ಮೊದಲ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಶಸ್ತಿಯ ರೇಸ್‌ನಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಈ ಋತುವಿನಲ್ಲಿ ಉತ್ತಮ ಫಾರ್ಮ್‌ನಲ್ಲಿದೆ. ಐಪಿಎಲ್ 2022 (IPL 2022)ರಲ್ಲಿ, ಈ ತಂಡವು ಇದುವರೆಗೆ ಆರು ಪಂದ್ಯಗಳನ್ನು ಆಡಿದೆ, ಅದರಲ್ಲಿ ನಾಲ್ಕರಲ್ಲಿ ಗೆದ್ದಿದ್ದರೆ, ಎರಡರಲ್ಲಿ ಸೋತಿದೆ. ಬೆಂಗಳೂರು ಈ ಋತುವಿನಲ್ಲಿ ಹೊಸ ನಾಯಕನೊಂದಿಗೆ ಬಂದಿಳಿದಿದೆ. ಆದರೆ ಮುಂದಿನ ಪಂದ್ಯದಲ್ಲಿ ಅವರ ಮುಂದಿರುವ ತಂಡ ಕೂಡ ಯಾರಿಗೂ ಕಡಿಮೆ ಇಲ್ಲ. ಈ ತಂಡದ ಹೆಸರು ಲಕ್ನೋ ಸೂಪರ್ ಜೈಂಟ್ಸ್. ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಉಭಯ ತಂಡಗಳು ಕಣಕ್ಕಿಳಿಯಲಿವೆ. ಲಕ್ನೋ ಕೂಡ ಆರು ಪಂದ್ಯಗಳಲ್ಲಿ ನಾಲ್ಕು ಗೆದ್ದು ಎರಡರಲ್ಲಿ ಸೋತಿದೆ ಆದರೆ ಅವರ ನಿವ್ವಳ ರನ್ ರೇಟ್ ಉತ್ತಮವಾಗಿರುವುದರಿಂದ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನ ಮತ್ತು ಬೆಂಗಳೂರು ಮೂರನೇ ಸ್ಥಾನದಲ್ಲಿದೆ.
ಕಳೆದ ಪಂದ್ಯದಲ್ಲಿ ಬೆಂಗಳೂರು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿದರೆ, ಲಕ್ನೋ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿತ್ತು. ಈ ತಂಡವು ತನ್ನ ಮೊದಲ IPL ಅನ್ನು ಆಡುತ್ತಿದ್ದರೂ ಈ ತಂಡವು ತನ್ನ ಪ್ರಬಲ ಪ್ರದರ್ಶನದಿಂದ ಉಳಿದ ತಂಡಗಳಿಗೆ ಕಳವಳವನ್ನು ಮೂಡಿಸಿದೆ. ಲಕ್ನೋವನ್ನು ಎದುರಿಸುವುದು ಬೆಂಗಳೂರಿಗೆ ಯಾವುದೇ ಸಂದರ್ಭದಲ್ಲಿ ಸುಲಭವಲ್ಲ. ಲಕ್ನೋ ಕೂಡ ಬೆಂಗಳೂರನ್ನು ಹಗುರವಾಗಿ ಪರಿಗಣಿಸುವ ತಪ್ಪನ್ನು ಮಾಡುವಂತಿಲ್ಲ.
ಬೆಂಗಳೂರು ಬದಲಾಗುತ್ತಾ?
ಕಳೆದ ಪಂದ್ಯದಲ್ಲಿ ಬೆಂಗಳೂರು ತಂಡ ದಿಟ್ಟ ಪ್ರದರ್ಶನ ನೀಡಿತ್ತು. ಹರ್ಷಲ್ ಪಟೇಲ್ ತನ್ನ ಸಹೋದರಿಯ ಸಾವಿನಿಂದ ಕೆಲವು ಪಂದ್ಯಗಳನ್ನು ಆಡಲಿಲ್ಲ. ಆದರೆ ಕಳೆದ ಪಂದ್ಯದಲ್ಲಿ ಅವರು ಪುನರಾಗಮನ ಮಾಡಿದರು. ಹೀಗಾಗಿ ತಂಡದಲ್ಲಿ ಯಾವುದೇ ಬದಲಾವಣೆ ಕಾಣುತ್ತಿಲ್ಲ. ಅನುಜ್ ರಾವತ್ ಉತ್ತಮವಾಗಿ ಆಡುತ್ತಿದ್ದು, ಶಹಬಾಜ್ ಅಹ್ಮದ್ ಕೂಡ ಇಂಪ್ರೆಸ್ ಮಾಡಿದ್ದಾರೆ. ದಿನೇಶ್ ಕಾರ್ತಿಕ್ ಈ ಋತುವಿನಲ್ಲಿ ವಿಧ್ವಂಸಕರಾಗಿ ತಂಡವನ್ನು ಹಲವು ಬಾರಿ ಸಂಕಷ್ಟದಿಂದ ಪಾರು ಮಾಡಿ ಗೆಲುವಿನ ಹೊಸ್ತಿಲನ್ನು ದಾಟಿ, ಫಿನಿಶರ್ ಪಾತ್ರದ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ.
