
ಐಪಿಎಲ್ 2024 ರ 26 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಲಕ್ನೋ ಸೂಪರ್‌ಜೈಂಟ್ಸ್ ಅನ್ನು 6 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಲೀಗ್ನಲ್ಲಿ ಎರಡನೇ ಜಯ ದಾಖಲಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ 167 ರನ್ ಕಲೆಹಾಕಿತು.ಉತ್ತರವಾಗಿ ಡೆಲ್ಲಿ 18.1 ಓವರ್‌ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು ಈ ಗುರಿಯನ್ನು ಸಾಧಿಸಿತು. ಡೆಲ್ಲಿಯ ಗೆಲುವಿನಲ್ಲಿ ಕುಲ್ದೀಪ್ ಯಾದವ್ ಬೌಲಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿದರೆ, ಬ್ಯಾಟಿಂಗ್ನಲ್ಲಿ ಫ್ರೇಸರ್ ಮೆಕ್‌ಗುರ್ಕ್ ಮತ್ತು ನಾಯಕ ರಿಷಬ್ ಪಂತ್ ಸ್ಫೋಟಕ ಇನ್ನಿಂಗ್ಸ್ ಆಡಿ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ನೆರವಾದರು. ಈ ಗೆಲುವಿನೊಂದಿಗೆ ಡೆಲ್ಲಿ ಕೊನೆಯ ಸ್ಥಾನದಿಂದ 9ನೇ ಸ್ಥಾನಕ್ಕೆ ಜಿಗಿದರೆ, 9ನೇ ಸ್ಥಾನದಲ್ಲಿದ್ದ ಆರ್ಸಿಬಿ 10ನೇ ಸ್ಥಾನಕ್ಕೆ ಅಂದರೆ ಕೊನೆಯ ಸ್ಥಾನಕ್ಕೆ ಕುಸಿದಿದೆ.
ಲಕ್ನೋ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಡೆಲ್ಲಿ ಈ ಸೀಸನ್ನ ಎರಡನೇ ಗೆಲುವು ದಾಖಲಿಸಿದೆ. ಇದಲ್ಲದೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ನಾಯಕ ರಿಷಬ್ ಪಂತ್ 41 ರನ್ ಬಾರಿಸಿ ಬಿಷ್ಣೋಯಿಗೆ ಬಲಿಯಾಗಿದ್ದಾರೆ. ಈಗ ತಂಡದ ಗೆಲುವಿಗೆ 27 ಎಸೆತಗಳಲ್ಲಿ 22 ರನ್‌ಗಳ ಅಗತ್ಯವಿದೆ.
55 ರನ್ ಗಳಿಸಿ ಜ್ಯಾಕ್ ಫ್ರೇಸರ್ ಮೆಕ್‌ಗುರ್ಕ್ ಪೆವಿಲಿಯನ್ಗೆ ಮರಳಿದರು. ಮೂರನೇ ವಿಕೆಟ್‌ಗೆ ಮೆಕ್‌ಗುರ್ಕ್ 77 ರನ್‌ಗಳ ಜೊತೆಯಾಟ ನೀಡಿದರು. ಸದ್ಯ ರಿಷಬ್ ಪಂತ್ ಮತ್ತು ಶಾಯ್ ಹೋಪ್ ಕ್ರೀಸ್‌ನಲ್ಲಿದ್ದಾರೆ. ತಂಡದ ಗೆಲುವಿಗೆ 28 ಎಸೆತಗಳಲ್ಲಿ 22 ರನ್‌ಗಳ ಅಗತ್ಯವಿದೆ.
ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟ್ಸ್‌ಮನ್‌ಗಳಾದ ರಿಷಬ್ ಪಂತ್ ಮತ್ತು ಜೇಕ್ ಫ್ರೇಸರ್-ಮೆಕ್‌ಗುರ್ಕ್ 50 ಕ್ಕೂ ಹೆಚ್ಚು ರನ್‌ಗಳ ಜೊತೆಯಾಟವನ್ನು ಮಾಡಿದ್ದಾರೆ. ಡೆಲ್ಲಿ ತಂಡ 13 ಓವರ್‌ಗಳಲ್ಲಿ 130 ರನ್ ಗಳಿಸಿ ಆಡುತ್ತಿದೆ.
