿ ಬೆನ್ನಟ್ಟಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