LSG vs RCB Live Streaming: ವಾರದ ಬಳಿಕ ಕಣಕ್ಕಿಳಿಯುತ್ತಿದೆ ಆರ್​ಸಿಬಿ; ಪಂದ್ಯ ಎಷ್ಟು ಗಂಟೆಗೆ ಆರಂಭ?

LSG vs RCB Live Streaming: ಐಪಿಎಲ್ 2026 ರ 50ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗಲಿವೆ. ರಜತ್ ಪಾಟಿದಾರ್ ನೇತೃತ್ವದ ಆರ್‌ಸಿಬಿ ಒಂಬತ್ತು ಪಂದ್ಯಗಳಲ್ಲಿ ಆರು ಗೆಲುವುಗಳೊಂದಿಗೆ ಬಲಿಷ್ಠವಾಗಿದೆ. ಎಲ್‌ಎಸ್‌ಜಿ ಏಳು ಸೋಲುಂಡು ಪ್ಲೇಆಫ್‌ನಿಂದ ಹೊರಬಿದ್ದಿದೆ. ಆರ್‌ಸಿಬಿಗೆ ಇದು ಅಗ್ರಸ್ಥಾನಕ್ಕಾಗಿ ನಿರ್ಣಾಯಕವಾಗಿದ್ದು, ಎಲ್‌ಎಸ್‌ಜಿ ಉಳಿದ ಪಂದ್ಯಗಳನ್ನು ಕೇವಲ ಔಪಚಾರಿಕವಾಗಿ ಆಡಲಿದೆ. ಈ ಹೈವೋಲ್ಟೇಜ್ ಪಂದ್ಯದ ಸಂಪೂರ್ಣ ವಿಶ್ಲೇಷಣೆ ಇಲ್ಲಿದೆ.

LSG vs RCB Live Streaming: ವಾರದ ಬಳಿಕ ಕಣಕ್ಕಿಳಿಯುತ್ತಿದೆ ಆರ್​ಸಿಬಿ; ಪಂದ್ಯ ಎಷ್ಟು ಗಂಟೆಗೆ ಆರಂಭ?
Lsg Vs Rcb

Updated on: May 06, 2026 | 3:17 PM

ಐಪಿಎಲ್ 2026 (IPL 2026) ರ 50 ನೇ ಪಂದ್ಯವು ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (LSG vs RCB) ನಡುವೆ ನಡೆಯಲಿದೆ. ಈ ಆವೃತ್ತಿಯಲ್ಲಿ ಉಭಯ ತಂಡಗಳ ಎರಡನೇ ಮುಖಾಮುಖಿ ಇದಾಗಿದೆ. ಇದಕ್ಕೂ ಮುನ್ನ ನಡೆದಿದ್ದ ಪಂದ್ಯದಲ್ಲಿ ಆರ್​ಸಿಬಿ ಭರ್ಜರಿ ಜಯ ದಾಖಲಿಸಿತ್ತು. ರಜತ್ ಪಟಿದಾರ್ ನಾಯಕತ್ವದಲ್ಲಿ, ಆರ್‌ಸಿಬಿ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಆಡಿರುವ ಒಂಬತ್ತು ಪಂದ್ಯಗಳಿಂದ ಆರು ಗೆಲುವುಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಇತ್ತ ಲಕ್ನೋ ಸೂಪರ್​ಜೈಂಟ್ಸ್ ತಂಡ ಆಡಿರುವ 9 ಪಂದ್ಯಗಳಲ್ಲಿ 7 ರಲ್ಲಿ ಸೋತು ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಇದರರ್ಥ ಲಕ್ನೋ ತಂಡ ಪ್ಲೇಆಫ್ ರೇಸ್​​ನಿಂದ ಭಾಗಶಃ ಹೊರಬಿದ್ದಿದೆ. ಹೀಗಾಗಿ ಲಕ್ನೋ ತಂಡಕ್ಕೆ ಉಳಿದ ಪಂದ್ಯಗಳು ಕೇವಲ ಔಪಚಾರಿಕವಾಗಿದ್ದರೆ, ಇತ್ತ ಆರ್​ಸಿಬಿಗೆ ಮೊದಲ ಎರಡು ಸ್ಥಾನಗಳನ್ನು ಪಡೆಯಲು ನಿರ್ಣಾಯಕವಾಗಿವೆ.

ಲಕ್ನೋ ಹಾಗೂ ಆರ್​ಸಿಬಿ ನಡುವಿನ ಐಪಿಎಲ್ ಪಂದ್ಯ ಯಾವಾಗ ನಡೆಯಲಿದೆ?

ಲಕ್ನೋ ಹಾಗೂ ಆರ್​ಸಿಬಿ ನಡುವಿನ ಐಪಿಎಲ್ ಪಂದ್ಯ ಮೇ 6 ರಂದು ನಡೆಯಲಿದೆ.

ಲಕ್ನೋ ಹಾಗೂ ಆರ್​ಸಿಬಿ ನಡುವಿನ ಐಪಿಎಲ್ ಪಂದ್ಯ ಎಲ್ಲಿ ನಡೆಯಲಿದೆ?

