ಶ್ರೀಲಂಕಾದಲ್ಲಿ ನಡೆಯುತ್ತಿರುವ ಲಂಕಾ ಪ್ರೀಮಿಯರ್ ಲೀಗ್ಗೆ (LPL 2023) ಹಾವಿನ ಕಾಟ ಮುಂದುವರೆದಿದೆ. ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಜಾಫ್ನಾ ಕಿಂಗ್ಸ್ ಹಾಗೂ ಬಿ-ಲವ್ ಕ್ಯಾಂಡಿ ನಡುವಣ ಪಂದ್ಯದ ವೇಳೆ ಹಾವೊಂದು ಮೈದಾನದಲ್ಲಿ ಕಾಣಿಸಿಕೊಂಡಿದೆ. ಆದರೆ ಇದರ ಅರಿವೆ ಇರದ ಬಿ-ಲವ್ ಕ್ಯಾಂಡಿ ವೇಗಿ ಇಸುರು ಉದಾನಾ ಫೀಲ್ಡಿಂಗ್ ಮಾಡುತ್ತಿದ್ದರು.
ಅಲ್ಲದೆ ಓವರ್ ಮುಕ್ತಾಯದ ಬಳಿಕ ತನ್ನ ಫೀಲ್ಡಿಂಗ್ ಸ್ಥಾನಕ್ಕೆ ಹಿಮ್ಮುಖವಾಗಿ ಹಿಂತಿರುಗಿದ್ದರು. ಈ ವೇಳೆ ಹಾವನ್ನು ಇಸುರು ಉದಾನ ಬೆಚ್ಚಿ ಬಿದ್ದಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Lucky escape for @IAmIsuru17 from the RPS snake #LPL2023 🐍🇱🇰🏏 pic.twitter.com/OnYokQxzvW
— Azzam Ameen (@AzzamAmeen) August 13, 2023
ಇನ್ನು ಇದೇ ಪಂದ್ಯದ ವೇಳೆ ಮತ್ತೊಂದು ಹಾವು ಬೌಂಡರಿ ಲೈನ್ ಆಚೆ ಕಾಣಿಸಿಕೊಂಡಿದ್ದು, ಇದಾಗ್ಯೂ ಪಂದ್ಯಕ್ಕೆ ಯಾವುದೇ ಅಡಚಣೆ ಉಂಟಾಗಿಲ್ಲ. ಸದ್ಯ ಲಂಕಾ ಪ್ರೀಮಿಯರ್ ಲೀಗ್ ಹಾವುಗಳ ಎಂಟ್ರಿಯೊಂದಿಗೆ ಸಖತ್ ಸುದ್ದಿಯಾಗುತ್ತಿರುವುದು ವಿಶೇಷ.
All these snakes showing up in anticipation of a Naagin dance celebration? 🐍 #LPL2023 #LPLOnFanCode pic.twitter.com/quKUACGr9u
— FanCode (@FanCode) August 13, 2023
ಇದಕ್ಕೂ ಮುನ್ನ ಆರ್. ಪ್ರೇಮದಾಸ ಮೈದಾನದಲ್ಲಿ ನಡೆದ ಗಾಲೆ ಟೈಟಾನ್ಸ್ ವಿರುದ್ಧ ಡಂಬುಲ್ಲಾ ಔರಾ ತಂಡಗಳ ನಡುವಿನ ಪಂದ್ಯದ ವೇಳೆಯೂ ಹಾವು ಕಾಣಿಸಿಕೊಂಡಿತ್ತು. ಇದರಿಂದ ಕೆಲ ಕಾಲ ಪಂದ್ಯವನ್ನು ಸ್ಥಗಿತಗೊಳಿಸಲಾಗಿತ್ತು.
ಆ ಬಳಿಕ ಮೈದಾನಕ್ಕೆ ಎಂಟ್ರಿ ಕೊಟ್ಟಿದ್ದ ನಾಲ್ಕನೇ ಅಂಪೈರ್ ಹಾವನ್ನು ಹೊರಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದರು. ಆ ನಂತರವಷ್ಟೇ ಪಂದ್ಯವನ್ನು ಮುಂದುವರೆಸಲಾಗಿತ್ತು. ಇದೀಗ ಇದೇ ಮೈದಾನದಲ್ಲಿ ಮತ್ತೊಮ್ಮೆ ಹಾವು ಕಾಣಿಸಿಕೊಂಡಿರುವುದು ವಿಶೇಷ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಿ-ಲವ್ ಕ್ಯಾಂಡಿ ಪರ ಆರಂಭಿಕ ಆಟಗಾರ ಮೊಹಮ್ಮದ್ ಹ್ಯಾರಿಸ್ 51 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 10 ಫೋರ್ಗಳೊಂದಿಗೆ 81 ರನ್ ಬಾರಿಸಿದ್ದರು. ಈ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಬಿ-ಲವ್ ಕ್ಯಾಂಡಿ ತಂಡವು ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 178 ರನ್ ಕಲೆಹಾಕಿತು.
179 ರನ್ಗಳ ಗುರಿ ಪಡೆದ ಜಾಫ್ನಾ ಕಿಂಗ್ಸ್ ಶೊಯೇಬ್ ಮಲಿಕ್ 37 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ ಅಜೇಯ 55 ರನ್ ಬಾರಿಸಿದರು. ಆದರೆ ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ ಜಾಫ್ನಾ ಕಿಂಗ್ಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 170 ರನ್ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಬಿ-ಲವ್ ಕ್ಯಾಂಡಿ ತಂಡ 8 ರನ್ಗಳ ರೋಚಕ ಜಯ ಸಾಧಿಸಿತು.