CWG 2022: ಬ್ಯಾಡ್ಮಿಂಟನ್ ಮಿಶ್ರ ಡಬಲ್ಸ್​​ನಲ್ಲಿ ಬೆಳ್ಳಿ ಗೆದ್ದ ಅಶ್ವಿನಿ ಪೊನ್ನಪ್ಪಗೆ ರಾಜ್ಯ ಸರ್ಕಾರದಿಂದ ನಗದು ಬಹುಮಾನ ಘೋಷಣೆ

CWG 2022: ಭಾರತ 18ನೇ ಬಾರಿಗೆ ಈ ಪಂದ್ಯಗಳಲ್ಲಿ ಭಾಗವಹಿಸುತ್ತಿದ್ದು, ಇದರಲ್ಲಿ 104 ಪುರುಷರು ಮತ್ತು 103 ಮಹಿಳೆಯರು ಭಾಗವಹಿಸಿದ್ದರು. ಈ ಆಟಗಾರ 61 ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರು.

CWG 2022: ಬ್ಯಾಡ್ಮಿಂಟನ್ ಮಿಶ್ರ ಡಬಲ್ಸ್​​ನಲ್ಲಿ ಬೆಳ್ಳಿ ಗೆದ್ದ ಅಶ್ವಿನಿ ಪೊನ್ನಪ್ಪಗೆ ರಾಜ್ಯ ಸರ್ಕಾರದಿಂದ ನಗದು ಬಹುಮಾನ ಘೋಷಣೆ
Follow us
TV9 Web
| Updated By: ಪೃಥ್ವಿಶಂಕರ

Updated on:Aug 09, 2022 | 2:46 PM

ಜುಲೈ 28 ರಂದು ಆರಂಭವಾದ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ (Commonwealth Games) ಸೋಮವಾರ ಅದ್ಧೂರಿ ತೆರೆ ಬಿದ್ದಿದೆ. ಭಾರತದ ದೃಷ್ಟಿಕೋನದಿಂದ, ಈ ಕ್ರೀಡಾಕೂಟ ಬಹಳ ವಿಶೇಷವಾಗಿತ್ತು. ಅಲ್ಲಿ ಅನೇಕ ಆಟಗಾರರು ಇತಿಹಾಸ ಸೃಷ್ಟಿಸಿದರು, ಅನೇಕರು ದಾಖಲೆಗಳನ್ನು ಮಾಡಿ ಇಡೀ ದೇಶವೇ ಹೆಮ್ಮೆ ಪಡುವಂತಹ ಕೆಲಸ ಮಾಡಿದರು. ಇವರಲ್ಲಿ ಕರ್ನಾಟಕದ ಹೆಮ್ಮೆ ಅಶ್ವಿನಿ ಪೊನ್ನಪ್ಪ (ashwini ponnappa ) ಬ್ಯಾಡ್ಮಿಂಟನ್ ಮಿಕ್ಸೆಡ್ ಡಬಲ್ಸ್​ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಈಗ ಅವರ ಸಾಧನೆಯನ್ನು ಗುರುತಿಸಿರುವ ರಾಜ್ಯ ಸರ್ಕಾರ ಭರ್ಜರಿ ಬಹುಮಾನ ಘೋಷಿಸಿದೆ. ದೇಶಕ್ಕೆ ಕೀರ್ತಿ ತಂದ ಅಶ್ವಿನಿ ಪೊನ್ನಪ್ಪ ಅವರಿಗೆ ರಾಜ್ಯ ಸರ್ಕಾರದ ವತಿಯಿಂದ 15 ಲಕ್ಷ ರೂ. ನಗದು ಬಹುಮಾನ ನೀಡುವುದಾಗಿ ಕ್ರೀಡಾ ಸಚಿವ ನಾರಾಯಣ ಗೌಡ ಘೋಷಿಸಿದ್ದಾರೆ.

ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಅವರ ಚಿನ್ನದೊಂದಿಗೆ ಆರಂಭವಾದ ಈ ಕಾಮನ್​ವೆಲ್ತ್ ಪಯಣ ಹಾಕಿ ಬೆಳ್ಳಿ ಪದಕದೊಂದಿಗೆ ಕೊನೆಗೊಂಡಿತು. ಭಾರತ 18ನೇ ಬಾರಿಗೆ ಈ ಪಂದ್ಯಗಳಲ್ಲಿ ಭಾಗವಹಿಸುತ್ತಿದ್ದು, ಇದರಲ್ಲಿ 104 ಪುರುಷರು ಮತ್ತು 103 ಮಹಿಳೆಯರು ಭಾಗವಹಿಸಿದ್ದರು. ಈ ಆಟಗಾರ 61 ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರು. ಭಾರತ 22 ಚಿನ್ನ, 16 ಬೆಳ್ಳಿ ಮತ್ತು 23 ಕಂಚಿನ ಪದಕಗಳನ್ನು ಗೆದ್ದಿದೆ. ಪುರುಷರು 35 ಮತ್ತು ಮಹಿಳೆಯರು 26 ಪದಕಗಳನ್ನು ಗೆದ್ದಿದ್ದಾರೆ. ಈ ಮೂಲಕ ಭಾರತ ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಕೆನಡಾ ನಂತರ ನಾಲ್ಕನೇ ಸ್ಥಾನ ಪಡೆಯಿತು.

