Zim Afro T10 2023: ಡರ್ಬನ್ ಖಲಂದರ್ಸ್ ದರ್ಬಾರ್: ಪಾರ್ಥೀವ್ ಪಟೇಲ್ ತಂಡಕ್ಕೆ ಸೋಲು
Cape Town Samp Army vs Durban Qalandars: 10 ಓವರ್ಗಳಲ್ಲಿ 127 ರನ್ಗಳ ಗುರಿ ಪಡೆದ ಕೇಪ್ ಟೌನ್ ಸ್ಯಾಂಪ್ ಆರ್ಮಿ ತಂಡಕ್ಕೆ ರಹಮಾನುಲ್ಲಾ ಗುರ್ಬಾಝ್ (19) ಉತ್ತಮ ಆರಂಭ ಒದಗಿಸಿದ್ದರು.
Zim Afro T10 2023: ಝಿಂಬಾಬ್ವೆಯಲ್ಲಿ ನಡೆಯುತ್ತಿರುವ ಝಿಮ್ ಆಫ್ರೊ ಟಿ10 ಲೀಗ್ನ 2ನೇ ಪಂದ್ಯದಲ್ಲಿ ಡರ್ಬನ್ ಖಲಂದರ್ಸ್ ತಂಡವು ರೋಚಕ ಜಯ ಸಾಧಿಸಿದೆ. ಕೇಪ್ ಟೌನ್ ಸ್ಯಾಂಪ್ ಆರ್ಮಿ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಡರ್ಬನ್ ಖಲಂದರ್ಸ್ ತಂಡವು ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಹಝರತುಲ್ಲಾ ಝಝೈ ಹಾಗೂ ಟಿಮ್ ಸೀಫರ್ಟ್ ಮೊದಲ ವಿಕೆಟ್ 87 ರನ್ಗಳ ಜೊತೆಯಾಟವಾಡಿದರು.
ಈ ವೇಳೆ 22 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 49 ರನ್ ಬಾರಿಸಿದ ಟಿಮ್ ಸೀಫರ್ಟ್ ಮುಜೀಬ್ ಉರ್ ರೆಹಮಾನ್ ಎಸೆತದಲ್ಲಿ ಔಟಾದರು. ಇನ್ನು ಹಝರತುಲ್ಲಾ ಝಝೈ 25 ಎಸೆತಗಳಲ್ಲಿ 38 ರನ್ಗಳ ಕಾಣಿಕೆ ನೀಡಿದರು. ಅಂತಿಮ ಹಂತದಲ್ಲಿ 6 ಎಸೆತಗಳಲ್ಲಿ ಆಸಿಫ್ ಅಲಿ 17 ರನ್ ಬಾರಿಸಿದರು. ಈ ಮೂಲಕ ಡರ್ಬನ್ ಖಲಂದರ್ಸ್ ತಂಡದ ಮೊತ್ತವು 3 ವಿಕೆಟ್ ನಷ್ಟಕ್ಕೆ 126 ರನ್ ಕಲೆಹಾಕಿತು.
10 ಓವರ್ಗಳಲ್ಲಿ 127 ರನ್ಗಳ ಗುರಿ ಪಡೆದ ಕೇಪ್ ಟೌನ್ ಸ್ಯಾಂಪ್ ಆರ್ಮಿ ತಂಡಕ್ಕೆ ರಹಮಾನುಲ್ಲಾ ಗುರ್ಬಾಝ್ (19) ಉತ್ತಮ ಆರಂಭ ಒದಗಿಸಿದ್ದರು. ಆದರೆ ಮಧ್ಯಮ ಕ್ರಮಾಂಕದ ಕುಸಿತಕ್ಕೊಳಗಾದ ಕೇಪ್ ಟೌನ್ ತಂಡಕ್ಕೆ ಆಸರೆಯಾಗಿದ್ದು ಕರೀಮ್ ಜನತ್ ಹಾಗೂ ನಾಯಕ ಪಾರ್ಥೀವ್ ಪಟೇಲ್.
ಕೇವಲ 13 ಎಸೆತಗಳನ್ನು ಎದುರಿಸಿದ ಕರೀಮ್ ಜನತ್ 3 ಭರ್ಜರಿ ಸಿಕ್ಸ್ ಹಾಗೂ 1 ಫೋರ್ನೊಂದಿಗೆ ಅಜೇಯ 30 ರನ್ ಬಾರಿಸಿದರು. ಮತ್ತೊಂದೆಡೆ ಪಾರ್ಥೀವ್ ಪಟೇಲ್ 4 ಫೋರ್ ಹಾಗೂ 2 ಸಿಕ್ಸ್ಗಳೊಂದಿಗೆ 14 ಎಸೆತಗಳಲ್ಲಿ ಅಜೇಯ 37 ರನ್ ಬಾರಿಸಿದರು. ಇದಾಗ್ಯೂ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.
ಅಂತಿಮವಾಗಿ 10 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 118 ರನ್ ಕಲೆಹಾಕುವ ಮೂಲಕ ಕೇಪ್ ಟೌನ್ ಸ್ಯಾಂಪ್ ಆರ್ಮಿ ತಂಡವು 8 ರನ್ಗಳಿಂದ ಸೋಲೊಪ್ಪಿಕೊಂಡಿತು.
ಕೇಪ್ ಟೌನ್ ಸ್ಯಾಂಪ್ ಆರ್ಮಿ ಪ್ಲೇಯಿಂಗ್ 11: ರಹಮಾನುಲ್ಲಾ ಗುರ್ಬಾಝ್ , ಸೆಫಸ್ ಝುವಾವೊ , ಪಾರ್ಥಿವ್ ಪಟೇಲ್ (ನಾಯಕ) , ಭಾನುಕಾ ರಾಜಪಕ್ಸೆ , ಸೀನ್ ವಿಲಿಯಮ್ಸ್ , ಜೊನಾಥನ್ ಕ್ಯಾಂಪ್ಬೆಲ್ , ಕರೀಮ್ ಜನತ್ , ಟಾಮ್ ಕರನ್ , ಪೀಟರ್ ಹ್ಯಾಟ್ಜೋಗ್ಲೋ , ರಿಚರ್ಡ್ ನ್ಗರವ , ಮುಜೀಬ್ ಉರ್ ರೆಹಮಾನ್.
ಇದನ್ನೂ ಓದಿ: Cricket World Cup 2023 Schedule: ಏಕದಿನ ವಿಶ್ವಕಪ್ ಹೊಸ ವೇಳಾಪಟ್ಟಿ ಪ್ರಕಟ
ಡರ್ಬನ್ ಖಲಂದರ್ಸ್ ಪ್ಲೇಯಿಂಗ್ 11: ಹಝರತುಲ್ಲಾ ಝಝೈ, ಆಂಡ್ರೆ ಫ್ಲೆಚರ್ , ಕ್ರೇಗ್ ಎರ್ವಿನ್ (ನಾಯಕ) , ನಿಕ್ ವೆಲ್ಚ್ , ಆಸಿಫ್ ಅಲಿ , ಟಿಮ್ ಸೀಫರ್ಟ್ (ವಿಕೆಟ್ ಕೀಪರ್) , ಜಾರ್ಜ್ ಲಿಂಡೆ , ಬ್ರಾಡ್ ಇವಾನ್ಸ್ , ಅಜ್ಮತುಲ್ಲಾ ಒಮರ್ಝಾಹಿ , ಓವನ್ ಮುಝೋಂಡೋ , ಡೇರಿನ್ ಡುಪಾವಿಲ್ಲನ್.