LSG vs DC Highlights IPL 2023: ಮೇಯರ್ಸ್, ಮಾರ್ಕ್ವುಡ್ ಅಬ್ಬರ; ಲಕ್ನೋಗೆ 50 ರನ್ ಜಯ
Lucknow super giants vs Delhi capitals Highlights in Kannada: ಇಂದಿನ ಡಬಲ್ ಹೆಡರ್ ದಿನದ 2ನೇ ಪಂದ್ಯದಲ್ಲಿ ಲಕ್ನೋ ತಂಡ ಡೆಲ್ಲಿ ತಂದವನ್ನು ಬರೋಬ್ಬರಿ 50 ರನ್‌ಗಳ ಅಂತರದಿಂದ ಬಗ್ಗುಬಡಿದಿದೆ.
ಇಂದಿನ ಡಬಲ್ ಹೆಡರ್ ದಿನದ 2ನೇ ಪಂದ್ಯದಲ್ಲಿ ಲಕ್ನೋ ತಂಡ ಡೆಲ್ಲಿ ತಂದವನ್ನು ಬರೋಬ್ಬರಿ 50 ರನ್‌ಗಳ ಅಂತರದಿಂದ ಬಗ್ಗುಬಡಿದಿದೆ. ಕಳೆದ ಸೀಸನ್ನಿಂದಲೂ ಐಪಿಎಲ್‌ನ ಎರಡು ಹೊಸ ತಂಡಗಳ ಪ್ರಬಲ ಪ್ರದರ್ಶನ ಮುಂದುವರಿದಿದೆ. ಕಳೆದ ವರ್ಷ ಪ್ರಶಸ್ತಿ ಜಯಿಸಿದ್ದ ಗುಜರಾತ್ ಟೈಟಾನ್ಸ್ ತನ್ನ ಮೊದಲ ಪಂದ್ಯವನ್ನು ಗೆದ್ದಿದ್ದರೆ, ಕಳೆದ ವರ್ಷ ನಾಲ್ಕನೇ ಸ್ಥಾನ ಪಡೆದಿದ್ದ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಕೂಡ ತನ್ನ ಮೊದಲ ಪಂದ್ಯದಲ್ಲಿ ಏಕಪಕ್ಷೀಯವಾಗಿ ಗೆಲುವು ಸಾಧಿಸಿದೆ. ಕೈಲ್ ಮೇಯರ್ಸ್ ಅವರ ಸ್ಫೋಟಕ ಬ್ಯಾಟಿಂಗ್ ಮತ್ತು ಮಾರ್ಕ್ವುಡ್ ಅವರ ಮಾರಕ ವೇಗದ ಬೌಲಿಂಗ್ ನೆರವಿನಿಂದ ಲಕ್ನೋ ತಂಡ ಸುಲಭವಾಗಿ ಜಯದ ನಗೆ ಬೀರಿತು.
LIVE NEWS & UPDATES
-
ಲಕ್ನೋಗೆ ಗೆಲುವು
ಲಕ್ನೋ ತಂಡ ಡೆಲ್ಲಿ ಕ್ಯಾಪಿಟಲ್ಸ್ ಅನ್ನು 50 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿ 16ನೇ ಸೀಸನ್ ಅನ್ನು ಗೆಲುವಿನೊಂದಿಗೆ ಪ್ರಾರಂಭಿಸಿದೆ. ಡೆಲ್ಲಿ ಗೆಲ್ಲಲು 194 ರನ್ ಗಳಿಸಬೇಕಾಗಿತ್ತು, ಆದರೆ ಇಡೀ ಓವರ್ ಆಡಿದ ಈ ತಂಡ ಒಂಬತ್ತು ವಿಕೆಟ್ ಕಳೆದುಕೊಂಡು 143 ರನ್ ಗಳಿಸಲಷ್ಟೇ ಶಕ್ತವಾಯಿತು.