ಲಕ್ನೋದಲ್ಲಾಗುವ ಬದಲಾವಣೆಗಳೇನು?
ಲಕ್ನೋ ತಂಡ ಕಳೆದ ಪಂದ್ಯವನ್ನು ಗೆದ್ದಿದ್ದು, ಇಡೀ ತಂಡ ಉತ್ತಮ ಪ್ರದರ್ಶನ ನೀಡಿತು. ಆದರೂ ವೇಗದ ಬೌಲರ್ ದುಷ್ಮಂತ ಚಮೀರ ಅತ್ಯಂತ ದುಬಾರಿ ಎಂದು ಸಾಬೀತಾಯಿತು. 12ರ ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟಿದ್ದ ಅವರು ನಾಲ್ಕು ಓವರ್ಗಳಲ್ಲಿ 48 ರನ್ಗಳನ್ನು ನೀಡಿ ಕೇವಲ ಒಂದು ವಿಕೆಟ್ ಪಡೆಯಲು ಶಕ್ತರಾದರು. ಇಂತಹ ಪರಿಸ್ಥಿತಿಯಲ್ಲಿ ರಾಹುಲ್ ಅವರ ಜಾಗದಲ್ಲಿ ಬೇರೆಯವರಿಗೆ ಅವಕಾಶ ನೀಡಬಹುದು. ಆಂಡ್ರ್ಯೂ ಟೈ ಅವರ ಸ್ಥಾನವನ್ನು ಪಡೆದುಕೊಳ್ಳಬಹುದು. ಕಳೆದ ಪಂದ್ಯದಲ್ಲಿ ಮನೀಶ್ ಪಾಂಡೆಗೆ ಅವಕಾಶ ನೀಡಿದ್ದು, ಅವರು 38 ರನ್‌ಗಳ ಇನ್ನಿಂಗ್ಸ್ ಆಡುವ ಮೂಲಕ ಮುಂದಿನ ಪಂದ್ಯಕ್ಕೆ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದಾರೆ.
ಎರಡೂ ತಂಡಗಳ ಸಂಭಾವ್ಯ 11
ರಾಯಲ್ ಚಾಲೆಂಜರ್ಸ್ ಬೆಂಗಳೂರು- ಫಾಫ್ ಡು ಪ್ಲೆಸಿಸ್ (ನಾಯಕ), ಅನುಜ್ ರಾವತ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಸುಯುಶ್ ಪ್ರಭುದೇಸಾಯಿ, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್‌ವುಡ್, ಮೊಹಮ್ಮದ್ ಸಿರಾಜ್.
ಲಕ್ನೋ ಸೂಪರ್ ಜೈಂಟ್ಸ್ – ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್, ಮನೀಶ್ ಪಾಂಡೆ, ಮಾರ್ಕಸ್ ಸ್ಟೋನಿಸ್, ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ಆಯುಷ್ ಬಡೋನಿ, ಜೇಸನ್ ಹೋಲ್ಡರ್, ಆಂಡ್ರ್ಯೂ ಟೈ, ರವಿ ಬಿಷ್ಣೋಯ್, ಅವೇಶ್ ಖಾನ್.
ಇದನ್ನೂ ಓದಿ:IPL 2022 LSG vs RCB Live Streaming: ಲಕ್ನೋ- ಆರ್ಸಿಬಿ ನಡುವೆ ತೀವ್ರ ಪೈಪೋಟಿ! ಪಂದ್ಯದ ಬಗ್ಗೆ ಇಲ್ಲಿದೆ ವಿವರ