Maharaja Trophy KSCA T20 2023: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮಹಾರಾಜ ಟ್ರೋಫಿ ಟಿ20 ಟೂರ್ನಿಯ 2ನೇ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ಭರ್ಜರಿ ಜಯ ಸಾಧಿಸಿದೆ. ಮಳೆಬಾಧಿತ ಈ ಪಂದ್ಯದಲ್ಲಿ ಟಾಸ್ ಗೆದ್ದ ಹುಬ್ಬಳ್ಳಿ ಟೈಗರ್ಸ್ ತಂಡದ ನಾಯಕ ಮನೀಶ್ ಪಾಂಡೆ ಬೌಲಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಮೈಸೂರು ವಾರಿಯರ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಕಾರ್ತಿಕ್ (0) ಶೂನ್ಯಕ್ಕೆ ಔಟಾದರೆ, ರವಿಕುಮಾರ್ ಸಮರ್ಥ್ ಕೇವಲ 21 ರನ್ಗಳಿಸಿದರು. ಇನ್ನು ನಾಯಕ ನಾಯಕ ಕರುಣ್ ನಾಯರ್ ಇನಿಂಗ್ಸ್ 7 ರನ್ಗಳಿಗೆ ಸೀಮಿತವಾಯಿತು.
ಇದಾಗ್ಯೂ ಅಂತಿಮ ಹಂತದಲ್ಲಿ 20 ರನ್ಗಳ ಉಪಯುಕ್ತ ಕಾಣಿಕೆ ನೀಡಿದ ಜಗದೀಶ್ ಸುಚಿತ್ ತಂಡದ ಮೊತ್ತವನ್ನು 100 ರ ಗಡಿದಾಟಿಸಿದರು. ಅಂತಿಮವಾಗಿ ಮೈಸೂರು ವಾರಿಯರ್ಸ್ ತಂಡವು 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 119 ರನ್ಗಳಿಸಲಷ್ಟೇ ಶಕ್ತರಾದರು.
ಹುಬ್ಬಳ್ಳಿ ಟೈಗರ್ಸ್ ಪರ ಮಿತ್ರಕಾಂತ್ 3 ವಿಕೆಟ್ ಕಬಳಿಸಿದರೆ, ವಿಧ್ವತ್ ಕಾವೇರಪ್ಪ ಹಾಗೂ ಲವಿಶ್ ಕೌಶಲ್ ತಲಾ 2 ವಿಕೆಟ್ ಪಡೆದು ಮಿಂಚಿದರು.
ಇನ್ನು 120 ರನ್ಗಳ ಸುಲಭ ಗುರಿ ಬೆನ್ನತ್ತಿದ ಹುಬ್ಬಳ್ಳಿ ಟೈಗರ್ಸ್ ತಂಡದ ಆರಂಭಿಕ ಆಟಗಾರ ಲವ್ನೀತ್ ಸಿಸೋಡಿಯಾ (0) ಪ್ರಸಿದ್ಧ್ ಕೃಷ್ಣ ಎಸೆದ ಮೊದಲ ಓವರ್ನಲ್ಲೇ ಕ್ಲೀನ್ ಬೌಲ್ಡ್ ಆದರು. ಆದರೆ ಮತ್ತೋರ್ವ ಓಪನರ್ ಮೊಹಮ್ಮದ್ ತಾಹ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.
ಆರಂಭದಿಂದಲೂ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ಮೊಹಮ್ಮದ್ ತಾಹ ಮೈಸೂರು ವಾರಿಯರ್ಸ್ ಬೌಲರ್ಗಳ ಬೆಂಡೆತ್ತಿದರು. ಪರಿಣಾಮ ತಾಹ ಬ್ಯಾಟ್ನಿಂದ 3 ಭರ್ಜರಿ ಸಿಕ್ಸ್ ಹಾಗೂ 9 ಫೋರ್ಗಳು ಮೂಡಿಬಂತು.
ಮೊಹಮ್ಮದ್ ತಾಹ ಅವರ ಈ ತೂಫಾನ್ ಬ್ಯಾಟಿಂಗ್ ಪರಿಣಾಮ 8 ಓವರ್ ಮುಕ್ತಾಯದ ವೇಳೆ ಹುಬ್ಬಳ್ಳಿ ಟೈಗರ್ಸ್ ತಂಡದ ಮೊತ್ತ 78 ಕ್ಕೆ ಬಂದು ನಿಂತಿತು. ಇನ್ನು 8.1 ಓವರ್ಗಳಲ್ಲಿ 82 ರನ್ಗಳಿಸಿದ್ದ ವೇಳೆ ಮಳೆ ಬಂದಿದ್ದರಿಂದ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು.
ಆ ಬಳಿಕ ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ ಹುಬ್ಬಳ್ಳಿ ಟೈಗರ್ಸ್ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು. ಇನ್ನು ಈ ಪಂದ್ಯದಲ್ಲಿ ಅಜೇಯರಾಗಿ ಉಳಿದ ಮೊಹಮ್ಮದ್ ತಾಹ ಕೇವಲ 30 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ 61 ರನ್ ಚಚ್ಚಿದ್ದರು.
ಹುಬ್ಬಳ್ಳಿ ಟೈಗರ್ಸ್ ಪ್ಲೇಯಿಂಗ್ 11: ಲವ್ನೀತ್ ಸಿಸೋಡಿಯಾ (ವಿಕೆಟ್ ಕೀಪರ್) , ಮೊಹಮ್ಮದ್ ತಾಹಾ , ಮನೀಶ್ ಪಾಂಡೆ (ನಾಯಕ) , ನಾಗ ಭರತ್ , ಪ್ರವೀಣ್ ದುಬೆ , ಮನ್ವಂತ್ ಕುಮಾರ್ , ಎಂ.ಬಿ ದರ್ಶನ್ , ಕೆಸಿ ಕಾರ್ಯಪ್ಪ , ವಿಧ್ವತ್ ಕಾವೇರಪ್ಪ , ಮಿತ್ರಕಾಂತ್ ಯಾದವ್ , ಲವಿಶ್ ಕೌಶಲ್.
ಇದನ್ನೂ ಓದಿ: ಏಕದಿನ ವಿಶ್ವಕಪ್ ಆರಂಭಕ್ಕೂ ಮುನ್ನವೇ ನಿವೃತ್ತಿ ಘೋಷಿಸಿದ ಇಂಗ್ಲೆಂಡ್ ಆಟಗಾರ
ಮೈಸೂರು ವಾರಿಯರ್ಸ್ ಪ್ಲೇಯಿಂಗ್ 11: ಕರುಣ್ ನಾಯರ್ (ನಾಯಕ) , ರವಿಕುಮಾರ್ ಸಮರ್ಥ್ , ಕೋದಂಡ ಅಜಿತ್ ಕಾರ್ತಿಕ್ , ಶಿವಕುಮಾರ್ ರಕ್ಷಿತ್ (ವಿಕೆಟ್ ಕೀಪರ್) , ರಾಹುಲ್ ರಾವತ್ , ಮನೋಜ್ ಭಾಂಡಗೆ , ತುಷಾರ್ ಸಿಂಗ್ , ಜಗದೀಶ ಸುಚಿತ್ , ಮುರಳೀಧರ ವೆಂಕಟೇಶ್ , ಶಶಿಕುಮಾರ್ ಕೆ , ಪ್ರಸಿದ್ಧ್ ಕೃಷ್ಣ.