CWG 2022: ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಮೊದಲ ಬಾರಿಗೆ ಪದಕ ಗೆದ್ದ ಭಾರತದ ಸ್ಪರ್ಧಿಗಳಿವರು
CWG 2022: ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತ 61 ಪದಕಗಳನ್ನು ಗೆದ್ದಿದೆ. ಈ 61 ಪದಕಗಳಲ್ಲಿ 22 ಚಿನ್ನ, 15 ಬೆಳ್ಳಿ ಮತ್ತು 23 ಕಂಚಿನ ಪದಕಗಳು ಸೇರಿವೆ.
ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ (Commonwealth Games) ಭಾರತ 61 ಪದಕಗಳನ್ನು ಗೆದ್ದಿದೆ. ಈ 61 ಪದಕಗಳಲ್ಲಿ 22 ಚಿನ್ನ, 15 ಬೆಳ್ಳಿ ಮತ್ತು 23 ಕಂಚಿನ ಪದಕಗಳು ಸೇರಿವೆ. ಕಳೆದ ಬಾರಿಗಿಂತ ಈ ಬಾರಿ ಭಾರತದ ಪದಕಗಳ ಸಂಖ್ಯೆ ಕಡಿಮೆಯಾಗಿದೆ ಆದರೆ ಅಭಿಮಾನಿಗಳು ಈ ಬಾರಿ ಅನೇಕ ಐತಿಹಾಸಿಕ ಮತ್ತು ಸುವರ್ಣ ಕ್ಷಣಗಳನ್ನು ನೋಡಿದರು. ಇದಕ್ಕೆ ಪ್ರಮುಖ ಕಾರಣ ಮೊದಲ ಬಾರಿಗೆ ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಪದಕ ಗೆದ್ದ ಭಾರತದ ಅನೇಕ ಸ್ಪರ್ಧಿಗಳು.
- ಪುರುಷರ 3000 ಮೀಟರ್ ಸ್ಟೀಪಲ್ ಚೇಸ್ ಸ್ಪರ್ಧೆಯಲ್ಲಿ ಅವಿನಾಶ್ ಸೇಬಲ್ ಬೆಳ್ಳಿ ಪದಕ ಗೆದ್ದರು. 8:11.20 ನಿಮಿಷದಲ್ಲಿ 3000 ಮೀಟರ್ ನಡಿಗೆಯನ್ನು ಪೂರ್ಣಗೊಳಿಸಿ ಎರಡನೇ ಸ್ಥಾನ ಪಡೆದರು. ಇದು ಅವಿನಾಶ್ ಸೇಬಲ್ ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯೊಂದಿಗೆ ರಾಷ್ಟ್ರೀಯ ದಾಖಲೆಯಾಗಿದೆ.
- ಪುರುಷರ ಹೈಜಂಪ್ ಸ್ಪರ್ಧೆಯಲ್ಲಿ ತೇಜಸ್ವಿನ್ ಶಂಕರ್ ಕಂಚಿನ ಪದಕ ಗೆದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದರು. ಈ ಮೂಲಕ ಕಾಮನ್ ವೆಲ್ತ್ ಕ್ರೀಡಾಕೂಟದ ಹೈಜಂಪ್ ವಿಭಾಗದಲ್ಲಿ ದೇಶಕ್ಕೆ ಪದಕ ಗೆದ್ದ ಮೊದಲ ಅಥ್ಲೀಟ್ ಎನಿಸಿಕೊಂಡರು. ಹೈಜಂಪ್ ಫೈನಲ್ ನಲ್ಲಿ ಶಂಕರ್ 2.22 ಮೀಟರ್ ದೂರ ಜಿಗಿದು ಮೂರನೇ ಸ್ಥಾನ ಪಡೆದರು.
- ಟ್ರಿಪಲ್ ಜಂಪ್ ನಲ್ಲಿ ಈ ಬಾರಿ ಭಾರತದ ಇಬ್ಬರು ಅಥ್ಲೀಟ್ ಗಳು ಇತಿಹಾಸ ನಿರ್ಮಿಸಿದ್ದಾರೆ. ಆಲ್ದಸ್ ಪಾಲ್ ಚಿನ್ನ ಗೆದ್ದ ಆರನೇ ಭಾರತೀಯ ಅಥ್ಲೀಟ್ ಆದರು. ಅದೇ ರೀತಿ ಕೇರಳದ ಅಬ್ದುಲ್ಲಾ ಅಬೂಬಕರ್ ಕೂಡ ಈ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.
