ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಭಾರತೀಯ ಕ್ರೀಡಾಪಟುಗಳು ಅದ್ಭುತಗಳನ್ನು ಮಾಡಿದ್ದಾರೆ. CWG 2022 ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ಭಾರತವು ಮೊದಲ ಬಾರಿಗೆ ಚಿನ್ನದ ಪದಕವನ್ನು ಗೆದ್ದಿದೆ. ಭಾರತದ ಎಲ್ಡೋಸ್ ಪೌಲ್ ದೇಶಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಅದೇ ಸಮಯದಲ್ಲಿ ಭಾರತದ ಅಥ್ಲೀಟ್ ಅಬ್ದುಲ್ಲಾ ಬೆಳ್ಳಿ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾದರು. ಭಾರತದ ಮತ್ತೊಬ್ಬ ಅಥ್ಲೀಟ್ ಪ್ರವೀಣ್ ಕಂಚಿನ ಪದಕದಿಂದ ವಂಚಿತರಾಗಿ ನಾಲ್ಕನೇ ಸ್ಥಾನದಲ್ಲಿದ್ದರು.
ಪೌಲ್ 17.03 ಮೀಟರ್ ಜಿಗಿತದೊಂದಿಗೆ ಮೊದಲ ಸ್ಥಾನವನ್ನು ಪಡೆದರು. ಅದೇ ಸಮಯದಲ್ಲಿ, ಭಾರತದ ಎರಡನೇ ಅಥ್ಲೀಟ್ ಅಬ್ದುಲ್ಲಾ ಅಬೂಬಕರ್ ಕೇವಲ .01 (17.02) ಅಂತರದಿಂದ ಎರಡನೇ ಸ್ಥಾನ ಪಡೆದುಕೊಂಡರು.
ಅಬ್ದುಲ್ಲಾ ಅಬೂಬಕರ್ ಕುರಿತು ಮಾತನಾಡುವುದಾದರೆ, ಅವರು ನಾಲ್ಕನೇ ಪ್ರಯತ್ನದವರೆಗೆ ಕೇವಲ 16.70 ಮೀಟರ್‌ಗಳಷ್ಟು ಜಿಗಿದರು, ಆದರೆ ಐದನೇ ಪ್ರಯತ್ನದಲ್ಲಿ ಈ ಆಟಗಾರ 17.02 ಮೀಟರ್‌ಗಳಷ್ಟು ಜಿಗಿದು ಎರಡನೇ ಸ್ಥಾನ ತಲುಪಿದರು. ಈ ಮೂಲಕ ಅಬ್ದುಲ್ಲಾ ಬೆಳ್ಳಿ ಪದಕ ಗೆದ್ದರು.
ಪೌಲ್ ತನ್ನ ಮೊದಲ ಪ್ರಯತ್ನದಲ್ಲಿ ಕೇವಲ 14.62 ಮೀಟರ್ ಜಿಗಿದಿದ್ದರು. ಇದಾದ ಬಳಿಕ ಮುಂದಿನ ಪ್ರಯತ್ನದಲ್ಲಿ 16.30 ಮೀಟರ್ ಜಿಗಿದರು. ನಂತರ ಪೌಲ್ 17.03 ಮೀಟರ್ ಜಿಗಿದು ಎಲ್ಲರನ್ನು ಅಚ್ಚರಿಗೊಳಿಸಿದರು.
ಕಾಮನ್‌ವೆಲ್ತ್ ಗೇಮ್ಸ್‌ನ ಪುರುಷರ ಟ್ರಿಪಲ್ ಜಂಪ್‌ನಲ್ಲಿ ಭಾರತಕ್ಕೆ ಮೊದಲ ಬಾರಿಗೆ ಚಿನ್ನ ಲಭಿಸಿದೆ. ಅದೇ ಸಮಯದಲ್ಲಿ ಭಾರತ ಎರಡನೇ ಬಾರಿಗೆ ಬೆಳ್ಳಿ ಪದಕ ಗೆದ್ದಿದೆ. ಮೊಹಿಂದರ್ ಸಿಂಗ್ ಗಿಲ್ ಮೊದಲು 1970 ರಲ್ಲಿ ಕಂಚಿನ ಪದಕ ಗೆದ್ದರು. ಇದಾದ ನಂತರ ಮೊಹಿಂದರ್ ಸಿಂಗ್ ಗಿಲ್ 1974 ರಲ್ಲಿ ಬೆಳ್ಳಿ ಪದಕ ಪಡೆದರು. 2010 ರಲ್ಲಿ ರಂಜಿತ್ ಮಹೇಶ್ವರಿ ಮತ್ತು 2014 ರಲ್ಲಿ ಅರ್ಪಿಂದರ್ ಸಿಂಗ್ ಕಂಚಿನ ಪದಕವನ್ನು ಗೆದ್ದರು. ಇದೀಗ ಪಾಲ್ ಚಿನ್ನ ಹಾಗೂ ಅಬ್ದುಲ್ಲಾ ಬೆಳ್ಳಿ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
Published On - 4:37 pm, Sun, 7 August 22