-
ಮಾರ್ಕ್ವುಡ್ಗೆ 5 ವಿಕೆಟ್
ಚೇತನ್ ಸಕರಿಯಾ ಅಂತಿಮ ಓವರ್ನಲ್ಲಿ ಮಾರ್ಕ್ವುಡ್ಗೆ ಬೌಂಡರಿ ಬಾರಿಸಿದರು. ಆದರೆ, ಓವರ್‌ನ ಐದನೇ ಎಸೆತದಲ್ಲಿ ಔಟಾದರು. ಮಾರ್ಕ್ವುಡ್ ಈ ಪಂದ್ಯದಲ್ಲಿ ಐದು ವಿಕೆಟ್ ಪಡೆದರು.
-
ಅಕ್ಷರ್ ಪಟೇಲ್ ಔಟ್
ಮಾರ್ಕ್ವುಡ್ ಖಾತೆಗೆ ಮತ್ತೊಂದು ವಿಕೆಟ್ ಬಂದಿದೆ. ಡೆಲ್ಲಿಯ ಆರಂಭವನ್ನು ಹಾಳು ಮಾಡಿದ ವುಡ್ ಅಕ್ಷರ್ ಪಟೇಲ್ ಅವರನ್ನು ಪೆವಿಲಿಯನ್ಗೆ ಕಳುಹಿಸಿದ್ದಾರೆ.
ಅಕ್ಷರ್ ಪಟೇಲ್ ಸಿಕ್ಸರ್
18ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಅಕ್ಷರ್ ಪಟೇಲ್ ಅದ್ಭುತ ಸಿಕ್ಸರ್ ಬಾರಿಸಿದರು. ಆ ಓವರ್‌ನ ಮೂರನೇ ಎಸೆತದಲ್ಲಿ ಬೌಂಡರಿ ಕೂಡ ಬಂತು.
ವಾರ್ನರ್ ಔಟ್
ಡೇವಿಡ್ ವಾರ್ನರ್ ಔಟಾಗಿದ್ದಾರೆ. 16ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ವಾರ್ನರ್ ಅವೇಶ್ ಮೇಲೆ ಲಾಂಗ್ ಶಾಟ್ ಹೊಡೆಯಲು ಯತ್ನಿಸಿದರಾದರೂ ಯಶಸ್ವಿಯಾಗಲಿಲ್ಲ. ಲಾಂಗ್ ಆನ್‌ನಲ್ಲಿ ಕೆ ಗೌತಮ್‌ಗೆ ಕ್ಯಾಚ್ ಪಡೆದರು.
ಅಮನ್ ಖಾನ್ ಔಟ್
ದೆಹಲಿಯ ಆರನೇ ವಿಕೆಟ್ ಪತನಗೊಂಡಿದೆ. ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದಿದ್ದ ಅಮನ್ ಖಾನ್ ಔಟಾಗಿದ್ದಾರೆ. ಅವೇಶ್ ಖಾನ್ 16ನೇ ಓವರ್‌ನ ಮೂರನೇ ಎಸೆತದಲ್ಲಿ ಅಮನ್ ಖಾನ್ ಅವರನ್ನು ಔಟ್ ಮಾಡಿದರು.
ವಾರ್ನರ್ ಎರಡು ಬೌಂಡರಿ
ಜೈದೇವ್ ಅವರ ಎರಡನೇ ಓವರ್ನಲ್ಲಿ ಡೇವಿಡ್ ವಾರ್ನರ್ ಎರಡು ಬೌಂಡರಿ ಬಾರಿಸಿದರು. ಓವರ್‌ನ ಮೊದಲ ಎಸೆತದಲ್ಲಿ ವಾರ್ನರ್ ಡೀಪ್ ಕವರ್ ಕಡೆ ಬೌಂಡರಿ ಬಾರಿಸಿದರೆ, ಐದನೇ ಎಸೆತದಲ್ಲಿ ರಿವರ್ಸ್ ಲ್ಯಾಪ್ ಮೂಲಕ ಬೌಂಡರಿ ಬಾರಿಸಿದರು.