11 ಓವರ್‌ಗಳ ಆಟ ಮುಗಿದಿದೆ. ಡೆಲ್ಲಿ ಪರ ರಿಷಬ್ ಪಂತ್ ಮತ್ತು ಜಾಕ್ ಫ್ರೇಸರ್ ಮೆಕ್‌ಗುರ್ಕ್ ನಡುವೆ ಉತ್ತಮ ಜೊತೆಯಾಟವು ಅರಳುತ್ತಿದೆ. ತಂಡದ ಸ್ಕೋರ್ 90/2.
ಆರಂಭಿಕ ಆಟಗಾರ ಪೃಥ್ವಿ ಶಾ ಅವರನ್ನು ಔಟ್ ಮಾಡುವ ಮೂಲಕ ಸ್ಪಿನ್ನರ್ ರವಿ ಬಿಷ್ಣೋಯ್ ಡೆಲ್ಲಿ ಕ್ಯಾಪಿಟಲ್ಸ್‌ಗೆ ಎರಡನೇ ಹೊಡೆತ ನೀಡಿದರು. ಪೃಥ್ವಿ 22 ಎಸೆತಗಳಲ್ಲಿ 32 ರನ್ ಗಳಿಸಿ ಔಟಾದರು. ನಾಯಕ ರಿಷಬ್ ಪಂತ್ ಕ್ರೀಸ್ ಗೆ ಬಂದಿದ್ದಾರೆ.
ಡೆಲ್ಲಿ ಇನ್ನಿಂಗ್ಸ್ ಜವಬ್ದಾರಿ ಪೃಥ್ವಿ ಶಾ ಮತ್ತು ಜಾಕ್ ಫ್ರೇಸರ್ ಮೆಕ್‌ಗುರ್ಕ್ ಮೇಲಿದೆ. ಪವರ್‌ಪ್ಲೇ ಅಂತ್ಯದ ವೇಳೆಗೆ ತಂಡವು ಒಂದು ವಿಕೆಟ್‌ಗೆ 62 ರನ್ ಗಳಿಸಿದೆ. ಸದ್ಯ ಪೃಥ್ವಿ 19 ಎಸೆತಗಳಲ್ಲಿ 32 ರನ್ ಹಾಗೂ ಮೆಕ್‌ಗುರ್ಕ್ ಎಂಟು ಎಸೆತಗಳಲ್ಲಿ 16 ರನ್ ಗಳಿಸಿ ಆಡುತ್ತಿದ್ದಾರೆ.
ಲಕ್ನೋ ಸೂಪರ್‌ಜೈಂಟ್ಸ್ ವೇಗದ ಬೌಲರ್ ಯಶ್ ಠಾಕೂರ್ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ವಿಕೆಟ್ ಕಬಳಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮೊದಲ ಹೊಡೆತ ನೀಡಿದರು.
ಶಾ ಮತ್ತು ವಾರ್ನರ್ ತಂಡಕ್ಕೆ ಉತ್ತಮ ಆರಂಭ ನೀಡಿದ್ದಾರೆ. ಇವರಿಬ್ಬರ ನಡುವೆ ಮೂರು ಓವರ್‌ಗಳಲ್ಲಿ 22 ರನ್‌ಗಳ ಜೊತೆಯಾಟ ನಡೆದಿದೆ. ಶಾ ಅವರ ಬ್ಯಾಟ್‌ನಿಂದ ಮೂರು ಬೌಂಡರಿಗಳು ಬಂದಿವೆ. ಅದೇ ಸಮಯದಲ್ಲಿ, ವಾರ್ನರ್ ಆರು ರನ್ ಗಳಿಸಿ ಅಜೇಯರಾಗಿ ಆಡುತ್ತಿದ್ದಾರೆ.
