Maharaja Trophy T20: ಮಹಾರಾಜ ಟಿ20 ಟೂರ್ನಿಗೆ 6 ತಂಡಗಳು ಪ್ರಕಟ

| Updated By: ಝಾಹಿರ್ ಯೂಸುಫ್

Updated on: Jul 22, 2023 | 10:56 PM

Maharaja Trophy T20: ಮಹಾರಾಜ ಟಿ20 ಲೀಗ್ ಆಗಸ್ಟ್ 13 ರಿಂದ ಶುರುವಾಗಲಿದ್ದು, ಫೈನಲ್ ಪಂದ್ಯವು ಆಗಸ್ಟ್ 29 ರಂದು ನಡೆಯಲಿದೆ. ಈ ಬಾರಿ 6 ತಂಡಗಳು ಕಣಕ್ಕಿಳಿಯುತ್ತಿದ್ದು, ಒಟ್ಟು 33 ಪಂದ್ಯಗಳನ್ನಾಡಲಾಗುತ್ತದೆ.

Maharaja Trophy T20: ಮಹಾರಾಜ ಟಿ20 ಟೂರ್ನಿಗೆ 6 ತಂಡಗಳು ಪ್ರಕಟ
Maharaja Trophy T20
Follow us on

Maharaja Trophy T20: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಆಯೋಜಿಸುವ ಮಹಾರಾಜ ಟ್ರೋಫಿ ಟಿ20 ಲೀಗ್​ ಸೀಸನ್-2 ರ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ. 6 ಫ್ರಾಂಚೈಸಿಗಳು ಭಾಗವಹಿಸಿದ್ದ ಈ ಹರಾಜಿನಲ್ಲಿ 200 ಕ್ಕೂ ಹೆಚ್ಚು ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದರು. ಇವರಲ್ಲಿ ಅತ್ಯಧಿಕ ಮೊತ್ತಕ್ಕೆ ಬಿಡ್ ಆಗಿರುವುದು ಐಪಿಎಲ್​ನಲ್ಲಿ ಗುಜರಾತ್ ಟೈಟಾನ್ಸ್​ ಪರ ಆಡಿದ ಅಭಿನವ್ ಮನೋಹರ್.

ಶಿವಮೊಗ್ಗ ಲಯನ್ಸ್ ಫ್ರಾಂಚೈಸಿಯು ಸ್ಪೋಟಕ ದಾಂಡಿಗ ಅಭಿನವ್ ಮನೋಹರ್ ಅವರನ್ನು ಬರೋಬ್ಬರಿ 15 ಲಕ್ಷ ರೂ.ಗೆ ಖರೀದಿಸಿದೆ. ಇನ್ನು ಮಯಾಂಕ್ ಅಗರ್ವಾಲ್ ಅವರನ್ನು 14 ಲಕ್ಷ ರೂ.ಗೆ ಬೆಂಗಳೂರು ಬ್ಲಾಸ್ಟರ್ಸ್ ಫ್ರಾಂಚೈಸಿ ತನ್ನದಾಗಿಸಿಕೊಂಡಿದೆ.

ಹಾಗೆಯೇ 13 ಲಕ್ಷ ರೂ.ಗೆ ದೇವದತ್ ಪಡಿಕ್ಕಲ್ ಗುಲ್ಬರ್ಗಾ ಮಿಸ್ಟಿಕ್ ತಂಡದ ಪಾಲಾಗಿದ್ದಾರೆ. ಇನ್ನು ಮನೀಷ್ ಪಾಂಡೆಯನ್ನು 10.30 ಲಕ್ಷ ರೂ.ಗೆ ಹುಬ್ಬಳ್ಳಿ ಟೈಗರ್ಸ್​ ಖರೀದಿಸಿದರೆ, ಆರ್​ಸಿಬಿ ಆಟಗಾರ ಮನೋಜ್ ಭಾಂಡಗೆ 9 ಲಕ್ಷ ರೂ.ಗೆ ಮೈಸೂರ್ ವಾರಿಯರ್ಸ್ ಪಾಲಾಗಿದ್ದಾರೆ. ಅದರಂತೆ ಆರು ತಂಡಗಳಿಗೆ ಆಯ್ಕೆಯಾಗಿರುವ ಆಟಗಾರರ ಪಟ್ಟಿ ಈ ಕೆಳಗಿನಂತಿದೆ.

