Maharaja Trophy 2024: ಮಹಾರಾಜ ಟ್ರೋಫಿ ವೇಳಾಪಟ್ಟಿ ಪ್ರಕಟ
Maharaja Trophy 2024: ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಒಟ್ಟು 6 ತಂಡಗಳು ಕಣಕ್ಕಿಳಿಯಲಿವೆ. ಆ ತಂಡಗಳೆಂದರೆ ಬೆಂಗಳೂರು ಬ್ಲಾಸ್ಟರ್ಸ್, ಹುಬ್ಬಳ್ಳಿ ಟೈಗರ್ಸ್, ಶಿವಮೊಗ್ಗ ಲಯನ್ಸ್, ಮಂಗಳೂರು ಡ್ರಾಗನ್ಸ್, ಗುಲ್ಬರ್ಗ ಮಿಸ್ಟಿಕ್ಸ್ ಮತ್ತು ಮೈಸೂರು ವಾರಿಯರ್ಸ್. ಈ ತಂಡಗಳ ನಡುವೆ ಈ ಬಾರಿ ಮಹಾರಾಜ ಟ್ರೋಫಿಗಾಗಿ ಸೆಣಸಾಟ ನಡೆಯಲಿದೆ.
Maharaja Trophy 2024
ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ (KSCA) ಆಯೋಜಿಸುವ ಮಹಾರಾಜ ಟ್ರೋಫಿ ಟಿ20 ಟೂರ್ನಿಯ 3ನೇ ಸೀಸನ್ನ ವೇಳಾಪಟ್ಟಿ ಪ್ರಕಟವಾಗಿದೆ. ಆಗಸ್ಟ್ 15 ರಿಂದ ಶುರುವಾಗಲಿರುವ ಈ ಬಾರಿಯ ಟೂರ್ನಿಯ ಫೈನಲ್ ಪಂದ್ಯವು ಸೆಪ್ಟೆಂಬರ್ 1 ರಂದು ನಡೆಯಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಮತ್ತು ಗುಲ್ಬರ್ಗ ಮಿಸ್ಟಿಕ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯವು ಮಧ್ಯಾಹ್ನ 3 ಗಂಟೆಯಿಂದ ಶುರುವಾಗಲಿದೆ. ಈ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ…
ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಪೂರ್ಣ ವೇಳಾಪಟ್ಟಿ:
- ಗುರುವಾರ, ಆಗಸ್ಟ್ 15, 2024 : ಬೆಂಗಳೂರು ಬ್ಲಾಸ್ಟರ್ಸ್ vs ಗುಲ್ಬರ್ಗ ಮಿಸ್ಟಿಕ್ಸ್, ಮಧ್ಯಾಹ್ನ 3:00 IST
- ಶುಕ್ರವಾರ, ಆಗಸ್ಟ್ 16, 2024 : ಶಿವಮೊಗ್ಗ ಲಯನ್ಸ್ vs ಮೈಸೂರು ವಾರಿಯರ್ಸ್, 7:00 PM IST
- ಶುಕ್ರವಾರ, ಆಗಸ್ಟ್ 16, 2024 : ಮಂಗಳೂರು ಡ್ರ್ಯಾಗನ್ vs ಹುಬ್ಬಳ್ಳಿ ಟೈಗರ್ಸ್, ಮಧ್ಯಾಹ್ನ 3:00 IST
- ಶುಕ್ರವಾರ, ಆಗಸ್ಟ್ 16, 2024 : ಬೆಂಗಳೂರು ಬ್ಲಾಸ್ಟರ್ಸ್ vs ಮೈಸೂರು ವಾರಿಯರ್ಸ್, 7:00 PM IST
