ಕಾಮನ್​ವೆಲ್ತ್ ಗೇಮ್ಸ್​ನಿಂದ 12 ಕ್ರೀಡೆಗಳಿಗೆ ಕೊಕ್: ಭಾರತಕ್ಕೆ ಹಿನ್ನಡೆ..!

Commonwealth Games 2026: ಭಾರತವು ಕಾಮನ್​ವೆಲ್ತ್ ಗೇಮ್ಸ್​ನ ಶೂಟಿಂಗ್​ನಲ್ಲಿ ಈವರೆಗೆ 135 ಪದಕಗಳನ್ನು ಗೆದ್ದಿದೆ. ಹಾಗೆಯೇ ಬ್ಯಾಡ್ಮಿಂಟನ್‌ನಲ್ಲಿ 31 ಪದಕಗಳನ್ನು ಜಯಿಸಿದ್ದಾರೆ. ಇನ್ನು ಕುಸ್ತಿಯಲ್ಲಿ ಭಾರತ 114 ಪದಕಗಳನ್ನು ಗೆದ್ದಿದ್ದರೆ, ಹಾಕಿಯಲ್ಲಿ ಒಟ್ಟು 8 ಬಾರಿ ಚಾಂಪಿಯನ್ ಆಗಿದ್ದಾರೆ.

ಕಾಮನ್​ವೆಲ್ತ್ ಗೇಮ್ಸ್​ನಿಂದ 12 ಕ್ರೀಡೆಗಳಿಗೆ ಕೊಕ್: ಭಾರತಕ್ಕೆ ಹಿನ್ನಡೆ..!
CWG
Follow us
ಝಾಹಿರ್ ಯೂಸುಫ್
|

Updated on: Oct 23, 2024 | 7:39 AM

ಗ್ಲಾಸ್ಗೋದಲ್ಲಿ ನಡೆಯಲಿರುವ 2026 ರ ಕಾಮನ್​ವೆಲ್ತ್​ ಗೇಮ್ಸ್​ನಿಂದ 12 ಕ್ರೀಡೆಗಳನ್ನು ಕೈ ಬಿಡಲಾಗಿದೆ. 23ನೇ ಆವೃತ್ತಿಯ ಕ್ರೀಡಾಕೂಟವನ್ನು ಬಜೆಟ್ ಸ್ನೇಹಿಯಾಗಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಆದರೆ ಇಲ್ಲಿ ಕೈ ಬಿಡಲಾದ ಪ್ರಮುಖ ಕ್ರೀಡೆಗಳಲ್ಲಿ ಭಾರತವು ಬಲಿಷ್ಠವಾಗಿ ಗುರುತಿಸಿಕೊಂಡಿತ್ತು ಎಂಬುದು ಉಲ್ಲೇಖಾರ್ಹ.

ಹಾಕಿ, ಬ್ಯಾಡ್ಮಿಂಟನ್, ಕ್ರಿಕೆಟ್, ಶೂಟಿಂಗ್ ಮತ್ತು ಕುಸ್ತಿಗಳಲ್ಲಿ ಭಾರತೀಯ ಅಥ್ಲೀಟ್‌ಗಳು ಉತ್ತಮ ಸಾಧನೆ ತೋರುತ್ತಿದ್ದರು. ಆದರೀಗ ಈ ಕ್ರೀಡೆಗಳನ್ನು ತೆಗೆದು ಹಾಕಿರುವುದರಿಂದ ಕಾಮನ್​ವೆಲ್ತ್ ಗೇಮ್ಸ್ ಆರಂಭಕ್ಕೂ ಮುನ್ನವೇ ಭಾರತಕ್ಕೆ ಹಿನ್ನಡೆಯಾಗಿದೆ.

ಏಕೆಂದರೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಹರ್ಮನ್‌ಪ್ರೀತ್ ಸಿಂಗ್, ಮನು ಬಾಕರ್, ಮಣಿಕಾ ಬಾತ್ರಾ, ಅಮನ್ ಸೆಹ್ರಾವತ್, ಲಕ್ಷಯ್ ಸೇನ್ ಮತ್ತು ಇತರ ಅನೇಕ ಕ್ರೀಡಾಪಟುಗಳು ಕಾಮನ್‌ವೆಲ್ತ್ ಗೇಮ್ಸ್‌ನಿಂದ ಹೊರಗುಳಿಯಲಿದ್ದಾರೆ.