ವಾರ್ನರ್ ಅರ್ಧಶತಕ
ಡೆಲ್ಲಿ ನಾಯಕನಾಗಿ ಮೊದಲ ಐಪಿಎಲ್ ಪಂದ್ಯವನ್ನಾಡುತ್ತಿರುವ ಡೇವಿಡ್ ವಾರ್ನರ್ ಅರ್ಧಶತಕ ಬಾರಿಸಿದ್ದಾರೆ. 14ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಅರ್ಧಶತಕ ಪೂರೈಸಿದರು.
ಪೊವೆಲ್ ಔಟ್
ರವಿ ಬಿಷ್ಣೋಯ್ ಅವರು ಲಕ್ನೋಗೆ ಮತ್ತೊಂದು ದೊಡ್ಡ ಯಶಸ್ಸನ್ನು ನೀಡಿದ್ದಾರೆ.14 ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಅವರು ರೋವ್‌ಮನ್ ಪೊವೆಲ್ ಅವರನ್ನು ಔಟ್ ಮಾಡಿದರು.
ರುಸ್ಸೋ ಔಟ್
13ನೇ ಓವರ್ ಎಸೆದ ರವಿ ಬಿಷ್ಣೋಯ್ ಮೊದಲ ಎಸೆತದಲ್ಲೇ ರಿಲೆ ರುಸ್ಸೋ ಅವರನ್ನು ಔಟ್ ಮಾಡಿದರು. ಬಿಷ್ಣೋಯ್ ಅವರ ಚೆಂಡನ್ನು ರುಸ್ಸೋ ಸ್ವೀಪ್ ಮಾಡಲು ಪ್ರಯತ್ನಿಸಿದರು ಆದರೆ ಚೆಂಡು ಬ್ಯಾಟ್ನ ಅಂಚಿಗೆ ತಾಗಿ ಕ್ಯಾಚ್ ಹೋಯಿತು.
ರುಸ್ಸೋ ಸಿಕ್ಸರ್
ರಿಲೆ ರುಸ್ಸೋ 10ನೇ ಓವರ್‌ನ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದರು. ಕೊನೆಯಲ್ಲಿ ರುಸ್ಸೋ ನಾಲ್ಕನೇ ಎಸೆತದಲ್ಲಿ ಮತ್ತೊಂದು ಬೌಂಡರಿ ಬಾರಿಸಿದರು. ಬಳಿಕ ಐದನೇ ಎಸೆತದಲ್ಲಿ ಬೃಹತ್ ಸಿಕ್ಸರ್ ಬಾರಿಸಿದರು.
ಸರ್ಫರಾಜ್ ಔಟ್
ವುಡ್ ಲಕ್ನೋಗೆ ಮೂರನೇ ಯಶಸ್ಸನ್ನು ನೀಡಿದರು. ಏಳನೇ ಓವರ್‌ನ ಕೊನೆಯ ಎಸೆತದಲ್ಲಿ ವುಡ್ ಅಪಾಯಕಾರಿ ಬೌನ್ಸರ್ ಅನ್ನು ಬೌಲ್ ಮಾಡಿದರು. ಅದನ್ನು ಸರ್ಫರಾಜ್ ವಿಕೆಟ್‌ಕೀಪರ್ ಮೇಲೆ ಆಡಲು ಬಯಸಿದ್ದರು, ಆದರೆ ಚೆಂಡು ಫೈನ್ ಲೆಗ್‌ನಲ್ಲಿ ನಿಂತಿರುವ ಫೀಲ್ಡರ್ ಗೌತಮ್ ಅವರ ಕೈಗೆ ಹೋಯಿತು.
ಸರ್ಫರಾಜ್ ಫೋರ್
ಆರನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಸರ್ಫರಾಜ್ ಬೌಂಡರಿ ಬಾರಿಸಿದರು.