ಆಯುಷ್ ಬದೋನಿ ಅವರ ಅರ್ಧಶತಕದ ನೆರವಿನಿಂದ ಲಕ್ನೋ, ಡೆಲ್ಲಿ ತಂಡಕ್ಕೆ 168 ರನ್‌ಗಳ ಗುರಿ ನೀಡಿದೆ.
ಆಯುಷ್ ಬದೋನಿ ಮತ್ತು ಅರ್ಷದ್ ಖಾನ್ 50ಕ್ಕೂ ಹೆಚ್ಚು ರನ್ ಜೊತೆಯಾಟ ಆಡಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ತಂಡ 18 ಓವರ್‌ಗಳಲ್ಲಿ 147 ರನ್ ಗಳಿಸಿದೆ.
ಲಕ್ನೋ ಸೂಪರ್ ಜೈಂಟ್ಸ್ 16 ಓವರ್‌ಗಳಲ್ಲಿ 121 ರನ್ ಗಳಿಸಿದೆ. ಆಯುಷ್ ಬಡೋನಿ 24 ರನ್ ಮತ್ತು ಅರ್ಷದ್ ಖಾನ್ 8 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
ದೀಪಕ್ ಹೂಡಾ ರೂಪದಲ್ಲಿ ಲಕ್ನೋ ಆರನೇ ವಿಕೆಟ್ ಕಳೆದುಕೊಂಡಿದೆ. ಇಶಾಂತ್ ಶರ್ಮಾ ಅವರ ಮೂರನೇ ಓವರ್‌ನಲ್ಲಿ ಹೂಡಾ ವಿಕೆಟ್ ಒಪ್ಪಿಸಿದರು. 12 ಓವರ್‌ಗಳ ನಂತರ ತಂಡದ ಸ್ಕೋರ್ 90/6.
ಕುಲ್ದೀಪ್ ಯಾದವ್ ಡೆಲ್ಲಿಗೆ ಆಪತ್ಭಾಂದವ ಎಂಬುದನ್ನು ಮತ್ತೊಮ್ಮೆ ಸಾಭೀತುಪಡಿಸಿದ್ದಾರೆ. ಈ ಪಂದ್ಯದಲ್ಲಿ ಈಗಾಗಲೇ 3 ವಿಕೆಟ್ ಉರುಳಿಸಿರುವ ಕುಲ್ದೀಪ್, ಮೂರನೇ ವಿಕೆಟ್ ರೂಪದಲ್ಲಿ ಲಕ್ನೋ ನಾಯಕ ಕೆಎಲ್ ರಾಹುಲ್ ಅವರನ್ನು ಪೆವಿಲಿಯನ್ಗೆ ಕಳುಹಿಸಿದರು. ಇ10 ಓವರ್‌ಗಳ ನಂತರ ತಂಡದ ಸ್ಕೋರ್ 80/5.
ಕುಲ್ದೀಪ್ ಯಾದವ್ ಸತತ ಎರಡು ಎಸೆತಗಳಲ್ಲಿ ಮಾರ್ಕಸ್ ಸ್ಟೋನಿಸ್ ಮತ್ತು ನಿಕೋಲಸ್ ಪೂರನ್ ಅವರನ್ನು ಔಟ್ ಮಾಡಿ ಪೆವಿಲಿಯನ್ಗೆ ಕಳುಹಿಸಿದ್ದಾರೆ. 8 ಓವರ್‌ಗಳ ನಂತರ ಲಕ್ನೋ ತಂಡದ ಸ್ಕೋರ್ 4 ವಿಕೆಟ್ ನಷ್ಟದಲ್ಲಿ 67 ರನ್ ಆಗಿದೆ.
ಪವರ್‌ಪ್ಲೇ ಅಂತ್ಯಕ್ಕೆ ಲಕ್ನೋ ತಂಡ 2 ವಿಕೆಟ್ ನಷ್ಟಕ್ಕೆ 57 ರನ್ ಗಳಿಸಿದೆ. ಕೆಎಲ್ ರಾಹುಲ್ 30 ರನ್ ಗಳಿಸಿದ್ದು, ಮಾರ್ಕಸ್ ಸ್ಟೊಯಿನಿಸ್ ಅವರಿಗೆ ಬೆಂಬಲ ನೀಡುತ್ತಿದ್ದಾರೆ.