ಭಾರತ ಕುಸ್ತಿಯಲ್ಲಿ ಗರಿಷ್ಠ 12 ಪದಕಗಳನ್ನು ಪಡೆದುಕೊಂಡಿತು, ಇದರಲ್ಲಿ ಆರು ಗೋಲ್ಡ್, ಒಂದು ಬೆಳ್ಳಿ ಮತ್ತು ಐದು ಕಂಚಿನ ಪದಕಗಳು ಸೇರಿದ್ದವು. ಲಾನ್ ಬಾಲ್‌ನಲ್ಲಿ (ಒಂದು ಚಿನ್ನ, ಒಂದು ಬೆಳ್ಳಿ) ಮೊದಲ ಬಾರಿಗೆ ದೇಶವು ಪದಕ ಗೆಲ್ಲುವಲ್ಲಿ ಯಶಸ್ವಿಯಾಯಿತು. ಅದೇ ಸಮಯದಲ್ಲಿ, ಅವರು ಅಥ್ಲೆಟಿಕ್ಸ್ ಮತ್ತು ಬ್ಯಾಡ್ಮಿಂಟನ್ನಲ್ಲಿ ತಮ್ಮ ಅತ್ಯುತ್ತಮ ಸಾಧನೆ ಮಾಡಿದರು.

ಇದನ್ನೂ ಓದಿ
Image
CWG 2022: ಅಥ್ಲೆಟಿಕ್ಸ್​ನಲ್ಲಿ ಭಾರತಕ್ಕೆ ಮತ್ತೊಂದು ಪದಕ; 10 ಕಿ.ಮೀ ನಡಿಗೆಯಲ್ಲಿ ಕಂಚು ಗೆದ್ದ ಸಂದೀಪ್ ಕುಮಾರ್
Image
CWG 2022: ಟ್ರಿಪಲ್ ಜಂಪ್​ನಲ್ಲಿ ಇತಿಹಾಸ ನಿರ್ಮಿಸಿದ ಭಾರತ; ಎಲ್ಡೋಸ್ ಪೌಲ್​ಗೆ ಚಿನ್ನ, ಬೆಳ್ಳಿ ಗೆದ್ದ ಅಬ್ದುಲ್ಲಾ..!
Image
CWG 2022: ಬಾಕ್ಸಿಂಗ್​ನಲ್ಲಿ ಮತ್ತೊಂದು ಸ್ವರ್ಣ; 51 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದ ಅಮಿತ್ ಪಂಗಲ್

ಭಾರತ ವೇಟ್‌ಲಿಫ್ಟಿಂಗ್‌ನಲ್ಲಿ 10, ಟೇಬಲ್ ಟೆನಿಸ್‌ನಲ್ಲಿ 7, ವೇಟ್‌ಲಿಫ್ಟಿಂಗ್‌ನಲ್ಲಿ 10, ಬಾಕ್ಸಿಂಗ್‌ನಲ್ಲಿ 7, ಬ್ಯಾಡ್ಮಿಂಟನ್‌ನಲ್ಲಿ 6, ಅಥ್ಲೆಟಿಕ್ಸ್‌ನಲ್ಲಿ 8, ಲಾನ್ ಬಾಲ್‌ನಲ್ಲಿ 2, ಪ್ಯಾರಾ ಲಿಫ್ಟಿಂಗ್‌ನಲ್ಲಿ ಒಂದು, ಜೂಡೋದಲ್ಲಿ ಮೂರು, ಹಾಕಿಯಲ್ಲಿ 2, ಕ್ರಿಕೆಟ್‌ನಲ್ಲಿ ಒಂದು ಮತ್ತು ಒಂದು ಸ್ಕ್ವಾಷ್‌ನಲ್ಲಿ ಎರಡು ಪದಕಗಳನ್ನು ಗೆದ್ದಿದ್ದಾರೆ.

ಕಳೆದ ವರ್ಷ ಗೋಲ್ಡ್ ಕೋಸ್ಟ್ ಕ್ರೀಡಾಕೂಟದಲ್ಲಿ ಭಾರತ 66 ಪದಕಗಳನ್ನು ಗೆದ್ದಿತ್ತು. ಈ ಪೈಕಿ 26 ಚಿನ್ನ, 20 ಬೆಳ್ಳಿ ಹಾಗೂ 20 ಕಂಚಿನ ಪದಕಗಳು ಸೇರಿದ್ದವು. ಈ ಬಾರಿಯ ಗೇಮ್ಸ್‌ನ ಭಾಗವಾಗದ ಶೂಟಿಂಗ್‌ನಿಂದ ಭಾರತಕ್ಕೆ 16 ಪದಕಗಳು ಬಂದಿದ್ದವು. ಇಂತಹ ಪರಿಸ್ಥಿತಿಯಲ್ಲಿ ಭಾರತದ ದೃಷ್ಟಿಯಿಂದ ಈ ಬಾರಿಯ ಪ್ರದರ್ಶನ ಅತ್ಯಂತ ವಿಶೇಷವಾಗಿತ್ತು.

Published On - 2:41 pm, Tue, 9 August 22

ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು