ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಲಕ್ನೋ ಸೂಪರ್‌ಜೈಂಟ್ಸ್ ವಿರುದ್ಧ ಹ್ಯಾಟ್ರಿಕ್ ಗೆಲುವು ದಾಖಲಿಸಿದೆ. ರೋಚಕ ಪಂದ್ಯದಲ್ಲಿ ಲಕ್ನೋ ತಂಡವನ್ನು 7 ವಿಕೆಟ್ಗಳಿಂದ ಗುಜರಾತ್ ಟೈಟಾನ್ಸ್ ಪಾಯಿಂಟ್ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ. ಲಕ್ನೋದ ಭಾರತ ರತ್ನ ಅಟಲ್ ವಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಲಕ್ನೋ ತಂಡ ತಾನು ಮಾಡಿದ ನಿಧಾನಗತಿಯ ಬ್ಯಾಟಿಂಗ್ನಿಂದಲೇ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 128 ರನ್ ಗಳಿಸಲಷ್ಟೇ ಶಕ್ತರಾಗಿ, 7 ರನ್ಗಳಿಂದ ಹೀನಾಯ ಸೋಲು ಅನುಭವಿಸಿತು.
ಗೆಲುವಿಗೆ 6 ಎಸೆತಗಳಲ್ಲಿ 12 ರನ್‌ಗಳ ಅಗತ್ಯವಿದೆ. 19 ಓವರ್‌ಗಳ ನಂತರ ಲಕ್ನೋ ಸ್ಕೋರ್ – 124/3
ಟಾಸ್ ಗೆದ್ದ ಮುಂಬೈ ನಾಯಕ ರೋಹಿತ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
ಲಕ್ನೋ ಪರ ಬಡೋನಿ 6 ರನ್ ಮತ್ತು ಕೆಎಲ್ ರಾಹುಲ್ 64 ರನ್ ಗಳಿಸಿ ಆಡುತ್ತಿದ್ದಾರೆ. ಗೆಲುವಿಗೆ 12 ಎಸೆತಗಳಲ್ಲಿ 16 ರನ್‌ಗಳ ಅಗತ್ಯವಿದೆ. 18 ಓವರ್‌ಗಳ ನಂತರ ಲಕ್ನೋ ಸ್ಕೋರ್ – 119/3
ನೂರ್ ಅಹ್ಮದ್ ಎಸೆದ 17ನೇ ಓವರ್‌ನಲ್ಲಿ 1 ರನ್ ಗಳಿಸಿ ಪೂರನ್ ಔಟಾದರು.
ಲಕ್ನೋ ಪರ ನಿಕೋಲಸ್ ಪೂರನ್ 1 ರನ್ ಹಾಗೂ ಕೆಎಲ್ ರಾಹುಲ್ 60 ರನ್ ಗಳಿಸಿ ಆಡುತ್ತಿದ್ದಾರೆ. ಗೆಲುವಿಗೆ 24 ಎಸೆತಗಳಲ್ಲಿ 27 ರನ್‌ಗಳ ಅಗತ್ಯವಿದೆ. 16 ಓವರ್‌ಗಳ ನಂತರ ಲಕ್ನೋ ಸ್ಕೋರ್ – 109/2
ನೂರ್ ಅಹ್ಮದ್ ಅವರ ಓವರ್‌ನಲ್ಲಿ ಆಲ್‌ರೌಂಡರ್ ಕೃನಾಲ್ 23 ರನ್‌ಗಳಿಗೆ ಔಟಾದರು. ವಿಕೆಟ್ ಕೀಪರ್ ಸಹಾ ವಿಕೆಟ್ ಹಿಂದೆ ಕ್ಯಾಚ್ ಪಡೆದರು. ಲಕ್ನೋ ಸ್ಕೋರ್ 14.3 ಓವರ್‌ಗಳಲ್ಲಿ 106/2. ಗೆಲುವಿಗೆ 33 ಎಸೆತಗಳಲ್ಲಿ 30 ರನ್‌ಗಳ ಅಗತ್ಯವಿದೆ.