ಬರ್ಮಿಂಗ್ ಹ್ಯಾಮ್ ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಭಾರತ 61 ಪದಕಗಳನ್ನು ಗೆದ್ದಿತ್ತು. ಇದರಲ್ಲಿ ಕುಸ್ತಿಯಲ್ಲಿ 12 ಪದಕ, ಭಾರ ಎತ್ತುವಿಕೆಯಲ್ಲಿ 10 ಪದಕ, ಅಥ್ಲೆಟಿಕ್ಸ್‌ನಲ್ಲಿ 8 ಪದಕ, ಬಾಕ್ಸಿಂಗ್ ಮತ್ತು ಟೇಬಲ್ ಟೆನಿಸ್‌ನಲ್ಲಿ ತಲಾ 7 ಪದಕಗಳನ್ನು ಗೆದ್ದುಕೊಂಡಿದೆ. ಹಾಗೆಯೇ ಭಾರತ ಮಹಿಳಾ ಕ್ರಿಕೆಟ್ ತಂಡವೂ ಬೆಳ್ಳಿ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.

ಇದನ್ನೂ ಓದಿ: RCB ಉಳಿಸಿಕೊಂಡ ಆರು ಆಟಗಾರರು ಯಾರೆಲ್ಲಾ ಗೊತ್ತಾ?

ಆದರೆ ಸ್ಕಾಟ್ಲೆಂಡ್​ನ ಗ್ಲಾಸ್ಗೋದಲ್ಲಿ ನಡೆಯಲಿರುವ 2026ರ ಕಾಮನ್‌ವೆಲ್ತ್ ಗೇಮ್ಸ್​ನಿಂದ ಆರ್ಥಿಕ ಕಾರಣವನ್ನು ಮುಂದಿಟ್ಟುಕೊಂಡು ಪ್ರಮುಖ ಕ್ರೀಡೆಗಳನ್ನು ಕೈ ಬಿಡಲಾಗಿದೆ. ಆರ್ಥಿಕ ಹೊಡೆತವನ್ನು ಸರಿದೂಗಿಸಲು ಹಾಗೂ ಲಾಜಿಸ್ಟಿಕ್ ಸಮಸ್ಯೆಯನ್ನು ಪರಿಹರಿಸಲು ಕಾಮನ್‌ವೆಲ್ತ್ ಫೆಡರೇಶನ್ ಹಾಕಿ, ಕುಸ್ತಿ, ಬ್ಯಾಡ್ಮಿಂಟನ್, ಶೂಟಿಂಗ್ ಮುಂತಾದ ಕ್ರೀಡೆಗಳನ್ನು ಕೈ ಬಿಡಲು ನಿರ್ಧರಿಸಿದೆ.

ಕಾಮನ್‌ವೆಲ್ತ್ ಗೇಮ್ಸ್ 2026 ರಿಂದ ಕೈ ಬಿಡಲಾದ ಕ್ರೀಡೆಗಳು:

  • ಹಾಕಿ
  • ಕ್ರಿಕೆಟ್
  • ಬ್ಯಾಡ್ಮಿಂಟನ್
  • ಕುಸ್ತಿ
  • ಟೇಬಲ್ ಟೆನ್ನಿಸ್
  • ಡೈವಿಂಗ್
  • ರಗ್ಬಿ ಸೆವೆನ್ಸ್
  • ಬೀಚ್ ವಾಲಿಬಾಲ್
  • ಮೌಂಟೇನ್ ಬೈಕಿಂಗ್
  • ಸ್ಕ್ವ್ಯಾಷ್
  • ರಿದಮಿಕ್ ಜಿಮ್ನಾಸ್ಟಿಕ್ಸ್
  • ಶೂಟಿಂಗ್

ಶೂಟಿಂಗ್, ಕುಸ್ತಿಯಲ್ಲಿ ಭಾರತದ ಪಾರುಪತ್ಯ:

ಭಾರತವು ಕಾಮನ್​ವೆಲ್ತ್ ಗೇಮ್ಸ್​ನ ಶೂಟಿಂಗ್​ನಲ್ಲಿ ಈವರೆಗೆ 135 ಪದಕಗಳನ್ನು ಗೆದ್ದಿದೆ. ಹಾಗೆಯೇ ಬ್ಯಾಡ್ಮಿಂಟನ್‌ನಲ್ಲಿ 31 ಪದಕಗಳನ್ನು ಜಯಿಸಿದ್ದಾರೆ. ಇನ್ನು ಕುಸ್ತಿಯಲ್ಲಿ ಭಾರತ 114 ಪದಕಗಳನ್ನು ಗೆದ್ದಿದ್ದರೆ, ಹಾಕಿಯಲ್ಲಿ ಒಟ್ಟು 8 ಬಾರಿ ಚಾಂಪಿಯನ್ ಆಗಿದ್ದಾರೆ. ಆದರೀಗ ಈ ಮೂರು ಪ್ರಮುಖ ಕ್ರೀಡೆಗಳನ್ನು ತೆಗೆದು ಹಾಕಲಾಗಿದ್ದು, ಹೀಗಾಗಿ ಮುಂಬರುವ ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಭಾರತದ ಪದಕಗಳ ಸಂಖ್ಯೆಯುವ ಕಡಿಮೆಯಾಗುವುದರಲ್ಲಿ ಡೌಟೇ ಇಲ್ಲ.

ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