ಮಾರ್ಷ್ ಗೋಲ್ಡನ್ ಡಕ್
ಪೃಥ್ವಿ ನಂತರ, ಮಾರ್ಕ್ವುಡ್ ಮುಂದಿನ ಎಸೆತದಲ್ಲಿ ಮಿಚೆಲ್ ಮಾರ್ಷ್ ಅವರ ವಿಕೆಟ್ ಪಡೆದರು. ಮೊದಲ ಎಸೆತದಲ್ಲಿಯೇ ಬೌಲ್ಡ್ ಆಗುವ ಮೂಲಕ ಮಾರ್ಷ್ ಶೂನ್ಯಕ್ಕೆ ಮರಳಿದರು.
ಪೃಥ್ವಿ ಔಟ್
ಮಾರ್ಕ್‌ವುಡ್ ಆರಂಭಿಕ ಜೋಡಿಯ ಜೊತೆಯಾಟ ಮುರಿದಿದ್ದಾರೆ. ಐದನೇ ಓವರ್‌ನ ಮೂರನೇ ಎಸೆತದಲ್ಲಿ ಪೃಥ್ವಿ ಶಾ ಅವರನ್ನು ಬೌಲ್ಡ್ ಮಾಡಿದರು.
ವಾರ್ನರ್ ಬೌಂಡರಿ
ಅವೇಶ್ ಖಾನ್ ಎಸೆದ ನಾಲ್ಕನೇ ಓವರ್‌ನ ಕೊನೆಯ ಎಸೆತದಲ್ಲಿ ಡೇವಿಡ್ ವಾರ್ನರ್ ಬೌಂಡರಿ ಬಾರಿಸಿದರು.
2 ಓವರ್ ಅಂತ್ಯ
ಎರಡು ಓವರ್‌ಗಳ ನಂತರ ಡೆಲ್ಲಿ ತಂಡ 24 ರನ್ ಗಳಿಸಿದೆ. ಶಾ 6 ಹಾಗೂ ವಾರ್ನರ್ 16 ರನ್‌ಗಳೊಂದಿಗೆ ಕ್ರೀಸ್‌ನಲ್ಲಿದ್ದಾರೆ.
ದೆಹಲಿ ಬ್ಯಾಟಿಂಗ್ ಆರಂಭ
ಡೆಲ್ಲಿಯ ಆರಂಭಿಕ ಜೋಡಿಯಾಗಿ ಡೇವಿಡ್ ವಾರ್ನರ್ ಮತ್ತು ಪೃಥ್ವಿ ಶಾ ಮೈದಾನಕ್ಕೆ ಬಂದಿದ್ದಾರೆ. ವಾರ್ನರ್ ಓವರ್‌ನ ಮೂರನೇ ಎಸೆತದಲ್ಲಿ ಬೌಂಡರಿ ಬಾರಿಸಿದರು. ಕೈಲ್ ಮೇಯರ್ಸ್ ಲಕ್ನೋ ಪರ ಮೊದಲ ಓವರ್ ಬೌಲ್ ಮಾಡಿದರು.
194 ರನ್‌ಗಳ ಗುರಿ
ಕೊನೆಯಲ್ಲಿ ನಿಕೋಲಸ್ ಪೂರನ್ ಅವರ ಬಿರುಸಿನ ಆಟದಿಂದಾಗಿ ಲಖನೌ ನಿಗದಿತ ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 193 ರನ್ ಗಳಿಸಿತು. ಹೀಗಾಗಿ ಡೆಲ್ಲಿ 20 ಓವರ್ಗಳಲ್ಲಿ 194 ರನ್‌ಗಳ ಗುರಿಯನ್ನು ದಾಟಬೇಕಿದೆ.
ಬಡೋನಿ ಸಿಕ್ಸರ್
ಅಂತಿಮ ಓವರ್ ಎಸೆದ ಚೇತನ್ ಸಕರಿಯಾಗೆ ಆಯುಷ್ ಬಡೋನಿ ಸತತ ಎರಡು ಸಿಕ್ಸರ್ ಬಾರಿಸಿ ಲಕ್ನೋ ತಂಡವನ್ನು ಬೃಹತ್ ಟಾರ್ಗೆಟ್ನತ್ತ ಕೊಂಡೊಯ್ದಿದ್ದಾರೆ.