ಲಕ್ನೋ ಹಾಗೂ ಆರ್​ಸಿಬಿ ನಡುವಿನ ಐಪಿಎಲ್ ಪಂದ್ಯ ಲಕ್ನೋದ ಏಕನಾ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.

ಲಕ್ನೋ ಹಾಗೂ ಆರ್​ಸಿಬಿ ನಡುವಿನ ಐಪಿಎಲ್ ಪಂದ್ಯ ಎಷ್ಟು ಗಂಟೆಗೆ ಆರಂಭವಾಗಲಿದೆ?

ಲಕ್ನೋ ಹಾಗೂ ಆರ್​ಸಿಬಿ ನಡುವಿನ ಐಪಿಎಲ್ ಪಂದ್ಯ ಸಂಜೆ 7:30 ಕ್ಕೆ ಗಂಟೆಗೆ ಆರಂಭವಾಗಲಿದೆ. ಟಾಸ್ ಸಂಜೆ 7 ಗಂಟೆಗೆ ನಡೆಯಲಿದೆ.

ಲಕ್ನೋ ಹಾಗೂ ಆರ್​ಸಿಬಿ ನಡುವಿನ ಐಪಿಎಲ್ ಪಂದ್ಯವನ್ನು ಎಲ್ಲಿ ವೀಕ್ಷಿಸಬಹುದು?

ಲಕ್ನೋ ಹಾಗೂ ಆರ್​ಸಿಬಿ ನಡುವಿನ ಐಪಿಎಲ್ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್​ವರ್ಕ್​ನ ವಿವಿದ ಚಾನೆಲ್​ಗಳಲ್ಲಿ ವೀಕ್ಷಿಸಬಹುದು. ಹಾಗೆಯೇ ಹಾಟ್ ಸ್ಟಾರ್​​ನಲ್ಲಿಯೂ ಪಂದ್ಯವನ್ನು ವೀಕ್ಷಿಸಬಹುದಾಗಿದೆ.

ಉಭಯ ತಂಡಗಳು

ಲಕ್ನೋ ತಂಡ: ಐಡೆನ್ ಮಾರ್ಕ್ರಾಮ್, ಮಿಚೆಲ್ ಮಾರ್ಷ್, ರಿಷಭ್ ಪಂತ್ (ನಾಯಕ/ ವಿಕೆಟ್ ಕೀಪರ್), ನಿಕೋಲಸ್ ಪೂರನ್, ಆಯುಷ್ ಬಡೋನಿ, ಮುಕುಲ್ ಚೌಧರಿ, ಹಿಮ್ಮತ್ ಸಿಂಗ್, ಜಾರ್ಜ್ ಲಿಂಡೆ, ಮೊಹಮ್ಮದ್ ಶಮಿ, ಪ್ರಿನ್ಸ್ ಯಾದವ್, ದಿಗ್ವೇಶ್ ಸಿಂಗ್ ರಾಠಿ, ಮೊಹ್ಸಿನ್ ಖಾನ್, ಅಕ್ಷತ್ ರಘುವಂಶಿ, ಅಬ್ದುಲ್ ಖಾನ್, ಸಿದ್ಧ್ ಜೊಮಾ, ಅವೇಶ್ ಜೊಮಾ, ಅವೇಶ್ ಜೊಮಾ ನಾರ್ಟ್ಜೆ, ಮ್ಯಾಥ್ಯೂ ಬ್ರೀಟ್ಜ್ಕೆ, ಅರ್ಜುನ್ ತೆಂಡೂಲ್ಕರ್, ಶಹಬಾಜ್ ಅಹ್ಮದ್, ಆಕಾಶ್ ಮಹಾರಾಜ್ ಸಿಂಗ್, ಮಯಾಂಕ್ ಯಾದವ್, ಅರ್ಶಿನ್ ಕುಲಕರ್ಣಿ, ನಮನ್ ತಿವಾರಿ

ಆರ್​ಸಿಬಿ ತಂಡ: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ತ್ ಪಡಿಕ್ಕಲ್, ರಜತ್ ಪಾಟಿದಾರ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋರ್ಡಾನ್ ಕಾಕ್ಸ್, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಜಾಕೋಬ್ ಬೆಥೆಲ್, ವೆಂಕಟೇಶ್ ಅಯ್ಯರ್, ಸಾತ್ವಿಕ್ ದೇಸ್ವಾಲ್, ಮಂಗೇಶ್ ಯಾದವ್, ವಿಕ್ಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ಕಾನಿಷ್ಕ್ ಚೌಹಾಣ್, ಜೋಶ್ ಹೇಜಲ್​ವುಡ್, ರಸಿಖ್ ದಾರ್, ಸುಯಶ್ ಶರ್ಮಾ, ಭುವನೇಶ್ವರ್ ಕುಮಾರ್, ಅಭಿನಂದನ್ ಸಿಂಗ್, ಜಾಕೋಬ್ ಡಫಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us