ಬಿಸಿಸಿಐ ಟಿ 20 ವಿಶ್ವಕಪ್‌ಗಾಗಿ ತಂಡವನ್ನು ಘೋಷಿಸಿದಾಗಿನಿಂದ, ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಂನಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದರು. ಅಭಿಮಾನಿಗಳ ಜೊತೆಯಲ್ಲಿ ಟೀಂ ಇಂಡಿಯಾದ ತಾರೆಯರು ಕೂಡ ಧೋನಿಗಾಗಿ ಕಾತರದಿಂದ ಕಾಯುತ್ತಿದ್ದರು. ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್, ಧೋನಿ ಮರಳುವಿಕೆಯೊಂದಿಗೆ ಟೀಂ ಇಂಡಿಯಾದಲ್ಲಿ ಹೊಸ ಶಾಂತಿಯ ಭಾವನೆ ಬಂದಿದೆ ಎಂದು ಹೇಳಿದರು.
2019 ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಸೆಮಿಫೈನಲ್ ಪಂದ್ಯದ ನಂತರ ಎಂಎಸ್ ಧೋನಿ ಯಾವುದೇ ಪಂದ್ಯವನ್ನು ಆಡಿಲ್ಲ. ಇದರ ನಂತರ ಎಂಎಸ್ ಧೋನಿ ಕಳೆದ ವರ್ಷ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಬಿಸಿಸಿಐ ಮಹೇಂದ್ರ ಸಿಂಗ್ ಧೋನಿಯನ್ನು ಟಿ 20 ವಿಶ್ವಕಪ್‌ಗೆ ಮಾರ್ಗದರ್ಶಕರಾಗಿ ತಂಡಕ್ಕೆ ಸೇರಿಸಿಕೊಂಡಿದೆ. ರವಿಶಾಸ್ತ್ರಿ ಮತ್ತು ನಾಯಕ ವಿರಾಟ್ ಕೊಹ್ಲಿ ಅವರ ಒಪ್ಪಿಗೆಯೊಂದಿಗೆ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ.
ಧೋನಿ ಗರಡಿಯಲ್ಲಿ ಟೀಂ ಇಂಡಿಯಾ
ಧೋನಿ ಆಗಮನವು ತಂಡದಲ್ಲಿ ಶಕ್ತಿಯನ್ನು ತುಂಬಿದೆ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದರು. ಇದರ ನಂತರ, ಈಗ ಕೆಎಲ್ ರಾಹುಲ್ ಕೂಡ ಈ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ. ಖಂಡಿತವಾಗಿಯೂ ಮಹೇಂದ್ರ ಸಿಂಗ್ ಧೋನಿ ತಂಡಕ್ಕೆ ಮರಳಿ ಬಂದಿರುವುದು ತುಂಬಾ ಸಂತೋಷವಾಗಿದೆ, ಏಕೆಂದರೆ ನಾವು ಅವರ ನಾಯಕತ್ವದಲ್ಲಿ ಆಡಿದ್ದೇವೆ. ಆತ ನಮ್ಮ ನಾಯಕನಾಗಿದ್ದಾಗಲೂ ನಾವು ಆತನನ್ನು ಮಾರ್ಗದರ್ಶಕರಾಗಿ ನೋಡುತ್ತಿದ್ದೆವು.
ಅವರು ಕ್ಯಾಪ್ಟನ್ ಆಗಿದ್ದಾಗ, ನಾವು ಅವರನ್ನು ಡ್ರೆಸ್ಸಿಂಗ್ ರೂಂನಲ್ಲಿ ಇರಿಸಲು ಇಷ್ಟಪಡುತ್ತಿದ್ದೆವು. ಅವರ ಉಪಸ್ಥಿತಿಯಿಂದ ಸೃಷ್ಟಿಯಾದ ಶಾಂತಿಯ ಭಾವನೆಯನ್ನು ನಾವು ಪ್ರೀತಿಸುತ್ತೇವೆ. ಅವರು ಇಲ್ಲಿರುವುದು ಅದ್ಭುತವಾಗಿದೆ. ಇದು ನಮಗೆ ಶಾಂತಿಯ ಭಾವವನ್ನು ನೀಡುತ್ತದೆ ಎಂದು ರಾಹುಲ್ ಹೇಳಿದರು. ಅವರೊಂದಿಗೆ ಮೊದಲ ಎರಡು ಮೂರು ದಿನಗಳನ್ನು ಕಳೆಯುವುದನ್ನು ನಾವು ಸಂಪೂರ್ಣವಾಗಿ ಆನಂದಿಸಿದೆವು. ನಾನು ಅವರಿಂದ ಕ್ರಿಕೆಟ್, ನಾಯಕತ್ವ ಮತ್ತು ಕ್ರಿಕೆಟ್‌ಗೆ ಸಂಬಂಧಿಸಿದ ಪ್ರತಿಯೊಂದು ಅಂಶಗಳ ಬಗ್ಗೆ ಕಲಿಯಲು ಬಯಸುತ್ತೇನೆ ಎಂದರು.
ಧೋನಿಯಂತೆ ಯಾರೂ ಇಲ್ಲ
ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಇತ್ತೀಚೆಗೆ ತಮ್ಮ ನಾಲ್ಕನೇ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು ಮತ್ತು ಅವರು 2022 ರಲ್ಲಿ ಚೆಪಾಕ್‌ನಲ್ಲಿ ತವರಿನ ಪ್ರೇಕ್ಷಕರ ಮುಂದೆ ಆಡಲು ಮರಳುವ ಸಾಧ್ಯತೆಯಿದೆ. ಐಪಿಎಲ್ 2021 ರ ಫೈನಲ್ ಅವರ ಕೊನೆಯ ಪಂದ್ಯವಾಗುತ್ತದೆಯೋ ಇಲ್ಲವೋ ಎಂಬುದು ನಮಗೆ ಯಾರಿಗೂ ತಿಳಿದಿಲ್ಲ. ಧೋನಿ ನಮ್ಮಲ್ಲಿ ಯಾರಿಗಾದರೂ ಕಠಿಣ ಸವಾಲನ್ನು ನೀಡಬಹುದು. ಅವರು ತುಂಬಾ ಶಕ್ತಿಶಾಲಿ ಮತ್ತು ಅವರಿಗೆ ವಿಕೆಟ್ ನಡುವಿನ ಓಟದಲ್ಲಿ ಯಾರು ಪೈಪೋಟಿ ನೀಡಲಾಗುವುದಿಲ್ಲ ಎಂದಿದ್ದಾರೆ.