ಪೂರನ್ ಔಟ್
ಖಲೀಲ್ ಅಹ್ಮದ್ ದೆಹಲಿಗೆ ಉತ್ತಮ ಯಶಸ್ಸನ್ನು ತಂದುಕೊಟ್ಟಿದ್ದಾರೆ. ಅವರು 19ನೇ ಓವರ್‌ನ ಮೂರನೇ ಎಸೆತದಲ್ಲಿ ನಿಕೋಲಸ್ ಪೂರನ್ ಅವರನ್ನು ಔಟ್ ಮಾಡಿದರು.
ಕೃನಾಲ್ ಪಾಂಡ್ಯ ಸಿಕ್ಸರ್
17ನೇ ಓವರ್ ಡೆಲ್ಲಿಗೆ ದುಬಾರಿಯಾಗಿತ್ತು. ಓವರ್‌ನ ಐದನೇ ಎಸೆತದಲ್ಲಿ ಕೃನಾಲ್ ಪಾಂಡ್ಯ ಲಾಂಗ್ ಆನ್ ಕಡೆಗೆ ಬೃಹತ್ ಸಿಕ್ಸರ್ ಬಾರಿಸಿದರು.
ಪೂರನ್ ಸಿಕ್ಸರ್
ಚೇತನ್ ಸಕರಿಯಾ ಎಸೆದ 17ನೇ ಓವರ್‌ನ ಎರಡನೇ ಎಸೆತದಲ್ಲಿ ಪೂರನ್ ಲಾಂಗ್ ಆನ್‌ನಲ್ಲಿ ಸಿಕ್ಸರ್ ಬಾರಿಸಿದರು. ನಂತರ ಮುಂದಿನ ಎಸೆತದಲ್ಲಿ ಬೌಂಡರಿ ಬಾರಿಸಿದರು.
ಪೂರನ್ ಸಿಕ್ಸರ್
15ನೇ ಓವರ್ನಲ್ಲಿ ಖಲೀಲ್ ಅಹ್ಮದ್ ವಿಕೆಟ್ ಪಡೆದರೂ ಆ ಓವರ್ ದುಬಾರಿಯಾಗಿತ್ತು. ನಿಕೋಲಸ್ ಪೂರ್ ಬಂದ ಕೂಡಲೇ ನಾಲ್ಕನೇ ಎಸೆತದಲ್ಲಿ ಬೌಂಡರಿ ಮತ್ತು ಐದನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದರು.
ಸ್ಟೋಯ್ನಿಸ್ ಔಟ್
ಮೇಯರ್ಸ್ ಕ್ಯಾಚ್ ಬಿಟ್ಟು ವಿಲನ್ ಎನಿಸಿಕೊಂಡಿದ್ದ ಖಲೀಲ್ ಅಹಮದ್ ಅಂತಿಮವಾಗಿ ಸ್ಟೋಯಿಸ್ ವಿಕೆಟ್ ಪಡೆದು ತಂಡಕ್ಕೆ ಆಸರೆಯಾಗಿದ್ದಾರೆ. ಸ್ಟೋಯ್ನಿಸ್ ವಿಕೆಟ್ ಕೀಪರ್ಗೆ ಕ್ಯಾಚಿತ್ತು ಔಟಾದರು.
ಮೇಯರ್ಸ್ ಔಟ್
ದೆಹಲಿಗೆ ಭರ್ಜರಿ ಯಶಸ್ಸು ಸಿಕ್ಕಿದೆ. 12ನೇ ಓವರ್‌ನ ಮೂರನೇ ಎಸೆತದಲ್ಲಿ ಅಕ್ಷರ್ ಪಟೇಲ್, ಮೇಯರ್ಸ್ ಅವರನ್ನು ಬೌಲ್ಡ್ ಮಾಡಿದರು. ಎರಡು ವಿಕೆಟ್‌ಗಳ ನಂತರ, ಡೆಲ್ಲಿ ಪಂದ್ಯದಲ್ಲಿ ಕಮ್ ಬ್ಯಾಕ್ ಮಾಡುವಂತಿದೆ.