ರಾಹುಲ್ ತೆವಟಿಯಾ ಅವರ ಓವರ್‌ನಲ್ಲಿ ಕೆಎಲ್ ರಾಹುಲ್ ತಮ್ಮ ಐಪಿಎಲ್ ವೃತ್ತಿಜೀವನದ 33ನೇ ಅರ್ಧಶತಕ ಪೂರೈಸಿದರು. 13 ಓವರ್‌ಗಳ ನಂತರ ಲಕ್ನೋ ಸ್ಕೋರ್ – 98/1
ಲಕ್ನೋ ಪರ ಪಾಂಡ್ಯ 14 ರನ್ ಹಾಗೂ ಕೆಎಲ್ ರಾಹುಲ್ 42 ರನ್ ಗಳಿಸಿ ಆಡುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ಅವರ ಓವರ್‌ನ ಅಂತಿಮ ಎಸೆತದಲ್ಲಿ ಅವರ ಸಹೋದರ ಕೃನಾಲ್ ಪಾಂಡ್ಯ ಬೌಂಡರಿ ಬಾರಿಸಿದರು. 10 ಓವರ್‌ಗಳ ನಂತರ ಲಕ್ನೋ ಸ್ಕೋರ್ – 80/1
ಲಕ್ನೋ ಪರ ಕೃನಾಲ್ ಪಾಂಡ್ಯ 6 ರನ್ ಹಾಗೂ ಕೆಎಲ್ ರಾಹುಲ್ 39 ರನ್‌ಗಳಿಸಿ ಆಡುತ್ತಿದ್ದಾರೆ. 8 ಓವರ್‌ಗಳ ನಂತರ ಲಕ್ನೋ ಸ್ಕೋರ್ – 65/1. ಲಕ್ನೋ ಗೆಲುವಿಗೆ 69 ಎಸೆತಗಳಲ್ಲಿ 65 ರನ್‌ಗಳ ಅಗತ್ಯವಿದೆ.
ರಶೀದ್ ಖಾನ್ ಅವರ ಓವರ್‌ನಲ್ಲಿ ಆಲ್‌ರೌಂಡರ್ ಮೈಯರ್ಸ್ 24 ರನ್‌ಗಳಿಗೆ ಔಟಾದರು.
ಈ ಓವರ್‌ನ ಮೊದಲೆರಡು ಎಸೆತಗಳನ್ನು ರಾಹುಲ್ ಬೌಂಡರಿಗಟ್ಟಿದರೆ, 5ನೇ ಎಸೆತವನ್ನು ಮೇಯರ್ಸ್ ಸಿಕ್ಸರ್ ಬಾರಿಸಿದರು. 5 ಓವರ್‌ಗಳ ನಂತರ ಲಕ್ನೋ ಸ್ಕೋರ್ – 46/0
3ನೇ ಓವರ್‌ನಲ್ಲಿ ನಾಯಕ ಕೆಎಲ್ ರಾಹುಲ್ ಹ್ಯಾಟ್ರಿಕ್ ಬೌಂಡರಿ ಬಾರಿಸಿದ್ದಾರೆ. 3 ಓವರ್‌ಗಳ ನಂತರ ಲಕ್ನೋ ಸ್ಕೋರ್ – 20/0
ಲಕ್ನೋ ಪರ ಮೇಯರ್ಸ್ ಮತ್ತು ಕೆಎಲ್ ರಾಹುಲ್ ಓಪನಿಂಗ್‌ಗೆ ಬಂದಿದ್ದಾರೆ. ಮೊಹಮ್ಮದ್ ಶಮಿ ಅವರ ಮೊದಲ ಓವರ್ ಮೇಡನ್ ಆಗಿತ್ತು. ನಾಯಕ ರಾಹುಲ್ ಎಲ್ಲಾ 6 ಎಸೆತಗಳನ್ನು ಆಡಿದರು ಆದರೆ ಯಾವುದೇ ರನ್ ಗಳಿಸಲಿಲ್ಲ.
ಕೊನೆಯ ಎಸೆತದಲ್ಲಿ ಸ್ಟೊಯಿನಿಸ್ ಮಿಲ್ಲರ್ ಅವರನ್ನು ಔಟ್ ಮಾಡಿದರು. ಇದರೊಂದಿಗೆ ಗುಜರಾತ್ ಇನ್ನಿಂಗ್ಸ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 135 ರನ್‌ಗಳಿಗೆ ಅಂತ್ಯಗೊಂಡಿತು. ಗುಜರಾತ್ ಪರ ಹಾರ್ದಿಕ್ ಪಾಂಡ್ಯ ಗರಿಷ್ಠ 66 ರನ್ ಗಳಿಸಿದರು
ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ 60 ರನ್ ಹಾಗೂ ಡೇವಿಡ್ ಮಿಲ್ಲರ್ 5 ರನ್ ಗಳಿಸಿ ಆಡುತ್ತಿದ್ದಾರೆ. 19 ಓವರ್‌ಗಳ ನಂತರ ಗುಜರಾತ್ ಸ್ಕೋರ್- 126/4. ಈ ಓವರ್‌ನಲ್ಲಿ ಕೇವಲ 5 ರನ್ ಬಂತು.
18ನೇ ಓವರ್‌ನ 4ನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದ ಪಾಂಡ್ಯ ತಮ್ಮ ಅರ್ಧಶತಕ ಪೂರೈಸಿದರು. ಈ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ 2 ಸಿಕ್ಸರ್ ಮತ್ತು 1 ಬೌಂಡರಿ ಬಾರಿಸಿದರು
ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ 40 ರನ್ ಹಾಗೂ ಡೇವಿಡ್ ಮಿಲ್ಲರ್ 2 ರನ್ ಗಳಿಸಿ ಆಡುತ್ತಿದ್ದಾರೆ. 17 ಓವರ್‌ಗಳ ನಂತರ ಗುಜರಾತ್ ಸ್ಕೋರ್ – 102/4
ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ 32 ರನ್ ಗಳಿಸಿ ಆಡುತ್ತಿದ್ದಾರೆ. ವಿಜಯ್ ಶಂಕರ್ 10 ರನ್ ಗಳಿಸಿ ಔಟಾದರು. 15 ಓವರ್‌ಗಳ ನಂತರ ಗುಜರಾತ್ ಸ್ಕೋರ್ 92/4
ಅಮಿತ್ ಮಿಶ್ರಾ ಅವರ ಓವರ್‌ನಲ್ಲಿ ಅಭಿನವ್ ಮನೋಹರ್ 3 ರನ್ ಗಳಿಸಿ ಔಟಾದರು. ನವೀನ್ ಅಲ್ ಹಕ್ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ತಂಡಕ್ಕೆ ಯಶಸ್ಸು ತಂದುಕೊಟ್ಟಿದ್ದಾರೆ. 12 ಓವರ್‌ಗಳ ನಂತರ ಗುಜರಾತ್ ಸ್ಕೋರ್ 78/3
ವೃದ್ಧಿಮಾನ್ ಸಹಾ 37 ಎಸೆತಗಳಲ್ಲಿ 47 ರನ್ ಗಳಿಸಿ, ಕೃನಾಲ್ ಪಾಂಡ್ಯ ಅವರ ಓವರ್‌ನಲ್ಲಿ ಕ್ಯಾಚ್ ನೀಡಿದರು. 11 ಓವರ್‌ಗಳ ನಂತರ ಗುಜರಾತ್ ಸ್ಕೋರ್ 75/2