- ಶನಿವಾರ, ಆಗಸ್ಟ್ 17, 2024 : ಶಿವಮೊಗ್ಗ ಲಯನ್ಸ್ vs ಮಂಗಳೂರು ಡ್ರಾಗನ್ಸ್, ಮಧ್ಯಾಹ್ನ 3:00 IST
- ಶನಿವಾರ, ಆಗಸ್ಟ್ 17, 2024 : ಗುಲ್ಬರ್ಗ ಮಿಸ್ಟಿಕ್ಸ್ vs ಹುಬ್ಬಳ್ಳಿ ಟೈಗರ್ಸ್, 7:00 PM IST
- ಭಾನುವಾರ, ಆಗಸ್ಟ್ 18, 2024 : ಗುಲ್ಬರ್ಗಾ ಮಿಸ್ಟಿಕ್ಸ್ vs ಮೈಸೂರು ವಾರಿಯರ್ಸ್, ಮಧ್ಯಾಹ್ನ 3:00 IST
- ಭಾನುವಾರ, ಆಗಸ್ಟ್ 18, 2024 : ಬೆಂಗಳೂರು ಬ್ಲಾಸ್ಟರ್ಸ್ vs ಶಿವಮೊಗ್ಗ ಲಯನ್ಸ್, 7:00 PM IST
- ಸೋಮವಾರ, ಆಗಸ್ಟ್ 19, 2024 : ಬೆಂಗಳೂರು ಬ್ಲಾಸ್ಟರ್ಸ್ vs ಹುಬ್ಬಳ್ಳಿ ಟೈಗರ್ಸ್, ಮಧ್ಯಾಹ್ನ 3:00 IST
- ಸೋಮವಾರ, ಆಗಸ್ಟ್ 19, 2024 : ಮೈಸೂರು ವಾರಿಯರ್ಸ್ vs ಮಂಗಳೂರು ಡ್ರಾಗನ್ಸ್, 7:00 PM IST
- ಮಂಗಳವಾರ, ಆಗಸ್ಟ್ 20, 2024 : ಶಿವಮೊಗ್ಗ ಲಯನ್ಸ್ vs ಹುಬ್ಬಳ್ಳಿ ಟೈಗರ್ಸ್, ಮಧ್ಯಾಹ್ನ 3:00 IST
- ಮಂಗಳವಾರ, ಆಗಸ್ಟ್ 20, 2024 : ಗುಲ್ಬರ್ಗಾ ಮಿಸ್ಟಿಕ್ಸ್ vs ಮಂಗಳೂರು ಡ್ರಾಗನ್ಸ್, 7:00 PM IST
- ಬುಧವಾರ, ಆಗಸ್ಟ್ 21, 2024 : ಗುಲ್ಬರ್ಗಾ ಮಿಸ್ಟಿಕ್ಸ್ vs ಶಿವಮೊಗ್ಗ ಲಯನ್ಸ್, 3:00 PM IST
- ಬುಧವಾರ, ಆಗಸ್ಟ್ 21, 2024 : ಮೈಸೂರು ವಾರಿಯರ್ಸ್ vs ಹುಬ್ಬಳ್ಳಿ ಟೈಗರ್ಸ್, 7:00 PM IST
- ಗುರುವಾರ, ಆಗಸ್ಟ್ 22, 2024 : ಮೈಸೂರು ವಾರಿಯರ್ಸ್ vs ಶಿವಮೊಗ್ಗ ಲಯನ್ಸ್, ಮಧ್ಯಾಹ್ನ 3:00 IST
- ಗುರುವಾರ, ಆಗಸ್ಟ್ 22, 2024 : ಬೆಂಗಳೂರು ಬ್ಲಾಸ್ಟರ್ಸ್ vs ಮಂಗಳೂರು ಡ್ರಾಗನ್ಸ್, 7:00 PM IST
- ಶುಕ್ರವಾರ, ಆಗಸ್ಟ್ 23, 2024 : ಬೆಂಗಳೂರು ಬ್ಲಾಸ್ಟರ್ಸ್ vs ಹುಬ್ಬಳ್ಳಿ ಟೈಗರ್ಸ್, ಮಧ್ಯಾಹ್ನ 3:00 IST
- ಶುಕ್ರವಾರ, ಆಗಸ್ಟ್ 23, 2024 : ಮಂಗಳೂರು ಡ್ರಾಗನ್ಸ್ vs ಗುಲ್ಬರ್ಗ ಮಿಸ್ಟಿಕ್ಸ್, 7:00 PM IST
- ಶನಿವಾರ, ಆಗಸ್ಟ್ 24, 2024 : ಗುಲ್ಬರ್ಗ ಮಿಸ್ಟಿಕ್ಸ್ vs ಮೈಸೂರು ವಾರಿಯರ್ಸ್, ಮಧ್ಯಾಹ್ನ 3:00 IST