ಮೇಯರ್ಸ್ – 73 ರನ್, 38 ಎಸೆತಗಳು 2×4 7×6
ಹೂಡಾ ವಿಕೆಟ್ ಪತನ
11ನೇ ಓವರ್‌ನ ಆರಂಭದಲ್ಲಿ ಸಿಕ್ಸರ್‌ಗೆ ಗುರಿಯಾದ ಕುಲದೀಪ್ ಒಂದು ವಿಕೆಟ್ ಪಡೆಯುವ ಮೂಲಕ ಓವರ್ ಅನ್ನು ಕೊನೆಗೊಳಿಸಿದರು. 11 ರನ್ ಗಳಿಸಿದ್ದ ದೀಪಕ್ ಹೂಡಾ, ಡೇವಿಡ್ ವಾರ್ನರ್ಗೆ ಕ್ಯಾಚಿತ್ತು ಔಟಾದರು.
ಮೇಯರ್ಸ್ ಬ್ಯಾಕ್-ಟು-ಬ್ಯಾಕ್ ಸಿಕ್ಸರ್
ಅಕ್ಷರ್ ಪಟೇಲ್ ಎಸೆದ 10ನೇ ಓವರ್‌ನ ಮೊದಲ ಎಸೆತದಲ್ಲಿ ದೀಪಕ್ ಹೂಡಾ ಒಂದೇ ರನ್ ಗಳಿಸಿ ಮೇಯರ್ಸ್‌ಗೆ ಸ್ಟ್ರೈಕ್ ನೀಡಿದರು. ಸ್ಟ್ರೈಕ್‌ಗೆ ಬರುತ್ತಿದ್ದಂತೆ ಮೇಯರ್ಸ್ ಎರಡು ಬ್ಯಾಕ್ ಟು ಬ್ಯಾಕ್ ಸಿಕ್ಸರ್‌ಗಳನ್ನು ಹೊಡೆದರು. ಓವರ್‌ನ ಎರಡನೇ ಮತ್ತು ಮೂರನೇ ಎಸೆತಗಳಲ್ಲಿ ಸತತ ಎರಡು ಸಿಕ್ಸರ್‌ಗಳು ದಾಖಲಾದವು.
ಮೇಯರ್ಸ್ ಅರ್ಧಶತಕ
ಕೈಲ್ ಮೇಯರ್ಸ್ ಒಂಬತ್ತನೇ ಓವರ್‌ನ ಮೂರನೇ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಅರ್ಧಶತಕ ಪೂರೈಸಿದರು.
ಮೇಯರ್ಸ್ ಅಬ್ಬರ
ಮೇಯರ್ಸ್, ನಾಯಕ ರಾಹುಲ್ ವಿಕೆಟ್ ಉರುಳಿದ ಬಳಿಕ ಗೇರ್ ಬದಲಾಯಿಸಿ ಈಗ ಆಕ್ರಮಣಕಾರಿ ಹೊಡೆತಗಳನ್ನು ಆಡುತ್ತಿದ್ದಾರೆ. 8ನೇ ಓವರ್ ಮಾಡಿದ ಅಕ್ಷರ್ ಪಟೇಲ್ ಓವರ್‌ನ ಮೊದಲ ಎಸೆತದಲ್ಲಿ ಬೌಂಡರಿ ಹಾಗೂ ಮುಂದಿನ ಎಸೆತದಲ್ಲಿ ಸ್ಕ್ವೇರ್ ಲೆಗ್‌ನಲ್ಲಿ ಸಿಕ್ಸರ್ ಬಾರಿಸಿದರು. ಆ ಓವರ್‌ನಲ್ಲಿ 14 ರನ್‌ಗಳು ಬಂದವು.