8ನೇ ಓವರ್‌ನಲ್ಲಿ ಬೌಂಡರಿ ಬಾರಿಸಿದ ಸಹಾ, ಗುಜರಾತ್ ಮೊತ್ತವನ್ನು 50ರ ಗಡಿ ದಾಟಿಸಿದರು. ಗುಜರಾತ್ ಟೈಟಾನ್ಸ್ ಪರ ವೃದ್ಧಿಮಾನ್ ಸಹಾ 41 ರನ್ ಹಾಗೂ ನಾಯಕ ಹಾರ್ದಿಕ್ ಪಾಂಡ್ಯ 10 ರನ್ ಗಳಿಸಿ ಆಡುತ್ತಿದ್ದಾರೆ. 8 ಓವರ್‌ಗಳ ನಂತರ ಗುಜರಾತ್ ಸ್ಕೋರ್ 51/1
ಗುಜರಾತ್ ಟೈಟಾನ್ಸ್ ಪರ ವೃದ್ಧಿಮಾನ್ ಸಹಾ 34 ರನ್ ಹಾಗೂ ನಾಯಕ ಹಾರ್ದಿಕ್ ಪಾಂಡ್ಯ 6 ರನ್ ಗಳಿಸಿ ಆಡುತ್ತಿದ್ದಾರೆ. ಬಿಷ್ಣೋಯ್ ಅವರ ಓವರ್‌ನಲ್ಲಿ 2 ಬೌಂಡರಿ ಬಂದವು. 6 ಓವರ್‌ಗಳ ನಂತರ ಗುಜರಾತ್ ಸ್ಕೋರ್ 40/1
ಗುಜರಾತ್ ಟೈಟಾನ್ಸ್ ಪರ ವೃದ್ಧಿಮಾನ್ ಸಹಾ 16 ರನ್ ಹಾಗೂ ನಾಯಕ ಹಾರ್ದಿಕ್ ಪಾಂಡ್ಯ 4 ರನ್ ಗಳಿಸಿ ಆಡುತ್ತಿದ್ದಾರೆ. ಈ ಓವರ್‌ನಲ್ಲಿ ಫೋರ್ ಕೂಡ ಬಂತು. 4 ಓವರ್‌ಗಳ ನಂತರ ಗುಜರಾತ್ ಸ್ಕೋರ್ 20/1
ಗುಜರಾತಿ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಅವರ ಓವರ್‌ನಲ್ಲಿ ಶುಭಮನ್ ಗಿಲ್ 0 ರನ್ ಗಳಿಸಿ ಔಟಾದರು. 2 ಓವರ್‌ಗಳ ನಂತರ ಗುಜರಾತ್ ಸ್ಕೋರ್ 5/1
ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡುತ್ತಿದೆ. ಗುಜರಾತ್ ಟೈಟಾನ್ಸ್‌ನ ವೃದ್ಧಿಮಾನ್ ಸಹಾ ಮತ್ತು ಶುಭಮನ್ ಗಿಲ್ ಆರಂಭಿಕರಾಗಿ ಮೈದಾನಕ್ಕೆ ಬಂದಿದ್ದಾರೆ. 1 ಓವರ್‌ಗೆ ಗುಜರಾತ್ ಟೈಟಾನ್ಸ್ ಸ್ಕೋರ್ 4/0
ಕೆಎಲ್ ರಾಹುಲ್ (ನಾಯಕ), ಕೈಲ್ ಮೇಯರ್ಸ್, ದೀಪಕ್ ಹೂಡಾ, ಮಾರ್ಕಸ್ ಸ್ಟೊಯಿನಿಸ್, ಕೃನಾಲ್ ಪಾಂಡ್ಯ, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಆಯುಷ್ ಬಡೋನಿ, ನವೀನ್-ಉಲ್-ಹಕ್, ಅಮಿತ್ ಮಿಶ್ರಾ, ಅವೇಶ್ ಖಾನ್, ರವಿ ಬಿಷ್ಣೋಯ್
ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ (ನಾಯಕ), ವಿಜಯ್ ಶಂಕರ್, ಅಭಿನವ್ ಮನೋಹರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೊಹಮ್ಮದ್ ಶಮಿ, ನೂರ್ ಅಹ್ಮದ್, ಮೋಹಿತ್ ಶರ್ಮಾ
ಟಾಸ್ ಗೆದ್ದ ಗುಜರಾತ್ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ.
Published On - 3:01 pm, Sat, 22 April 23