ಲಕ್ನೋ ಮೊದಲ ವಿಕೆಟ್ ಪತನವಾಗಿದೆ. ಮೂರನೇ ಓವರ್‌ನ ಐದನೇ ಎಸೆತದಲ್ಲಿ ಆರಂಭಿಕ ಕ್ವಿಂಟನ್ ಡಿ ಕಾಕ್ ಎಲ್‌ಬಿಡಬ್ಲ್ಯೂ ಆಗಿ ಔಟ್ ಆಗಿದ್ದಾರೆ. ದೇವದತ್ ಪಡಿಕ್ಕಲ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ. ಮೂರು ಓವರ್‌ಗಳ ನಂತರ ತಂಡದ ಸ್ಕೋರ್ 28/1.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ಇನ್ನಿಂಗ್ಸ್ ಆರಂಭವಾಗಿದೆ. ಕ್ವಿಟನ್ ಡಿ ಕಾಕ್ ಮತ್ತು ನಾಯಕ ಕೆಎಲ್ ರಾಹುಲ್ ಲಕ್ನೋ ಪರ ಇನ್ನಿಂಗ್ಸ್ ಆರಂಭಿಸಿದ್ದಾರೆ. ವೇಗಿ ಖಲೀಲ್ ಅಹ್ಮದ್ ಡೆಲ್ಲಿ ಪರ ಬೌಲಿಂಗ್ ಆರಂಭಿಸಿದ್ದಾರೆ.
ಪೃಥ್ವಿ ಶಾ, ಡೇವಿಡ್ ವಾರ್ನರ್, ಶಾಯ್ ಹೋಪ್, ರಿಷಭ್ ಪಂತ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ಅಕ್ಷರ್ ಪಟೇಲ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಕುಲ್ದೀಪ್ ಯಾದವ್, ಮುಖೇಶ್ ಕುಮಾರ್, ಇಶಾಂತ್ ಶರ್ಮಾ, ಖಲೀಲ್ ಅಹ್ಮದ್.
ಇಂಪ್ಯಾಕ್ಟ್ ಪ್ಲೇಯುರ್: ಜೇ ರಿಚರ್ಡ್ಸನ್, ಅಭಿಷೇಕ್ ಪೊರೆಲ್, ಕುಮಾರ್ ಕುಶಾಗ್ರಾ, ಸುಮಿತ್ ಕುಮಾರ್, ಪ್ರವೀಣ್ ದುಬೆ.
ಕ್ವಿಂಟನ್ ಡಿ ಕಾಕ್, ಕೆಎಲ್ ರಾಹುಲ್ (ವಿಕೆ/ನಾಯಕ), ದೇವದತ್ ಪಡಿಕ್ಕಲ್, ಮಾರ್ಕಸ್ ಸ್ಟೋನಿಸ್, ನಿಕೋಲಸ್ ಪೂರನ್, ಆಯುಷ್ ಬಡೋನಿ, ಕೃನಾಲ್ ಪಾಂಡ್ಯ, ಅರ್ಷದ್ ಖಾನ್, ರವಿ ಬಿಷ್ಣೋಯ್, ನವೀನ್-ಉಲ್-ಹಕ್, ಯಶ್ ಠಾಕೂರ್.
ಇಂಪ್ಯಾಕ್ಟ್ ಪ್ಲೇಯರ್: ಕೃಷ್ಣಪ್ಪ ಗೌತಮ್, ದೀಪಕ್ ಹೂಡಾ, ಮಣಿಮಾರನ್ ಸಿದ್ಧಾರ್ಥ್, ಅಮಿತ್ ಮಿಶ್ರಾ, ಮ್ಯಾಟ್ ಹೆನ್ರಿ.
ಟಾಸ್ ಗೆದ್ದ ಲಕ್ನೋ ನಾಯಕ ಕೆಎಲ್ ರಾಹುಲ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
Published On - 7:11 pm, Fri, 12 April 24