ಮೇಯರ್ಸ್ ಸಿಕ್ಸರ್
7ನೇ ಓವರ್ನಲ್ಲಿ ಮುಖೇಶ್ ಕುಮಾರ್ ಬರೋಬ್ಬರಿ 16 ರನ್ ನೀಡಿದರು. ಈ ಓವರ್ನಲ್ಲಿ ಮೇಯರ್ಸ್ 2 ಸಿಕ್ಸರ್ ಬಾರಿಸಿದರು.
ರಾಹುಲ್ ಔಟ್
ಮೊದಲು ಬ್ಯಾಟಿಂಗ್ ಆರಂಭಿಸಿರುವ ಲಕ್ನೋ ತಂಡಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಹೀಗಾಗಿ ಒತ್ತಡಕ್ಕೆ ಸಿಲುಕಿದ ನಾಯಕ ರಾಹುಲ್ ಬಿಗ್ ಶಾಟ್ ಯತ್ನದಲ್ಲಿ ಕ್ಯಾಚಿತ್ತು ಔಟಾಗಿದ್ದಾರೆ.
ಮೇಯರ್ಸ್ ಬೌಂಡರಿ
ಮೂರನೇ ಓವರ್ ಎಸೆದ ಖಲೀಲ್ ಅಹ್ಮದ್ ಅವರ ಓವರ್‌ನಲ್ಲಿ 1 ಬೌಂಡರಿ ಬಂತು. ಮೇಯರ್ಸ್ ಓವರ್‌ನ ನಾಲ್ಕನೇ ಎಸೆತದಲ್ಲಿ ಪುಲ್ ಮಾಡಿ ಡೀಪ್ ಬ್ಯಾಕ್‌ವರ್ಡ್ ಸ್ಕ್ವೇರ್ ಲೆಗ್‌ನಲ್ಲಿ ಬೌಂಡರಿ ಬಾರಿಸಿದರು.
ಲಕ್ನೋ ಬ್ಯಾಟಿಂಗ್ ಆರಂಭ
ಲಕ್ನೋ ತಂಡ ಬ್ಯಾಟಿಂಗ್ ಆರಂಭಿಸಿದೆ. ನಾಯಕ ರಾಹುಲ್, ಕೈಲ್ ಮೇಯರ್ಸ್ ಬ್ಯಾಟಿಂಗ್ ಆರಂಭಿಸಿದ್ದಾರೆ. ಮೊದಲ ಓವರ್ನಲ್ಲಿ ಕೇ್ವಲ 1 ರನ್ ಬಂತು.
ಡೆಲ್ಲಿ ತಂಡ
ಡೇವಿಡ್ ವಾರ್ನರ್, ಪೃಥ್ವಿ ಶಾ, ರಿಲೇ ರೂಸೋ, ಮಿಚೆಲ್ ಮಾರ್ಷ್, ಸರ್ಫರಾಜ್ ಖಾನ್, ಪೊವೆಲ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಚೇತನ್ ಸಕಾರಿಯಾ, ಖಲೀಲ್ ಅಹಮದ್, ಮುಖೇಶ್ ಕುಮಾರ್.
ಲಕ್ನೋ ತಂಡ
ಕೆಎಲ್ ರಾಹುಲ್ (ನಾಯಕ), ಮೇಯರ್ಸ್, ಪೂರನ್ (ವಿಕೆಟ್ ಕೀಪರ್), ಹೂಡ, ಸ್ಟೋಯ್ನಿಸ್, ಬದೋನಿ, ಕೃನಾಲ್ ಪಂಡ್ಯ, ರವಿ ಬಿಷ್ಣೋಯಿ, ಜಯದೇವ್ ಉನದ್ಕಟ್, ಆವೇಶ್ ಖಾನ್, ಮಾರ್ಕ್ ವುಡ್.
ಟಾಸ್ ಗೆದ್ದ ಡೆಲ್ಲಿ
ಟಾಸ್ ಗೆದ್ದ ಡೆಲ್ಲಿ ನಾಯಕ ಡೇವಿಡ್ ವಾರ್ನರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
Published On - Apr 01,2023 7:02 PM