- ಶನಿವಾರ, ಆಗಸ್ಟ್ 24, 2024 : ಶಿವಮೊಗ್ಗ ಲಯನ್ಸ್ vs ಹುಬ್ಬಳ್ಳಿ ಟೈಗರ್ಸ್, 7:00 PM IST
- ಭಾನುವಾರ, ಆಗಸ್ಟ್ 25, 2024 : ಬೆಂಗಳೂರು ಬ್ಲಾಸ್ಟರ್ಸ್ vs ಮೈಸೂರು ವಾರಿಯರ್ಸ್, ಮಧ್ಯಾಹ್ನ 3:00 IST
- ಭಾನುವಾರ, ಆಗಸ್ಟ್ 25, 2024 : ಮಂಗಳೂರು ಡ್ರಾಗನ್ಸ್ vs ಶಿವಮೊಗ್ಗ ಲಯನ್ಸ್, 7:00 PM IST
- ಸೋಮವಾರ, ಆಗಸ್ಟ್ 26, 2024 : ಮಂಗಳೂರು ಡ್ರಾಗನ್ಸ್ vs ಹುಬ್ಬಳ್ಳಿ ಟೈಗರ್ಸ್, ಮಧ್ಯಾಹ್ನ 3:00 IST
- ಸೋಮವಾರ, ಆಗಸ್ಟ್ 26, 2024 : ಬೆಂಗಳೂರು ಬ್ಲಾಸ್ಟರ್ಸ್ vs ಗುಲ್ಬರ್ಗ ಮಿಸ್ಟಿಕ್ಸ್, 7:00 PM IST
- ಮಂಗಳವಾರ, ಆಗಸ್ಟ್ 27, 2024 : ಗುಲ್ಬರ್ಗ ಮಿಸ್ಟಿಕ್ಸ್ vs ಶಿವಮೊಗ್ಗ ಲಯನ್ಸ್, 3:00 PM IST
- ಮಂಗಳವಾರ, ಆಗಸ್ಟ್ 27, 2024 : ಹುಬ್ಬಳ್ಳಿ ಟೈಗರ್ಸ್ vs ಮೈಸೂರು ವಾರಿಯರ್ಸ್, 7:00 PM IST
- ಬುಧವಾರ, ಆಗಸ್ಟ್ 28, 2024 : ಮಂಗಳೂರು ಡ್ರಾಗನ್ಸ್ vs ಮೈಸೂರು ವಾರಿಯರ್ಸ್, ಮಧ್ಯಾಹ್ನ 3:00 IST
- ಬುಧವಾರ, ಆಗಸ್ಟ್ 28, 2024 : ಬೆಂಗಳೂರು ಬ್ಲಾಸ್ಟರ್ಸ್ vs ಶಿವಮೊಗ್ಗ ಲಯನ್ಸ್, 7:00 PM IST
- ಗುರುವಾರ, ಆಗಸ್ಟ್ 29, 2024 : ಬೆಂಗಳೂರು ಬ್ಲಾಸ್ಟರ್ಸ್ vs ಮಂಗಳೂರು ಡ್ರಾಗನ್ಸ್, ಮಧ್ಯಾಹ್ನ 3:00 IST
- ಗುರುವಾರ, ಆಗಸ್ಟ್ 29, 2024 : ಗುಲ್ಬರ್ಗ ಮಿಸ್ಟಿಕ್ಸ್ vs ಹುಬ್ಬಳ್ಳಿ ಟೈಗರ್ಸ್, 7:00 PM IST
- ಶುಕ್ರವಾರ, ಆಗಸ್ಟ್ 30, 2024 : ಸೆಮಿಫೈನಲ್ 1 (1 vs 4), 7:00 PM IST
- ಶನಿವಾರ, ಆಗಸ್ಟ್ 31, 2024 : ಸೆಮಿಫೈನಲ್ 2 (2 vs 3), 7:00 PM IST
- ಭಾನುವಾರ, ಸೆಪ್ಟೆಂಬರ್ 1, 2024 : ಫೈನಲ್, 7:00 PM IST
ಈ ಎಲ್ಲಾ ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಜರುಗಲಿದೆ. ಈ ಟೂರ್ನಿಯಲ್ಲಿ ಕಣಕ್ಕಿಳಿಯಲಿರುವ 6 ತಂಡಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.