ಬೆಂಗಳೂರು ಬ್ಲಾಸ್ಟರ್ಸ್: ಅಭಿಮನ್ಯು ಮಿಥುನ್, ಮಯಾಂಕ್ ಅಗರ್ವಾಲ್, ಪ್ರದೀಪ್ ಟಿ, ಮೊಹಮ್ಮದ್ ಸರ್ಫರಾಜ್ ಅಶ್ರಫ್, ಪವನ್ ದೇಶಪಾಂಡೆ, ಶುಭಾಂಗ್ ಹೆಗ್ಡೆ, ನಿಶ್ಚಲ್ ಡಿ, ವಿದ್ಯಾಧರ್ ಪಾಟೀಲ್, ಜೆಸ್ವಂತ್ ಆಚಾರ್ಯ, ಜಸ್ಪರ್ ಇಜೆ, ಕುಮಾರ್ ಎಲ್ಆರ್, ರಿಷಿ ಬೋಪಣ್ಣ, ಸೂರಜ್ ಅಹುಜಾ, ಅರುಣ್ ಎಸ್, ಅಭಿಷೇಕ್ ಎ, ಅಮಾನ್ ಖಾನ್.

ಗುಲ್ಬರ್ಗ ಮಿಸ್ಟಿಕ್ಸ್: ದೇವದತ್ತ್ ಪಡಿಕಲ್, ಕೆ.ಪಿ.ಅಪ್ಪಣ್ಣ, ವೈಶಾಕ್ ವಿಜಯ್‌ಕುಮಾರ್, ಶರತ್ ಶ್ರೀನಿವಾಸ್, ಚೇತನ್ ಎಲ್.ಆರ್., ಮೊಹಮ್ಮದ್ ಅಕಿಬ್ ಜವಾದ್, ಸ್ಮರಣ್ ಆರ್, ಅನೀಶ್ ಕೆ.ವಿ, ಮ್ಯಾಕ್ನೀಲ್ ನೊರೊನ್ಹಾ, ಶರಣ್ ಗೌಡ್, ಅಭಿಲಾಷ್ ಶೆಟ್ಟಿ, ಹಾರ್ದಿಕ್ ರಾಜ್, ಶಿಮೊನ್ ಲೂಯಿಜ್, ಅವಿನಾಶ್ ಶೆಟ್ಟಿ, ಹಾರ್ದಿಕ್ ರಾಜ್, ಶಿಮೊನ್ ಲೂಯಿಜ್, ಅವಿನಾಶ್ ಡಿ, ಯಶೋವರ್ಧನ್ ಪಿ, ಆದರ್ಶ್ ಪ್ರಜ್ವಲ್, ಶಾನ್ ಜೋಸೆಫ್, ಅಬುಲ್ ಹಸನ್ ಖಾಲಿದ್.

ಮೈಸೂರು ವಾರಿಯರ್ಸ್: ಕರುಣ್ ನಾಯರ್, ಜಗದೀಶ ಸುಚಿತ್, ಪ್ರಸಿದ್ಧ್ ಕೃಷ್ಣ, ಶೋಯೆಬ್ ಮ್ಯಾನೇಜರ್, ರವಿಕುಮಾರ್ ಸಮರ್ಥ್, ಕಾರ್ತಿಕ್ ಸಿಎ, ಮನೋಜ್ ಭಾಂಡಗೆ, ವೆಂಕಟೇಶ್ ಎಂ, ತುಷಾರ್ ಸಿಂಗ್, ಕುಶಾಲ್ ವಾಧ್ವಾನಿ, ಶಶಿಕುಮಾರ್ ಕೆ, ರಕ್ಷಿತ್ ಎಸ್, ಗೌತಮ್ ಮಿಶ್ರಾ, ಶ್ರೀಶ ಆಚಾರ್, ಮೋನಿಶ್ ರೆಡ್ಡಿ, ಭರತ್ ಮಣಿ, ರಾಹುಲ್ ಸಿಂಗ್ ರಾವತ್, ಭರತ್ ಧುರಿ.

ಹುಬ್ಬಳ್ಳಿ ಟೈಗರ್ಸ್: ಪ್ರವೀಣ್ ದುಬೆ, ಮನೀಶ್ ಪಾಂಡೆ, ಕೆಸಿ ಕಾರ್ಯಪ್ಪ, ಲುವ್ನಿತ್ ಸಿಸೋಡಿಯಾ, ಶ್ರೀಜಿತ್ ಕೆಎಲ್, ಮೊಹಮ್ಮದ್ ತಾಹ, ವಿದ್ವತ್ ಕಾವೇರಪ್ಪ, ದರ್ಶನ್ ಎಂಬಿ, ಶಿವಂ ಎಂಬಿ, ನಾಗ ಭರತ್, ಸಂತೋಖ್ ಸಿಂಗ್, ಮನ್ವಂತ್ ಕುಮಾರ್ ಎಲ್, ಮಿತ್ರಕಾಂತ್ ಯಾದವ್, ಮಲ್ಲಿಕ್ ಸಾಬ್ ಜಿ, ರಾಜಶೇಖರ್ ಹರಿಕಾಂತ್, ಕ್ಲೆಮೆಂಟ್ ರಾಜು.

