25 ಸಿಕ್ಸ್, 23 ಫೋರ್: ಸ್ಪೋಟಕ ತ್ರಿಶತಕ ಸಿಡಿಸಿದ ಕನ್ನಡಿಗ

|

Updated on: Oct 22, 2024 | 2:34 PM

Macneil Noronha: ಮ್ಯಾಕ್ನೀಲ್ ನೊರೊನ್ಹ ಕರ್ನಾಟಕದ ಭರವಸೆಯ ಯುವ ಆಲ್​ರೌಂಡರ್. ಈಗಾಗಲೇ ಮಹಾರಾಜ ಟ್ರೋಫಿಯಲ್ಲಿ ಕಣಕ್ಕಿಳಿದಿರುವ ಯುವ ದಾಂಡಿಗ ಇದೀಗ ಸಿಕೆ ನಾಯ್ದು ಟೂರ್ನಿಯಲ್ಲಿ ಭರ್ಜರಿ ತ್ರಿಶತಕ ಸಿಡಿಸುವ ಮೂಲಕ ಸದ್ದು ಮಾಡಿದ್ದಾರೆ.

25 ಸಿಕ್ಸ್, 23 ಫೋರ್: ಸ್ಪೋಟಕ ತ್ರಿಶತಕ ಸಿಡಿಸಿದ ಕನ್ನಡಿಗ
Macneil Noronha
Follow us on

ಕರ್ನಲ್ ಸಿಕೆ ನಾಯ್ಡು ಟ್ರೋಫಿ 2024ರ ಪಂದ್ಯದಲ್ಲಿ ಕರ್ನಾಟಕ ಪರ ಯುವ ದಾಂಡಿಗ ಮ್ಯಾಕ್ನೀಲ್ ನೊರೊನ್ಹ ತ್ರಿಶತಕ ಬಾರಿಸಿ ಅಬ್ಬರಿಸಿದ್ದಾರೆ. ಅದು ಸಹ 25 ಸಿಕ್ಸ್ ಹಾಗೂ 23 ಫೋರ್​ಗಳನ್ನು ಬಾರಿಸುವ ಮೂಲಕ ಎಂಬುದು ವಿಶೇಷ. ಅಗರ್ತಲಾದಲ್ಲಿ ನಡೆದ ಈ ಪಂದ್ಯದಲ್ಲಿ ಕರ್ನಾಟಕ ಹಾಗೂ ತ್ರಿಪುರಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ಪರ ಮ್ಯಾಕ್ನೀಲ್ ನೊರೊನ್ಹ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.

ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ ಮ್ಯಾಕ್ನೀಲ್ ಮೈದಾನದ ಮೂಲೆ ಮೂಲೆಗೂ ಸಿಕ್ಸ್-ಫೋರ್​ಗಳ ಸುರಿಮಳೆಗೈದರು.
ಪರಿಣಾಮ ಕೇವಲ 335 ಎಸೆತಗಳಲ್ಲಿ ತ್ರಿಶತಕ ಮೂಡಿಬಂತು. ಈ ತ್ರಿಪಲ್ ಸೆಂಚುರಿಯೊಂದಿಗೆ ಅಬ್ಬರ ಮುಂದುವರೆಸಿದ ಮ್ಯಾಕ್ನೀಲ್ ನೊರೊನ್ಹ 348 ಎಸೆತಗಳಲ್ಲಿ 25 ಸಿಕ್ಸ್ ಹಾಗೂ 23 ಫೋರ್​ಗಳೊಂದಿಗೆ 345 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಇನ್ನು ಮ್ಯಾಕ್ನೀಲ್​ಗೆ ಉತ್ತಮ ಸಾಥ್ ನೀಡಿದ ಪ್ರಕಾರ್ ಚತುರ್ವೇದಿ 147 ಎಸೆತಗಳಲ್ಲಿ 13 ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ 91 ರನ್ ಗಳಿಸಿದರು. ಈ ಮೂಲಕ ಕರ್ನಾಟಕ ಅಂಡರ್ 23 ತಂಡವು ಮೊದಲ ಇನಿಂಗ್ಸ್​ನಲ್ಲಿ 580/5 ರನ್ ಕಲೆಹಾಕಿ ಡಿಕ್ಲೇರ್ ಘೋಷಿಸಿತು.

ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ತ್ರಿಪುರಾ ತಂಡವು ಕೇವಲ 104 ರನ್​ಗಳಿಗೆ ಆಲೌಟ್ ಆಯಿತು. ಕರ್ನಾಟಕ ಪರ ಯುವ ಬೌಲರ್ ಸಶಿಕುಮಾರ್ 7 ವಿಕೆಟ್ ಕಬಳಿಸಿ ಮಿಂಚಿದರು.

ಯಾರು ಈ ನೊರೊನ್ಹ?

ಮ್ಯಾಕ್ನೀಲ್ ನೊರೊನ್ಹ ಕರ್ನಾಟಕದ ಭರವಸೆಯ ಯುವ ಆಲ್​ರೌಂಡರ್. ಈಗಾಗಲೇ ಮಹಾರಾಜ ಟ್ರೋಫಿಯಲ್ಲಿ ಕಣಕ್ಕಿಳಿದಿರುವ ಯುವ ದಾಂಡಿಗ ಇದೀಗ ಸಿಕೆ ನಾಯ್ದು ಟೂರ್ನಿಯಲ್ಲಿ ಭರ್ಜರಿ ತ್ರಿಶತಕ ಸಿಡಿಸುವ ಮೂಲಕ ಸದ್ದು ಮಾಡಿದ್ದಾರೆ. ಅಲ್ಲದೆ ಬಿರುಸಿನ ಬ್ಯಾಟಿಂಗ್​ಗೆ ಹೆಸರುವಾಸಿಯಾಗಿರುವ ಯುವ ದಾಂಡಿಗ ಮುಂಬರುವ ದಿನಗಳಲ್ಲಿ ಐಪಿಎಲ್​ನಲ್ಲಿ ಅವಕಾಶ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ: RCB ಉಳಿಸಿಕೊಂಡ ಆರು ಆಟಗಾರರು ಯಾರೆಲ್ಲಾ ಗೊತ್ತಾ?

ಏನಿದು ಸಿಕೆ ನಾಯ್ದು ಟ್ರೋಫಿ?

ಕರ್ನಲ್ ಸಿಕೆ ನಾಯ್ದು ಭಾರತ ಟೆಸ್ಟ್ ತಂಡದ ಮೊದಲ ನಾಯಕ. ಅವರ ಹೆಸರಿನಲ್ಲಿ ಬಿಸಿಸಿಐ ಅಂಡರ್​-23 ಟೂರ್ನಿಯನ್ನು ಆಯೋಜಿಸುತ್ತಿದೆ. ಈ ಟೂರ್ನಿಯಲ್ಲಿ ವಿವಿಧ ರಾಜ್ಯ ಮತ್ತು ಪ್ರಾದೇಶಿಕ ಕ್ರಿಕೆಟ್ ಸಂಸ್ಥೆಗಳನ್ನು ಪ್ರತಿನಿಧಿಸುವ ಕ್ರಿಕೆಟ್ ತಂಡಗಳು ಪಾಲ್ಗೊಳ್ಳುತ್ತವೆ.