- 10,000 ಮೀಟರ್ ಓಟದ ನಡಿಗೆ ಸ್ಪರ್ಧೆಯಲ್ಲಿ ಪ್ರಿಯಾಂಕಾ ಗೋಸ್ವಾಮಿ ಬೆಳ್ಳಿ ಪದಕ ಗೆದ್ದಿದ್ದಾರೆ. ರೇಸ್‌ವಾಕ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.
- ಲಾನ್ ಬಾಲ್‌ನಲ್ಲಿ ಭಾರತ ಮಹಿಳಾ ತಂಡ ಐತಿಹಾಸಿಕ ಚಿನ್ನದ ಪದಕ ಗೆದ್ದಿದೆ. ಲವ್ಲಿ ಚೌಬೆ (ಲೀಡ್), ಪಿಂಕಿ (ದ್ವಿತೀಯ), ನಯನಮೋನಿ ಸೈಕಿಯಾ (ತೃತೀಯ) ಮತ್ತು ರೂಪಾ ರಾಣಿ ಟಿರ್ಕಿ (ಸ್ಲಿಪ್) ಭಾರತದ ಕ್ವಾರ್ಟೆಟ್ ಚಿನ್ನದ ಪದಕ ಗೆದ್ದರು. ಇದೇ ವೇಳೆ ಪುರುಷರ ತಂಡವೂ ಬೆಳ್ಳಿ ಪದಕ ತನ್ನದಾಗಿಸಿಕೊಂಡಿತು. ಈ ಕ್ರೀಡೆಯಲ್ಲಿ ಭಾರತ ಪದಕ ಜಯಿಸಿದ್ದು ಇದೇ ಮೊದಲು.
- ಭಾರತದ ವೇಟ್ ಲಿಫ್ಟರ್ ಹರ್ಜಿಂದರ್ ಕೌರ್ ಮಹಿಳೆಯರ 71 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಪಡೆದರು. ಹರ್ಜಿಂದರ್ ಸ್ನ್ಯಾಚ್‌ನಲ್ಲಿ 93 ಕೆಜಿ ಮತ್ತು ಕ್ಲೀನ್ ಮತ್ತು ಜರ್ಕ್‌ನಲ್ಲಿ 119 ಕೆಜಿ ಒಟ್ಟು 212 ಕೆಜಿ ಭಾರ ಎತ್ತುವ ಮೂಲಕ ಕಂಚಿನ ಪದಕ ಗೆದ್ದರು. ಹರ್ಜಿಂದರ್ ಕೌರ್ ಕಾಮನ್‌ವೆಲ್ತ್‌ನಲ್ಲಿ ಭಾಗವಹಿಸುತ್ತಿರುವುದು ಇದೇ ಮೊದಲು.
- ಈ ಬಾರಿ ಟೇಬಲ್ ಟೆನಿಸ್ ನಲ್ಲಿ ಭಾರತದ ಸ್ಟಾರ್ ಟೇಬಲ್ ಟೆನಿಸ್ ಆಟಗಾರ್ತಿ ಮನಿಕಾ ಬಾತ್ರಾ ಸೋಲನುಭವಿಸಿದರೂ ಭಾರತಕ್ಕೆ ಶ್ರೀಜಾ ಅಕುಲಾ ರೂಪದಲ್ಲಿ ಹೊಸ ತಾರೆ ಉದಯಿಸಿದ್ದಾರೆ. ಮಿಶ್ರ ಡಬಲ್ಸ್‌ನಲ್ಲಿ, ಅವರು ಅಚಂತ್ ಶರತ್ ಕಮಲ್ ಅವರೊಂದಿಗೆ ಐತಿಹಾಸಿಕ ಚಿನ್ನದ ಪದಕವನ್ನು ಗೆದ್ದರು.
ಇದನ್ನೂ ಓದಿ