ಶಿವಮೊಗ್ಗ ಲಯನ್ಸ್: ಅಭಿನವ್ ಮನೋಹರ್, ಶ್ರೇಯಸ್ ಗೋಪಾಲ್, ನಿಹಾಲ್ ಉಳ್ಳಾಲ್, ವಿ ಕೌಶಿಕ್, ಎಚ್ ಎಸ್ ಶರತ್, ಕ್ರಾಂತಿ ಕುಮಾರ್, ರೋಹನ್ ಕದಂ, ಶ್ರೇಯಸ್ ಪುರಾಣಿಕ್, ಪ್ರಣವ್ ಭಾಟಿಯಾ, ವಿನಯ್ ಎನ್ ಸಾಗರ್, ಪವನ್ ಶಿರಡಿ, ರೋಹನ್ ನವೀನ್, ಶಿವರಾಜ್ ಎಸ್, ರೋಹಿತ್ ಕುಮಾರ್ ಕೆ, ನಿಶ್ಚಿತ್ ರಾವ್, ದೀಪಕ್ ದೇವಾಡಿಗ.

ಮಂಗಳೂರು ಡ್ರಾಗನ್ಸ್: ರೋನಿತ್ ಮೋರ್, ಕೃಷ್ಣಪ್ಪ ಗೌತಮ್, ಸಿದ್ಧಾರ್ಥ್ ಕೆವಿ, ನಿಕಿನ್ ಜೋಸ್, ಶರತ್ ಬಿಆರ್, ಪ್ರತೀಕ್ ಜೈನ್, ಅನಿರುದ್ಧ್ ಜೋಶಿ, ರೋಹನ್ ಪಾಟೀಲ್, ನವೀನ್ ಎಂಜಿ, ಗೌರವ್ ಧಿಮಾನ್, ಶಿವಕುಮಾರ್ ಬಿಯು, ತಿಪ್ಪಾ ರೆಡ್ಡಿ, ಆದಿತ್ಯ ನಾಯರ್, ಆದಿತ್ಯ ಗೋಯಲ್, ಆನಂದ್ ದೊಡ್ಡಮನಿ, ಕೃತಿಕ್ ಕೃಷ್ಣ, ಧೀರಜ್ ಗೌಡ, ಅನೀಶ್ವರ್ ಗೌತಮ್.

ಮಹಾರಾಜ ಟ್ರೋಫಿ ಟಿ20 ಲೀಗ್​ ಯಾವಾಗ ಶುರು?

ಮಹಾರಾಜ ಟಿ20 ಲೀಗ್ ಆಗಸ್ಟ್ 13 ರಿಂದ ಶುರುವಾಗಲಿದ್ದು, ಫೈನಲ್ ಪಂದ್ಯವು ಆಗಸ್ಟ್ 29 ರಂದು ನಡೆಯಲಿದೆ. ಈ ಬಾರಿ 6 ತಂಡಗಳು ಕಣಕ್ಕಿಳಿಯುತ್ತಿದ್ದು, ಒಟ್ಟು 33 ಪಂದ್ಯಗಳನ್ನಾಡಲಾಗುತ್ತದೆ.

ಇದನ್ನೂ ಓದಿ: India T20 Squad: ಟೀಮ್ ಇಂಡಿಯಾದಲ್ಲಿ ಇಬ್ಬರೇ ಆಲ್​ರೌಂಡರ್​ಗಳು..!

ಚಾಂಪಿಯನ್ಸ್ ತಂಡಕ್ಕೆ ಸಿಗುವ ಮೊತ್ತ ಎಷ್ಟು?

ಈ ಟೂರ್ನಿಯಲ್ಲಿ ಚಾಂಪಿಯನ್ಸ್ ಪಟಕ್ಕೇರುವ ತಂಡಕ್ಕೆ 15 ಲಕ್ಷ ರೂ. ಬಹುಮಾನ ಮೊತ್ತ ಸಿಗಲಿದೆ. ಹಾಗೆಯೇ ರನ್ನರ್ ಅಪ್ ತಂಡಕ್ಕೆ 10 ಲಕ್ಷ ರೂ., ಹಾಗೆಯೇ ಟಾಪ್-4 ನಲ್ಲಿ ಕಾಣಿಸಿಕೊಳ್ಳುವ ಇನ್ನುಳಿದ 2 ತಂಡಗಳಿಗೆ ತಲಾ 5 ಲಕ್ಷ ರೂ. ನೀಡಲಾಗುತ್ತದೆ.

 

Published On - 10:54 pm, Sat, 22 July 23